Breaking News

LOCAL NEWS

ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ವಿರುದ್ಧ ಶಿಸ್ತಿನ ಕ್ರಮ

ಬೆಳಗಾವಿ- ಬೆಳಗಾವಿಯ ಕೆಲವು ಖಾಸಗಿ ಆಸ್ಪತ್ರೆಗಳು ಕೋವೀಡ್ ಚಿಕಿತ್ಸೆ ನೀಡುವ ವಿಷಯದಲ್ಲಿ ಹೆಚ್ಚು ಹಣ ಪಡೆಯುತ್ತಿವೆ ಎನ್ನುವ ದೂರುಗಳು ಕೇಳಿ ಬಂದಿವೆ,ಯಾವುದೇ ಮುಲಾಜಿಲ್ಲದೇ ಹೆಚ್ಚಿನ ಬಿಲ್ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆಗೆ ಕೋವೀಡ್ ನಿಯಂತ್ರಣ,ಮತ್ತು ಪ್ರವಾಹ ನಿರ್ವಹಣೆಯ ಕುರಿತು ಪ್ರಗತಿ ಪರಶೀಲನೆ ನಡೆಸಿದ …

Read More »

ಮಹಾರಾಷ್ಟ್ರದ ಮೇಲೆ ನಿರಂತರ ನಿಗಾ ವಹಿಸಿ- ರಮೇಶ್ ಜಾರಕಿಹೊಳಿ

ಪ್ರವಾಹ ಮತ್ತು ಕೋವಿಡ್-೧೯ ನಿಯಂತ್ರಣ: ಪರಿಶೀಲನಾ ಸಭೆ ——————————————————— ನೀರು ಬಿಡುಗಡೆ ಸಮನ್ವಯತೆಗೆ ಅಧಿಕಾರಿ ನಿಯೋಜನೆ: ಸಚಿವ ಜಾರಕಿಹೊಳಿ ಬೆಳಗಾವಿ, : ಜಲಾಶಯಗಳಲ್ಲಿ ನೀರು ಪ್ರಮಾಣ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮತ್ತಿತರ ಸಮನ್ವಯ ಸಾಧಿಸಲು ರಾಜ್ಯದ ಒಬ್ಬ ಅಧಿಕಾರಿಯನ್ನು ಮಹಾರಾಷ್ಟ್ರದ ಜಲಾಶಯಗಳಿಗೆ ಹಾಗೂ ಅಲ್ಲಿನ ಅಧಿಕಾರಿಗಳು ಇಲ್ಲಿನ ಜಲಾಶಯಗಳಿಗೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಕೋವಿಡ್-೧೯ ನಿಯಂತ್ರಣ …

Read More »

ಮಲಪ್ರಭಾ ನವೀಲುತೀರ್ಥ ಜಲಾಶಯ ಭರ್ತಿ

ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ ಮುನವಳ್ಳಿ ನವಿಲು ತಿರ್ಥ ಜಲಾಶಯ ಭರ್ತಿಯಾಗಿದ್ದು ಯಾವುದೇ ಸಮಯದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ. ಯಾವುದೆ ಕ್ಷಣದಲ್ಲಿ ಜಲಾಶಯದಿಂದ ನೀರು ಹೊರ ಬಿಡುವ ಸಾಧ್ಯತೆ ಇರುವದರಿಂದ,ರಾಮದುರ್ಗ ತಾಲೂಕಿನ 20 ಹಳ್ಳಿಗಳು ಹಾಗು ಸವದತ್ತಿ ತಾಲೂಕಿನ 8 ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಿಸುತ್ತಿವೆ ಪ್ರವಾಹ ಭೀತಿ ಹಿನ್ನೆಲೆ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪುರಸಭೆ, …

Read More »

ದೇಶದ ಮೊದಲ ಕಿಸಾನ್ ರೈಲಿಗೆ,ಸುರೇಶ್ ಅಂಗಡಿ ಗ್ರೀನ್ ಸಿಗ್ನಲ್

  ಬೆಳಗಾವಿ,-: ದೇಶದ ಮೊಟ್ಟಮೊದಲ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಹಸಿರುನಿಶಾನೆ ತೋರಿಸಿದರು. ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸಲಿರುವ ಮೊದಲ ಕಿಸಾನ್ ರೈಲಿಗೆ ವರ್ಚುವಲ್ ವೇದಿಕೆಯ ಮೂಲಕ ನವದೆಹಲಿಯಿಂದ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ತೋಮರ್ ಅವರು, ಕಿಸಾನ್ ರೈಲು ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸಲು ಸಹಕಾರಿಯಾಗಲಿದೆ. …

Read More »

ಸೋಶಿಯಲ್ ಡ್ಯೂಟಿ ಗೂ ಸೈ…ಬತ್ತದ ನಾಟಿಗೂ ಸೈ…..!

