Breaking News
Home / Breaking News / ಅಧಿಕಾರಿಗಳ ಜೊತೆ ನವದೆಹಲಿಗೆ ತೆರಳಿದ ರಮೇಶ್ ಸಾಹುಕಾರ್…

ಅಧಿಕಾರಿಗಳ ಜೊತೆ ನವದೆಹಲಿಗೆ ತೆರಳಿದ ರಮೇಶ್ ಸಾಹುಕಾರ್…

ಬೆಳಗಾವಿ-ಕರ್ನಾಟಕ ರಾಜ್ಯದ ಹಲವು ನೀರಾವರಿ ಯೋಜನೆಗಳ ಕುರಿತು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ‌, ನವದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿ ಚರ್ಚಿಸಲಿದ್ದಾರೆ.

ಆ ಸಭೆಗೂ ಮುನ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತರರಾಜ್ಯ ಜಲವಿವಾದಗಳ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರು ಮತ್ತು ತಾಂತ್ರಿಕ ಸಲಹೆಗಾರರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜಲಸಂಪನ್ಮೂಲ ಸಚಿವರೊಂದಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅನೀಲ್‌ ಕುಮಾರ್ ಸೇರಿದಂತೆ‌ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

Check Also

ಬೆಳಗಾವಿಯ ನಕಲಿ ಐಡಿ ಪ್ರೀಂಟೀಂಗ್ ಪ್ರೆಸ್, ಮೇಲೆ ಪೋಲೀಸರ ದಾಳಿ….

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಖಡಕ್ ಲಾಕ್ ಡೌನ್ ಇದೆ,ಅಲ್ಲಲ್ಲಿ ಖಾಕಿ ಪಡೆ ಗಂಭೀರವಾಗಿ ವಾಹನ ಸವಾರರನ್ನು ತಪಾಸಣೆ ಮಾಡುತ್ತಿದೆ.ಹೀಗಾಗಿ ಕೆಲವರು ನಕಲಿ …

Leave a Reply

Your email address will not be published. Required fields are marked *