Breaking News
Home / LOCAL NEWS (page 3)

LOCAL NEWS

ಕನ್ನಡ….ಕನ್ನಡ….ಕೇಳ್ರಪೋ ನಮ್ಮ ಸಂಕಟ…!!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಲಿಂಗನಮಠ ಗ್ರಾಮಸ್ಥರು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣಕ್ಕಾಗಿ ಆಗ್ರಹಿಸಿ,ಇಂದು ಬೆಳಗ್ಗೆ ಏಕಾಏಕಿ ಬೀದಿಗಿಳಿದು ಹೋರಾಟ ಶುರು ಮಾಡಿದ್ದಾರೆ. ಉರ್ದು ಶಾಲೆಗೆ ಕೊಠಡಿಗಳು ಮಂಜೂರಾಗಿವೆ.ಕನ್ನಡ ಶಾಲೆಯ ಮಕ್ಕಳು ಶಾಲೆಯ ಕಟ್ಟೆಯ ಮೇಲೆ ಪಾಠ ಕೇಳುವ ಪರಿಸ್ಥಿತಿ ಇದೆ.ಶಾಲಾ ಕೊಠಡಿಗಳ ಮಂಜೂರಾತಿ ವಿಚಾರದಲ್ಲಿ ಕನ್ನಡ ಶಾಲೆಯ ಮಕ್ಕಳಿಗೆ ಅನ್ಯಾಯವಾಗಿದೆ.ಎಂದು ಆರೋಪಿಸಿ ಗ್ರಾಮಸ್ಥರು ಲಿಂಗನಮಠ ಗ್ರಾಮದಲ್ಲಿ ಪ್ರತಿಭಟಿಸುತ್ತಿದ್ದಾರೆ. ಲಿಂಗನಮಠ ಗ್ರಾಮದಲ್ಲಿ, ಪ್ರಾಥಮಿಕ ಶಾಲೆಯಲ್ಲಿ ಐದು …

Read More »

ಅದಕ್ಕಾಗಿಯೇ ಜನ ಇವರನ್ನು ಸಾಹುಕಾರ್ ಅಂತಾರೆ…!!

ಮೂಡಲಗಿ- ಅರಭಾವಿ ವಿಧಾನಸಭಾ ಕ್ಷೇತ್ರಕ್ಕೆ 2022-23 ನೇ ಸಾಲಿನಲ್ಲಿ 4 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮಂಜೂರು ಆಗಿವೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಮೂಡಲಗಿ ತಾಲೂಕಿನ ಮೂಡಲಗಿ, ಕುಲಗೋಡ, ಖಾನಟ್ಟಿ ಮತ್ತು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ. ಇದರಿಂದ ಮೂಡಲಗಿ ವಲಯದಲ್ಲಿ ಕಾಲೇಜುಗಳ ಸಂಖ್ಯೆ 9ಕ್ಕೇರಿದೆ ಎಂದು …

Read More »

ಮಗು ಅಪಹರಿಸಿದ ಚಾಲಾಕಿ ಕಳ್ಳಿ ಅರೆಸ್ಟ್…!!

ಮಗುವನ್ನು ಕಳುವು ಮಾಡಿದ ಆರೋಪದ ಮೇಲೆ,ಮಾಯಾ ಕಾಂಬಳೆ .ಮಹಾರಾಷ್ಟ್ರದ ಮೈಶಾಳ ಮೂಲದ ಮಹಿಳೆ ಅಥಣಿ-ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ ಚಾಲಾಕಿ ಕಳ್ಳಿಯನ್ನು ಪೋಲೀಸ್ರು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಕಳುವಾದ ಮಗುವನ್ನು ರಕ್ಷಣೆ ಮಾಡಿದ್ದಾರೆ. ನರ್ಸ್ ವೇಷದಲ್ಲಿ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ,ತೂಕ ಮಾಡಿಸಿಕೊಂಡು ಬರುವದಾಗಿ ಗಂಡು ಮಗು ಕಳ್ಳತನ ಮಾಡಲಾಗಿತ್ತು.ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿತ್ತು.ಅಂಬಿಕಾ ಅಮೀತ ಭೋವಿ ಅವರ …

Read More »

ಪರಿಹಾರ ಕೊಡಿ ಎಂದು,ಡಿಸಿ ಕಚೇರಿಗೆ ಬಂದ್ರು…!!

