ಬೆಳಗಾವಿ – ಕಾಂಗ್ರೆಸ್ ಪಕ್ಷ ಎರಡನೇಯ ಕಂತಿನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು,ಗೋಕಾಕ್ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ ಅವರ ಹೆಸರನ್ಬು ಕೊನೆಗೂ ಪೈನಲ್ ಮಾಡಿದೆ. ಕಾಂಗ್ರೆಸ್ಸಿನ ಎರಡನೇಯ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ಗೋಕಾಕ್ ಕ್ಷೇತ್ರದಿಂದ ಅಶೋಕ ಪೂಜಾರಿ ಅವರನ್ನು ಕೈಬಿಟ್ಟು,ಮಹಾಂತೇಶ್ ಕಡಾಡಿ,ಸವದತ್ರಿ ಕ್ಷೇತ್ರದಿಂದ ವಿಶ್ವಾಸ್ ವೈದ್ಯ,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ,ನಿಪ್ಪಾಣಿಯಿಂದ ಕಾಕಾಸಾಹೇಬ್ ಪಾಟೀಲ ಅವರ ಹೆಸರನ್ನು ಪೈನಲ್ ಮಾಡಲಾಗಿದೆ. ಇಂದು …
Read More »ಬೆಳಗಾವಿ: ಖೊಟ್ಟಿ ಪಟ್ಟಿಯಲ್ಲಿ, ವಿನಯ ನಾವಲಗಟ್ಟಿ!!
ಬೆಳಗಾವಿ- ಸೋಶೀಯಲ್ ಮೀಡಿಯಾ ಖಿಲಾಡಿಗಳು ರಿಲೀಸ್ ಮಾಡುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಖೊಟ್ಟಿ ಪಟ್ಟಿಗಳ ಹಾವಳಿ ಬೆಳಗಾವಿ ಜಿಲ್ಲೆಯಲ್ಲಿ ಕೋಲಾಹಲ ಸೃಷ್ಢಿಸಿವೆ. ಅತ್ಯಂತ ವ್ಯವಸ್ಥಿತವಾಗಿ ಯಾರಿಗೂ ಅಮುಮಾನ ಬಾರದ ರೀತಿಯಲ್ಲಿ ಪಕ್ಷದ ಸೀಲು ಜೊತೆಗೆ ಪಕ್ಷದ ಪ್ರಮುಖರ ಸಹಿಯೊಂದಿಗೆ ಫೇಕ್ ಪಟ್ಟಿಯನ್ನು ಖಿಲಾಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.ಇವತ್ತು ಬೆಳ್ಳಂ ಬೆಳಗ್ಗೆ ಕಾಂಗ್ರೆಸ್ಸಿನ ಎರಡನೇಯ ಕಂತಿನ ಪಟ್ಟಿಯನ್ನು ರಿಲೀಸ್ ಮಾಡಿ ಎಲ್ಲರೂ ಹೌಹಾರುವಂತೆ ಮಾಡಿದ್ದು ಸತ್ಯ ಯಾಕಂದ್ರೆ ಈ …
Read More »ಬೆಳಗಾವಿ: ಲಕ್ಷರಿ ಬಸ್ ನಲ್ಲಿ ಕೋಟಿ,ಕೋಟಿ ಹಣ ಪತ್ತೆ!!
ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ದಾಖಲೆರಹಿತ ಎರಡು ಕೋಟಿ ನಗದು ವಶ ಬೆಳಗಾವಿ, ಏ.5(ಕರ್ನಾಟಕ ವಾರ್ತೆ): ಸೂಕ್ತ ದಾಖಲೆಗಳಿಲ್ಲದೇ ಖಾಸಗಿ ಬಸ್ ನಲ್ಲಿ ಸಾಗಿಸಲಾಗುತ್ತಿದ್ದ ಎರಡು ಕೋಟಿ ರೂಪಾಯಿ ನಗದು ಹಣವನ್ನು ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಮುಂಬೈಯಿಂದ ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್(KA 70 1459) ಅನ್ನು ನಸುಕಿನಜಾವ 3.30 ರ ವೇಳೆಗೆ ಚುನಾವಣಾ ಕಾರ್ಯನಿರತ ಎಫ್‌ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ಪರಿಶೀಲನೆ …
Read More »ಮಹಿಳಾ ಕೋಟಾದಲ್ಲಿ ಟಿಕೆಟ್ ಜಾಕ್‌ಪಾಟ್ ಹೊಡೀತಾರಾ ಡಾ. ಸೋನಾಲಿ ?
