Breaking News

LOCAL NEWS

ರೈತರೇನು ಡಕಾಯಿತರೇ. ಸರ್ಕಾರದ ವಿರುದ್ಧ ಪಿ ರಾಜೀವ ಗರಂ

 ಬೆಳಗಾವಿ – ಮಹದಾಯಿ ಮತ್ತು ಕಾವೇರಿ ಗಲಾಟೆಯಲ್ಲಿ ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಅಮಾಯಕ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕುಡಚಿ ಶಾಸಕ ಪಿ. ರಾಜೀವ ಒತ್ತಾಯಿಸಿದರು. ಮಂಗಳವಾರ ಸುವರ್ಣ ಸೌಧದಲ್ಲಿ ನಡೆದ ಬರಗಾಲದ ಚರ್ಚೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಕುಡುಚಿ ಶಾಸಕ ಮಾತನಾಡಿದರು. ನವಲಗುಂದ ತಾಲೂಕಿನ ಯಮನೂರಿನಲ್ಲಿ ರೈತರ ಮೇಲೆ ಅಮಾನವೀಯವಾಗಿ ಹಲ್ಲೆ …

Read More »

ರೈತ ನಾಯಕರು ಸಕ್ಕರೆ ಸಚಿವರಿಗೆ ಏನಂದ್ರು ಗೊತ್ತಾ..?

ಬೆಳಗಾವಿ.ರಾಜ್ಯ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಸಚಿವ ರೈತ ನಾಯಕರ ಜೊತೆ ನಡೆಸಿದ ಸಂಧಾನ ಸಭೆ ಸಂಪೂರ್ಣವಾಗಿ ವಿಫಲವಾಗಿದ್ದು ಹೋರಾಟವನ್ನು ಮುಂದುವರೆಸಲು ರೈತ ನಾಯಕರು ನಿರ್ಧರಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸರ್ಕಾರ ಕಳೆದ ಮೂರು ವರ್ಷಗಳಿಂದ ಕಬ್ಬಿಗೆ ನಿರ್ದಿಷ್ಟವಾದ ಬೆಲೆಯನ್ನು ನಿಗದಿ ಮಾಡಿಲ್ಲ. …

Read More »

ಮಾಡದ ತಪ್ಪಿಗೆ ಹಣೆಪಟ್ಟಿ ಕಟ್ಟಿಕೊಳ್ಳುವ ಮೂರ್ಖ ನಾನಲ್ಲ- ತನ್ವೀರ ಸೇಠ

ಬೆಳಗಾವಿ.- ಶಿಕ್ಷಣ ಸಚಿವ ತನ್ವೀರ್ ಸೇಠ ಬೆಳಗಾವಿ ಸುದ್ಧಿಯ ಜೊತೆ ತಮಗಾದ ವೇದನೆಯನ್ನು ಹಂಚಿಕೊಂಡಿದ್ದಾರೆ ನಾನು ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದಿದ್ದೇನೆ ನಾನು ಯಾವ ತಪ್ಪು ಮಾಡಿಲ್ಲ ಮಾಡದ ತಪ್ಪಿಗೆ ನನ್ನನ್ನು ಹೊಣೆಗಾರರನ್ನಾಗಿ ಮಾಡಬೇಡಿ. ಆ ಆರೋಪವನ್ನು ನಾನು ಹೊತ್ತುಕೊಳ್ಳುವ ಮೂರ್ಖನಲ್ಲ.ಸತ್ಯಾಂಶ ಹೊರ ಬರಲಿ ಎಂದು ಹೇಳಿಕೊಂಡಿದ್ದಾರೆ ದಯವಿಟ್ಟು ಇಲಾಖೆಯಲ್ಲಿ ಏನಾದರೂ ಲೋಪವಿದ್ದರೆ ಹೇಳಿ. ಖಂಡಿತವಾಗಿ ಅದನ್ನು ಸುಧಾರಣೆ ಮಾಡಿ ಒಳ್ಳೆಯದನ್ನು ಮಾಡೋಣ.ಅದನ್ನು ಬಿಟ್ಟು ತಮ್ಮ ತೇಜೋವಧೆ ಮಾಡುವದು ಸರಿಯಲ್ಲ …

Read More »

