Breaking News
Home / Breaking News (page 53)

Breaking News

ಬೆಳಗಾವಿಯಲ್ಲಿ ಮಳೆಯ ಅಬ್ಬರ,ಒಟ್ಟು 15 ಸೇತುವೆಗಳು ಜಲಾವೃತ….!!

  ಬೆಳಗಾವಿ-ಕಳೆದ ಆರು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ನಿರಂತರವಾಗಿ ಸುರಿಯುತ್ತಿದೆ. ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದ್ದು,ಜಿಲ್ಲೆಯ ಸಪ್ತನದಿಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದ್ದು ಸಂತಸದ ಸಂಗತಿಯಾಗಿದೆ. ಘಟಪ್ರಭಾ ನದಿಯಲ್ಲಿ 25765 ಕ್ಯೂಸೆಕ್ ಒಳಹರಿವು ಇದೆ.ಮಾರ್ಕಂಡೇಯ ನದಿಗೆ 1454 ಕ್ಯೂಸೆಕ್ ಒಳಹರಿವುಇದೆ.ಹಿಪ್ಪರಗಿ ಬ್ಯಾರೆಜ್ ನಿಂದ 91200ಕ್ಯೂಸೆಕ್ ಒಳಹರಿವು,ಅಷ್ಟೇ ಪ್ರಮಾಣದಲ್ಲಿ ಹೊರಹರಿವು ಕೂಡಾ ಇದೆ.ಮಲಪ್ರಭಾ ನದಿಗೆ 11930ಕ್ಯೂಸೆಕ್ ಒಳಹರಿವು ಇದ್ದು ಮಲಪ್ರಭೆ ಸಪ್ತ ನದಿಗಳಲ್ಲಿ ಅತ್ಯಂತ ವೇಗವಾಗಿ …

Read More »

ನಾಳೆ ಒಂದು ದಿನ ಗೃಹಲಕ್ಷ್ಮೀ ನೊಂದಣಿ ಇರೋದಿಲ್ಲ…

ತಾಂತ್ರಿಕ ನಿರ್ವಹಣೆ: ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿ ಜು.23 ರಂದು ಸ್ಥಗಿತ ಬೆಳಗಾವಿ, ಜು.22(ಕರ್ನಾಟಕ ವಾರ್ತೆ): ತಾಂತ್ರಿಕ ನಿರ್ವಹಣೆ ಕಾರಣಕ್ಕಾಗಿ ಭಾನುವಾರ(ಜು.23) ಗೃಹಲಕ್ಷ್ಮೀ ಯೋಜನೆಯ ನೋಂದಣಿ ಸೇವೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಎಲ್ಲ ನೋಂದಣಿ ಕೇಂದ್ರಗಳು ಸೋಮವಾರದಿಂದ ಯಥಾಪ್ರಕಾರ ಫಲಾನುಭವಿಗಳ ನೋಂದಣಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ. ****

Read More »

ಮಹಿಳೆಯನ್ನು ರಕ್ಷಿಸಿದ ಪೋಲೀಸ್ ಗೆ ಐದು ಸಾವಿರ ಹಾಗೂ ಸಿಎಂ ಪದಕಕ್ಕೆ ಶಿಫಾರಸು…!!

ಬೆಳಗಾವಿ- ಬೆಳಗಾವಿ ನಗರದ ಹೃದಯಭಾಗದಲ್ಲಿ ಇರುವ ಕಿಲ್ಲಾ ಕೆರೆಯಲ್ಲಿ ಸಾರ್ವಜನಿಕರ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಜೀವದ ಹಂಗ ತೊರೆದು ರಕ್ಷಿಸಿದ ಟ್ರಾಫಿಕ್ ಪೋಲೀಸ್ ಗೆ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಐದು ಸಾವಿರ ರೂ ಬಹುಮಾನ ಘೋಷಿಸಿದ್ದಾರೆ. ಐದು ಸಾವಿರ ರೂ ಬಹುಮಾನ ಘೋಷಣೆ ಮಾಡುವದರ ಜೊತೆಗೆ ರಕ್ಷಕನಿಗೆ ಮುಖ್ಯಮಂತ್ರಿಗಳ ಪದಕ ನೀಡುವಂತೆ ಶಿಫಾರಸ್ಸು ಮಾಡಲಾಗುವದು ಎಂದು ನಗರ ಪೋಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದು ಸಂಜೆ ಬೆಳಗಾವಿಯ …

Read More »

ಕೋಟೆ,ಕೆರೆಯಲ್ಲಿ ಜಿಗಿದು,ಯುವತಿಯನ್ನು ರಕ್ಷಿಸಿದ ಟ್ರಾಫಿಕ್ ಪೋಲೀಸ್…!!

