Breaking News

LOCAL NEWS

ಗಡಿ ವಿವಾದದ ಕುರಿತು ಕೇಂದ್ರ ನಿಲುವು ಸ್ಪಷ್ಠಪಡಿಸಿದ ಮೇಲೆಯೂ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕೆಡಿಸುವದು ಸರಿಯಲ್ಲ- ಬೊಮ್ಮಾಯಿ

ಬೆಳಗಾವಿ- ಬೆಳಗಾವಿ ಗಡಿ ವಿಚಾರದ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಢಪಡಿಸಿದೆ ಮಹಾರಾಷ್ಟ್ರದ ಅರ್ಜಿಯನ್ನು ಡಿಸ್ ಮಿಸ್ ಮಾಡಿ ಎಂದು ಹೇಳಿದ್ದು ,ಮಹಾರಾಷ್ಟ್ರದ ಅರ್ಜಿಯನ್ನು ತರಸ್ಕರಿಸುವಂತೆ ಕೇಂದ್ರ ಸರ್ಕಾರ ಹೇಳಿದ ಮೇಲೆಯೂ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಕೆದಕುವದು ಸರಿಯಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆ ಕರೆದು …

Read More »

ಬಡಾಲ್ ಅಂಕಲಗಿಯಲ್ಲಿ,ಅಂಕಲಗಿಯೇ ರಾಜೇಂದ್ರ

  ಬೆಳಗಾವಿ (20)- ಬಡಾಲ ಅಂಕಲಗಿ ಪಿಕೆಪಿಎಸ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಹಿನ್ನಡೆಯಾಗಿದೆ 12 ನಿರ್ದೇಶಕ ಸ್ಥಾನದ ಪೈಕಿ ಎಲ್ಲಾ ಸ್ಥಾನವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಬಣ ಜಯ ಸಾಧಿಸಿದೆ. ಜನೆವರಿ 18 ಕ್ಕೆ ನಡೆದ ಚುನಾವಣೆ ಅತ್ಯಂತ ಪ್ರತಿಷ್ಠಿತವಾವಿತ್ತು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ‌ ಬಣ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ನಡುವೆ ನೇರಾ ಹಣಾಹಣಿ ಏರ್ಪಟ್ಟಿತ್ತು …

Read More »

ನಾಳೆ ಬೆಳಗಾವಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ

ನಾಳೆ ಬೆಳಗಾವಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಳಗಾವಿ- ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ ಮದ್ಯಾಹ್ನ 12-30 ಗಂಟೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸುವ ಅವರು 1 ಘಂಟೆಗೆ ಜೀರಗೆ ಸಭಾ ಭವನದಲ್ಲಿ ಸಿದ್ಧಾ ಇವೆಂಟ್ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ನಂತರ ರಸ್ತೆ ಮೂಲಕ ಹುಬ್ಬಳ್ಳಿಗೆ ತೆರಳಲಿದ್ದಾರೆ

Read More »

ಫೆಬ್ರುವರಿ 3 ರಂದು ಬೆಳಗಾವಿಯಲ್ಲಿ ಗಡಿ ಸಂರಕ್ಷಣಾ ಆಯೋಗದ ಸಭೆ

ಬೆಳಗಾವಿ- ಫೇಬ್ರುವರಿ ಮೊದಲ ವಾರದಲ್ಲಿ , ಫೆಬ್ರುವರಿ 3 ರಂದು ಗಡಿ ಸಂರಕ್ಷಣಾ ಆಯೋಗ ಬೆಳಗಾವಿಯಲ್ಲಿ ಸಭೆ ನಡೆಸಲು ನಿರ್ಧರಿಸಿದೆ .ಸಭೆಯ ದಿನಾಂಕ ನಿಗದಿಯಾಗಿದ್ದು ಆಯೋಗ ಬೆಳಗಾವಿಯ ಕನ್ನಡಪರ ಹೋರಾಟಗಾರರ ಜೊತೆ ಚರ್ಚೆ ನಡೆಸಿದ್ದು ಸಭೆಯನ್ನು ಸುವರ್ಣ ವಿಧಾನ ಸೌಧದಲ್ಲೇ ನಡೆಸುವಂತೆ ಬೆಳಗಾವಿಯ ಹೋರಾಟಗಾರರು ಆಯೋಗಕ್ಕೆ ಸಲಹೆ ನೀಡಿದ್ದಾರೆ. ಗಡಿ ಸಂರಕ್ಷಣಾ ಆಯೋಗ ಫೆಬ್ರುವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿಯೇ ಸಭೆ ನಡೆಸಲು ಮುಂದಾಗಿತ್ತು ,ಇದಕ್ಕೆ ಬೆಳಗಾವಿಯ ಹೋರಾಟಗಾರರು ವಿರೋಧ ವ್ಯೆಕ್ತಪಡಿಸಿದ …

