ಬೆಳಗಾವಿ-ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಮೂವರು ದಿಗ್ಗಜರಲ್ಲಿ ಪ್ರಬಲ ಪೈಪೋಟಿ ನಡೆದಿತ್ತು ಮೂವರಲ್ಲಿ ಯಾರ ಪ್ರಾಬಲ್ಯ ಹೆಚ್ಚಾಗಬಹುದು ಟಿಕೆಟ್ ಯಾರಿಗೆ ಸಿಗಬಹುದು ಎನ್ನುವ ವಿಚಾರ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ವಿಶ್ವಾಸ ವೈದ್ಯ, ಪಂಚನಗೌಡ್ರು,ಮತ್ತು ಚೋಪ್ರಾ ನಡುವೆ ಗುದ್ದಾಟ ನಡೆದಿತ್ತು.ಇತ್ತೀಚಿಗೆ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ವಿಶ್ವಾಸ್ ವೈದ್ಯರಿಗೆ ಹರ್ಷವನ್ನುಂಟು ಮಾಡುವ ಸುದ್ದಿ ಲಭಿಸುವ ಲಕ್ಷಣಗಳು ಕಂಡುಬಂದಿವೆ. ದೆಹಲಿಯ …
Read More »ತಂದೆಯ ಪರವಾಗಿ ಫೀಲ್ಡ್ ಗಿಳಿದ ಸುಪುತ್ರ ಯಮಕನಮರ್ಡಿಯಲ್ಲಿ ಎಲ್ಲವೂ ಸುಸೂತ್ರ!!
ಬೆಳಗಾವಿ- ತಂದೆ ಸೈದ್ಧಾಂತಿಕ ತಳಹದಿಯ ನಾಯಕ,ಕೆಪಿಸಿಸಿ ಕಾರ್ಯಾಧ್ಯಕ್ಷ, ತಂದೆ ಪಕ್ಷದ ಹೆಚ್ಚಿನ ಜವಾಬ್ದಾರಿ ನಿಭಾಯಿಸುವಲ್ಲಿ ಹೆಲಿಕಾಪ್ಟರ್ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದರೆ,ಇತ್ತ ತಂದೆಯ ಕ್ಷೇತ್ರದಲ್ಲಿ ಮಗ ಫೀಲ್ಡ್ ಗೆ ಇಳಿದು ತಂದೆಯ ಪರವಾಗಿ ಮತಯಾಚಿಸುವ ಮೂಲಕ.ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದು ಯಮಕನಮರ್ಡಿ ಕ್ಷೇತ್ರದ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ,ಮಾಜಿ ಮಂತ್ರಿ,ಸತೀಶ್ ಜಾರಕಿಹೊಳಿ ಕ್ಷೇತ್ರದ ಪ್ರಸ್ತುತ ಕಹಾನಿ, ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದು ಯಮಕನಮರ್ಡಿ …
Read More »ಸೀರೆ,ಗೋಡೆ ಗಡಿಯಾರದ ಜೊತೆಗೆ 100 ಪೇಪರ್ಸ ಕಿಕ್!!
ಖಾನಾಪೂರ-ಖಾನಾಪುರ ಪಟ್ಟಣದ ಮುಖ್ಯರಸ್ತೆಯ ಲೋಕಮಾನ್ಯಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನವನ್ನು ಪರಶಿಸಿದಾಗ ವಾಹನದಲ್ಲಿ ಸೀರೆ,ಗೋಡೆ ಗಡಿಯಾರ,ಹಾಗೂ 100 ಪೇಪರ್ಸ್ ಬಾಟಲ್ ಗಳು ಪತ್ತೆಯಾಗಿವೆ ಶ್ರೀ ಎ .ದಿಲೀಪ್ ಕುಮಾರ್ ಬಿಜೆಪಿ ಮುಖಂಡರು ,ಖಾನಾಪುರ ವಿಧಾನಸಭಾ ಕ್ಷೇತ್ರ. ಇವರ ಹೆಸರಿರುವ ಹಾಗೂ ಇವರ ಫೋಟೋ ಇರುವ, ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಲಗಳ ಸಮೇತ,Ka.22 D 2422 tata ace ಮಿನಿ ಗೂಡ್ಸ್ ವಾಹನದಲ್ಲಿ 280 .. ಸೀರೆಗಳು , 280 …
Read More »ಲಿಂಗಾಯತರಿಗೆ ಟಿಕೆಟ್ ನೀಡಿದ ಪಕ್ಷಕ್ಕೆ ಬೆಂಬಲ, ಶ್ರೀಗಳ ಸಮ್ಮುಖದಲ್ಲಿ ನಿರ್ಧಾರ!
