Breaking News

LOCAL NEWS

ಟೋಪಿಗೂ ಮಾಸ್ಕ್ ಹಾಕಿ,ಬಸ್ ಏರಿ, ಟೋಲ್ ದಾಟಿದ ವಾಟಾಳ್…..!

ಬೆಳಗಾವಿ-ಬೆಳಗಾವಿಯ ಸಮಸ್ಯೆಗಳ ಕುರಿತು ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ಬಳಿ ಪೋಲೀಸರ ವಶವಾಗುತ್ತಿದ್ದ ವಾಟಾಳ್ ನಾಗರಾಜ್ ಈ ಬಾರಿ ಪೋಲೀಸರ ಕಣ್ಣು ತಪ್ಪಿಸಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರತಿ ಬಾರಿ ಕಾರಿನಲ್ಲಿ ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ನಾಕಾದ ಬಳಿ ಪೋಲೀಸರ ಕೈಗೆ ಸಿಗುತ್ತಿದ್ದ ವಾಟಾಳ್ ನಾಗರಾಜ್ ಈ ಬಾರಿ ಧಾರವಾಡದವರೆಗೆ ಕಾರಿನಲ್ಲಿ ಬಂದು ಧಾರವಾಡದಲ್ಲಿ ವೇಷ ಬದಲಾಯಿಸಿ ಕಾರಿನಿಂದ ಇಳಿದು ಬಸ್ ಏರಿ …

Read More »

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ,ರೈತರ ಪ್ರತಿಭಟನೆ

ಬೆಳಗಾವಿಯಲ್ಲಿ ಪ್ರತಿಭಟನೆಗಳ ಮಹಾಪೂರ…. ಬೆಳಗಾವಿ- ಅತ್ತ ಬೆಂಗಳೂರಿನಲ್ಲಿ ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಇತ್ತ ಬೆಳಗಾವಿಯಲ್ಲಿ ಪ್ರತಿಭಟನೆಗಳು ಜೋರಾಗಿಯೇ ನಡೆಯುತ್ತಿವೆ. ಬೆಳಗಾವಿ ಸಮೀಪದ ಸಾಂಬ್ರಾ ಗ್ರಾಮದಲ್ಲಿ ಸರ್ಕಾರಿ ಗಾಯರಾಣದ ಜಾಗೆಯಲ್ಲಿ ಗ್ರಾಮ ಪಂಚಾಯತಿ ಯವರು ಕಚರಾ ಡಿಪೋ ಮಾಡಲು ಹೊರಟಿರುವದನ್ನು ವಿರೋಧಿಸಿ ಗ್ರಾಮದ ರೈತರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚರಾ ಡಿಪೋಗೆ ತೀವ್ರ ವಿರೋಧ ವ್ಯೆಕ್ತ ಪಡಿಸಿದರು. ಸಾಂಬ್ರಾ ಗ್ರಾಮದ ರೈತರ ಜಮೀನನ್ನು ಈಗಾಗಲೇ ಏರ್ ಫೋರ್ಸ್ …

Read More »

ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ,ಕ್ರಾಂತಿವೀರ ರಾಯಣ್ಣ

ಬೆಳಗಾವಿ-ಮನೆಗೊಬ್ಬ ರಾಯಣ್ಣ,ಮತ್ತೆ ಹುಟ್ಟಿ ಬಾರಣ್ಣಾ,ಮನೆಗೊಬ್ಬ ಚೆನ್ನಮ್ಮ ಮತ್ತೆ ಹುಟ್ಟಿ ಬಾರಮ್ಮ,ಎಂಬ ಘೋಷವಾಕ್ಯ ಈಗ ನಿಜವಾಗುತ್ತಿದೆ,ಯಾಕಂದ್ರ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಈಗ ಅಭಿಮಾನದ ಕ್ರೇಜ್ ಶುರುವಾಗಿದೆ‌. ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನುಷ್ಠಾನಗೊಳಿಸಿದ ಬಳಿಕ,ರಾಯಣ್ಣನ ಅಭಿಮಾನಿಗಳ ಹೃದಯದಿಂದ ಅಭಿಮಾನ ಸೆಲೆ ಹೊರ ಹೊಮ್ನುತ್ತಲೇ ಇದೆ. ಯುವಕರು ಚಿತ್ರ ರಂಗದ ನಟ,ನಟಿಯರ ಟ್ಯಾಟು ಬಿಡಿಸಿಕೊಂಡು ತಮ್ಮ ಅಭಿಮಾನ ವ್ಯೆಕ್ತ ಪಡಿಸಿದ್ದನ್ನು ನಾವೆಲ್ಲ ನೋಡಿದ್ದೇವೆ,ಆದ್ರೆ ಈಗ ಬೆಳಗಾವಿ ಸಮೀಪದ ಮಾರ್ಕಂಡೇಯ ನಗರದ …

Read More »

ಬೆಳಗಾವಿಯಲ್ಲೇ ಉದಯವಾಗಿದೆ RCB….!