Read More »

ಅಮೇರಿಕಾ ಜೆಫರ್ಸನ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಮೊದಲ ಭಾರತೀಯ ,ಡಾ.ಪ್ರಭಾಕರ ಕೋರೆ…

ಬೆಳಗಾವಿ- ಅಮೇರಿಕಾ ಫಿಲಾಡೆಲ್ಪಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ ಮೊದಲನೇಯ ಬಾರಿಗೆ ಭಾರತೀಯ ಸಾಧಕನಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದು ಈ ವಿಶೇಷ ಗೌರವಕ್ಕೆ ಕೆಎಲ್ಇ ಸಂಸ್ಥೆಯ ಅಷ್ಠ ಋಷಿ ಡಾ ಪ್ರಭಾಕರ ಕೋರೆ ಪಾತ್ರರಾಗಿದ್ದಾರೆ ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಶಿಕ್ಷಣ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆಗಳ ಅಂತಾರಾಷ್ಟ್ರೀಯ ಸಹಯೋಗಗಳನ್ನು ಸಾಧಿಸಿ ಘೋಷಿಸಿದ ಸಾಧನೆಗಳಿಗಾಗಿ ಅಮೇರಿಕಾದ ಫಿಲಾಡೆಲ್ಪಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ ಮೇ.20 ರಂದು …

Read More »

ಮಂಗಳೂರಿನಲ್ಲಿ ಬಾಂಬ್ ಪತ್ತೆ,ಬೆಳಗಾವಿಯಲ್ಲಿ ಹೈ- ಅಲರ್ಟ್

ಮಂಗಳೂರಿನಲ್ಲಿ ಬಾಂಬ್ ಪತ್ತೆ,ಬೆಳಗಾವಿಯಲ್ಲಿ ಹೈ- ಅಲರ್ಟ್ ಬೆಳಗಾವಿಯಲ್ಲಿ- ಮಂಗಳೂರಿನ ವಿಮಾನ ನಿಲ್ಧಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನಲೆಯಲ್ಲಿ,ಬೆಳಗಾವಿಯಲ್ಲೂ ಹೈ- ಅಲರ್ಟ್ ಘೋಷಿಸಲಾಗಿದೆ ಬಾಂಬ್ ನಿಷ್ಕ್ರಿಯ ದಳ ಬೆಳಗಾವಿಯ ವೀರ ರಾಣಿ ಕಿತ್ತೂರು ಚನ್ನಮ್ಮಾ ವಿಮಾನ ನಿಲ್ಧಾಣದಲ್ಲಿ ತಪಾಸಣೆ ನಡೆಸಿತು ಇಂದು ಸ್ಟಾರ್ ಏರಲೈನ್ಸ ,ಬೆಳಗಾವಿ -ಇಂದೋರ್ ವಿಮಾನಯಾನ ಆರಂಭಿಸಿದ ಬಳಿಕ ಬಾಂಬ್ ನಿಷ್ಕ್ರಿಯ ದಳ ನಿಲ್ದಾಣದ ಒಳ,ಮತ್ತು ಹೊರಭಾಗದಲ್ಲಿ ಗಂಟೆಗೂ ಹೆಚ್ಚು ಕಾಲ ತಪಾಸಣೆ ಮಾಡಿತು ಮಂಗಳೂರಿನಲ್ಲಿ ಸಜೀವ ಬಾಂಬ್ …

Read More »

ಸಂತೋಷ್ ನಾಯಕ ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸದಿದ್ದರೆ ಚರ್ಚಗೆ ಬೆಂಕಿ ಹಚ್ತೀವಿ- ಪ್ರಮೋದ ಮುತಾಲಿಕ ಎಚ್ಚರಿಕೆ