ಬೆಳಗಾವಿ- ಬೆಳಗಾವಿ ನಗರದ ಉತ್ತರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಆಕಾಂಕ್ಷಿಗೆ ಟಿಕೆಟ್ ನೀಡಿದ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡುವದಾಗಿ ಬೆಳಗಾವಿಯ ನಾಗನೂರು ಮಠದಲ್ಲಿ ಸೇರಿದ ವಿವಿಧ ಲಿಂಗಾಯತ ಸಂಘಟನೆಗಳ ನಾಯಕರು ಶ್ರೀಗಳ ಸಮ್ಮುಖದಲ್ಲಿ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳು ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದರೆ ಪಕ್ಷಾತೀತವಾಗಿ ಲಿಂಗಾಯತ ಸಂಃಘಟನೆಗಳು ಬೆಂಬಲ ನೀಡುತ್ತವೆ …
Read More »ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ನಾವು ಒಪ್ಪೋದಿಲ್ಲ.
ಬೆಳಗಾವಿ-ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ನಾವು ಒಪ್ಪೋದಿಲ್ಲ. ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು. ಸೋಮವಾರ ಗಾಂಧಿ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸರಕಾರದ ಧೋರಣೆಯನ್ನು ನಾವೆಲ್ಲರೂ ಖಂಡಿಸಬೇಕು ಮುಂದೆ ಸರಕಾರ ಬದಲಾಗುತ್ತದೆ. ನಮಗೆ ನ್ಯಾಯ ಸಿಗುತ್ತೆ. ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ಮಾಡಿದ್ದರೂ ನಮಗೆ ಸೂಕ್ತ …
Read More »ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಫೈನಲ್!!
ಬೆಳಗಾವಿ- ಪ್ರಭಾವತಿ ಚಾವಡಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಫೈನಲ್ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪ್ರಭಾವತಿ ಚಾವಡಿ,ಅವರು ಕಳೆದ ಆರು ತಿಂಗಳುಗಳಿಂದ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬಿರುವ ಪ್ರಭಾವತಿ ಚಾವಡಿ ಅಲ್ಪಾವಧಿಯಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದು ಪಕ್ಷದ ನಾಯಕರು ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಚಾವಡಿ ಅವರನ್ನೇ ಕಣಕ್ಕಿಳಿಸುವ ನಿರ್ದಾರ ಕೈಗೊಂಡಿದ್ದಾರೆ …
Read More »ಸ್ಟ್ರಾಂಗ್ ರೂಮ್ ಕೌಂಟೀಂಗ್ ಸೆಂಟರ್ ಪರಶೀಲಿಸಿದ ಬೆಳಗಾವಿ ಡಿಸಿ!
