ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಭಾಷಾವೈಷಮ್ಯದ ವಿಷಬೀಜ ಬಿತ್ತಿ,ರಾಜಕೀಯ ಮಾಡುತ್ತ ಬಂದಿರುವ ನಾಡದ್ರೋಹಿ ಎಂಇಎಸ್ ಈಗ ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದೆ. ಒಂದುಕಡೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಸಿದ್ಧತೆ ನಡೆಸಿದ್ರೆ ಇನ್ನೊಂದು ಕಡೆ ಎಂಇಎಸ್ ಕಿರಿಕ್ ಶುರುವಾಗಿದೆ.ಅಧಿವೇಶನಕ್ಕೆ ಪ್ರತಿಯಾಗಿ ಮರಾಠಿ ಮಹಾಮೇಳಾವ್ ನಡೆಸಲು ನಿರ್ಧರಿಸಿರುವ ಎಂಇಎಸ್ ನಾಯಕರು ಅದಕ್ಕಾಗಿ ಖಾನಾಪೂರ ಮತ್ತು ಬೆಳಗಾವಿಯಲ್ಲಿ ಸಮೀತಿಗಳನ್ನು ರಚಿಸಿ ಮೇಳಾವ್ ನಡೆಸುವದಾಗಿ …
Read More »ವಿಕಲಚೇತನರ ಅಹವಾಲು ಆಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್…
ಬೆಳಗಾವಿ- ನಿನ್ನೆಯ ದಿನ ಮಂಗಳವಾರ ಸಂಜೆಬೆಳಗಾವಿಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ವಿಕಲಚೇತನರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಧರಣಿ ಕುಳಿತಿದ್ದ ನವ ಕರ್ನಾಟಕ ಎಮ್ ಆರ್ ಡಬ್ಲ್ಯೂ/ವಿ ಆರ್ ಡಬ್ಲ್ಯೂ/ಯು ಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭೇಟಿ ಮಾಡಿ, ಅವರ ಬೇಡಿಕೆಗಳ ಮಾಹಿತಿಯನ್ನು ಪಡೆದು,ವಿಕಲಚೇತನರ ಅಹಾಲು ಸ್ವೀಕಾರ ಮಾಡಿದ್ರು. ರಾಜ್ಯದ 6860 ಜನ ಎಮ್ ಆರ್ ಡಬ್ಲ್ಯೂ/ವಿ ಆರ್ ಡಬ್ಲ್ಯೂ/ಯು …
Read More »ಬೆಳಗಾವಿಯಲ್ಲಿ ಪ್ರತಿಭಟನೆಗಳನ್ನು ಕಂಟ್ರೋಲ್ ಮಾಡಲು ಸಲಹೆ…
ಬೆಳಗಾವಿ ಅಧಿವೇಶನ: ಪ್ರತಿಭಟನೆಗಳ ಇಳಿಮುಖಕ್ಕೆ ಮುಖ್ಯಮಂತ್ರಿಗೆ, ಸಭಾಪತಿ ಬಸವರಾಜ ಹೊರಟ್ಟಿ ಸಲಹಾ ಪತ್ರ ಬೆಂಗಳೂರು, – ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4, 2023 ರಿಂದ ಡಿಸೆಂಬರ್ 15ರ ವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನವನ್ನು ರಾಜ್ಯ ಸರ್ಕಾರ ನಡೆಸಲು ನಿರ್ಧರಿಸಿರುವ ಹಿನ್ನೆಲೆ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ …
Read More »ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ……!!
ಬೆಳಗಾವಿ- ರಾಜ್ಯರಾಜಕಾರಣದಲ್ಲಿ ಏನು ನಡೆಯುತ್ತಿದೆ ? ಯಾರಿಗೂ ಅರ್ಥವಾಗದ ಗೊಂದಲದ ಘಳಿಗೆಯಲ್ಲಿ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದ ಕನ್ನಡದ ಜಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಣ್ಯ ವ್ಯಕ್ತಿಯೊಬ್ಬರು ಮಹತ್ವದ ಸುಳಿವು ಕೊಟ್ಟಿದ್ದಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವದು ಎಷ್ಟು ಸತ್ಯವೋ ಮಾಸ್ಟರ್ ಮೈಂಡ್, ಸತೀಶ್ ಜಾರಕಿಹೊಳಿ ಅವರು ಮುಂದಿನ ಸಿಎಂ ಆಗುವದು ಅಷ್ಟೇ ಸತ್ಯ. ಎಂದು ಹೇಳಿದವರು ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ,ಸತೀಶ್ ಜಾರಕಿಹೊಳಿ ಪರಮಾಪ್ತ ವಿಶ್ವಾಸ್ ವೈದ್ಯ ಅವರು ಹೇಳಿದ …
Read More »ಸುವರ್ಣಸೌಧದ ಅಂಗಳದಲ್ಲಿ ಹೆಬ್ಬಾವು ಪ್ರತ್ಯಕ್ಷ….!!
