ಬೆಳಗಾವಿ-ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಕಳೆದ ಒಂದು ವಾರದಿಂದ ಬ್ಯಾಂಕ್ ಚುನಾವಣೆ ಅವಿರೋಧ ಆಯ್ಕೆ ಮಾಡಲು ಕಸರತ್ತು ನಡೆಸಿದ್ದೇವು. ವೈಮನಸ್ಸು ತಪ್ಪಿಸಲು ಅವಿರೋಧ ಆಯ್ಕೆ ಒತ್ತು ಕೊಟ್ಟಿದ್ದೇವು. ಪಕ್ಷದ ಮುಖಂಡರು ಇದೇ ಸೂಚನೆಯನ್ನು ನೀಡಿದ್ದರು. ಜಾರಕಿಹೊಳಿ, ಸವದಿ ಹಾಗೂ ಕತ್ತಿ ಕುಟುಂಬ ಒಟ್ಟಿಗೆ ಬರಬೇಕು ನಿರ್ಧಾರ …
Read More »ರಾಜಕೀಯ ಬದ್ಧ ವೈರಿಗಳ ಮುಖಾಮುಖಿ
ಬೆಳಗಾವಿ- ಬೆಳಗಾವಿ ರಾಜಕೀಯ ಬದ್ಧ ವೈರಿಗಳ ಮುಖಾಮುಖಿ ಆಗಿದ್ದಾರೆ.ಬೆಳಗಾವಿ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಇಬ್ಬರು ಮುಖಾಮುಖಿ ಆಗುವ ಮೂಲಕ ಮೂರು ವರ್ಷಗಳ ವೈರತ್ವಕ್ಕೆ ಅಂತ್ಯ ಹಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಾವು- ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದ ಈ ಇಬ್ಬರು ನಾಯಕರು ಒಂದೇ ವೇದಿಕೆಗೆ ಬರಬೇಕೆನ್ನುವದು ಬಿಜೆಪಿ ಕಾರ್ಯಕರ್ತರ ಅಪೇಕ್ಷೆಯಾಗಿತ್ತು ,ಡಿಸಿಸಿ ಬ್ಯಾಂಕ್ ಚುನಾವಣೆ ಈ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಡಿಸಿಸಿ ಬ್ಯಾಂಕಿನಲ್ಲಿ ಮುಖಾಮುಖಿಯಾದ ಇಬ್ಬರು ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಸಚಿವ …
Read More »ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಹೊಸ ಎಂಟ್ರಿ
ಬೆಳಗಾವಿ-ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಗೆ ಸಚಿವ ರಮೇಶ ಜಾರಕಿಹೊಳಿ ಅವರು ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ್ ಜತೆಗೆ ಡಿಸಿಸಿ ಬ್ಯಾಂಕಿಗೆ ಆಗಮಿಸಿದ್ದಾರೆ. ಖಾನಾಪುರ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನಡುವೆ ಪವರ್ ಫುಲ್ ಫೈಟ್ ನಡೆಯುತ್ತಿದೆ. ಮಾಜಿ ಶಾಸಕ ಅರವಿಂದ ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ನಡುವೆ ಫೈಟ್ ನಡೆಯುತ್ತಿದ್ದು ಅರವಿಂದ ಪಾಟೀಲ್ ಜತೆಗೆ ರಮೇಶ ಜಾರಕಿಹೊಳಿ ಮಾತುಕತೆ ಆರಂಭವಾಗಿದೆ. ಈ ಚರ್ಚೆಯಲ್ಲಿ ರಮೇಶ್ …
Read More »ಬ್ಲ್ಯಾಕ್ ಡೇ ಗೆ ಕರೆ ಕೊಟ್ಟ ಮಹಾರಾಷ್ಟ್ರ ಸರ್ಕಾರ…!
