Breaking News

Breaking News

ಹೆಬ್ಬಾಳ್ಕರ ಗೆ ಖೆಡ್ಡಾ ತೋಡಲು ಸಾಹುಕಾರ್ ತಯಾರಿ…!!

ಬೆಳಗಾವಿ- ಇಷ್ಟು ದಿನ ಸೈಲೆಂಟ್ ಆಗಿದ್ದ  ಸಾಹುಕಾರ ತಮ್ಮ ವಿರೋಧಿಗಳನ್ನ ಸೋಲಿಸಲು ಮತ್ತೊಮ್ಮೆ ಸಜ್ಜಾಗಿದ್ದಾರೆ. ತಮ್ಮ ರಾಜಕೀಯ ಬದ್ದ ಜನ ವೈರಿಯಾಗಿರುವ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ ಸೋಲಿಸಲು ಸಜ್ಜಾಗಿರುವ ರಮೇಶ್ ಜಾರಕಿಹೋಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ,ಹಲಗಾ,ಕೆಕೆ ಕೊಪ್ಪ,ಬಡಾಲ ಅಂಕಲಗಿ ಸೇರಿದಂತೆ ಹತ್ತಕ್ಕೂ ಹೆಚ್ವು ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ. ನಡೆಸಿದ್ದಾರೆ. …

Read More »

24 ರಂದು ದಾವಣಗೇರೆಯಲ್ಲಿ ವೀರಶೈವರ ಸಮಾವೇಶ

ಬೆಳಗಾವಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನವನ್ನು ಡಿ.24 ರಿಂದ ಮೂರು ದಿನಗಳ ಕಾಲ ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಘಟದ ಉಪಾಧ್ಯಕ್ಷ ರುದ್ರಣ್ಣ ಹೊಸಕೆರೆ ಹೇಳಿದರು. ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪಿತವಾಗಿದ್ದು, ಕಳೆದ‌ 118 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗೆ …

Read More »

ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ…!!

ಬೆಳಗಾವಿ-ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ , ನಾವು ಬೆಳಗಾವಿಗೆ ಹೋಗಿಯೇ ಹೋಗ್ತೀವಿ,ಎಂದು ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ‌. ಮುಂಬಯಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿ ಚಂದ್ರಕಾಂತ ಪಾಟೀಲ,ಕರ್ನಾಟಕಕ್ಕೆ ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು,ಡಿಸೆಂಬರ್ 6ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ.ಎಂದು ಹೇಳಿಕೆ ನೀಡಿದ್ದಾರೆ. ನನಗೆ ಯಾವುದೇ ಫ್ಯಾಕ್ಸ್ …

Read More »

ಬೆಳಗಾವಿ: ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ-ಸಿಎಂ ಘೋಷಣೆ

ಬೆಳಗಾವಿ, ಡಿ. ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಮದುರ್ಗ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಸರಕಾರ …

Read More »

ಅವರು ಬರಬಾರ್ದು ಅನ್ನೋ ಸಂದೇಶ ನಾವು ಈಗಾಗಲೇ ಕಳಿಸಿದ್ದೇವೆ. – ಸಿಎಂ

ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಸಿಎಂ ಸುಳಿವು… ಬೆಳಗಾವಿ-ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವದ್ವಯರ ಭೇಟಿ ವಿಚಾರವಾಗಿ ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ದೊಡಮಂಗಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಸುಳಿವು ನೀಡಿದ್ದಾರೆ. ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳಿಸಿದ್ದಾರೆ.ಎರಡೂ ರಾಜ್ಯಗಳ ಮಧ್ಯೆ ಈ ರೀತಿ ಪರಿಸ್ಥಿತಿ ಇರುವಾಗ ಅವರು ಬರೋದು …

Read More »

ಬೆಳಗಾವಿಯಲ್ಲಿ ಕನ್ನಡಿಗನ ಮೇಲೆ ಹಲ್ಲೆ: ತನಿಖೆಗೆ ಸಿಎಂ ಆದೇಶ.

ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ಹಲ್ಲೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನಾನು ತನಿಖೆ ಕೈಗೊಳ್ಳಲು ಪೋಲಿಸ್ ಆಯುಕ್ತರಿಗೆ ಸೂಚಿಸಿದ್ದು, ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಪೊಲೀಸರು ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸತ್ಯಾಸತ್ಯತೆಯನ್ನು ತಿಳಿದುಕೊಂಡು ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದರು. ಮತದಾರರ ಪಟ್ಟಿ: ಅಲ್ಪಸಂಖ್ಯಾತ ಮತದಾರರನ್ನು ಕೈಬಿಟ್ಟಿಲ್ಲ : ಸಿಎಂ …

Read More »

ಕನ್ನಡಿಗ ಯುವಕನ ಮೇಲೆ ಹಲ್ಲೆ ನಾಲ್ವರ ವಿರುದ್ದ ಬಿತ್ತು ಕೇಸ್….!!