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಮಹಿಳಾ ಮಣಿಗಳಿಗೆ ಮಣೆಹಾಕಲು ಬಿಜೆಪಿ ಮುಂದಾಗಿದೆ. ನಿಪ್ಪಾಣಿ ಕ್ಷೇತ್ರದಿಂದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಖಾನಾಪುರ ಕ್ಷೇತ್ರದಿಂದ ಡಾ.ಸೋನಾಲಿ ಸರ್ನೋಬಾತ್ ಬಿಜೆಪಿಯ ಮಹಿಳಾ ಕೋಟಾದಲ್ಲಿ ಟಿಕೆಟ್ ಜಾಕ್‌ಪಾಟ್ ಹೊಡೆಯಲಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಮೊದಲಿನಿಂದಲು ಸಕ್ರಿಯರಾಗಿರುವ ಸೋನಾಲಿ ಸರ್ನೋಬಾತ್ ಅವರು ಕಳೆದ ಐದು ವರ್ಷಗಳಿಂದ ಖಾನಾಪುರ ಕ್ಷೇತ್ರದಲ್ಲಿ ತಮ್ಮನ್ನು ಪಕ್ಷದ ಸಂಘಟನೆಯಲ್ಲಿತೊಡಗಿಸಿಕೊಂಡಿದ್ದಾರೆ. …
Read More »ಬೆಳಗಾವಿ ಉತ್ತರದಿಂದ ರಾಜು ಸೇಠ ಫೈನಲ್!!
ಬೆಳಗಾವಿ- ತಿಕ್ಕಾಟ,ಗುದ್ದಾಟ,ಪ್ರಬಲ ಪೈಪೋಟಿಯ ನಡುವೆ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊನೆಗೂ ರಾಜು ಸೇಠ ಅವರಿಗೆ ಫೈನಲ್ ಆಗಿದೆ ಎಂದು ದೆಹಲಿಯ ನಂಬಲರ್ಹ ಕಾಂಗ್ರೆಸ್ ಮೂಲಗಳಿಂದ ದೃಡವಾಗಿದ್ದು ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ. ಬೆಳಗಾವಿ ಉತ್ತರ ಕ್ಷೇತ್ರದಿಂದ ರಾಜು ಸೇಠ,,ಹಾಗೂ ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ವಿಶ್ವಾಸ್ ವೈದ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ ಎಂದು ಅಧಿಕೃತ ಮೂಲಗಳಿಂದ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಮಾಹಿಸಿ …
Read More »ಪತ್ನಿ ಜೊತೆ ಜಗಳಾಡಿ ಗೋವಾಕ್ಕೆ ಹೊರಟಿದ್ದ ಲಕ್ಷಾಧೀಶ ಬೆಳಗಾವಿಯಲ್ಲಿ ಲಾಕ್!!
ಬೆಳಗಾವಿ-ಊದೋದು ಕೊಟ್ಟು, ಒದರೋದು ತಗೊಂಡ್ರು ಅನ್ನೋ ಮಾತು ಕೇಳಿರಬಹುದು ನೀವು. ಆದರೆ, ಇಲ್ಲೊಬ್ಬ ಪುಣ್ಯಾತ್ಮ ಈ ಮಾತನ್ನು ಅಕ್ಷರಶಃ ಸತ್ಯ ಮಾಡಿಬಿಟ್ಟಿದ್ದಾನೆ. ಪತ್ನಿ ಕಾಟಕ್ಕೆ ಬೇಸತ್ತು ನೆಮ್ಮದಿ ಅರಿಸಿ ಗೋವಾಗೆ ಹೊರಟಿದ್ದ ಈ ವ್ಯಕ್ತಿ ಈಗ ಪೊಲೀಸರ ಕಾಟ ಅನುಭವಿಸುತ್ತಿದ್ದಾನೆ. ಬೆಳಗಾವಿಯ ಕರ್ನಾಟಕ ಚೆಕ್‌ಪೋಸ್ಟ್‌ನಲ್ಲಿ 26 ಲಕ್ಷ ರೂಪಾಯಿ ಜತೆಗೆ ಸಿಕ್ಕಿಬಿದ್ದ ಮುಂಬೈನ ಗುತ್ತಿಗೆದಾರನ ಪ್ರಹಸನವಿದು.ಪತ್ನಿ ಕಾಟದಿಂದ ಬೇಸತ್ತ ಈ ಗುತ್ತಿಗೆದಾರ ತನ್ನ ಬಳಿ ಇದ್ದ 26 ಲಕ್ಷ ನೋಟುಗಳನ್ನು …
Read More »ಬೆಳಗಾವಿ ಉತ್ತರ: ಕಾಂಗ್ರೆಸ್ ಟಿಕೆಟ್ ಗಾಗಿ ತಿಕ್ಕಾಟ,ಮುಂದುವರೆದ ಗುದ್ದಾಟ!!