ಬೆಳಗಾವಿ-ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ನೋಡಿದ ತಕ್ಷಣ ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾಶಿನಾಥ ಇರಗಾರ ಬ.ನಂ 1769 ರವರು ಒಂದು ಕ್ಷಣವೂ ಯೋಚಿಸದೇ ಕೆರೆಯಲ್ಲಿ ಜಿಗಿದು ಯುವತಿಯ ಪ್ರಾಣ ರಕ್ಷಿಸಿದ್ದಾರೆ. ಬೆಳಗಾವಿಯ ಅಶೋಕ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೋಲೀಸ್ ಕಾಶಿನಾಥ್ ಜೀವದ ಹಂಗು ತೊರೆದು ಕೆರೆಯಲ್ಲಿ ಜಿಗಿದು ಮಹಿಳೆಯನ್ನು ರಕ್ಷಣೆ ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಾರ್ವಜನಿಕ ವಲಯದಲ್ಲಿ ಇಲಾಖೆಯ ವರ್ಚಸ್ಸು …

Read More »

ಗೃಹಲಕ್ಷ್ಮೀ ಅರ್ಜಿಗೆ, ದುಡ್ಡು ಇಸ್ಕೊಂಡ್ರೆ,ಲಾಗಿನ್ ಐಡಿ ಖಲ್ಲಾಸ್….!!

ಬೆಳಗಾವಿ- ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಅರ್ಜಿದಾರರಿಂದ ಹಣ ಪಡೆದ ಗ್ರಾಮ್ ಒನ್ ಒಡೆಯನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಕ್ಕ ಪಾಠ ಕಲಿಸಿದ್ದು,ಅರ್ಜಿದಾರರಿಂದ ಹಣ ಪಡೆದ ದೂರುಗಳು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಗ್ರಾಮ್ ಒನ್ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವದು ಎಂದು ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು …

Read More »

ಬ್ರೀಟೀಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಜೈಲಿಗೆ 100 ವರ್ಷ..!!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲು ನಿರ್ಮಿಸಿ ಈ ವರ್ಷಕ್ಕೆ ಬರೊಬ್ಬರಿ ನೂರು ವರ್ಷ ಆಗಿದೆ.ಈ ಜೈಲು ನೋಡಿದ್ರೆ ಸಾಕು,ಸ್ವಾತಂತ್ರ್ಯಪೂರ್ವದ ಇತಿಹಾಸವೇ ಕಣ್ಮುಂದೆ ಬಂದಂತೆ ಆಗುತ್ತದೆ.ನೂರು ವರ್ಷ ಕಂಡಿರುವ ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲು ಸಹಸ್ರಾರು ಸಿಹಿ, ಕಹಿಗಳನ್ನೂ ಕಂಡಿದೆ. ಮೂರು ನೇಣುಗಂಬಗಳನ್ನು ಒಳಗೊಂಡಿರುವ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಶುರುವಾಗಿ ಪ್ರಸಕ್ತ ಸಾಲಿಗೆ ನೂರು ವರ್ಷಗಳಾದವು. 1923ರಲ್ಲಿ ಬ್ರಿಟಿಷರಿಂದ ಆರಂಭವಾಗಿರುವ ಇದನ್ನು ಹಿಂಡಲಗಾ ಜೈಲು ಎಂದು ಕರೆಯುವುದು ವಾಡಿಕೆ. 1162 …

Read More »

ಮೊದಲ ಕೆಡಿಪಿ ಮೀಟೀಂಗ್, ಸೋಮವಾರ ಸುವರ್ಣಸೌಧದಲ್ಲಿ.

