Breaking News

ಮಾರ್ಚ 12 ರಿಂದ ರಾಜ್ಯದಲ್ಲಿ ನರಗುಂದ ಬಂಡಾಯ….

ಮಾರ್ಚ 12ರಂದು ರಾಜ್ಯದ 150 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ,ನರಗುಂದ ಬಂಡಾಯದ ಬಿಸಿ……

ಬೆಳಗಾವಿ- ನರಗುಂದ ಬಂಡಾಯ ಉತ್ತರ ಕರ್ನಾಟಕ ರೈತರ ದೊಡ್ಡ ಬಂಡಾಯ ,ಈ ಬಂಡಾಯದ ಇತಿಹಾಸ ಆಧರಿಸಿ ನರಗುಂದ ಬಂಡಾಯ ಎಂಬ ಕನ್ನಡ ಚಲಚಿತ್ರ ಸಿದ್ಧಗೊಂಡಿದ್ದು ಮಾರ್ಚ 12ರಂದು ರಾಜ್ಯದ 150ಕ್ಕೂ ಹೆಚ್ವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು ಎಲ್ಲರೂ ರಿಲ್ಯಾಕ್ಸ ಆಗಿ ಈ ಚಿತ್ರವನ್ನು ನೋಡಲೇ ಬೇಕು

ಯಾಕಂದ್ರೆ ಈ ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ನಿರ್ಮಾಣ ಮಾಡದೇ ರೈತರ ಎಮೋಶ್ನಲ್ ಆ್ಯಂಗಲ್ ನಲ್ಲಿ ನಿರ್ಮಿಸಲಾಗಿದ್ದು. ಚಿತ್ರದಲ್ಲಿ ನರಗುಂದ ಬಂಡಾಯದ ಚಳುವಳಿಯನ್ನು ಈ ಚಿತ್ರದಲ್ಲಿ ಅತ್ಯಂತ ರೋಚಕವಾಗಿ ಬಿಂಬಿಸಲಾಗಿದೆ

ನರಗುಂದ ಬಂಡಾಯ ಚಲನಚಿತ್ರದಲ್ಲಿ ನಾಯಕ ನಟನಾಗಿ ರಕ್ಷ ,ನಟಿಯಾಗಿ,ಶುಭಾಪುಂಜಾ,ಸಾಧು ಕೋಕೀಲಾ ಸೇರಿದಂತೆ ಅನೇಕ ಜನ ಖ್ಯಾತನಾಮ ಕಲಾವಿದರು ಅಭಿನಯಿಸಿದ್ದು ಮಾರ್ಚ ಹನ್ನೆರಡರಂದು ನರಗುಂದ ಬಂಡಾಯ ರಾಜ್ಯದ ಸಿನಿಮಾ ಥೇಟರ್ ಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ .

Check Also

ಕ್ಯಾಂಟೋನ್ ಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಕುರಿತು ಸಭೆ

15 ದಿನಗಳಲ್ಲಿ ಸಮೀಕ್ಷಾ ವರದಿ‌ ಸಲ್ಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಬೆಳಗಾವಿ ನಗರದ ಪ್ರದೇಶದ ಕ್ಯಾಂಟೋನಮೆಂಟ್ …

Leave a Reply

Your email address will not be published. Required fields are marked *