ಬೆಳಗಾವಿ- ಹೀರೇಬಾಗೇವಾಡಿಯಲ್ಲಿ ಗೋಪ್ರೇಮಿ ಶಿವು ಉಪ್ಪಾರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಮಂಧಿಸಿದಂತೆ ಶಿವು ಉಪ್ಪಾರ ಆರೋಪಿಸಿದ್ದ ವ್ಯಕ್ತಿಯ ವಿಚಾರಣೆ ಇನ್ನೂ ನಡೆಸಿಲ್ಲ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪೋಲೀಸರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯೆಕ್ತ ಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಶಿವು ಉಪ್ಪಾರ ಕೊಲೆ ಪ್ರಕರಣ ನಡೆದು ಒಂಬತ್ತು ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಪೊಲೀಸರು ಕಾಲಹರಣ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ತಕ್ಷಣ ಕೊಲೆ ಆರೋಪಿಗಳನ್ನ …

Read More »

ಒಂದೇ ಮನೆಯಲ್ಲಿ ತ್ರಿಬಲ್ ಮರ್ಡರ್….

ಒಂದೇ ಮನೆಯಲ್ಲಿ ತ್ರಿಬಲ್ ಮರ್ಡರ್…. ಬೆಳಗಾವಿ- ತಂದೆ ಮಗ ಮತ್ತು ತಾಯಿಯ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ ರಾತ್ರಿ ಅಪರಿಚಿತ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅಂದಾನಶೆಟ್ಟಿ, ಹೆಂಡತಿ ಶಾಂತವ್ವಾ ಮತ್ತು ಪುತ್ರ ವಿನೋದ್ ಅಂದಾನಶೆಟ್ಟಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ‌ ಒಂದೇ ಮನೆಯಲ್ಲಿ ಮೂರು ಜನರನ್ನ ಕೊಚ್ಚಿ ಕೊಲೆ ಮಾಡಿದ ಹಂತಕರು,ಹಳೆ ದ್ವೇಷದಿಂದ …

Read More »

ಗಡಿ ವಿವಾದ,ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ದ – ಸಂಜಯ ರಾವುತ

ಗಡಿ ವಿವಾದ,ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ದ – ಸಂಜಯ ರಾವುತ ಬೆಳಗಾವಿ- ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧರಾಗಿದ್ದೇವೆ ಎಂದು ಬೆಳಗಾವಿಯಲ್ಲಿ ‌ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ. ಬೆಳಗಾವಿಯ ಗೋಗಟೆ ರಂಗ ಮಂದಿರದಲ್ಲಿ ಸಾರ್ವಜನಿಕ ವಾಚನಾಲಯದ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟ್ ನಲ್ಲಿದೆಗಡಿವಿವಾದ ಸಮಸ್ಯೆ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥ ವಾಗಲಿದೆ ಸುಪ್ರೀಂಕೋರ್ಟ್ ಉಭಯ ರಾಜ್ಯಗಳ ವಾದ ಆಲಿಸಲಿ ಬಳಿಕ …

Read More »

ನುಡಿದಂತೆ ನಡೆದು ಕನ್ನಡದ ನೆಲದ ಗೌರವಕ್ಕೆ ಪಾತ್ರರಾದ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ.,.!!!

ಬೆಳಗಾವಿ- ಭಾಷೆಯ ನೆಪದಲ್ಲಿ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಅವರಿಂದ ಪ್ರಚೋದನಕಾರಿ ಭಾಷಣ ಬೆಳಗಾವಿಯಲ್ಲಿ ಮಾಡಿಸೋದು ಬೇಡ ,ಒಂದು ವೇಳೆ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದ್ರೆ ಅವರನ್ನು ಅರೆಸ್ಟ ಮಾಡಬೇಕಾಗುತ್ತದೆ ,ಅವರನ್ನು ಬೆಳಗಾವಿಗೆ ಕರೆಯಿಸಿದ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳ ಬೇಕಾಗುತ್ತದೆ ,ಎಂದು ಎಂಈಎಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ನುಡಿದಂತೆ ನಡೆದಿದ್ದಾರೆ ಕೊನೆಗೂ ಮಹಾರಾಷ್ಟ್ರದ ನಾಯಕರಿಗೆ ಲಗಾಮು ಹಾಕಿಸಿದ್ದಾರೆ . ಇತ್ತೀಚಿಗೆ ಬೆಳಗಾವಿ …

Read More »