ಘಟಪ್ರಭಾ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಪ್ರಕರಣ! ಮುಖ್ಯ ಆರೋಪಿ ಅರೆಸ್ಟ್! ನ್ಯಾಯಾಲಯಕ್ಕೆ ಹಾಜರು! ಘಟಪ್ರಭಾ: ಹನಿ ಟ್ರ್ಯಾಪ್ ಆರೋಪದಡಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಘಟಪ್ರಭಾ ಪೊಲೀಸರು ಸಂತ್ರಸ್ತ ಮಹಿಳೆ ನೀಡಿದ ಮಾಹಿತಿ ಆಧಾರದ ಮೇಲೆ ಮಹಿಳೆಯರು ಸೇರಿದಂತೆ 25 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಅರ್ಜುನ ಗಂಡವ್ವಗೊಳ ಇವನನ್ನು ಶನಿವಾರ …
Read More »ಹನಿಟ್ರ್ಯಾಪ್ – ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ….
ಬೆಳಗಾವಿ- ಹನಿಟ್ರ್ಯಾಪ್ ಮಾಡಿ,ಬ್ಲ್ಯಾಕ್ ಮೇಲ್ ಮಾಡಿ ಸಾರ್ವಜನಿಕರಿಂದ ದುಡ್ಡು ವಸೂಲಿ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಘಟಪ್ರಭಾದಲ್ಲಿ ಮಹಿಳೆಯೋರ್ವಳು ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಘಟಪ್ರಭಾ ಪಟ್ಟಣದ ಜನ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.ಆದ್ರೆ ನಿನ್ನೆ ರಾತ್ರಿ ಸುಲಿಗೆ ಮಾಡುತ್ತಿದ್ದ ಮಹಿಳೆಯನ್ಬು ವಶಕ್ಕೆ ಪಡೆದ ಮಹಿಳೆಯರು …
Read More »ಲಂಚ ಸ್ವೀಕರಿಸುವಾಗ ರೆಡ್ ಹೆಂಡಾಗಿ ಖಾಕಿ ಬಲೆಗೆ ಬಿದ್ದ ಐಟಿ ಅಧಿಕಾರಿ…
ಬೆಳಗಾವಿ-ಆತ ವೃತ್ತಿಯಲ್ಲಿ ಐಟಿ ಅಧಿಕಾರಿ ಐಟಿ ಅಂದ್ರೆ ಕೇಳ್ಬೇಕಾ ಭ್ರಷ್ಟರನ್ನ ಬೇಟೆಯಾಡುವ ಧೀರರು ಅಂತಾನೆ ಐಟಿ ಅಧಿಕಾರಿಗಳಿಗೆ ಹೆಸರಿದೆ.ದೇಶ ವ್ಯಾಪ್ತಿ ಅವರು ಭ್ರಷ್ಟರನ್ನು ಜಾಲಾಡುವ ರೀತಿ ಎಂಥವರನ್ನೂ ನಿಬ್ಬೆರಗಾಗಿಸುತ್ತೆ ಆದರೆ ಇಲ್ಲೊಬ್ಬ ಕಳ್ಳ ಅಧಿಕಾರಿ ಬಂಗಾರದ ಅಭರಣದ ಮಾಲೀಕನೊಬ್ಬನ ಕಡೆಯಿಂದ ಹಣಕ್ಕೆ ಬೇಡಿಕೆ ಇಟ್ಟು ಹಣವನ್ನ ಸ್ವೀಕರಿಸುವಾಗಲೇ ರೆಡ್ ಹ್ಯಾಂಡಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಅಧಿಕಾರಿಯ ಹೆಸರು ಅವಿನಾಶ ಟೊಪನೆ ಅಂತಾ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ …
Read More »ಕಿತ್ತೂರು ಉತ್ಸವ: ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಬೆಂಗಳೂರು, – ವಿಧಾನಸೌಧದ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2023ರ ಅಂಗವಾಗಿ ಆಯೋಜಿಸಲಾದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾರಿ ಕಿತ್ತೂರು ರಾಣಿ ಚನ್ನಮ್ಮ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆ. ಪ್ರತಿಯೊಬ್ಬರೂ …
Read More »ಬೆಳಗಾವಿ ಮಹಾನಗರ ಪಾಲಿಕೆಗೆ ಸೂಪರ್ ಸೀಡ್ ತೂಗುಗತ್ತಿ…!!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಆಡಳಿತವಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ನಾವೇಕೆ ಶೇ 70 ರಷ್ಟು ಅನುದಾನ ಕೊಡಬೇಕು ಎಂದು ಸರ್ಕಾರಕ್ಕೆ ಪ್ರಶ್ನಿಸಿ ಲವ್ ಲೆಟರ್ ಕಳಿಸಿದ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ತಿರಗೇಟು ನೀಡಿ ನಿನ್ನೆ ಬೆಳಗಾವಿ ಮಹಾನಗರ ಪಾಲಿಕೆಗೆ ಬಿಗ್ ಶಾಕ್ ಕೊಟ್ಟಿದೆ. ಬೆಳಗಾವಿ ಮಹಾನಗರದಲ್ಲಿ ತೆರಿಗೆ ದರವನ್ನು ಹೆಚ್ಚಿಸದೇ, ಸರ್ಕಾರದ ಆದೇಶವನ್ನು ಪಾಲಿಸದ ಬೆಳಗಾವಿ ಮಹಾನಗರ ಪಾಲಿಕೆಯನ್ನು ನಾವೇಕೆ, ಬರಕಾಸ್ತು ಮಾಡಬಾರ್ದು ಎಂದು …
Read More »ಎಂಇಎಸ್‌ಗೆ ಬಿಗ್ ಶಾಕ್ ಕೊಟ್ಟ ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ..!