ಬೆಳಗಾವಿ- ಕನ್ನಡಿಗರು ಹಬ್ಬದ ದಿನ ರಾಜ್ಯೋತ್ಸವದ ದಿನ ಮಹಾರಾಷ್ಟ್ರ ಸರ್ಕಾರವೇ ಕಪ್ಪು ದಿನ ಆಚರಿಸುವ ಮೂಲಕ ಎಂಈಎಸ್ ಗೆ ಬೆಂಬಲ ನೀಡಲು ನಿರ್ಧರಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತಕ್ಕ ಉತ್ತರ ಕೊಡಬೇಕಾದ ನಮ್ಮ ಸರ್ಕಾರ ಮಲಗಿದೆಯಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಕಪ್ಪು ಪಟ್ಟಿ ಧರಿಸಿ,ಕಪ್ಪು ದಿನ ಆಚರಣೆಗೆ ಬೆಂಬಲ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿ ಈ ಕುರಿತು ಮಹಾರಾಷ್ಟ್ರ ಗಡಿ …
Read More »ನಾ ಅಂದ್ರ ಏನ್ ತಿಳ್ಕೊಂಡೇರ್ರೀ.! ನಾನ ಬ್ಯಾರೇ…ನನ್ನ ಸ್ಟೈಲ ಬ್ಯಾರೇ…!
ಚಿತ್ರ ಕೃಪೆ- ಪಿ.ಕೆ ಬಡಿಗೇರ ಬೆಳಗಾವಿ- ರಮೇಶ್ ಕತ್ತಿ ಮಾತನಾಡಲು ಶುರು ಮಾಡಿದ್ರ ಜನ ಬಹಳ ಕುತೂಹಲ ದಿಂದ ಕೆಳ್ತಾ ಇದ್ರು ಆದ್ರೆ ಈಗ ರಮೇಶ್ ಕತ್ತಿ ಅವರ ಲೈಫ್ ಸ್ಟೈಲ್ ಬದಲಾಗಿದೆ.ಯಾವಾಗಲೂ ಮೀಸೆ ತಿರುವುತ್ತಲೇ ಮಾತು ಶುರು ಮಾಡ್ತಾರೆ. ಡಿಸಿಸಿ ಬ್ಯಾಂಕಿನಲ್ಲಿ ಜಿಲ್ಲೆಯ ಘಟಾನುಘಟಿ ನಾಯಕರು ಸೇರಿದ್ದರು ಎಲ್ಲರ ನಡುವೆ,ಎಲ್ಲರ ಗಮನ ಸೆಳೆದಿದ್ದು ರಮೇಶ್ ಕತ್ತಿ ಅವರ ಮೀಸೆ,ಯಾಕಂದ್ರೆ ರಮೇಶ್ ಕತ್ತಿ ಅವರ ಮಾತಿಗಿಂತಲೂ ಅವರ ಮೀಸೆ ಚೂಪಾಗಿತ್ತು …
Read More »ರಾಜಿ ಸಂಧಾನ,ಅಂಜಲಿ ನಿಂಬಾಳ್ಕರ್ ಗೆ ವರದಾನ ….?
ಬೆಳಗಾವಿ-ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯಿತು,ಹಲವಾರು ವರ್ಷಗಳಿಂದ ಕಿತ್ತಾಡುತ್ತಿದ್ದ ,ಲಕ್ಷ್ಮಣ ಸವದಿ ಮತ್ತು ಕತ್ತಿ ಸಹೋದರರು ಒಂದಾದ್ರು ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಸವದಿ,ಉಮೇಶ್ ಕತ್ತಿ ,ರಮೇಶ್ ಕತ್ತಿ,ಮಹಾಂತೇಶ ಕವಟಗಿಮಠ,ಶಶಿಕಲಾ ಜೊಲ್ಲೆ,ಅಣ್ಣಾ ಸಾಹೇಬ್ ಜೊಲ್ಲೆ,ಉಪ ಸಭಾಪತಿ ಮಾಮನಿ,ಈರಣ್ಣಾ ಕಡಾಡಿ ಸಂಜಯ ಪಾಟೀಲ ಅವರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ,ನಮ್ಮಲ್ಲಿರುವ ಗೊಂದಲಗಳಿಗೆ ತೆರೆ ಬಿದ್ದಿದೆ.ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ನೀಡಿದ್ರು ಈ ಬಾರಿ ಡಿಸಿಸಿ ಬ್ಯಾಂಕಿನ …
Read More »ಡಿಸಿಸಿ ಬ್ಯಾಂಕಿನ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡುವ ಪ್ರಯತ್ನ- ಡಿಸಿಎಂ ಲಕ್ಷ್ಮಣ ಸವದಿ
ಬೆಳಗಾವಿ- ಬೆಳಗಾವಿ ಜಿಲ್ಲೆಯ ಏಳಿಗೆಗಾಗಿ,ರೈತರ ಹಿತಕ್ಕಾಗಿ,ಬ್ಯಾಂಕಿನ ಒಳಿತಿಗಾಗಿ,ಈ ಬಾರಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಬೇಕು ಎಂದು ಪಕ್ಷದ ವರಿಷ್ಠರು ಸೂಚಿಸಿದ ಹಿನ್ನಲೆಯಲ್ಲಿ ಎಲ್ಲ ಭಿನ್ನಾಭಿಪ್ರಾಯ ಬದಿಗಿಟ್ಟು ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುತ್ತಿದೆ.ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಬಹುತೇಕ 7 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದಾರೆ ಅಧಿಕೃತ ಘೋಷಣೆ …