ಬೆಳಗಾವಿ-ಇತ್ತೀಚಿಗೆ ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಸಹಪಾಠಿಗಳು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುಧ ಟಿಲಕವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸಿದ್ದಕ್ಕೆ ಆತನ ಸಹಪಾಠಿಗಳೇ ಹಲ್ಲೆ ಮಾಡಿದ್ದರು. ನೊಂದ ಯುವಕ ಟಿಲಕವಾಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕಾರಣ ಪೋಲೀಸರು ಮೂವರು ಅಪ್ರಾಪ್ತರು ಒಬ್ಬ ಪ್ರಾಪ್ತ ಯುವಕ ಸೇರಿದಂತೆ ಒಟ್ಟು ನಾಲ್ಕು ಜನರ ವಿರುದ್ದ …

Read More »

ಮಹಾರಾಷ್ಟ್ರ ಮಂತ್ರಿಗಳ ಬೆಳಗಾವಿ ಪ್ರವಾಸ ಧಿಡೀರ್ ಮುಂದೂಡಿಕೆ…..!!

ಬೆಳಗಾವಿ-ಡಿಸೆಂಬರ್ 3 ರಂದು ಬೆಳಗಾವಿಗೆ ಭೇಟಿ ನೀಡುವದಾಗಿ ಟ್ವೀಟ್ ಮಾಡಿದ್ದ ಮಹಾರಾಷ್ಟ್ರ ಗಡಿ ಉಸ್ತುವಾರಿ ಮಂತ್ರಿ ಚಂದ್ರಕಾಂತ ಪಾಟೀಲ ಧಿಡೀರ್ ಬೆಳಗಾವಿ ಪ್ರವಾಸವನ್ನು ಮುಂದೂಡಿದ್ದಾರೆ. ಗಡಿ ವಿಚಾರದಲ್ಲಿ ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತಿರುವ ಮಹಾರಾಷ್ಟ್ರದ ಮಂತ್ರಿಗಳು ಈಗ ಬೆಳಗಾವಿಗೆ ಭೇಟಿ ನೀಡುವ ದಿನಾಂಕ ಮುಂದೂಡಿದ್ದು ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 6 ರಂದು ಬೆಳಗಾವಿಗೆ ಬರುವದಾಗಿ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 6 ರಂದು ವಿಶ್ವರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ …

Read More »

ನಾಳೆ ಬೆಳಗಾವಿಗೆ ರಾಜ್ ಠಾಕ್ರೆ ಛೇಟಿ…!!!

ಗಡಿವಿವಾದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಇಂದಿನಿಂದ ಆರಂಭವಾಗಲಿದೆ. ಈ ಮಧ್ಯೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ನಾಳೆ ಗುರುವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಕೆಲ ಎಂಇಎಸ್ ಪುಂಡರು ಬೆಳಗಾವಿ ಸಾಂಬ್ರಾ ವಿಮಾನ ‌ನಿಲ್ದಾಣದಲ್ಲಿ ರಾಜ್ ಠಾಕ್ರೆ ಭೇಟಿಯಾಗುವ ಸಾಧ್ಯತೆ ಇದೆ. ರಾಜ್ ಠಾಕ್ರೆ ಕೊಲ್ಹಾಪೂರದಲ್ಲಿದ್ದು ನಾಳೆ ಗುರುವಾರ ಸಾವಂತವಾಡಿ ಪ್ರವಾಸ ಮುಗಿಸಿಕೊಂಡು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದ ಮೂಲಕ ಮುಂಬಯಿಗೆ ಪ್ರಯಾಣ ಮಾಡಲಿದ್ದಾರೆ ಎಂದು …

Read More »

ಬೆಳಗಾವಿಯ ಕಾಲೇಜಿನಲ್ಲಿ ಕನ್ನಡದ ಧ್ವಜ ಹಿಡಿದ ವಿಧ್ಯಾರ್ಥಿಗೆ ಥಳಿತ..!!

ಬೆಳಗಾವಿ-ಬೆಳಗಾವಿಯಲ್ಲಿ ಭಾಷಾ ದ್ವೇಷ ಕಾಲೇಜಿಗೂ ಕಾಲಿಟ್ಟಿದೆ.ಕಾಲೇಜಿನ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿಸಿದ ಘಟನೆಯೂ ಇಲ್ಲಿ ನಡೆದಿದೆ. ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದ ಘಟನೆಯ ದೃಶ್ಯವೈರಲ್ಆಗಿದೆ.ಬೆಳಗಾವಿನಗರದಟೀಳಕವಾಡಿಯಲ್ಲಿರುವ ಕಾಲೇಜಿನಲ್ಲಿ ಈ ಘಟನೆ ನಡೆದಿದೆಕಾಲೇಜಿನ ಫೆರವಲ್ ಡೇ ಆಚರಣೆ ವೇಳೆ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ್ದಕ್ಕೆ ಕನ್ನಡದ ವಿಧ್ಯಾರ್ಥಿಯ ಮೇಲೆ ಹಲ್ಲೆ ಮಾಡಲಾಗಿದೆ.ಕನ್ನಡ ಬಾವುಟ ಪ್ರದರ್ಶಿಸಿದ ವಿದ್ಯಾರ್ಥಿಗೆ ಸಹಪಾಠಿಗಳು ಥಳಿಸಿದ್ದಾರೆ.ಬೆಳಗಾವಿ ಟೀಳಕವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಥಳಿತಕ್ಕೆ ಒಳಗಾದ …

Read More »