Breaking News

Breaking News

ಮೇ 15 ರಂದು ಬೆಳಗಾವಿಯಲ್ಲಿ ಮರಾಠಾ ಸಮುದಾಯದ ಬೃಹತ್ತ್ ಶೋಭಾಯಾತ್ರೆ

ಬೆಳಗಾವಿ ಮರಾಠಾ ಸಮುದಾಯಕ್ಕೆ ತಮ್ಮದೆಯಾದ ಇತಿಹಾಸ ಇದೆ. ಬೆಳಗಾವಿ ಮರಾಠಿಗರು ಒಂದಾಗಬೇಕು. ಸಹಬಾಳ್ವೆಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಕಲ ಮರಾಠಾ ಸಮಾಜ ಬೆಳಗಾವಿ ಶ್ರಮಿಸುತ್ತಿರುವ ಕಾರ್ಯ ಅನನ್ಯವಾಗಿದೆ. ಕಳೆದ‌ 1620ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಮಠ ಸ್ಥಾಪನೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಈ ಮಠಕ್ಕೆ ಮಠಾಧೀಶರನ್ನು ನೇಮಕ ಮಾಡಿಕೊಂಡು ಬರಲಾಗಿದೆ. ಮರಾಠಾ ಸಮಾಜದ 13ನೇ ಮಠಾಧೀಶರಾಗಿ ಪಟ್ಟಾಧಿಕಾರ ವಹಿಸಿಕೊಂಡಿರುವ ಮರಾಠಾ ಸ್ವಾಮಿ ಗುರು ಜಗದ್ಗುರು ವೇದಾಂತಾಚಾರ್ಯ ಶ್ರೀ ಶ್ರೀ …

Read More »

ಮತದಾರರಿಗೆ ಜಿಪಿಎಸ್ ಆಧಾರಿತ ಮತಗಟ್ಟೆ ಮಾಹಿತಿ: ಬಿಸ್ವಾಸ್

  ಬೆಳಗಾವಿ, – ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದ್ದು, ಮತದಾರರಿಗೆ ಆಮಿಷವೊಡ್ಡುವ ಅಥವಾ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಮತಕ್ಷೇತಗಳ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಎಚ್ಚರಿಕೆ ನೀಡಿದರು. ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಮತಕ್ಷೇತಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಮೇ …

Read More »

ಬೆಳಗಾವಿಯಲ್ಲಿ ಅಧಿಕಾರಿಗಳ ವಿರುದ್ಧ ಬೆಳಗಾವಿ ಡಿಸಿ ಗರಂ

ಬೆಳಗಾವಿ: ವಿವಿಧ ಸರ್ಕಾರಿ ಕಚೇರಿಗಳಿಗೆ ಬೆಳಗಾವಿಯ ನೂತನ ಡಿಸಿ ನಿತೇಶ ಪಾಟೀಲ ದಿಢೀರ್ ಭೇಟಿ ನೀಡಿದರು.ತಡವಾಗಿ ಕಚೇರಿಗೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳಗ್ಗೆ 11.30 ಆದರೂ ಕಚೇರಿಗೆ ಆಗಮಿಸದ ಸಿಬ್ಬಂದಿ ವಿರುದ್ಧ ಡಿಸಿ ನಿತೇಶ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿಗೆ ತಡಮಾಡಿ ಬರುವ ಅಧಿಕಾರಿಗಳ ವಿರುದ್ಧ ಡಿಸಿ ಗರಂ ಆದರು.ಡಿಸಿ ಕಚೇರಿ ಆವರಣದಲ್ಲಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಕಚೇರಿಗಳಿಗೆ ಭೇಟಿ ನೀಡಿದರು. ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳಿಗೆ …

Read More »

ವೇದಿಕೆ ಮೇಲೆ ಉರುಳಿದ ವಿದ್ಯುತ್ ಕಂಬ, ರಾಜ್ಯಸಭಾ ಸದಸ್ಯ ಕಡಾಡಿ ಬಚಾವ್…!!