ಪೋಲೀಸ್ ಚಕ್ಕಿಂಗ್…ಬಾಟಲ್ ಲುಕಿಂಗ್

ಬೆಳಗಾವಿ- ರೈತರ ಹೋರಾಟದ ಸಮಯದಲ್ಲಿ ವಿಠ್ಠಲ ಅರಬಾಂವಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಪೋಲೀಸರು ಜಾಗೃತರಾಗಿದ್ದಾರೆ ಸೋಮವಾರ ಸುವರ್ಣ ಸೌಧದ ಎದುರು ರೈತರು ಒ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಪೋಲೀಸರು ರೈತರನ್ನು ಚಕ್ ಮಾಡಿ ಬಿಡುತ್ತಿದ್ದರು ಪೋಲೀಸರು ರೈತನೊಬ್ಬನ ಕಿಸೆಗೆ ಕೈ ಹಾಕಿದಾಗ ಪೋಲೀಸರ ಕೈಗೆ ಸಿಕ್ಕಿದ್ದೇನು ಗೊತ್ತಾ ರಮ್ ಬಾಟಲ್ ರೈತನ ಕಿಸೆಯಲ್ಲಿದ್ದ ರಮ್ ಕ್ವಾಟರ್ ಪೋಲೀಸರ ಕೈಸೇರಿದ ಬಳಿಕ ಆ ರೈತನ ಜೊತೆಗೆ ಪೋಲೀಸರು ಕಕ್ಕಾಬಿಕ್ಕಿ ಸ್ವಲ್ಪ ತಡವರಿಸಿಕೊಂಡ …

Read More »

ಅಸಲಿ ಬಂದೂಕು ತೋರಿಸಿ ಪೋಲೀಸರನ್ನು,ಸರ್ಕಾರವನ್ನು ಓಡಸ್ತಾರಂತೆ..

ಬೆಳಗಾವಿ-ಕುಂದಾ ನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳ ಆಯೋಜಿಸಿತ್ತು, ಮಹಾಮೇಳದಲ್ಲಿ ಪಾಲ್ಗೊಂಡ ಶಿವಸೇನೆ ಮುಖಂಡ ಎರಡು ರಾಜ್ಯಗಳ ನಡುವೆ ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಉಡುಪಿ ಹೋಟೆಲ್ ಗಳನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಅನಮತಿ ಇಲ್ಲದೇ ನಡೆದ ಮಹಾಮೇಳ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಕುಂದಾ ನಗರಿ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ನಾಡವಿರೋಧಿ ಚಟುವಟಿಕೆ ಮಾಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ …

Read More »

ವಿಧಾನ ಪರಿಷತ್ತಿನಲ್ಲಿ ಬೆಳಗಾವಿ ಐ ಟಿ ಪಾರ್ಕ..

ಬೆಳಗಾವಿ,  ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಗಳ ಉನ್ನತ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸೂಚಿಸಿದರು. ಸದಸ್ಯ ಮಹಾಂತೇಶ ಕವಟಗಿಮಠ ಅವರು ಕೇಳಿದ ಪ್ರಶ್ನೆಗೆ ಇದು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ ಆದ್ದರಿಂದ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಲಿಖಿತ ಉತ್ತರ ನೀಡಿದ್ದನ್ನು ಪ್ರಸ್ತಾಪಿಸಿ ಸಭಾಪತಿಗಳು ಈ ವಿಷಯ ತಿಳಿಸಿದರು. …

Read More »

ಸದನದ ಮೊದಲ ದಿನ…ಡ್ರಾಟ್ ಕದನ

ಬೆಳಗಾವಿ: ಚಳಿಗಾಲದ ಅಧಿವೇಶನದ ಮೊದಲ ದಿನ ಬರ ಪರಿಹಾರ ಕಾಮಗಾರಿಗಳ ನಿಧಾನ ಗತಿಯನ್ನು ವಿರೋಧಿಸಿ ಪ್ರತಿ ಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು ಮದ್ಯಾನ್ಹದ ವೇಳೆಗೆ ವಿರೋದ ಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲು ಮುಂದಾದ ರೈತರನ್ನು ಬಂಧಿಸಿರುವ ಸರ್ಕಾರ ರೈತರ ವಿರೋಧಿಯಾಗಿದೆ ಅಧಿಕಾರಿಗಳು ಮಂತ್ರಿಗಳ ಮಾತು ಕೇಳುತ್ತಿಲ್ಲ ಅಧಿಕಾರಿಗಳ ಜಿಡ್ಡು ಇಳಿಸುವ ಪ್ರಯತ್ನವನ್ನು …

Read More »

ಬೆಳಗಾವಿ ನಗರದಲ್ಲಿ ರಾಜಧಾನಿಯ ಕಳೆ..ಗೂಟದ ಕಾರುಗಳ ಕಹಳೆ…!