ಬೆಳಗಾವಿ- ಬೆಳಗಾವಿ ಉತ್ತರದ ಕಾಂಗ್ರೆಸ್ ಟಿಕೆಟ್ ಗಾಗಿ ದೆಹಲಿ ಮಟ್ಟದಲ್ಲಿ ಇವತ್ತಿಗೂ ತಿಕ್ಕಾಟ ನಡೆದಿದೆ.ಸೇಠ ಬ್ರದರ್ಸ್ ಮತ್ತು ಸತೀಶ್ ಜಾರಕಿಹೊಳಿ ಆಪ್ತ ಅಜೀಂ ಪಟವೇಗಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಅವರು ತಮ್ಮ ಆಪ್ತ ಅಜೀಂ ಪಟವೇಗಾರ ಅವರಿಗೆ ಟಿಕೆಟ್ ಕೊಡಿಸಲು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸರ್ಜೆವಾಲಾ,ಮಾಜಿ ಸಿಎಂ ಸಿದ್ರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವಾರು ಜನ …
Read More »ಸವದತ್ತಿ: ವೈದ್ಯನಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ್!!
ಬೆಳಗಾವಿ-ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಮೂವರು ದಿಗ್ಗಜರಲ್ಲಿ ಪ್ರಬಲ ಪೈಪೋಟಿ ನಡೆದಿತ್ತು ಮೂವರಲ್ಲಿ ಯಾರ ಪ್ರಾಬಲ್ಯ ಹೆಚ್ಚಾಗಬಹುದು ಟಿಕೆಟ್ ಯಾರಿಗೆ ಸಿಗಬಹುದು ಎನ್ನುವ ವಿಚಾರ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ವಿಶ್ವಾಸ ವೈದ್ಯ, ಪಂಚನಗೌಡ್ರು,ಮತ್ತು ಚೋಪ್ರಾ ನಡುವೆ ಗುದ್ದಾಟ ನಡೆದಿತ್ತು.ಇತ್ತೀಚಿಗೆ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ವಿಶ್ವಾಸ್ ವೈದ್ಯರಿಗೆ ಹರ್ಷವನ್ನುಂಟು ಮಾಡುವ ಸುದ್ದಿ ಲಭಿಸುವ ಲಕ್ಷಣಗಳು ಕಂಡುಬಂದಿವೆ. ದೆಹಲಿಯ …
Read More »ತಂದೆಯ ಪರವಾಗಿ ಫೀಲ್ಡ್ ಗಿಳಿದ ಸುಪುತ್ರ ಯಮಕನಮರ್ಡಿಯಲ್ಲಿ ಎಲ್ಲವೂ ಸುಸೂತ್ರ!!
ಬೆಳಗಾವಿ- ತಂದೆ ಸೈದ್ಧಾಂತಿಕ ತಳಹದಿಯ ನಾಯಕ,ಕೆಪಿಸಿಸಿ ಕಾರ್ಯಾಧ್ಯಕ್ಷ, ತಂದೆ ಪಕ್ಷದ ಹೆಚ್ಚಿನ ಜವಾಬ್ದಾರಿ ನಿಭಾಯಿಸುವಲ್ಲಿ ಹೆಲಿಕಾಪ್ಟರ್ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದರೆ,ಇತ್ತ ತಂದೆಯ ಕ್ಷೇತ್ರದಲ್ಲಿ ಮಗ ಫೀಲ್ಡ್ ಗೆ ಇಳಿದು ತಂದೆಯ ಪರವಾಗಿ ಮತಯಾಚಿಸುವ ಮೂಲಕ.ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದು ಯಮಕನಮರ್ಡಿ ಕ್ಷೇತ್ರದ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ,ಮಾಜಿ ಮಂತ್ರಿ,ಸತೀಶ್ ಜಾರಕಿಹೊಳಿ ಕ್ಷೇತ್ರದ ಪ್ರಸ್ತುತ ಕಹಾನಿ, ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದು ಯಮಕನಮರ್ಡಿ …
Read More »ಸೀರೆ,ಗೋಡೆ ಗಡಿಯಾರದ ಜೊತೆಗೆ 100 ಪೇಪರ್ಸ ಕಿಕ್!!
ಖಾನಾಪೂರ-ಖಾನಾಪುರ ಪಟ್ಟಣದ ಮುಖ್ಯರಸ್ತೆಯ ಲೋಕಮಾನ್ಯಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನವನ್ನು ಪರಶಿಸಿದಾಗ ವಾಹನದಲ್ಲಿ ಸೀರೆ,ಗೋಡೆ ಗಡಿಯಾರ,ಹಾಗೂ 100 ಪೇಪರ್ಸ್ ಬಾಟಲ್ ಗಳು ಪತ್ತೆಯಾಗಿವೆ ಶ್ರೀ ಎ .ದಿಲೀಪ್ ಕುಮಾರ್ ಬಿಜೆಪಿ ಮುಖಂಡರು ,ಖಾನಾಪುರ ವಿಧಾನಸಭಾ ಕ್ಷೇತ್ರ. ಇವರ ಹೆಸರಿರುವ ಹಾಗೂ ಇವರ ಫೋಟೋ ಇರುವ, ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಲಗಳ ಸಮೇತ,Ka.22 D 2422 tata ace ಮಿನಿ ಗೂಡ್ಸ್ ವಾಹನದಲ್ಲಿ 280 .. ಸೀರೆಗಳು , 280 …
Read More »