ಬೆಳಗಾವಿ- ಸೌಂಡ್ ಸಿಸ್ಟಮ್ ಮತ್ತು ಹೈಮಾಸ್ಕ ಅಳವಡಿಸಿದ ಕಂಬ ಗಣ್ಯರ ವೇದಿಕೆ ಮೇಲೆ ಉರುಳಿ ಬಿದ್ದು ,ವೇದಿಕೆ ಮೇಲೆ ಆಸೀನರಾಗಿದ್ದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿದಂತೆ ಅನೇಕ ಜನ ಗಣ್ಯರು ಬಚಾವ್ ಆಗಿದ್ದಾರೆ. ರಾಜಾಪುರ ಗ್ರಾಮದಲ್ಲಿ ಜಾತ್ರೆ ವೇಳೆ ರಸಮಂಜರಿ ಲೈಟಿಂಗ್ ಟ್ರೆಸ್ ಉರುಳಿ ವೇದಿಕೆಯ ಮೇಲೆ ಬಿದ್ದಿದೆ.ರಾಜ್ಯಸಭಾ ಸದಸ್ಯ ಈರಣ್ಣಾ‌ ಕಡಾಡಿ ಪ್ರಣಾಪಾಯದಿಂದ ಪಾರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಚೂನಮ್ಮ ದೇವಿ ಜಾತ್ರೆಯಲ್ಲಿ ಘಟನೆ …

Read More »

Belagavi ದೆಹಲಿಯಲ್ಲಿ , ಬೆಳಗಾವಿಯ ಪರವಾಗಿ ಸಿಎಂ ಬೊಮ್ಮಾಯಿ ಭರ್ಜರಿ ಬ್ಯಾಟೀಂಗ್…

ಬೆಳಗಾವಿ ಮಹಾನಗರದಲ್ಲಿ ಕೆ.ಎಲ್ ಇ ಆಸ್ಪತ್ರೆಯ ಮುಂದಿನ ಭಾಗದಲ್ಲಿ ನ್ಯಾಶನಲ್ ಹೈವೇ ಪಕ್ಕದಲ್ಲಿಯೇ ಕರ್ನಾಟಕ ಸರ್ಕಾರದ 750 ಕ್ಕೂ ಹೆಚ್ವು ಎಕರೆ ಜನೀನು ರಕ್ಷಣಾ ಇಲಾಖೆಯ ಆಧೀನದಲ್ಲಿ ಇದೆ,ಈ ಜಮೀನು ರಕ್ಷಣಾ ಕರ್ನಾಟಕ ಸರ್ಕಾರಕ್ಕೆ ವಾಪಸ್ ಕೊಡಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದು ಶಾಸಕ ಅಭಯ ಪಾಟೀಲ ಅವರ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತ್ವರಿತವಾಗಿ ಸ್ಪಂದಿಸಿದ್ದು, ಈ ವಿಚಾರವಾಗಿ …

Read More »

ಸರಳತೆ, ತಾಳ್ಮೆಯ ಗುಣಗಾನ; ಚಪ್ಪಾಳೆಗಳ ಅಭಿಮಾನ!

ಎಂ.ಜಿ.ಹಿರೇಮಠರ ಸಮಯಪ್ರಜ್ಞೆ, ಸರಳತೆ, ತಾಳ್ಮೆಯ ಗುಣಗಾನ; ಚಪ್ಪಾಳೆಗಳ ಅಭಿಮಾನ! ಬೆಳಗಾವಿ,- ತವರು ಜಿಲ್ಲೆಯಲ್ಲಿ ಯಶಸ್ವಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಅವರ ಮದುವೆ ವಾರ್ಷಿಕೋತ್ಸವದ ದಿನವೇ ಜಿಲ್ಲಾಡಳಿತದ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕೇಳಿಬಂದ ಎಂ.ಜಿ.ಹಿರೇಮಠರ ಸಮಯಪ್ರಜ್ಞೆ, ಸರಳತೆ, ತಾಳ್ಮೆಯ ಗುಣಗಾನಕ್ಕೆ; ಚಪ್ಪಾಳೆಗಳ ಅಭಿಮಾನ ದೊರೆಯಿತು. ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಮೇ 11) ನಡೆದ ನಿಕಟಪೂರ್ವ ಜಿಲ್ಲಾಧಿಕಾರಿ ಎಂಜಿ.ಹಿರೇಮಠ …

Read More »

ಬೆಳಗಾವಿ ಡಿಸಿ ಕಚೇರಿ ಆಗಲಿದೆ ಪೇಪರ್ ಲೆಸ್….!!

