Breaking News
Home / Breaking News (page 108)

Breaking News

ಮಹಾ ಪುಂಡರ ಕೃತ್ಯಕ್ಕೆ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ತಿರುಗೇಟು…!!

ಬೆಳಗಾವಿಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಮುನ್ನೆಲೆ ಮತ್ತೇ ತಾರರಕ್ಕೇರಿದೆ. ಮಹಾರಾಷ್ಟ್ರ ಪುಂಡರ ವಿಕೃತಿಗೆ ಸಿಡಿಡೆದ್ದ ಕರವೇ ಕಾರ್ಯಕರ್ತರು ಇಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಿಎಂ, ಡಿಸಿಎಂ ಪ್ರತಿಕೃತಿ ಅಣಕು ಶವಾಯತ್ತೆ ಮಾಡಿ ಆಕ್ರೋಶ ಹೊರಹಾಕಿದರು. ಮಹಾನಾಯಕರ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶಗೊಂಡಿದ್ದೇಕೆ. ಈ ಸುದ್ದಿ ಓದಿ.. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಸಾಹುಕಾರ್ ಮೀಟೀಂಗ್….!!

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗಿನಿಂದಲೇ ತಯಾರಿ ನಡೆಸಿದ್ದು,ಹಿಂಡಲಗಾ ಗ್ರಾಮ ಪಂಚಾಯತಿ ಅದ್ಯಕ್ಷ ನಾಗೇಶ್ ಮನ್ನೋಳಕರ ಅವರನ್ಬು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸಿದ ಬೆನ್ನಲ್ಲಿಯೇ ಇಂದು ಗ್ರಾಮೀಣ ಕ್ಷೇತ್ರದ ಸಾಂಬ್ರಾದಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ‌. ಇಂದು ಬೆಳಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ ಸುಳೆಭಾವಿ, ಸಾಂಬ್ರಾ,ಮಾರಿಹಾಳ,ಬಾಳೇಕುಂದ್ರಿ,ಮೋದಗಾ ಸೇರಿದಂತೆ …

Read More »

ಅದೇ ಜಾಗದಲ್ಲಿ ಮತ್ತೊಂದು ಅಪಘಾತ,ಬೆಳಗಾವಿ ಮೂಲದ ವ್ಯಕ್ತಿ ಸಾವು…!!

ದಾವಣಗೆರೆ, ನವೆಂಬರ್‌ 27: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹೋದರ ರಮೇಶ್ ಪುತ್ರ ಚಂದ್ರಶೇಖರ್ ಸಾವಿ‌ನ ನಿಗೂಢತೆ ಇನ್ನೂ ಹೊರಬಂದಿಲ್ಲ. ಇದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿದೆ. ಹೊನ್ನಾಳಿಯಲ್ಲಿ ಕಾರೊಂದು ಹಳ್ಳಕ್ಕೆ ಬಿದ್ದಿದ್ದು, ಚಂದ್ರಶೇಖರ್ ಪತ್ತೆಯಾದ ರೀತಿಯಲ್ಲಿ ವ್ಯಕ್ತಿ ಮೃತದೇಹ ಕಾರಿನ ಹಿಂಬದಿ ಸೀಟ್‌ನಲ್ಲಿ ಪತ್ತೆಯಾಗಿದೆ. ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ‌ ಬಳಿ‌ ಈ ಘಟನೆ ನಡೆದಿದೆ. ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಬಸವನಕುಡುಚಿಯ ಪೊಲೀಸ್ ಠಾಣೆಯಲ್ಲಿ ಎಎಸ್ಐ …

Read More »

ಬೆಳಗಾವಿ ಗಡಿ ವಿವಾದ ನವ್ಹೆಂಬರ್ 30 ರಂದು ಅಂತಿಮ ವಿಚಾರಣೆ ಫಿಕ್ಸ್..