ಬೆಳಗಾವಿ-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಆಧಿವೇಶನ ಸೋಮವಾರದಿಂದ  ಆರಂಭವಾಯಿತು ರಾಜ್ಯ ಸರ್ಕಾರ ಗಂಟೆ ಮೂಟೆ ಕಟ್ಟಿಕೊಂಡು ಬೆಳಗಾವಿ ನಗರದಲ್ಲಿ ಠಿಖಾನಿ ಹೂಡಿದ್ದು ಬೆಳಗಾವಿ ನಗರಕ್ಕೆ ಈಗ ರಾಜಧಾನಿಯ ಕಳೆ ಬಂದಿದೆ ಸಚಿವರು,ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಹಾಗು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಸೇತರಿದಂತೆ ಎಲ್ಲ ಜನ ಪ್ರತಿನಿಧಿಗಳು ಈಗ ಬೆಳಗಾವಿ ನಗರಕ್ಕೆ ಆಗಮಿಸಿದ್ದು ನಗರದಲ್ಲಿ ಗೂಟದ ಕಾರುಗಳ ಕಹಳೆ ಮೊಳಗಿದೆ ಅಧಿವೇಶನದ ಮೊದಲ ದಿನ  ಆರಂಭದಲ್ಲಿ ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಇತ್ತೀಚಿಗೆ …

Read More »

ಎಂಈಎಸ್ ದುರಹಂಕಾರಿ…ಕಲಾಪ ಬಿಟ್ಟು ಪರಾರಿ…!

ಬೆಳಗಾವಿ-ಅಧಿವೇಶನದ ಮೊದಲ ದಿನವೇ ನಾಡ ವಿರೋಧಿ ಎಂಈಎಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪುಂಡಾಟಿಕೆ ಪ್ರದರ್ಶಿಸಿದರು ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ ಝಾಲಾಚ್ ಪಾಯಿಜೆ ಘೋಷಣೆ ಕೂಗಿ ಕಲಾಪ ಗಳಿಗೆ ಬಹಿಷ್ಕಾರ ಹಾಕಿ ಸಭತ್ಯಾಗ ಮಾಡಿದರು ಶಾಸಕ ಻ರವಿಂದ ಪಾಟೀಲ ಸದನದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಲು ಮುಂದಾದರು ಇದಕ್ಕೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು ಇವರಿಗೆ ಕನ್ನಡ ಮಾತನಾಡಲು ಬರುತ್ತದೆ ಹಿಂದಿಯಲ್ಲಿ …

Read More »

ಅನುಮಾನದ ಸುಳಿಯಲ್ಲಿ ಮರಾಠಿ ಮಹಾ ಮೇಳಾವ್..!

ಬೆಳಗಾವಿ- ಕಾಲ ಕೆದರಿ ಕ್ಯಾತೆ ತೆಗೆಯುವದು ನಾಡವಿರೋಧಿ ಎಂ ಈ ಎಸ್ ಚಾಳಿ ಬೆಳಗಾವಿ ನಗರದಲ್ಲಿ ವಿಧಾನ ಮಂಡಳದ ಅಧಿವೇನ ನಡೆಯುತ್ತಿರುವದು ಎಂಈಎಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ ಅಧಿವೇಶನಕ್ಕೆ ಪರ್ಯಾಯವಾಗಿ ಸೋಮವಾರ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದ್ದು ಅನುಮತಿಗಾಗಿ ಎಂ ಈ ಎಸ್ ನಾಯಕರು ಹರಸಹಾಸ ಪಡುತ್ತಿದ್ದಾರೆ ಬೆಳಗಾವಿಯ ಲೇಲೇ ಮೈದಾನದಲ್ಲಿ ಮೇಳಾವ್ ನಡೆಸಲು ಅನುಮತಿ ನೀಡುವಂತೆ ಎಂಈಎಸ್ ನಾಯಕರು ನಗರ ಪೋಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು ಆಯುಕ್ತರು ಮೊದಲು …

Read More »
Sahifa Theme License is not validated, Go to the theme options page to validate the license, You need a single license for each domain name.