Read More »ನಾಮಪತ್ರ ವಾಪಸ್ ಪಡೆಯುವದಿಲ್ಲ,- ಅಂಜಲಿ ನಿಂಬಾಳ್ಕರ್
ಬೆಳಗಾವಿ- ನವೆಂಬರ್ 6ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ,ಇಂದು ನಾಮ ಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದ್ದರಿಂದ,ಅನೇಕ ಜನ ಲೀಡರ್ ಗಳು ಇವತ್ತೇ ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದರು ಅದರಲ್ಲಿಯೂ ವಿಶೇಷವಾಗಿ ಖಾನಾಪುರ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದಾರೆ.ಖಾನಾಪುರ ತಾಲೂಕಿನ ಪಿಕೆಪಿಎಸ್‌ಗಳನ್ನು ಪ್ರತಿನಿಧಿಸುವ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ,ಮಾದ್ಯಮಗಳ …
Read More »ಡಿಸಿಸಿ ಬ್ಯಾಂಕ್ ಚುನಾವಣೆ ಅಂಜಲಿ ನಿಂಬಾಳ್ಕರ್ ಎಂಟ್ರಿ
ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಎಲ್ಲ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ನಡೆಯಬಹುದು ಎನ್ನುವ ಲೆಕ್ಕಾಚಾರ ಬುಡಮೇಲಾಗಿದೆ ಇಂದು ಗುರುವಾರ 11-00 ಗಂಟೆಗೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಲಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಹೊಡೆದಿರುವ ಅವರು ಖಾನಾಪೂರ ತಾಲ್ಲೂಕಿನಿಂದ ಕೃಷಿಪತ್ತಿನ ಸಹಕಾರಿ ಸಂಘ ಕ್ಷೇತ್ರದ ಪ್ರತಿನಿಧಿಯಾಗಲು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಎಂಟ್ರಿ ಹೊಡೆದಿದ್ದರಿಂದ ಡಿಸಿಸಿ ಬ್ಯಾಂಕಿನ ಚುನಾವಣೆಯ ದಿಕ್ಕು ದಿಸೆ ಬದಲಾಗಿದೆ. ನಾಮಪತ್ರ ಸಲ್ಲಿಸಲು …
Read More »ಎಂಟು ಬೈಕ್ ಸೀಜ್, ನಾಲ್ಕು ಜನ ಆರೋಪಿಗಳು ಅರೆಸ್ಟ್ .
ಬೆಳಗಾವಿ- ಬೆಳಗಾವಿ ಮಹಾನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಖದೀಮರನ್ನು ಬಂಧಿಸುವಲ್ಲಿ ಮಾರ್ಕೆಟ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ. ಮಾರ್ಕೆಟ್ ಠಾಣೆಯ ಇನೆಸ್ಪೆಕ್ಟರ್ ಸಂಗಮೇಶ ಶಿವಯೋಗಿ ಅವರ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಿದ ಪೋಲೀಸರು,ಸುಮಾರು 3 ಲಕ್ಷ ರೂ ಮೌಲ್ಯದ 8 ಬೈಕ್ ಗಳನ್ನು ವಶಪಡಿಸಿಕೊಂಡು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬೈಕ್ ಕಳ್ಳತನ ಮಾಡುವ ಆರೋಪದ ಮೇಲೆ, ಬೆಳಗಾವಿ – ಯಳ್ಳೂರ ರಸ್ತೆಯಲ್ಲಿರುವ ಕೆಎಲ್ಇ ಆಸ್ಪತ್ರೆ …
Read More »