ಬೆಳಗಾವಿ-ಕಳೆದ ಆರು ದಶಕಕಗಳಿಂದ ಸಂಘರ್ಷಕ್ಕೆ ಕಾರಣವಾಗಿರುವ ಬೆಳಗಾವಿ ಗಡಿವಿವಾದದ ಕುರಿತು ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ನವೆಂಬರ್ 30 ರಂದು ಅಂತಿಮ ವಿಚಾರಣೆಗೆ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 30 ರಂದು ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯಲಿದ್ದು ಕರ್ನಾಟಕದ ಪರವಾಗಿ ವಾದ ಮಂಡಿಸಲು ನುರಿತ,,ಕಾನೂನು ತಜ್ಞರ ಸಮೀತಿಯನ್ನು ರಚಿಸಲಾಗಿದೆ.ಈ ಸಮೀತಿಯಲ್ಲಿ ಮುಘುಲ್ ರೋಹಟಗಿ ಶ್ಯಾಮ ದಿವಾನ್ ಉದಯ ಹೊಳ್ಳ ಬೆಳಗಾವಿಯ ಎಂ ಬಿ ಝಿರಲಿ ಸೇರಿದಂತೆ ಅನೇಕ ಜನ ಕಾನೂನು …

Read More »

ಬೆಳಗಾವಿಯ ನಾಲ್ಕು ಜನ ಯುವತಿಯರು ನೀರು ಪಾಲು

ಬೆಳಗಾವಿ- ಬೆಳಗಾವಿಯಲ್ಲಿ ಘನಘೋರ ದುರಂತ ನಡೆದಿದೆ‌ *ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವುನೊಪ್ಪಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್ ನಲ್ಲಿ ಈ ದುರಂತ ನಡೆದಿದೆ. ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಟ್ರಿಪ್‌ಗೆ ತೆರಳಿದ್ದ 40 ಯುವತಿಯರು. ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದ ಐವರು ಯುವತಿಯರ ಪೈಕಿ, ಐವರು ಯುವತಿಯರ ಪೈಕಿ ನಾಲ್ವರು ಯುವತಿಯರು ನೀರು ಪಾಲಾಗಿದ್ದಾರೆ. ಓರ್ವಳ …

Read More »

ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತರ ಬಲೆಗೆ: ಅರ್ಜಿದಾರನ ತಂದೆ ಹೃದಯಾಘಾತದಿಂದ ವಿಧಿವಶ….

ಬೆಳಗಾವಿ-ಕಿತ್ತೂರು ತಹಶಿಲ್ದಾರ ಮತ್ತು ಗುಮಾಸ್ತ ಲೋಕಾಯುಕ್ತ ಬಲೆಗೆ ವಿಚಾರವಾಗಿ,ಆರೋಪಿಗಳನ್ನು ಲೋಕಾಯುಕ್ತ ಸಿಬ್ಬಂಧಿಗಳು ಹಿಂಡಲಗಾ ಜೈಲಿಗೆ ಕರೆತಂದಿದ್ದಾರೆ. ಬೆಳಗಾವಿಯ ಬಿಮ್ಸ್ ನಲ್ಲಿ ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.ಸೋಮವಾರದವರೆಗೂ ನ್ಯಾಯಾಂಗ ಬಂಧನ ನೀಡಿದ ನ್ಯಾಯಾಧೀಶರು,ಸೋಮವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಆರೋಪಿಗಳನ್ನು ಶಿಪ್ಟ್ ಮಾಡಲಾಗಿದೆ.ತಹಶಿಲ್ದಾರ ಸೋಮಲಿಂಗ ಹಾಲಗಿ, ಗುಮಾಸ್ತ ಪ್ರಸನ್ನ ಜಿ. ಹಿಂಡಲಗಾ ಜೈಲಿಗೆ ಶಿಪ್ಟ್ ಆಗಿದ್ದಾರೆ.10ಎಕರೆ ಜಮೀನಿನ …

Read More »

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟ..

