Breaking News

LOCAL NEWS

ಖಾಕಿ ಪವರ್, ಆರೋಪಿ ಅಂಧರ್.ಹತ್ತು ಲಕ್ಷ ರೂ ರಿಕವರ್…!!

ಬೆಳಗಾವಿ-ಕೆಲವು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಅವ್ಯಾಹತವಾಗಿ ಸರಗಳ್ಳತನ ಮಾಡುತ್ತಿದ್ದ ಜಾಮತಾರಾ chine scratching ಗ್ಯಾಂಗ್ ಮೇಲೆ ಗೋಲೀಬಾರ್ ಮಾಡಿ ಸರಗಳ್ಳರನ್ನು ಎನ್ ಕೌಂಟರ್ ಮಾಡಿ ಬೆಳಗಾವಿ ನಗರವನ್ನು ಸರಗಳ್ಳರಿಂದ ಮುಕ್ತ ಮಾಡಿದ್ದ  ಸಿಪಿಐ ಗಡ್ಡೇಕರ ಈಗ ಸೈಬರ್ ಕ್ರೈಂ ಸಿಪಿಐ ಆಗಿ ಅಲ್ಪಾವಧಿಯಲ್ಲೇ  ಪ್ರಕರಣವೊಂದನ್ನು ಪತ್ತೆ ಮಾಡಿ ವಿಶೇಷ ಸಾಧನೆಗೈದಿದ್ದಾರೆ‌. ಕಳೆದ ತಿಂಗಳು ಬೆಳಗಾವಿಯ ಬಿಎಸ್ಎನ್ಎಲ್ ನಿವೃತ್ತ ಸಿಬ್ಬಂಧಿಯೊಬ್ಬರ ಖಾತೆಯಿಂದ ಸಮಾರು ಹತ್ತು ಲಕ್ಷ ರೂ ಊಡಾಯಿಸಿದ್ದ ಜಾರ್ಖಂಡ್ ರಾಜ್ಯದ …

Read More »

ಬೆಳಗಾವಿ ಪೋಲೀಸರಿಂದ ಹೋಲ್ ಸೇಲ್ ಬೇಟೆ…..

ಬೆಳಗಾವಿ- ಬಕ್ರೀದ್ ಹಬ್ಬಕ್ಕಾಗಿ ಮಾರಾಟ ಮಾಡಲು ತರಲಾಗಿದ್ದ 209 ಆಕಳು ಕರುಗಳನ್ನು ರಾಯಬಾಗ ಪೋಲೀಸರು ವಶಪಡಿಸಿಕೊಂಡಿದ್ದಾರೆ. ರಾಯಬಾಗ ಪಟ್ಟಣದ ಸಾಯಿನಗರದಲ್ಲಿರುವ ಇಮ್ತಿಯಾಜ್ ಬೇಪಾರಿ ಜಾತಿ ಬೆಪಾರಿ ಎಂಬಾತ ನಡೆಸುತ್ತಿದ್ದ ಖಾಸಾಯಿ ಖಾನೆಗೆ ಸುಮಾರು 209 ದನಗಳು (ಆಕಳುಕರುಗಳು ಹಾಗೂ ಎಮ್ಮೆಕರುಗಳು) ಗಳನ್ನು ಬಕ್ರೀದ್ ಹಬ್ಬದ ನಿಮಿತ್ಯ ಕಸಾಯಿ ಖಾನೆಗೆ ತೆಗೆದುಕೊಂಡು ಬಂದಿದ್ದನ್ನು ರಾಯಭಾಗ ಪೊಲೀಸರು ತಮ್ಮ ವಶಕ್ಕೆ ತಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಆಕಳುಕರು,ಹಾಗು ಎಮ್ಮೆಗಳನ್ನು ನಸುಕಿನ ಜಾವ ಬೆಳಗಾವಿ, ಸದಲಗಾ ಹಾಗೂ …

Read More »

ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಟೋಟಲ್ ಮೈನಸ್…!!