ಬೆಳಗಾವಿ- ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿ,ಎಂಬಿಬಿಎಸ್ ಕಲಿತು,ಐಪಿಎಸ್ ಅಧಿಕಾರಿಯ ಸಂಗಾತಿಯಾಗಿ,ಈಗ ಎಂ ಎಲ್ ಎ ಆಗಿರುವ ಆ ಹೆಣ್ಣಿಗೆ ಸೊಕ್ಕು ಅನ್ನೋದೆ ಇಲ್ಲ,ಖಾನಾಪೂರ ಕ್ಷೇತ್ರದಲ್ಲಿ ಎಲ್ಲರ ಜೊತೆ ಬೆರೆತು,ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದಲ್ಲಿ ಅಂಜಲಿತಾಯಿಯ ಸ್ಥಾನ ಪಡೆದುಕೊಂಡಿದ್ದಾರೆ. ಖಾನಾಪೂರ ಕ್ಷೇತ್ರದಲ್ಲಿ ಕೊರೋನಾ ಸೊಂಕಿತರು ಪತ್ತೆಯಾಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿ ಕೊರೋನಾ ಮಹಾಮಾರಿಯ ವಿರುದ್ಧ ಸಮರ ಸಾರಿರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಜನರಲ್ಲಿ ಜನಜಾಗೃತಿ ಮೂಡಿಸುವ ಮೂಲಕ …

Read More »

ವ್ಯಾಪಕ ಮಳೆ: ನದಿತೀರದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

– “ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ” ಬೆಳಗಾವಿ, –ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲ್ಲೂಕಿನ ನದಿತೀರದ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ನಿಪ್ಪಾಣಿ ತಾಲ್ಲೂಕಿನ ಭಿವಸಿ, ಸಿದ್ನಾಳ ಹಾಗೂ ಹುನ್ನರಗಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದರು. ಈ …

Read More »

ಮಹಾರಾಷ್ಟ್ರ,ಮತ್ತು ಪಶ್ಚಿಮ ಘಟ್ಟದಲ್ಲಿ ಮಹಾ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ

ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಪಕ್ಕದ ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಿಂದಾಗಿ ವೇದಗಂಗಾ ಸೇರಿದಂತೆ ಉಳಿದ ನದಿಗಳಿಂದ ಕಲ್ಲೋಳ ಸೇತುವೆಗೆ ಒಂದು ಲಕ್ಷ 31 ಸಾವಿರ ಕ್ಯುಸೆಕ್ಸ ನೀರು ಹರಿದು ಬರುತ್ತಿದ್ದು ಕೃಷ್ಣಾ ವೇದಗಂಗಾ ಸೇರಿದಂತೆ ಉಳಿದ ನದಿಗಳ ಒಟ್ಟು ,7 ಕೆಳಸೇತುವೆಗಳು ಮುಳುಗಡೆಯಾಗಿವೆ.ಮಹಾರಾಷ್ಟ್ರದಿಂದ ಇದೇ ರೀತಿ ಒಳ ಹರಿವು ಮುಂದುವರೆದರೆ …

Read More »

ಬೆಳಗಾವಿಯ, ದೇವದಾಸಿ ಅಮ್ಮನ ಸಂಕಷ್ಟಕ್ಕೆ ಮನಕುಲಕುವ ಸ್ಪಂದನೆ…….!