ಬೆಳಗಾವಿ ನಿರಂತರ ಮಳೆಯಿಂದ ಸೋಯಾಬಿನ್, ಆಲೂಗಡ್ಡೆ ಹಾಗೂ ಇನ್ನಿತರ ಬೆಳೆ ನಾಶಕ್ಕೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ತಾಲೂಕಿನಲ್ಲಿ ಈ ಹಿಂದೆಯಾದ ನಿರಂತರ ಮಳೆಗೆ ಸೋಯಾಬಿನ್ ಹಾಗೂ ಆಲೂಗಡ್ಡೆ ಬೆಳೆ ಹಾನಿಯಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಂತೆ ಈ ಹಿಂದೆ ಲಾಕ್ ಡೌನ್ ಸಮಯದಲ್ಲಿ ಕ್ಯಾಬಿಜ ಹಾಗೂ ಇನ್ನಿತರ …

Read More »

ಮಿಂಡನ ಜೊತೆ ಸೇರಿ ಗಂಡನನ್ನೇ ಖತಂ ಮಾಡಿದ ಖಿಲಾಡಿ ಪತ್ನಿ…!!

 ನಿನ್ನೆ ಶವ ಪತ್ತೆ ಇವತ್ತು ಆರೋಪಿಗಳ ಪತ್ತೆ…!! ಬೆಳಗಾವಿ-ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದ ಪತ್ನಿಯ ಜೊತೆಗೆ ಪ್ರಿಯಕರನನ್ನು ಬಂಧಿಸಲಾಗಿದೆ.ಕಟಕೋಳ ಠಾಣೆ ಪೊಲೀಸರಿಂದ ಪತ್ನಿ, ಆಕೆಯ ಪ್ರಿಯಕರನ ಬಂಧನವಾಗಿದೆ.ಹೊಸೂರು ಪೂಲ್ ಬಳಿ ನಿನ್ನೆ ಪತ್ತೆಯಾಗಿದ್ದ ಪಾಂಡಪ್ಪ ಜಟಕನ್ನವರ (35) ಶವ ಪತ್ತೆಯಾಗಿತ್ತು.ಇವತ್ತು ಬೆಳಗಾಗುವಷ್ಟರಲ್ಲಿ ಆರೋಪಿಗಳೂ ಪತ್ತೆಯಾಗಿದ್ದಾರೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಶವ ಸಿಕ್ಕತ್ತು.ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿ ಪ್ರಕರಣ ಭೇದಿಸಿದ್ದಾರೆ.ಕೃಷಿ …

Read More »

ಬೆಳಗಾವಿಯಲ್ಲಿ ಮಟಕಾ ಜೋರು,ಬುಕ್ಕಿಗೆ ಒಂದು ವರ್ಷ ಗಡಿಪಾರು….!!!

ಬೆಳಗಾವಿ-ಬೆಳಗಾವಿ ನಗರದಲ್ಲಿ ಜೋರ್ದಾರ್ ಮಟಕಾ ದಂಧೆ ನಡೆಸಿದ್ದ,ಮಟಕಾ ಬುಕ್ಕಿಯೊಬ್ಬನನ್ನು ಒಂದು ವರ್ಷದವರೆಗೆ ಬೆಳಗಾವಿಯಿಂದ ಗಡಿಪಾರು ಮಾಡಿ ಡಿಸಿಪಿ ರವೀಂದ್ರ ಗಡಾದೆ ಆದೇಶ ಹೊರಡಿಸಿದ್ದಾರೆ. ಹಲವಾರು ವರ್ಷಗಳಿಂದ ಮಟಕಾ ದಂಧೆ ನಡೆಸುವ ಚಾಳಿಯನ್ನು ಮುಂದುವರೆಸಿದ್ದ,7 ಮಟಕಾ ಜೂಜಾಟದ ಪ್ರಕರಣಗಳಲ್ಲಿ ಭಾಗಿಯಾಗಿ,ನಾಲ್ಕು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದೋಷಿಯಾಗಿ ಶಿಕ್ಷೆಗೊಳಪಟ್ಟರೂ ಈತ ಮಟಕಾ ದಂಧೆ ಮುಂದುರೆಸಿದ್ದ,ಬೆಳಗಾವಿಯ ಅನಿಗೋಳದ ನಿವಾಸಿ,ಪರಶುರಾಮ ಬಾಬು ಮೇತ್ರಿ ಎಂಬಾತನನ್ನು ಈಗ ಒಂದು ವರ್ಷ ಗಡಿಪಾರು ಮಾಡಲಾಗಿದೆ. ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಮಟಕಾ …

Read More »

ನಮ್ಮ ಸಿಎಂ ಬೊಮ್ಮಾಯಿ ಪುಣ್ಯದ ಕೆಲಸ ಮಾಡಿದ್ರ ನೋಡ್ರಿ…!!