ಬೆಳಗಾವಿ-ಇವತ್ತು ಸೋಮವಾರ ಸಂಜೆ ಬಿಡುಗಡೆಯಾದ ಕೋವೀಡ್ ಹೆಲ್ತ್ ಬುಲೀಟೀನ್ ಬೆಳಗಾವಿ ಜಿಲ್ಲೆಯ ಜನತೆಗೆ ಸಿಹಿ ಸುದ್ಧಿ ಕೊಟ್ಟಿದೆ. ಇವತ್ತಿನ ಸೊಂಕಿತರ ಸಂಖ್ಯೆ ಗಮನಿಸಿದ್ರೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ದೊಡ್ಡ ಲಗಾಮು ಬಿದ್ದಿದೆ. ಇವತ್ತು ಬೆಳಗಾವಿ ಜಿಲ್ಲೆಯಲ್ಲಿ ಕೇವಲ 38 ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಕೇವಲ 6 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಸೊಂಕಿತರ ಸಂಖ್ಯೆಯಲ್ಲಿ ಬೆಳಗಾವಿ ತಾಲ್ಲೂಕು ಯಾವಾಗಲೂ ಪ್ರಥಮ ಸ್ಥಾನದಲ್ಲಿತ್ತು,ಆದರೆ ಇವತ್ತು ಕೇವಲ 6 ಜನ ಸೊಂಕಿತರು …

Read More »

ಮೀಟೀಂಗ್ ಮಾಡಿದ್ರ ಹಿಂಗ್ ಮಾಡಬೇಕ್ರೀ…ಕಾರಜೋಳ ,ನೋಡಿ ಕಲಿಬೇಕ್ರೀ…!!+

ಬೆಳಗಾವಿ,-  ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಹೊಸದಾಗಿ ನಿರ್ಮಿಸುವ 35 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಲಜೀವನ ಮಿಷನ್, ಬಹುಗ್ರಾಮ ಕುಡಿಯುವ ನೀರು, ಕೋವಿಡ್ ನಿಯಂತ್ರಣ ಮತ್ತಿತರ ವಿಷಯಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಜು.18) ನಡೆದ ಅಧಿಕಾರಿಗಳ ಸಭೆಯಲ್ಲಿ …

Read More »

ಬೆಳ್ಳಂ ಬೆಳಿಗ್ಗೆ ಯುವಕನ ಮರ್ಡರ್….

ಬೆಳಗಾವಿ-ಗೋಕಾಕ್‌ನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ ಇಂದು ಬೆಳ್ಳಂ ಬೆಳಿಗ್ಗೆ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್‌ ಹೊರವಲಯ ಮಹಾಂತೇಶ ನಗರದಲ್ಲಿ ಘಟನೆ ನಡೆದಿದ್ದು,22 ವರ್ಷದ ಮಂಜು ಶಂಕರ್ ಮುರಕಿಭಾವಿ ಕೊಲೆಯಾದ ಯುವಕನಾಗಿದ್ದು,ತಡರಾತ್ರಿ ಯುವಕನ ಹತ್ಯೆಗೈದು ಪರಾರಿಯಾಗಿರುವ ದುಷ್ಕರ್ಮಿಗಳು,ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಮುರಕಿಭಾವಿ,ಎಂಬಾತನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ …

Read More »

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ಓರ್ವನ ಬಲಿ…

ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ತೊಘಲಕ್ ದರ್ಬಾರ್ ನಡೆಯುತ್ತಿದೆ.ಬೇಕಾಬಿಟ್ಟಿ ಕಾಮಗಾರಿಗೆ ಇವತ್ತು ಮತ್ತೋರ್ವ ಬಲಿಯಾಗಿದ್ದು,ಈವರೆಗೆ ಸ್ಮಾರ್ಟ್ ವರ್ಕ್ ಗೆ ಇಬ್ಬರು ಬಲಿಯಾದಂತಾಗಿದೆ. ಇಂದು ರಾತ್ರಿ8 ಗಂಟೆ ಸುಮಾರಿಗೆ ,ವ್ಯಕ್ತಿಯೊಬ್ಬ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಬಿದ್ದು ಡಿವೈಡರ್ ನಿರ್ಮಿಸಲು ಹಾಕಲಾಗಿದ್ದ ಕಬ್ಬಣದ ರಾಡ್ ಗಳ ಮೇಲೆ ಬಿದ್ದು ತೀವ್ರ ರಕ್ತಸ್ರಾವದ ಪರಿಣಾಮ ನ್ಯು ಗಾಂಧಿನಗರದ ಮಹ್ಮದ ದಸ್ತಗೀರ ಮುಲ್ಲಾ‌‌,69 ಎಂಬಾತ ಮೃತಪಟ್ಟಿದ್ದಾನೆ. ಬೆಳಗಾವಿ ಕೇಂದ್ರ ಬಸ್ …