ಬೆಳಗಾವಿ- ದೇವದಾಸಿ ಅಮ್ಮ ಈ ಅಮ್ಮನಿಗೆ ಇಬ್ಬರು ಮಕ್ಕಳು,ತಗಡಿನ ಸೆಡ್ಡಿನಲ್ಲಿ ವಾಸ,ಮಗಳ ಆನ್ ಲೈನ್ ಕ್ಲಾಸಿಗೆ ಮೋಬೈಲ್ ಖರೀದಿ ಮಾಡಲು ಕಿವಿಯೊಲೆ ಮಾರಿದ ಮಹಾತಾಯಿಯ ಸಂಕಷ್ಟಕ್ಕೆ ಬೆಳಗಾವಿಯ ಬಿಜೆಪಿ ನಾಯಕನೊಬ್ಬ ಸ್ಪಂದಿಸಿ ಬೆಳಗಾವಿಯಲ್ಲಿ ಮಾನವೀಯತೆಯ ಶಿಲನ್ಯಾಸ ಮಾಡಿದ ಅಪರೂಪದ ಪ್ರಸಂಗ ಬೆಳಗಾವಿಯಲ್ಲಿ ನಡೆಯಿತು ಇಡೀ ದೇಶವೇ ಶ್ರೀರಾಮ ಮಂದಿರದ ಶಿಲನ್ಯಾಸ ಕಾರ್ಯಕ್ರಮ ದಲ್ಲಿ ಮುಳುಗಿರುವಾಗ ಬೆಳಗಾವಿಯ ವೀರೇಶ ಕಿವಡಸಣ್ಣವರ ಸಂಕಷ್ಟದಲ್ಲಿದ್ದ ಆ ದೇವದಾಸಿ ಮಹಾತಾಯಿಗೆ ಹೊಸ ಕಿವಿಯೊಲೆ ಕೊಡಿಸಿ,ಅಗತ್ಯ ಸಾಮಗ್ರಿಗಳನ್ನು …

Read More »

ಆತ್ಮ ನಿರ್ಭರ ಭಾರತ ಅಭಿಯಾನ- ಒಂದು ಜಿಲ್ಲೆ; ಒಂದು ಉತ್ಪನ್ನ’ ಬೆಲ್ಲ” ಆಯ್ಕೆಗೆ ಪರಶೀಲನೆ

ಬೆಳಗಾವಿ,-ಜಿಲ್ಲೆಯ ಸಾವಯವ ಬೆಲ್ಲ ಉತ್ಪಾದನಾ ಘಟಕಗಳಿಗೆ ಅತ್ಯುತ್ತಮ ಬ್ರ್ಯಾಂಡ್ ಸೃಷ್ಟಿಸಬಹುದು. ಅಂತರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಲು ಕೂಡ ಅವಕಾಶಗಳಿವೆ. ಆದ್ದರಿಂದ ಆತ್ಮ ನಿರ್ಭರ ಭಾರತ ಅಭಿಯಾನಡಿ ಒಂದು ಜಿಲ್ಲೆ; ಒಂದು ಉತ್ಪನ್ನವಾಗಿ ಬೆಲ್ಲವನ್ನು ಆಯ್ಕೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು. ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಒಂದು ಜಿಲ್ಲೆ; ಒಂದು ಉತ್ಪನ್ನ/ಬೆಳೆ (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್-ಒಡಿಪಿಒ) ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಆ.5) …

Read More »

ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ಕೊಟ್ಟ ವಿದ್ವಾಂಸರಿಗೆ ಬೆದರಿಕೆ ಕರೆ

ಬೆಳಗಾವಿ-ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ಕೊಟ್ಟ ವಿದ್ವಾಂಸರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.ದೇಶದ ವಿವಿಧೆಡಯಿಂದ ಸ್ವಾಮೀಜಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿ ಬರುತ್ತಿದೆ. ಯಾಕೆ‌ ಮುಹೂರ್ತ ಕೊಟ್ಟಿರೀ ಅದನ್ನ ವಾಪಸ್ ಪಡೆದುಕೊಳ್ಳಿ ಅಂತಾ ಅನಾಮಿಕರು ಕರೆ ಮಾಡುತ್ತಿದ್ದಾರೆ.ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನೀಡಿದ್ದ ಬೆಳಗಾವಿಯ ಎನ್.ಆರ್.ವಿಜಯೇಂದ್ರ ಶರ್ಮಾ ಅವರಿಗೆ ಅನಾಮಿಕರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಎನ್. ಆರ್.ವಿಜಯೇಂದ್ರ ಶರ್ಮಾ,ಬೆಳಗಾವಿಯ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿಗಳಾಗಿದ್ದಾರೆ. …

Read More »