ಬೆಳಗಾವಿ: ಮಹಾತ್ಮಫುಲೆ ಆರೋಗ್ಯ ಯೋಜನೆ ಕರ್ನಾಟಕದಲ್ಲಿ ಜಾರಿಗೊಳಿಸಲು ಮಹಾರಾಷ್ಟ್ರ ಪ್ಲ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದಿಂದ ವಿವಾದಾತ್ಮಕ ನಿರ್ಣಯಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಜಿಪಂ ಸಭಾಭವನದಲ್ಲಿ ಬೆಳಗಾವಿ ಡಿಸಿ ನಿತೇಶ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ನಿರ್ಣಯ ಖಂಡಿಸಿದರು. ಕರ್ನಾಟಕದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ.ಮರಾಠಿ ಭಾಷಿಕರನ್ನು ಪ್ರಚೋದಿಸಲು ಚಂದಗಡದಲ್ಲಿ ಕಚೇರಿ ಸ್ಥಾಪಿಸುತ್ತಿದೆ.ಗಡಿ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಸಚಿವರು, ಓರ್ವ …
Read More »ರೋಹೀತ್..ರೋಹೀತ್….ಸೂಪರ್ ಹಿಟ್…!!
ನವದೆಹಲಿ: ಬುಧವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿಅಫಘಾನಿಸ್ತಾನದ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ, 84 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ 131 ರನ್ ಗಳಿಸಿದರು. ಆ ಮೂಲಕ ವಿಶ್ವಕಪ್ ಇತಿಹಾಸದಲ್ಲಿ7ನೇ ಶತಕವನ್ನು ಪೂರ್ಣಗೊಳಿಸಿದರು. …
Read More »ವಿಶೇಷತೆಗಳಿಂದ ಕೂಡಿದ ತುಕ್ಕಾನಟ್ಟಿ ಹಸರಬ್ಬ
ಮೂಡಲಗಿ-ತುಕ್ಕಾನಟ್ಟಿ ಲಕ್ಷ್ಮೀ ದೇವಿಯ ಜಾತ್ರೆಯ ನಿಮಿತ್ಯವಾಗಿ ನಡೆಯುವ ಹಸರಬ್ಬವು ತನ್ನದೇಯಾದ ಪ್ರಸಿದ್ಧಿಯನ್ನು ಪಡೆದಿದ್ದು, ಹಲವು ವಿಶೇಷತೆಗಳಿಂದ ಕೂಡಿರುವ ತುಕ್ಕಾನಟ್ಟಿ ಹಸರಬ್ಬ ಎಂದು ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಲಕ್ಷ್ಮೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಗ್ರಾಮದ ಎಲ್ಲ ಸಮಾಜ ಬಾಂಧವರು ದೇವಿಗೆ ವಿಶೇಷವಾದ ನೈವೇದ್ಯಯನ್ನು ಅರ್ಪಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು. ಕಳೆದ ತಿಂಗಳು ೨೬ …
Read More »ನಾಳೆ ಬೆಳಗಾವಿಯಲ್ಲಿ ರಾಜ್ತೋತ್ಸವದ ಪೂರ್ವಭಾವಿ ಸಭೆ
ಬೆಳಗಾವಿ- ಬೆಳಗಾವಿಯಲ್ಲಿ ಈ ಬಾರಿಯ ರಾಜ್ಯೋತ್ಸವವನ್ನು ಅಭೂತಪೂರ್ವ ಗೊಳಿಸುವ ನಿಟ್ಟಿನಲ್ಲಿ ನಾಳೆ ಗುರುವಾರ ಬೆಳಗಾವಿ ಜಿಲ್ಲಾಡಳಿತ ಪೂರ್ವಭಾವಿ ಸಭೆ ನಡೆಸಲಿದೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಾಳೆ ಮಧ್ಯಾಹ್ನ 1-00 ಗಂಟೆಗೆ ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಜ್ಯೋತ್ಸವದ ಸಭೆ ನಡೆಸಲಿದ್ದು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಾಳೆ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಎಲ್ಲ ಕನ್ನಡಪರ ಹೋರಾಟಗಾರರು, ಮತ್ತು ಕನ್ನಡದ …
Read More »ಬೆಳಗಾವಿ PWD ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ.
ಬೆಳಗಾವಿ-ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಮುಂದೆ ವ ಗುತ್ತಿಗೆದಾರನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಎಕ್ಸಿಕ್ಯುಟಿವ್ ಇಂಜಿನಿಯರ್ ಎಸ್.ಎಸ್ ಸೋಬರದ ಅವರ ಎದುರು ಗುತ್ತಿಗೆದಾರ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಬೆಳಗಾವಿಯ ಕೋಟೆ ಆವರಣದಲ್ಲಿರುವ PWD ಕಚೇರಿಯ ಎದುರೇ ಈ ಘಟನೆ ನಡೆದಿದೆ.ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆಯಲ್ಲಿ ವಿಷ ಕುಡಿದು ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಗುತ್ತಿಗೆದಾರ ನಾಗಪ್ಪ ಬಂಗಿಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಲೋಕೋಪಯೋಗಿ …
Read More »