Read More »

ಬೆಳಗಾವಿ ಜಿಲ್ಲೆಯ ಪ್ರಗತಿ ಪರಶೀಲಿಸಿದ ಸಕ್ರೇಟರಿ…

ಬೆಳಗಾವಿ, – ಬೆಳಗಾವಿ ನಗರದಲ್ಲಿ ಸಮರ್ಪಕ ಕಸ ವಿಂಗಡಣೆ ಮತ್ತು ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಪ್ರತಿ ಮನೆಗೆ ನೀಲಿ ಹಾಗೂ ಹಸಿರು ಡಸ್ಟ್ ಬಿನ್ ಗಳನ್ನು ಪಾಲಿಕೆ ವತಿಯಿಂದಲೇ ಪೂರೈಸಿ ಅದರ ವೆಚ್ಚವನ್ನು ಆಸ್ತಿ ತೆರಿಗೆಯಲ್ಲಿ ಸೇರ್ಪಡೆ ಮಾಡುವ ಕುರಿತು ಪರಿಶೀಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಜು.16) ನಡೆದ …

Read More »

ಕಂದಾಯ ಸಚಿವರ ನಿರ್ಧಾರಕ್ಕೆ ಗಡಿನಾಡು ಗರಂ….!!!

ಬೆಳಗಾವಿ- ರಾಜ್ಯದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿಯಾನೆ ಆಗಿದ್ದು ಈ ಕಚೇರಿಗಳನ್ನು ಬಂದ್ ಮಾಡುತ್ತೇವೆ.ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಹೇಳಿಕೆ ನೀಡಿರುವದಕ್ಕೆ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು,ಕಂದಾಯ ಸಚಿವರು ಕೂಡಲೇ ನಿರ್ಧಾರ ವಾಪಸ್ ಪಡೆದು ರಾಜ್ಯದಲ್ಲಿರುವ ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಮುಂದುವರೆಸುವಂತೆ …

Read More »

ಹಾಲಿಡೇ,ಫಾಲ್ಸ್ ಗೆ ಹೋಗುವಂತಿಲ್ಲ….

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರವಾಸಿ ಕೇಂದ್ರಗಳಾದ ಗೋಕಾಕ್ ಫಾಲ್ಸ್,ಗೊಡಚಿನ ಮಲ್ಕಿ ಫಾಲ್ಸ್ ಹಾಗು ಧೂಪದಾಳ ಸೇತುವೆ ಬಳಿ ರಜಾ ದಿನಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ. ಶನಿವಾರ,ಭಾನುವಾರ,ಹಾಗೂ ರಜಾ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರೋದಿಲ್ಲ,ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲೆಯ ಇತರ ಪ್ರವಾಸಿ ತಾಣಗಳಲ್ಲೂ ರಜಾ ದಿನಗಳಲ್ಲಿ ಸಾವರ್ಜನಿಕರ …

Read More »

ಬೆಳಗಾವಿಗೆ ಬಂಪರ್ ಕೊಡುಗೆ,ಜರ್ಮನ್ ಕೌಶಲ್ಯಾಭಿವೃದ್ಧಿ ಕೇಂದ್ರ ಮಂಜೂರು

ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ದಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು : ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆಳಗಾವಿ, ಜು.೧೫(ಕರ್ನಾಟಕ ವಾರ್ತೆ): ವಿಶ್ವ ಯುವ ಕೌಶಲ್ಯ ದಿನಾಚರಣೆಯ ದಿನವೂ ಆಗಿರುವ ಇಂದು ವೇಗವಾಗಿ ಬದಲಾಗುತ್ತಿರುವ ತಾಂತ್ರಿಕತೆಯಲ್ಲಿ ಕೌಶಲ್ಯ ವೃದ್ದಿಯ ಪ್ರಾಮುಖ್ಯತೆಗೆ ಅನುಗುಣವಾಗಿ ಬೆಳಗಾವಿಯಲ್ಲಿ ಈಗಾಗಲೇ ಕಾರ್ಯಾರಂಭವಾಗಿರುವ ಅಂತರಾಷ್ಟ್ರೀಯ ಗುಣಮಟ್ಟದ ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರದ 16.43 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ …

Read More »