Home / LOCAL NEWS (page 2)

LOCAL NEWS

ಎನ್ ಜಯರಾಮ್ ಅವರು ಈಗ ಮುಖ್ಯಮಂತ್ರಿಗಳ ಕಾರ್ಯದರ್ಶಿ.

ಬೆಳಗಾವಿ: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಬೋರ್ಡ್ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ಎನ್ ಜಯರಾಮ್ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಜಯರಾಮ್ ಎನ್. 2004 ಬ್ಯಾಚ್ ಐಎಎಸ್ ಅಧಿಕಾರಿ. ಅವರು ಬೆಳಗಾವಿ ಜಿಲ್ಲೆ ಜೊತೆಗೆ ಅವಿನಭಾವ ನಂಟು ಹೊಂದಿದ್ದಾರೆ. ಸುಮಾರು ನಾಲ್ಕು ವರ್ಷಗಳ ಸುಧೀರ್ಘ ಅವಧಿಯವರೆಗೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಯರಾಮ್ ಈ ವೇಳೆ ಜಿಲ್ಲೆಯ ಎಲ್ಲ ಪಕ್ಷಗಳ‌ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು …

Read More »

ಐಎಎಸ್ ಪರೀಕ್ಷೆಯಲ್ಲಿ, ಬೆಳಗಾವಿಯ ಮಾಸ್ತರ್ ಮಗಳು ಟಾಪರ್…!!

ಬೆಳಗಾವಿ: ಯುಪಿಎಸ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಶೃತಿ ವಿಶೇಷ ಸಾಧನೆ ಮಾಡಿದ್ದಾಳೆ.ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಟಕಗೊಂಡಿದ್ದು, ಬೆಳಗಾವಿ ಜಿಲ್ಲೆಯ ಯುವತಿ ಶೃತಿ ಯರಗಟ್ಟಿ 362ನೇ ರ‌್ಯಾಂಕ್ ಪಡೆಯುವ ಮೂಲಕ ಕ್ರಾಂತಿಯ ನೆಲ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಶೃತಿ, ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿಯಾಗಿದ್ದಾರೆ. ಶೃತಿ ಯರಗಟ್ಟಿ ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರು. ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ …

Read More »

ಬಿತ್ತಾಕ್ ಬೀಜಾ ಕೊಡಾಕ್ ಡಿಸಿ ಸಾಹೇಬ್ರು ಹೇಳ್ಯಾರ್…!!

ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಮೇ 23(ಕರ್ನಾಟಕ ವಾರ್ತೆ): ಮುಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಒಟ್ಟು 170 ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ಬಳಿಕ ಅಧಿಕಾರಿಗಳ ಸಭೆಯನ್ನು ನಡೆಸಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಅನಾನುಕೂಲ ಆಗದಂತೆ …

Read More »

ಬೆಳಗಾವಿಯಲ್ಲಿ ಹೈಟೆನ್ಷನ್ ವಾಯರ್ ತಾಗಿ ಬಾಲಕಿಯ ಬಲಿ…!

ಬೆಳಗಾವಿ-ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ,ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಚ್ಛೆ ಗ್ರಾಮದ ಮಧುರಾ ಮೋರೆ (13) ಸ್ಥಳದಲ್ಲೇ ಮೃತಪಟ್ಟ ಬಾಲಕಿಯಾಗಿದ್ದಾಳೆ.ಮನೆಯ ಒಂದನೇ ಮಹಡಿ ಮೇಲೆ ಆಟ ಆಡುತ್ತ ನಿಂತಾಗ ತಾಗಿದ ಹೈಟೆನ್ಷನ್ ವೈಯರ್ ಬಾಲಕಿಯನ್ನು ಬಲಿ ಪಡೆದುಕೊಂಡಿದೆ. ಹೆಸ್ಕಾಂ ನೋಟಿಸ್ ನೀಡಿದ್ದರೂ ನಿರ್ಲಕ್ಷ್ಯ ವಹಿಸಿ ಮನೆ ನಿರ್ಮಾಣ ಮಾಡಲಾಗಿತ್ತು.ಹೈಟೆನ್ಷನ್ ವೈಯರ್ ಇದ್ದು, ಮನೆ ಕಟ್ಟದಂತೆ ನೋಟಿಸ್ ನೀಡಿದ್ದ ಹೆಸ್ಕಾಂ …

Read More »

ಮಾಸ್ಟರ್ ಮೈಂಡ್ ಸ್ವಾಗತಕ್ಕೆ,ಬೆಳಗಾವಿಯಲ್ಲಿ ಮಾಸ್ಟರ್ ಪ್ಲ್ಯಾನ್….!!!