ಬೆಳಗಾವಿ, ): 2023-24 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳು ಸೇರಿದಂತೆ) ಜೂನ್ 2023 ಮಾಹೆಯ ಅಂತ್ಯದವರೆಗಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಸೋಮವಾರ(ಜು.24) ಬೆಳಿಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರು …

Read More »

ಖಾನಾಪುರ: ಶಾಲೆಗಳಿಗೆ ಶನಿವಾರ(ಜು.22) ರಜೆ ಘೋಷಣೆ

ಬೆಳಗಾವಿ, – ಖಾನಾಪುರ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂನಾದ್ಯಂತ ಇರುವ ಪ್ರಾಥಮಿಕ-ಪ್ರೌಢಶಾಲೆಗಳಿಗೆ ಶನಿವಾರ (ಜು‌.22) ಒಂದು ದಿನ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಖಾನಾಪುರ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿರುತ್ತದೆ. ಫಾಲ್ಸ್ ಭೇಟಿಗೆ ನಿರ್ಬಂಧ: ಖಾನಾಪುರ ತಾಲ್ಲೂಕಿನ ಚಿಕಲೆ, ಪಾರವಾಡ ಹಾಗೂ ಚಿಗುಲೆ ವಾಟರ್ ಫಾಲ್ಸ್ ಗಳನ್ನು ಹೊರತುಪಡಿಸಿ …

Read More »

ನಕಲಿ ಲೇಬಲ್ ಅಂಟಿಸಿ,ಕೆಮಿಕಲ್ಸ್ ಮಿಕ್ಸ್ ಮಾಡಿದವರು,ಜೈಲಿಗೆ ಫಿಕ್ಸ್…!!

ಬೆಳಗಾವಿ- ಬೆಳಗಾವಿಯ ಸಿಸಿಬಿ ಪೋಲೀಸರು ಇವತ್ತು ಭರ್ಜರಿ ಬೇಟೆಯಾಡಿದ್ದಾರೆ.ನಗರದ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿರುವ ಸಿಸಿಬಿ ಪೋಲೀಸರು ಅಪಾರ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಸದಾಶಿವ ನಗರದ ವೀರುಪಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನಲ್ಲಿ ನಕಲಿ ಮದ್ಯ ತಯಾರಿಸುತ್ತಿದ ಘಟಕದ ಮೇಲೆ ದಾಳಿ ಮಾಡಿರುವ ಸಿಸಿಬಿ ಪೋಲೀಸರು.ಇಬ್ಬರು ಆರೋಪಿಗಳನ್ನು ಬಂಧಿಸಿ,ಸಯಮಾರು ನಾಲ್ಕು ಲಕ್ಷ ರೂ ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಕಾನೂನು ಬಾಹಿರವಾಗಿ,ಆಕ್ರಮವಾಗಿ ಮದ್ಯತಯಾರಿಸುತ್ತಿದ್ದ ಬೆಳಗಾವಿ ಉಜ್ವಲ ನಗರದ,22ವರ್ಷದ ಹಸನ್ ಜಾವೇದ್ …

Read More »

ರಸ್ತೆ ಗುಂಡಿ ಮುಚ್ವುವಂತೆ ಪಟ್ಟಣ ಪಂಚಾಯ್ತಿಗೆ ಪತ್ರ ಬರೆದ ಪೋಲೀಸರು.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮಳೆ ಖಾನಾಪೂರ ತಾಲ್ಲೂಕಿನಲ್ಲಿ ಸುರೀತಾ ಇದೆ.ವಿಪರೀತ ಮಳೆಯಿಂದಾಗಿ ಖಾನಾಪೂರ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ.ಇಲ್ಲಿಯ ರಸ್ತೆಗಳಲ್ಲಿ ಈಗ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಖಾನಾಪೂರ ಪಟ್ಟಣದ ರುಮೇವಾಡಿ ಕ್ರಾಸ್ ಹತ್ತಿರದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ದಿನನಿತ್ಯ ರಸ್ತೆ ಅಪಘಾತಗಳು ಸಂಭವಿಸಿ ವಿಶೇಷವಾಗಿ ಬೈಕ್ ಸವಾರರು ತೊಂದರೆ ಅನುಭವಿಸುತ್ತಿರುವದನ್ನು ಗಮನಿಸಿದ ಖಾನಾಪೂರ ಪೋಲೀಸರು,ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ವುವಂತೆ ಖಾನಾಪೂರ ಪಟ್ಟಣ ಪಂಚಾಯ್ತಿಯ ಚೀಪ್ ಆಫೀಸರ್ …

Read More »