  ಬೆಳಗಾವಿ-ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಮೇಲೆ ತೂರಿ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರಿದ್ದು ಮಹಾರಾಷ್ಟ್ರದಲ್ಲಿ ಈ ವಿಚಾರದಲ್ಲಿ ಗೂಂಡಾಗಿರಿ ಶುರುವಾಗಿದೆ. ಮಿರಜ್ ಕಾಗವಾಡ‌ ಮಧ್ಯೆದ ಮಾರ್ಗದಲ್ಲಿ ಕರ್ನಾಟಕ ಬಸ್ ಗೆ ಕಲ್ಲು ತೂರಾಟ ನಡೆಸಿರುವ ಗೂಂಡಾಗಳು ಮತ್ತೆ ಪುಂಡಾಟಿಕೆ ನಡೆಸಿದ ದ್ದಾರೆ.ಪುನೆಯಿಂದ ಅಥಣಿ ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್,ಕಳೆದ ರಾತ್ರಿ 10.30ರ ಸುಮಾರಿಗೆ ರನ್ನಿಂಗ್ ಅಲ್ಲಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ …

Read More »

ಲಕ್ಷ..ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ರು….!!

ಬೆಳಗಾವಿ : ಖಾತಾ ವರ್ಗಾವಣೆಗೆ ಹಣ ಬೇಡಿಕೆಯಿಟ್ಟಿದ್ದ ತಹಶಿಲ್ದಾರರ ಹಾಗೂ ಕಚೇರಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಜಿಲ್ಲೆಯ ಚನ್ನಮ್ಮ ಕಿತ್ತೂರು ತಹಶಿಲ್ದಾರರ ಸೋಮಲಿಂಗಪ್ಪ ಹಾಲಗಿ ಹಾಗೂ ಕಚೇರಿ ಅಧಿಕಾರಿ ಪ್ರಸನ್ನ ಜಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ದೂರುದಾರ ರಾಜೇಂದ್ರ ಇನಾಂದಾರ ಅವರ ತಂದೆ ಹೆಸರಿನಲ್ಲಿದ್ದ 10 ಎಕರೆ ಭೂಮಿಯನ್ನು ರಾಜೇಂದ್ರ ಹೆಸರಿಗೆ ವರ್ಗಾಯಿಸಲು 5 ಲಕ್ಷ ರೂ ಹಣದ ಬೇಡಿಕೆಯಿಟ್ಟದ್ದರು. ಮೊದಲ ಹಂತದಲ್ಲಿ …

Read More »

ಕರ್ನಾಟಕ ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ…

ಬೆಳಗಾವಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್ಗಳು ತಾತ್ಕಾಲಿಕ ಸ್ಥಗಿತವಾಗಿದ್ದುಅಹಿತಕರ ಘಟನೆಗಳುನಡೆಯದಂತೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿಪೊಲೀಸ್ ಬಂದೋ ಬಸ್ತಿ ಮಾಡಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿಮಹಾರಾಷ್ಟ್ರದ ಪುಂಡರು ಇಂದು ಕರ್ನಾಟಕದ ಬಸ್ಗಳಿಗೆ ಮಸಿ ಬಳಿದಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿಮಹಾರಾಷ್ಟ್ರದ ಬಸ್ಗಳಿಗೂ ಕಪ್ಪು ಮಸಿ ಬಳಿಯುವ ಭೀತಿಯ ಹಿನ್ನೆಲೆಯಲ್ಲಿನಗರ ಕೇಂದ್ರ ಬಸ್ ನಿಲ್ದಾಣದಲ್ಲಿಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿದ್ದ 300ಕ್ಕೂ ಅಧಿಕ ಬಸ್ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ …

Read More »

ಬೆಳಗಾವಿ ಗಡಿವಿವಾದ: ಕಾನೂನು ಹೋರಾಟಕ್ಕೆ ಆದ್ಯತೆ- ಸಿಎಂ

*ರಾಜ್ಯದ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* ಬೆಂಗಳೂರು, ನವೆಂಬರ್ 25: ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನ್ಯಾಯ ನಮ್ಮ ಕಡೆಯಿದೆ. ಎರಡೂ ರಾಜ್ಯಗಳ ಮಧ್ಯೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆಗ್ರಹಿಸಿದರು. *ರಾಜ್ಯಗಳ ನಡುವಿನ …

Read More »