ಬೊಮ್ಮಾಯಿಯವರ ಸರಕಾರದಿಂದ ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆ: ನಳಿನ್‍ಕುಮಾರ್ ಕಟೀಲ್ ಕೃತಜ್ಞತೆ ಬೆಂಗಳೂರು: ನಗರಸಭೆ, ಪುರಸಭೆ ಮತ್ತು ಇತರ ಪಟ್ಟಣ ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಇಂದು ತನ್ನ ಅನುಮೋದನೆ ನೀಡಿದೆ. ಈ ಮೂಲಕ ಕಾಮನ್ ಮ್ಯಾನ್ ಮುಖ್ಯಮಂತ್ರಿ ಎಂದೇ ಜನಮೆಚ್ಚುಗೆ ಪಡೆದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ …

Read More »

ಕ್ಯಾಬಿನೇಟ್ ಮಿಟೀಂಗ್ ಬೆಳಗಾವಿಯಲ್ಲಿ ನಡೆಯಲಿ,ಶಾಸಕರ ಭವನ ನಿರ್ಮಿಸಲಿ.

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿರುವ ರಾಜ್ಯಮಟ್ಟದ ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ಸುವರ್ಣ ವಿಧಾನಸೌಧದಲ್ಲಿ ಸದಾ ಕ್ರಿಯಾಶೀಲವಾಗಿರಬೇಕು. ಹಾಗಾಗಿ ವಿವಿಧ …

Read More »

ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ.

ರಾಮದುರ್ಗ-ಹೊಸೂರ ಬಳಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರ ಗ್ರಾಮದಲ್ಲಿ ವ್ಯಕ್ತಿಯೊಬ್ವನನ್ನು ಹತ್ಯೆ ಮಾಡಲಾಗಿದೆ‌. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ದುಷ್ಕರ್ಮಿಗಳು,ಕೊಲೆ ಮಾಡಿ ಅಪಘಾತ ಎಂಬ ರೀತಿ ಬಿಂಬಿಸಲು ಯತ್ನಿಸಿದ ಶಂಕೆ ವ್ಯಕ್ತವಾಗಿದೆ.ಮೃತದೇಹದ ಪಕ್ಕವೇ ಬೈಕ್ ಬಿದ್ದಿದೆ.ಬೇರೆಡೆ ಬರ್ಬರ ಹತ್ಯೆಗೈದು ಶವ ಬಿಸಾಕಿ ಹೋದ ಶಂಕೆ ವ್ಯಕ್ತವಾಗಿದೆ. ಹೊಸೂರ ಗ್ರಾಮದ 35 ವರ್ಷದ ಪಾಂಡಪ್ಪ ದುಂಡಪ್ಪ ಜಟಕನ್ನವರ ಮೃತದೇಹ ಪತ್ತೆಯಾಗಿದೆ.ಹೊಸೂರ ಫೂಲ್ ಬಳಿ ಶವ ಬಿಸಾಕಿ …

Read More »

ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

ಬೆಳಗಾವಿ-ಎತ್ತುಗಳ ಮೈ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ರೈತನೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಮಲ್ಲಪ್ಪ ಅನವಾಳ (45) ಮೃತ ದುರ್ದೈವಿಯಾಗಿದ್ದಾನೆ.ಇಂದು ಬೆಳಗ್ಗೆ ಎತ್ತುಗಳ ಮೈ ತೊಳೆಯಲು ಕೆರೆಗೆ ಹೋಗಿದ್ದ ಮಲ್ಲಪ್ಪ,ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದವರಿಗೂ ಈಜು ಬಾರದ ಕಾರಣಕ್ಕೆ ಈತನ ರಕ್ಷಣೆ ಸಾಧ್ಯವಾಗಿಲ್ಲ.ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ರವಾನೆಯಾಗಿ, ಕೆರೆಯತ್ತ ಸ್ಥಳೀಯರ …

Read More »