ಜಿಲ್ಲಾಧಿಕಾರಿ ಕಚೇರಿ ಇನ್ಮುಂದೆ ಇ-ಆಫೀಸ್: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ “ಕಾಗದ ರಹಿತ(ಪೇಪರ್ ಲೆಸ್)” ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ನೀಡಿದ್ದಾರೆ. ಕಾಗದ ರಹಿತ ಕಚೇರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದ್ದು, ಆ ಪ್ರಕಾರ ಜಿಲ್ಲಾಧಿಕಾರಿ ಕಚೇರಿಯನ್ನು ಇನ್ನು ಮುಂದೆ ಕಡ್ಡಾಯವಾಗಿ “ಕಾಗದ ರಹಿತ ಕಚೇರಿ” ಯಾಗಿ ಮಾರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಪೇಪರ್ ಲೆಸ್ ಕಚೇರಿಗೆ ಅಗತ್ಯವಿರುವ ಡಿ.ಎಸ್. ಕಾರ್ಡು, ಲ್ಯಾನ್ ವ್ಯವಸ್ಥೆಯನ್ನು …

Read More »

ಚುನಾವಣಾ ವೇಳಾಪಟ್ಟಿ ಪ್ರಕಟ,ಇಂದಿನಿಂದ ನೀತಿಸಂಹಿತೆ ಜಾರಿ…

ಬೆಳಗಾವಿ-ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬಂದಿರುತ್ತದೆ. ಎಲ್ಲ ರಾಜಕೀಯ ಪಕ್ಷಗಳು ಮಾದರಿ ನೀತಿಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಮೇ 12) ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ಹೊಸ ಯೋಜನೆ/ಕಾರ್ಯಕ್ರಮ ಗಳನ್ನು ಘೋಷಿಸುವಂತಿಲ್ಲ. ಪ್ರಚಾರ ಕೂಡ ಕೋವಿಡ್ ಮಾರ್ಗಸೂಚಿ ಪ್ರಕಾರ ನಡೆಸಬೇಕಾಗುತ್ತದೆ. ಈ …

Read More »

ಬೆಳಗಾವಿಯಲ್ಲಿ ಆಪರೇಷನ್ ಡಾಗ್ ಸಕ್ಸೆಸ್…!!

ಬೆಳಗಾವಿ: ಮಕ್ಕಳ ಕಲ್ಲೇಟಿಗೆ ಆಯತಪ್ಪಿ ಬಾವಿಗೆ ಬಿದ್ದ ಬೀದಿ ನಾಯಿಯನ್ನು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಎಸ್‌ಡಿ‌ಆರ್‌ಎಫ್ ಸಿಬ್ಬಂದಿ ಬಾವಿಗೆ ಬಿದ್ದ ನಾಯಿಯನ್ನು ಹೊರತೆಗೆದಿದ್ದಾರೆ. ಬೆಳಗಾವಿಯ ಕಚೇರಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಎಸ್‌ಡಿಆರ್‌ಎಫ್ ಆಪರೇಷನ್ ಡಾಗ್ ಕಾರ್ಯಾಚರಣೆ ಯಶಸ್ವಿಯಾಗಿಷೆ. ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ ಕಚ್ಚಿದರೂ ಛಲಬಿಡದೇ ರಕ್ಷಣೆ ಮಾಡಲಾಗಿದೆ. ಬೀದಿನಾಯಿ ರಕ್ಷಣಾ ಕಾರ್ಯಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೊಂಟಕ್ಕೆ ಹಗ್ಗ …

Read More »

ರಮ್ಯಾಗೆ ಪ್ರಶ್ನೆ ಮಾಡಿದ ಲಕ್ಷ್ಮೀ ಹೆಬ್ಬಾಳಕರ ಸಹೋದರ

ಬೆಳಗಾವಿ-ಅಶ್ವತ್ಥ್ ನಾರಾಯಣ್ – ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯೆ ವಿಚಾರವಾಗಿ,ಮಾಜಿ ಸಂಸದೆ ರಮ್ಯಾ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕ ಅನುಪಸ್ಥಿತಿಯಲ್ಲಿ ಬೆಳಗಾವಿಯಲ್ಲಿ ಜನ್ಮ ದಿನ ಆಚರಿಸಿ,ಅಭಿಮಾನಿಗಳಿಗೆ,ಸಸಿ,ವಿಧ್ಯಾರ್ಥಿಗಳಿಗೆ ಬುಕ್,ಬ್ಯಾಗ್ ಹಂಚಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ,ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದವರು,ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‌ಮೆಂಟ್ ಕೊಡಬೇಕು? …

Read More »