ಮತ ಎಣಿಕೆ ಕೇಂದ್ರ: ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಕ್ತ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಬೆಳಗಾವಿ, ಏ.1(ಕರ್ನಾಟಕ ವಾರ್ತೆ): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಥಳ ಪರಿಶೀಲನೆ ನಡೆಸಿದರು. ಹಿರಿಯ ಪೊಲಿಸ್ ಅಧಿಕಾರಿಗಳೊಂದಿಗೆ ನಗರದ ಆರ್.ಪಿ.ಡಿ. ಕಾಲೇಜಿಗೆ ಶನಿವಾರ(ಏ.1) ಭೇಟಿ ನೀಡಿದ ಅವರು, ಸ್ಟ್ರಾಂಗ್ ರೂಮ್ ಮತ್ತು ಮತ ಎಣಿಕೆ ಕೇಂದ್ರ …
Read More »ಖಾನಾಪೂರದಲ್ಲಿ ಅಂಜಲಿ ವಿರುದ್ಧ ಸೋನಾಲಿ. ಕಣಕ್ಕಿಳಿಸಲು ಬಿಜೆಪಿ ಚಿಂತನೆ!
ಬೆಳಗಾವಿ-ಒಂದು ಕಡೆ ಮಲೆನಾಡಿನ ಸೊಬಗು ಮತ್ತೊಂದು ಕಡೆ ಬಯಲುಸೀಮೆ ರಂಗು ಇವೆರಡ ಮಧ್ಯೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿ ಹಂಚಿಕೊಂಡಿರುವ, ಬೆಳಗಾವಿಯ ದಕ್ಷಿಣ ಭಾಗದ ತಾಲ್ಲೂಕು ಖಾನಾಪುರದಲ್ಲಿ ಚುನಾವಣಾ ಕಾವು ಜೋರಾಗಿದೆ. ಸಧ್ಯ ಕಾಂಗ್ರೆಸ್ ಪಕ್ಷದ ಅಂಜಲಿ ನಿಂಬಾಳ್ಕರ್ ಶಾಸಕಿಯಾಗಿದ್ದು, ಕ್ಷೇತ್ರ ವಶಕ್ಕೆ ಬಿಜೆಪಿ ಚುನಾವಣಾ ರಣತಂತ್ರ ಹೆಣೆಯುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ವೈದ್ಯೆ ಡಾ. ಸೋನಾಲಿ ಸರ್ನೋಬತ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಈ ಹಿಂದೆ ಎಂಇಎಸ್ …
Read More »ಮಚ್ಛೆ,ಪೀರನವಾಡಿ ಪಟ್ಟಣ ಪಂಚಾಯ್ತಿಗಳು ಈಗ ಗ್ರಾಮ ಪಂಚಾಯತಿ ಗಳಾಗಿ ಪರಿವರ್ತನೆ!
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಚ್ಛೆ ಮತ್ತು ಪೀರನವಾಡಿ ಪಟ್ಟಣ ಪಂಚಾಯತಿಗಳನ್ನು ಗ್ರಾಮ ಪಂಚಾಯತಿ ಗಳನ್ನಾಗಿ ಪರಿವರ್ತಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಎರಡೂ ಗ್ರಾಮಗಳ ಗ್ರಾಮ ಪಂಚಾಯತಿ ಗಳು ಪಟ್ಟಣ ಪಂಚಾಯತಿ ಆದಾಗಿನಿಂದ ಈ ಗ್ರಾಮಗಳ ಬಡವರು,ನರೇಗಾ ಕಾರ್ಮಿಕರು,ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವದನ್ನು ಗಮನಿಸಿದ ಶಾಸಕ ಅಭಯ ಪಾಟೀಲ ಎರಡೂ ಪಟ್ಟಣ ಪಂಚಾಯ್ತಿ ಗಳನ್ನು ಗ್ರಾಮ ಪಂಚಾಯತಿ ಗಳನ್ನಾಗಿ ಪರಿವರ್ತಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ಬಸವರಾಜ್ …
Read More »ನೀತಿಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ
ಬೆಳಗಾವಿ, -.ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ಪೋಸ್ಟರ್, ಬ್ಯಾನರ್, ಗೋಡೆಬರಹಗಳನ್ನು ತೆರವುಗೊಳಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು. ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಮಾ.29) ನಡೆದ ಚುನಾವಣಾಧಿಕಾರಿಗಳ ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮತಗಟ್ಟೆಗಳಲ್ಲಿ ಕನಿಷ್ಠ …
Read More »