ಬೆಳಗಾವಿ-ಈಗ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಗಡಿ ಭಾಗದ ಬೆಳಗಾವಿಯಲ್ಲಿ IPL ನಶೆ ಯಾವ ರೀತಿ ಏರಿದೆ ಅಂದ್ರೆ RCB ರಾಯಲ್ ಚಾಲೇಂಜ್ ಬೆಂಗಳೂರು ತಂಡದ ಹೆಸರಿನಲ್ಲಿ ಧಾಬಾ ಶುರುವಾಗಿದೆ ಈ RCB ಧಾಭಾ ಶುರುವಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದ ಬಳಿ ಸದಲಗಾ ರಸ್ತೆಯಲ್ಲಿ, ಈ RCB ಧಾಬಾ IPL ಮ್ಯಾಚ್ ಗಳು ಶುರುವಾದ ದಿನವೇ ಉದ್ಘಾಟನೆಯಾಗಿದೆ. ಕರ್ನಾಟಕದ ಪರವಾಗಿ ಆಟವಾಡುವ RCB ತಂಡ ಈ ಬಾರಿ …

Read More »

ಬೆಳಗಾವಿಯ ಹಳ್ಳಿಗೊಂದು ಫಾರೇನ್ ಲುಕ್….!

ಬೆಳಗಾವಿ- ಹತ್ತು ಸಾವಿರ ಜನಸಂಖ್ಯೆವುಳ್ಳ ಬೆಳಗಾವಿ ಮಹಾನಗರದ ಪಕ್ಕದಲ್ಲಿರುವ, ಪುಟ್ಟ ಹಳ್ಳಿಯೊಂದಕ್ಕೆ ಫಾರೇನ್ ಲುಕ್ ಕೊಡಲು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಯೋಜನೆ ರೂಪಿಸಿದ್ದಾರೆ. ಈ ಸೌಭಾಗ್ಯ ಬೆಳಗಾವಿ ಮಹಾನಗರದ ಮಡಿಲಲ್ಲಿರುವ ಯರಮನಾಳ ಗ್ರಾಮಕ್ಕೆ ಒದಗಿ ಬರಲಿದೆ. ಈ ಗ್ರಾಮದಲ್ಲಿ ಈಗಾಗಲೇ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾಲ್ಕು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ,ಈ ಗ್ರಾಮದಲ್ಲಿ 100% ಚರಂಡಿ ಇದೆ,ಕಾಂಕ್ರೀಟ್ ರಸ್ತೆಗಳು ಇವೆ,ಜೊತೆಗೆ …

Read More »

ಸನದಿ ಸಾಹಿತ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ

ಬೆಳಗಾವಿ: ಬೆಳಗಾವಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ಗೆ 2019 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಸ್ವರಚಿತ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಕವನ ಸಂಕಲನ ಕನಿಷ್ಟ 50 ಪುಟ ಹೊಂದಿದ್ದು, ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಿರಬೇಕು. ಈ ಪ್ರಶಸ್ತಿ ಉದಯೋನ್ಮೂಖ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನೀಡುತ್ತಿರುವದರಿಂದ 35 ವರ್ಷ ಒಳಗಿರುವವರು ಕೃತಿ ಕಳಿಸಬೇಕು. ಪ್ರಶಸ್ತಿ 5000 /ರೂ ನಗದು, …

Read More »

ನದಿಗಳ ಒತ್ತುವರಿ ತೆರವು ಮಾಡಲು ಆಪರೇಷನ್ ಆರಂಭ

ಬೆಳಗಾವಿ, ಸೆ.19(ಕರ್ನಾಟಕ ವಾರ್ತೆ): ಮಲಪ್ರಭಾ, ಘಟಪ್ರಭಾ ನದಿತೀರದ ಒತ್ತುವರಿ ಪ್ರವಾಹಕ್ಕೆ ಕಾರಣವಾಗಿದೆ. ಆದ್ದರಿಂದ ನದಿತೀರದ ಒತ್ತುವರಿ ಕುರಿತು ಸಮಗ್ರ ಸಮೀಕ್ಷೆ ಕೈಗೊಂಡ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒತ್ತುವರಿ ಜಾಗದ ಸಮಸ್ಯೆಗಳ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಶನಿವಾರ ನಡೆದ …

Read More »

ಉತ್ತರ ಕರ್ನಾಟಕದ ಶಕ್ತಿ ಕೇಂದ್ರದಿಂದಲೇ ಪ್ರತ್ಯೇಕತೆಯ ಕೂಗು….!

ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಈಗ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಕೇಳಿ ಬಂದಿದೆ. ಧಾರವಾಡ ಹೈಕೋರ್ಟಿನ ಹೋರಾಟದ ರೂವಾರಿ,ಬಿ.ಡಿ ಹಿರೇಮಠ ಅವರು ಇಂದು,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸರ್ಕಾರ ಸ್ಥಳಾಂತರ ಮಾಡದಿದ್ದರೆ,ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವಂತೆ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸರ್ಕಾರ ಹುಬ್ಬಳ್ಳಿ- ದಾರವಾಡದ ನೀರಾವರಿ ಕಚೇರಿಯನ್ನು ಬೆಳಗಾವಿಯ ಸುವರ್ಣವಿಧಾನ ಸೌಧಕ್ಕೆ ಶಿಪ್ಟ್ ಮಾಡುವದು ಬೇಡ ಅದರ …

Read More »

ನಿಸಾರಾಹ್ಮದ ಈಗ ಬೆಳಗಾವಿ JDLR

ಬೆಳಗಾವಿ- ಬೆಳಗಾವಿಯಲ್ಲಿ ADLR ಆಗಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿಭಾಯಿಸಿ ಪದೋನ್ನತಿ ಹೊಂದಿJDLR ಆಗಿರುವ ನಿಸಾರ ಅಹ್ಮದ ಅವರು ಇಂದು ಅಧಿಕಾರ ಸ್ವೀಕರಿಸಿದರು JDLR ಆಗಿ ಪದೋನ್ನತಿ ಹೊಂದಿರುವ ನಿಸಾರ ಅಹ್ಮದ ಅವರನ್ನು ಸರ್ಕಾರ ಬೆಳಗಾವಿ JDLR ನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು ಇಂದು ಬೆಳಿಗ್ಗೆ ನಿಸಾರ ಅಹ್ಮದ ಅವರು ಅಧಿಕಾರ ಸ್ವೀಕರಿಸಿದರು .

Read More »

ಸೇವಾದಳ ಅಕಾಡೆಮಿ ತರಬೇತಿ ಕೇಂದ್ರ ನಿರ್ಮಿಸಿ ರಾಷ್ಟ್ರದ ಗಮನ ಸೆಳೆದ ಸತೀಶ್ ಸಾಹುಕಾರ್….

ಬೆಳಗಾವಿ: ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾರತದ ಭೂಪಟದಲ್ಲಿ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯಸೇನಾನಿ ಡಾ.ನಾ.ಸು.ಹರ್ಡಿಕರ ಸೇವಾದಳ ತರಬೇತಿ ಅಕಾಡೆಮಿಯ ರಾಷ್ಟ್ರಮಟ್ಟದ ತರಬೇತಿ ಕೇಂದ್ರದ ಬೃಹತ್ ಕಟ್ಟಡ ತಲೆ ಎತ್ತಿನಿಂತಿದ್ದು, ಮುಂಬರುವ ಅಕ್ಟೋಬರ ೨ರ ಮಹಾತ್ಮ ಗಾಂಧೀಜಿಯವರ ಜಯಂತಿ ದಿನದಂದೇ ಈ ತರಬೇತಿ ಕೇಂದ್ರದ ಕಟ್ಟಡ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ. ಈ ತರಬೇತಿ ಕೇಂದ್ರ ಕಾಂಗ್ರೆಸ್ ಪಕ್ಷದ ತತ್ವ,ಸಿದ್ದಾಂತದ ಜೊತೆಗೆ ಶಿಸ್ತಿನ ತರಬೇತಿಯ ಪ್ರಮುಖ ಭಾಗವಾಗಲಿದೆ. ಕಾಂಗ್ರೆಸ್ ಸೇವಾದಳದ ಪುನಶ್ಚೇತನಕ್ಕೆ ಈ …

Read More »