Breaking News

ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!!

ಸಂಜಯ ಪಾಟೀಲ್ ಸೈಡ್ ಲೈನ್
ಧನಂಜಯ್ ಜಾಧವ ಆನ್ ಲೈನ್
ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!!

ಬೆಳಗಾವಿ- ನಾನು ಬರೆದ ತೆಲೆಬರಹ ಕೆಲವು ನಾಯಕರ ತೆಲೆ ಕೆಡಿಸಬಹುದು ಆದ್ರೆ ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ನೈಜ ಚಿತ್ರಣ,ನೈಜ ರಾಜಕೀಯ ಬೆಳವಣಿಗೆ

ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅದರಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣ ವಿಶೇಷ ,ವಿಭಿನ್ನ ಯಾಕಂದ್ರೆ ಈ ಕ್ಷೇತ್ರದ ರಾಜಕಾರಣ ಈಗಾಗಲೇ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ನುಂಗಿ ನೀರು ಕುಡಿದು ನೀರಾವರಿ ಮಂತ್ರಿ ಆಗೋವರೆಗೂ ಪವರ್ ಫುಲ್ ಆಗಿದ್ದು ಬಹಿರಂಗ ಸತ್ಯ

ಈಗ ಬೆಳಗಾವಿ ಜಿಲ್ಲೆಯ ರಾಜಕಾರಣ ಬೆಳವಣಿಗೆ, ಬದಲಾವಣೆ,ಸ್ಥಾನ ಪಲ್ಲಟ ,ಅದಲು ಬದಲು, ಕೈಂಚಿ ಕದಲು ಆಗೋದು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಅನ್ನೋದನ್ನು ಎಲ್ಲರೂ ಒಪ್ಪಲೇ ಬೇಕು

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹೇಗಾದ್ರೂ ಮಾಡಿ ಮುಂದಿನ ಚುನಾವಣೆಯಲ್ಲಿ ಪವರ್ ಫುಲ್ ಲೇಡಿ ಲೀಡರ್ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸೋಲೀಸಲು ಬಿಜೆಪಿಯ ಪವರ್ ಫುಲ್ ನಾಯಕರು ಈಗಿನಿಂದಲೇ ತಂತ್ರ ರೂಪಿಸುತ್ತಿದ್ದಾರೆ,ಹೆಬ್ಬಾಳಕರ ಸೋಲೀಸಲು ಮರಾಠಿ ಸಮುದಾಯದ ಭವಿಷ್ಯದ ನಾಯಕನ ಹುಡುಕಾಟದಲ್ಲಿದ್ದು ಧನಂಜಯ ಜಾಧವ ಎಂಬ ಯುವ ನಾಯಕನಿಗೆ ಬಿಜೆಪಿಯಲ್ಲಿ ಹುದ್ದೆ ಮತ್ತು ಏನು ಕೊಡಬೇಕೋ ಅದನ್ನು ಕೊಟ್ಟು ಬೆಳೆಸುತ್ತಿದ್ದಾರೆ ಅನ್ಬೋದಕ್ಕೆ ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಧನಂಜಯ ಜಾಧವ ಪದಗ್ರಹಣದ ಕಾರ್ಯಕ್ರಮವೇ ಅದಕ್ಕೆ ಸಾಕ್ಷೀಯಾಗಿದೆ .

ಮಾಜಿ ಶಾಸಕ ಸಂಜಯ ಪಾಟೀಲರಿಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾದ್ಯಕ್ಷರನ್ನಾಗಿ ನೇಮಕ ಮಾಡಿ ಅವರನ್ನು ನೇಮಕ ಮಾಡಿ ಜಿಲ್ಲಾ ಸಂಚಾರದ ಜವಾಬ್ದಾರಿ ನೀಡಲಾಗಿದೆ ಯಾಕಂದ್ರೆ ಅವರು ಜಿಲ್ಲಾದ್ಯಕ್ಷ ಆದಮೇಲೆ ತಮ್ಮ ಕ್ಷೇತ್ರ ಬಿಟ್ಟು ಜಿಲ್ಲೆಯ ಸಂಚಾರ ಮಾಡಲೇ ಬೇಕು ಅದು ಅವರಿಗೆ ಈಗ ಅನಿವಾರ್ಯ ‌….

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧನಂಜಯ ಜಾಧವ ಅವರೇ ಎದುರಾಳಿ ಮುಂದಿನ ಬಿಜೆಪಿ ಟಿಕೆಟ್ ಅವರಿಗೆ ಅನ್ನೋ ರೀತಿಯಲ್ಲಿ ಎಲ್ಲವೂ ಬಿಂಬಿತವಾಗುತ್ತಿದೆ‌.

ಬಿಜೆಪಿ ಟಿಕೆಟ್ ಗಾಗಿಯೇ ಎಂಈಎಸ್ ಬಿಟ್ಟು ಬಿಜೆಪಿ ಸೇರಿರುವ ಶಿವಾಜಿ ಸುಂಠಕರ ಅವರ ಗತಿ ಏನು..? ಧನಂಜಯ ಜಾಧವಗೆ ಟಿಕೆಟ್ ಸಿಕ್ಕರೆ ,ಶಿವಾಜಿ ಸುಂಠಕರ,ಸಂಜಯ ಪಾಟೀಲ ಇಬ್ನರೂ ಬಂಡಾಯದ ಬಾವುಟ ಹಾರಿಸಿದ್ರೆ ಬಿಜೆಪಿ ಮತಗಳು ವಿಭಜನೆ ಆಗಬಹುದಲ್ಲ ,ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಇದು ವರದಾನ ಆಗಬಹುದಲ್ಲ ,ಎನ್ನುವ ಆತಂತ ಬಿಜೆಪಿ ಕಾರ್ಯಕರ್ತರಿಗೆ ಕಾಡುತ್ತಿದೆ ‌

ಬೆಳಗಾವಿ ಗ್ರಾಮೀಣದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಯಾರಿಗೆ ಕೊಡಬೇಕು,ಯಾರಿಗೆ ಕೊಡಬಾರದು ಎನ್ನುವದನ್ನು ಜಿಲ್ಲೆಯ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳದಿದ್ದರೂ ಆಂತರಿಕವಾಗಿ ಯಾರನ್ನು ಬೆಳೆಸಬೇಕೋ ಅವರನ್ನು ಬೆಳೆಸುತ್ತಿದ್ದಾರೆ ‌…

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *