ಬೆಳಗಾವಿ- ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನ,ಯಾರಪ್ಪನ ಆಸ್ತಿ ಅಲ್ಲ.ಇದು ಸಮಸ್ತ ಕನ್ನಡಿಗರ ಆಸ್ತಿಯಾಗಿದ್ದು,ಈ ಆಸ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಬೇಕೆನ್ನುವ ಒತ್ತಾಯಕ್ಕೆ ಮೂರು ದಶಕಕಗಳ ಇತಿಹಾಸವಿದೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಈಗ ಸದ್ಯಕ್ಕೆ ವಿಶ್ವಸ್ಥ ಮಂಡಳಿಯ ಸ್ವಾಧೀನ ದಲ್ಲಿದ್ದು,ಈ ಆಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಆಸ್ತಿ ಆಗಬೇಕು,ಕನ್ನಡದ ಬೆಳವಣಿಗೆಗೆ ಈ ಭವನ ಆಸರೆಯಾಗಬೇಕು ಎನ್ನುವ ಆಸೆ ಗಡಿಭಾಗದ ಕನ್ನಡಿಗರದ್ದಾಗಿದೆ. ಕನ್ನಡ ಸಾಹಿತ್ಯ ಭವನದ ಇತಿಹಾಸ... ಬೆಳಗಾವಿಯ …
Read More »ಹಲವರ ಜೀವರಕ್ಷಿಸಿದ ಸಾಧಕನಿಗೆ ಚಿನ್ನದ ಪದಕ
ಬೆಳಗಾವಿ-. ಎಸ್. ನವೀನ್, ಅಗ್ನಿಶಾಮಕ ಚಾಲಕ, ಹೆಬ್ಬಾಳ, ಬೆಂಗಳೂರು ಇವರು ಇಂದು ಮಾನ್ಯ ಮುಖ್ಯಮಂತ್ರಿಯವರಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ “ಅತ್ಯುತ್ತಮ ಸೇವೆ” ಸಲ್ಲಿಸಿರುವುದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ “ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ” ವನ್ನು ಪಡೆದಿರುತ್ತಾರೆ. ಸುಮಾರು 14 ವರ್ಷಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಚಾಲಕ ವೃತ್ತಿಯ ಜೊತೆಯಲ್ಲಿ ಅಧಿಕಾರಿಗಳೊಂದಿಗೆ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಅಗ್ನಿ ಅವಘಡ/ …
Read More »ಕಾಕತಿ ಬಳಿ ಭೀಕರ ಅಪಘಾತ ಇಬ್ಬರ ದುರ್ಮರಣ…
ಬೆಳಗಾವಿ- ಬೆಳಗಾವಿಯ ಕಾಕತಿ ಬಳಿಯ ವಂಟಮೂರಿ ಘಾಟ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ. ಲಾರಿಯೊಂದು ಡಿವೈಡರ್ ಜಂಪ್ ಮಾಡಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಎರಡು ಲಾರಿಗಳಿಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು ಈ ಅಪಘಾತದಲ್ಲಿ ಒಟ್ಟು ಮೂರು ಲಾರಿಗಳು ಚಿಂದಿಯಾಗಿವೆ. ಉತ್ತರ ಪ್ರದೇಶದ ನೀರಜ್,ಮಹಾರಾಷ್ಟ್ರ ಬೀಡ ಜಿಲ್ಲೆಯ ರಾಜೇಂದ್ರ ದೋಹಿಪಡೆ ಎಂಬಾತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಂಟಮೂರಿ ಘಾಟ್ ಇಳಿಜಾರಿನಿಂದ ಜೋರಾಗಿ ಬಂದ …
Read More »ಕೇವಲ 1500 ರೂ ಹಣದ ವ್ಯೆವಹಾರ, ಧಾಬಾ ಮಾಲೀಕನ ಮರ್ಡರ್…
ಜಗಳ ಬಿಡಿಸಲು ಹೋದ ಧಾಭಾ ಮಾಲೀಕನ ಮೇಲೆ ಹಲ್ಲೆ,ಸಾವು… ಬೆಳಗಾವಿ-ಹಣದ ವ್ಯೆವಹಾರಕ್ಕೆ ಸಮಂಧಿಸಿದಂತೆ ಇಬ್ಬರ ನಡುವೆ ನಡೆದ ಜಗಳ ಬಿಡಿಸಲು ಹೋದ ದಾಭಾ ಮಾಲೀಕನ ಮೇಲೆ ಹಲ್ಲೆ ನಡೆದಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯ ಧಾಬಾ ಮಾಲೀಕ ಸಾವನ್ನೊಪ್ಪಿದ ಘಟನೆ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಎಂ ಕೆ ಹುಬ್ಬಳ್ಳಿ ಗ್ರಾಮದ ಪಂಚವಟಿ ಧಾಭಾ ಮಾಲೀಕ,ಪ್ರಕಾಶ ನಾಗನೂರು(38) ಮೃತಪಟ್ಟಿದ್ದು ನಿನ್ನೆ ಸಂಜೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. …
Read More »ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧನ ವೀರಮರಣ..
ಬೆಳಗಾವಿ- ನಾಗಾಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಯೋಧನೊಬ್ಬ ವೀರಮರಣ ಹೊಂದಿದ ಘಟನೆ ನಡೆದಿದೆ. ಗೋಕಾಕ ತಾಲ್ಲೂಕಿನ ಶಿವಾಪುರ ,ಕೊಣ್ಣೂರ ಗ್ರಾಮದ *ಮಂಜುನಾಥ ಅಪ್ಪಣ್ಣ ಗೌಡಣ್ಣವರ (38) ಎಂಬುವರು ನಾಗಾಲ್ಯಾಂಡ ಗಡಿಯಲ್ಲಿ ಗಸ್ತು ತಿರುಗುವಾಗ ಅವರ ವಾಹನ ಅಪಘಾತಕ್ಕೀಡಾಗಿ ಮಂಜುನಾಥ ವೀರಮರಣ ಹೊಂದಿದ್ದಾರೆ. 18 ವರ್ಷಗಳಿಂದ ಮದ್ರಾಸ ಎಂಜಿನಿಯರಿಂಗ್ ಗ್ರೂಪದಲ್ಲಿ ನೇಮಕಗೊಂಡು ನಾಗಲ್ಯಾಂಡ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಚಾಲಕನಿದ್ದು ತಮ್ಮ ಕರ್ತವ್ಯಕ್ಕೆ ಹೋಗುವಾಗ ಅರಣ್ಯದಲ್ಲಿ ರಸ್ತೆ ಅಪಘಾತದಲ್ಲಿ …
Read More »ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಸುಕಿನ ಗುದ್ದಾಟ….!!!!
ಬೆಳಗಾವಿ-ಭೌಗೋಳಿಕವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ,ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಮುಸುಕಿನ ಗುದ್ದಾಟ ಶುರುವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾಧ್ಯಕ್ಚರ ಬದಲಾವಣೆಯ ವಿಚಾರ ಚರ್ಚೆಯಲ್ಲಿದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲಿಯೇ ಅದ್ಯಕ್ಷ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿರುವ ಮೂವರು ದಿಗ್ಗಜರಲ್ಲಿ ಅದ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಯುವ ಕಾಂಗ್ರೆಸ್ ಘಟಕದಲ್ಲಿ ಹಲವಾರು ವರ್ಷಗಳ ಕಾಲ ಸಂಘಟನೆ ಮಾಡಿರುವ ಬಸವರಾಜ …
Read More »ಮದುವೆ, ಸಮಾರಂಭಗಳ ಮೇಲೆ ಕ್ಯಾಮೆರಾ ನಿಗಾ:
ಕೋವಿಡ್-೧೯ ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ಮದುವೆ, ಸಮಾರಂಭಗಳಿಗೆ ಆಯಾ ತಹಶೀಲ್ದಾರರಿಂದ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಬೆಳಗಾವಿ, -: ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮದುವೆ ಮತ್ತಿತರ ನಿಗದಿತ ಸಮಾರಂಭಗಳಿಗೆ ಮಾತ್ರ ಆಯಾ ತಾಲ್ಲೂಕುಗಳ ತಹಶೀಲ್ದಾರರು ಅನುಮತಿಯನ್ನು ನೀಡಲಿದ್ದಾರೆ. ಅನುಮತಿ ಪಡೆಯದೇ ಅಥವಾ ಅನುಮತಿ ಪಡೆದುಕೊಂಡು ನಿಯಮಾವಳಿ ಉಲ್ಲಂಘಿಸಿ ಸಮಾರಂಭ ನಡೆಸುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಎಚ್ಚರಿಕೆ …
Read More »ಇವತ್ತು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ 301 ಸೊಂಕಿತರ ಪತ್ತೆ..
ಇವತ್ತಿನ ಬುಲಿಟೀನ್ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 301 ಸೊಂಕಿತರು ಪತ್ತೆಯಾಗಿದ್ದು ಖಾನಾಪೂರ ತಾಲ್ಲೂಕಿನಲ್ಲಿ 144 ಜನರಿಗೆ ಸೊಂಕು ತಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಬೆಳಗಾವಿ ಜಿಲ್ಲೆಯ ಪಾಲಿಗೆ ಇವತ್ತು ಭೀತಿ ಹುಟ್ಟಿಸುವ ಶಾಕಿಂಗ್ ನ್ಯುಸ್ ಹೊರಬಿದ್ದಿದೆ.
Read More »ನಿನ್ನ….. ನೋಡಿ ಸುಮ್ನೆಂಗ್ ಇರಲಿ…..!!!
ಬೆಳಗಾವಿ- ಧಾರವಾಡದಲ್ಲಿ ಸಾಹಿತಿಗಳು ಸಿಕ್ಕಂಗೆ,ಬೆಳಗಾವಿಯಲ್ಲಿ ಕಲಾಕಾರರು ಸಿಗ್ತಾರೆ,ಇಲ್ಲಿಯ ಜನ ಬಹಳ ಕ್ರಿಯಾಶೀಲ,ಅನ್ನೋದಕ್ಕೆ ಈ ಪೋಟೋ ನೋಡಿದ್ರೆ ಸಾಕು,ಬೆಳಗಾವಿ ಜನ ಎಷ್ಟು ಕ್ರಿಯೇಟಿವ್ ಅಂತಾ ಗೊತ್ತಾಗಿ ಬಿಡುತ್ತದೆ. ಬೆಳಗಾವಿಯಲ್ಲಿ ಎಲ್ಲರೂ ಮಾಸ್ಕ್ ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ,ಆದ್ರೆ ಬೆಳಗಾವಿಯ ಜನ ಚನ್ನಮ್ಮ ವೃತ್ರದಲ್ಲಿರುವ ಚನ್ನಮ್ಮಾಜಿಯ ವೀರ ಸೈನಿಕರ ಪ್ರತಿಮೆಗಳಿಗೂ ಮಾಸ್ಕ ಹಾಕಿ,ಎಲ್ಲಾರೂ ಮಾಸ್ಕ್ ಹಾಕೊಳ್ರಿ ಎನ್ನುವ ಸಂದೇಶ ಸಾರಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಕೆ ಹೆಚ್ ಜಗದೀಶ್ ಅವರು ಚೆನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಾಜಿಯ …
Read More »ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ದೆ ಮಾಡಿ ಟೀಕೆಗೆ ಗುರಿಯಾದ “ಮಂಗಲಾ”….!!!!
ಬೆಳಗಾವಿ-ಒಂದು ಬಾರಿ ಚುನಾವಣೆಗೆ ಸ್ಪರ್ದೆ ಮಾಡಿ,ಐದು ವರ್ಷಗಳ ಕಾಲ ಮಾಡ ನ ಸೇವೆ ಮಾಡಿ,ಅಧಿಕಾರ ಅನುಭವಿಸಿ,ಕನ್ಮಡ ಸಮ್ಮೇಳನಗಳನ್ನು ನಡೆಸಿ,ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರನ್ನೇ ಜಿಲ್ಲಾ ಸಮ್ಮೇಳನದ ಅದ್ಯಕ್ಷರನ್ನಾಗಿ ಮಾಡಿ ಹೊಸ ಸಂಪ್ರದಾಯವನ್ನು ಶುರು ಮಾಡಿದ ಮಂಗಲಕ್ಕ ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ದೆ ಮಾಡಿರುವ ಸಂಗತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಬೆಳಗಾವಿ ಜಿಲ್ಲೆ ಅತೀ ದೊಡ್ಡ ಜಿಲ್ಲೆ ಈ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ …
Read More »