ಬೆಳಗಾವಿ: ಸಿದ್ದರಾಮಯ್ಯ ನೇತೃತ್ವದ ಸಂಪುಟದ ಮೊದಲ ಪಟ್ಟಿಯಲ್ಲೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿರುವ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಸಚಿವರಾದ ನಂತರ ಮೊಟ್ಟ ಮೊದಲ ಬಾರಿಗೆ ಭಾನುವಾರ ಬೆಳಗಾವಿಗೆ ಆಗಮಿಸುತ್ತಿರುವ ತಮ್ಮ ನೆಚ್ಚಿನ ನಾಯಕನಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಹೌದು 4ನೇ ಬಾರಿ ಕರ್ನಾಟಕದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ ಜಾರಕಿಹೊಳಿ ಸದ್ಯ ರಾಜ್ಯ ರಾಜಕಾರಣದ ಮೋಸ್ಟ್ ಪವರ್ …

Read More »

ಬೆಳಗಾವಿಯಲ್ಲಿ ಇಲೆಕ್ಷನ್ ನೀತಿ ಸಂಹಿತೆ ಫಿನೀಶ್ ಆದ್ಮೇಲೆ…!!

ಅತಿವೃಷ್ಟಿ-ಪ್ರಾಣಹಾನಿ ತಡೆಗೆ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ, ಮೇ 22(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅತಿವೃಷ್ಟಿ ಅಥವಾ ಪ್ರವಾಹ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮೇ 22) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ತಾಲ್ಲೂಕಿನಲ್ಲಿ ವಿಪತ್ತು …

Read More »

ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ, ಸಾಹುಕಾರ್ ಪ್ರಮಾಣವಚನ..!!

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಜೊತೆಗೆ ಎಂಟು ಸಚಿವರ ಪ್ರಮಾಣವಚನ ಬೆಂಗಳೂರು, ಮೇ 20 : ಹದಿನಾರನೇ ವಿಧಾನಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ‌ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ …

Read More »

ನಾಲ್ಕೈದು ಜನ ಸೇರಿ ಈ ಯುವಕನನ್ನು ಮರ್ಡರ್ ಮಾಡಿದ್ರು…!

ಬೆಳಗಾವಿ: ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರ ದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಮಾರೀಹಾಳ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮಾರಿಹಾಳ ಗ್ರಾಮದ ಮಹಾಂತೇಶ ರುದ್ರಪ್ಪ ಕರಲಿಂಗನವರ(23) ಎಂಬ ಯುವಕನನ್ನು ನಾಲ್ಕೈದು ಜನ ಯುವಕರು ಸೇರಿ ಹತ್ಯೆಗೈದಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹಳೆಯ ದ್ವೇಷದಿಂದಲೇ ಕೊಲೆಗೈದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಪಿ.ವಿ. ಸ್ನೇಹ ಹಾಗೂ ಮರೀಹಾಳ ಇನ್ಸ್ಪೆಕ್ಟರ್ ಭೇಟಿ …

Read More »

ಬೆಳಗಾವಿ ಜಿಲ್ಲೆಯಿಂದ, ಮಂತ್ರಿ ಯಾರಾಗ್ತಾರೆ,ಇವತ್ತು ಡಿಸೈಡ್ ಆಗುತ್ತೆ…!

ಬೆಳಗಾವಿ-ಭೌಗೋಳಿಕವಾಗಿ,ರಾಜಕೀಯವಾಗಿ,ಬೆಂಗಳೂರು ಹೊರತುಪಡಿಸಿದರೆ,ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.ಹದಿನೆಂಟರಲ್ಲಿ ಹನ್ನೊಂದು ಕ್ಷೇತ್ರಗಳನ್ನು ಬಾಚಿಕೊಂಡಿರುವ ಕಾಂಗ್ರೆಸ್ ಈಗ ಬಿಜೆಪಿ ಭದ್ರಕೋಟೆಯನ್ನು ವಶಪಡಿಸಿಕೊಂಡಿದೆ. ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿಭಾಯಿಸುತ್ತ ಬಂದಿರುವ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಮಂತ್ರಿಯಾಗಲು ಗುದ್ದಾಟ ಶುರುವಾಗಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹಿಳಿ,ಲಕ್ಷ್ಮಣ ಸವದಿ,ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರು ಸಿಎಂ ಡಿಸಿಎಂ ಜೊತೆಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಿವೆ.ಇವತ್ತು ಸಿಎಲ್ಪಿ ನಾಯಕ …

Read More »

ಲಕ್ಷ್ಮೀ ಹೆಬ್ಬಾಳಕರ ಲಕ್ಕೀ…! ಮಂತ್ರಿಯಾಗೋದು ನಕ್ಕೀ..!

ಜಾರಕಿಹೊಳಿಗೆ ದೊಡ್ಡ ಹುದ್ದೆಯ ನಿರೀಕ್ಷೆಯಲ್ಲಿ ಅಭಿಮಾನಿಗಳು! ಬೆಳಗಾವಿ- ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರೋ ಬೆಳಗಾವಿಯ ಇಷ್ಟು ವರ್ಷಗಳ ಕಾಲ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೇ ಈ ಸಲದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಜಿಲ್ಲೆಯಲ್ಲಿ 11 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಪಕ್ಷ ಸಂಘಟನೆಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಶ್ರಮ ವಹಿಸಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಇಡೀ ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾರೆ. ಕಳೆದ ಮೂರು …

Read More »