Breaking News

ಜಾಂಬೋಟಿ ರಸ್ತೆಯಲ್ಲಿ ಲೂಟಿ ಮಾಡುತ್ತಿದ್ದ ಐವರ ಅರೆಸ್ಟ್…

ಬೆಳಗಾವಿ- ಬೆಳಗಾವಿ ಜಾಂಬೋಟಿ ರಸ್ತೆಯಲ್ಲಿ ಅಷ್ಟೊಂದು ವಾಹನ ದಟ್ಟನೆ ಇರೋದಿಲ್ಲ, ರಸ್ತೆಯ ಇಕ್ಕೆಲುಗಳಲ್ಲಿ ಅರಣ್ಯಪ್ರದೇಶ ಇರೋದ್ರಿಂದ ಈ ಪ್ರದೇಶ ಬಹುತೇಕ ನಿರ್ಜನವಾಗಿದೆ,ಈ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಚಾಕು ಚೂರಿ ತೋರಿಸಿ ಬೆದರಿಸುತ್ತಿದ್ದ ಐವರ ದರೋಡೆಕೋರರ ಗ್ಯಾಂಗ್ ಈಗ ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದೆ.

ಜಾಂಬೋಟಿ ರಸ್ತೆಯಲ್ಲಿ ಬೈಕ್ ಸಣೆರಿದಂತೆ ಇನ್ನಿತರ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ,ಬೆದರಿಸಿ ಹಣ,ಆಭರಣಗಳನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ವುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಎಸಿಪಿ ಬೆಳಗಾವಿ ಗ್ರಾಮೀಣ ಉಪ-ವಿಭಾಗ ಇವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐಸುನೀಲ್ ಕುಮಾರ ನೇತ್ರತ್ವದ ತಂಡ,ರ್ಕಿಣಿಯೇ ಘಾಟದಲ್ಲಿ ಕಾರ್ಯಾಚರಣೆ ನಡೆಸಿ ಹೆದ್ದಾರಿ ದರೋಡೆಕೋರ ಆರೋಪಿತರಾದ 1) ನಿಂಗಪ್ಪಾ ಸಿದ್ದಪ್ಪಾ ನಾಯಿಕ ಸಾ:ಭರನಟ್ಟಿ 2) ಸಿದ್ಧಪ್ಪಾ ಭೀಮಪ್ಪಾ ನಾಯಿಕ ಸಾ: ಭರನಟ್ಟಿ 3) ಭೀಮಪ್ಪಾ ಸಿದ್ಧಪ್ಪಾ ನಾಯಿಕ ಸಾ:ಭರನಟ್ಟಿ 4) ಭರಮಪ್ಪಾ ನಿಂಗಪ್ಪಾ ಪೂಜಾರಿ ಸಾ: ಭರನಟ್ಟ 5) ಮಾರುತಿ ನಿಂಗಪ್ಪಾ ನಾಯಿಕ ಸಾ:ಕಮಲ ನಗರ ಇವರಿಗೆ ಬಂದಿಸಿದ್ದು ಹಾಗೂ ಇವರು ಕೃತ್ಯಕ್ಕೆ ಬಳಸಿದ ಚಾಕುಗಳು ಹಾಗೂ ಕೊಡಗೋಲನ್ನು ವಶಕ್ಕೆ ತೆಗೆದುಕೊಂಡಿದ್ದು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ಧಾಖಲಾಗಿರುತ್ತದೆ..

Check Also

ಬೆಳಗಾವಿಯಲ್ಲಿ ಸಭೆ ನಡೆಸಿದ ರಾಹುಲ್ ವಾರ್ನಿಂಗ್ ಮಾಡಿದ್ದೇನು ಗೊತ್ತಾ..??

ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ ಸೂಚನೆ ಬೆಳಗಾವಿ, – ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ …

Leave a Reply

Your email address will not be published. Required fields are marked *