ಬೆಳಗಾವಿ- ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅದಕ್ಕಾಗಿ ಸೌಧದಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಸುವರ್ಣಸೌಧದ ಅಂಗಳದಲ್ಲಿ ಉದ್ಯಾನವನದ ಸುತ್ತಮುತ್ತಲು ಸ್ವಚ್ಛತಾ ಕಾಮಗಾರಿಯೂ ಭರದಿಂದ ಸಾಗಿದ್ದು ಇಂದು ಮಧ್ಯಾಹ್ನದ ಹೊತ್ತಿಗೆ ಒಂದಲ್ಲ ಎರಡಲ್ಲ,ಮೂರ್ನಾಲ್ಕು ಹೆಬ್ಬಾವುಗಳು ಹುತ್ತದಿಂದ ಹೊರಬಂದಿವೆ. ಸುವರ್ಣಸೌಧಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಟರ್ನ ತೆಗೆದುಕೊಳ್ಳುವ ಸ್ಥಳದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಜನರ ಕೂಗಾಟ ಕೇಳಿ ಹೆಬ್ಬಾವುಗಳು ಪಕ್ಕದ ಗಿಡಗಂಟೆಗಳಲ್ಲಿ ಮಾಯವಾಗಿವೆ. ಅಧಿವೇಶನಕ್ಕೆ ಮುನ್ನ …
Read More »ಬೆಳಗಾವಿ ಪೋಲೀಸ್ ಕಮಿಷ್ನರ್ ಕಚೇರಿಯಲ್ಲಿ ಹೋಮ್ ಮಿನಿಸ್ಟರ್ ಪರಮೇಶ್ವರ್…
ಸುಳ್ಳುಸುದ್ದಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಗೃಹಸಚಿವ ಪರಮೇಶ್ವರ್ ಸೂಚನೆ ಬೆಳಗಾವಿ: ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಸುಳ್ಳುಸುದ್ದಿಗಳು, ಪ್ರಚೋದನಾಕಾರಿ ಹೇಳಿಕೆ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವುದು ಕಂಡುಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಪೊಲೀಸ್ ಆಯುಕ್ತಾಲಯಕ್ಕೆ ಸೋಮವಾರ(ನ.20) ಭೇಟಿ ನೀಡಿದ ಅವರು, ಸಾಮಾಜಿಕ ಜಾಲತಾಣ ನಿಗಾ ಘಟಕ, ನಿಯಂತ್ರಣ ಕೊಠಡಿಗಳನ್ನು ಖುದ್ದಾಗಿ ವೀಕ್ಷಿಸಿ ಸಲಹೆ-ಸೂಚನೆಗಳನ್ನು ನೀಡಿದರು. …
Read More »ಟೀಂ ಇಂಡಿಯಾಗೆ ಶುಭ ಕೋರಿದ , ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ಗುಜರಾತ್ ನ ಅಹ್ಮದಾಬಾದ್ ನಲ್ಲಿಂದು ನಡೆಯುವ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಕ್ರಿಕೆಟ್ ಪ್ರೇಮಿಯೂ ಆಗಿರುವ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದಿನ ಭಾನುವಾರದ ಹೈ ವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಆಡಿರುವ ಎಲ್ಲ ೧೦ ಪಂದ್ಯಗಳನ್ನು ಗೆದ್ದು ಅಜೇಯ ವಾಗಿರುವ ನಮ್ಮ ಟೀಂ ಇಂಡಿಯಾ ೧೩ನೇ ಆವೃತ್ತಿಯ ವಿಶ್ವಕಪ್ ಟ್ರೋಫಿ …
Read More »ಚಲಿಸುತ್ತಿದ್ದ ಬಸ್ ಗೆ ಆಕಸ್ಮಿಕ ಬೆಂಕಿ: ಹೊತ್ತಿ ಉರಿಸ ಬಸ್..
ಬೆಳಗಾವಿ: ಆಕಸ್ಮಿಕ ಬೆಂಕಿ ತಗುಲಿ ನಡು ರಸ್ತೆಯಲ್ಲೇ ಸಾರಿಗೆ ಬಸ್ ಹೊತ್ತಿ ಉರಿದಿರುವ ಘಟನೆ ಬೆಳಗಾವಿ ಜಿಲ್ಲೆಯಹು ಕ್ಕೇರಿ ತಾಲೂಕಿನ ನರಸಿಂಗಪೂರ ಬಳಿ ಘಟನೆ ನಡೆದಿದೆ. ಬಸ್ ಗೆ ಬೆಂಕಿ ತಗಲುತ್ತಿದ್ದಂತೆಯೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಬರಿಯಿಂದ ಕೆಳಗಿಳಿದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಪಾಯ ಸಂಭವಿಸಿಲ್ಲ. ಯಮಕನಮರಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ
Read More »ಬೆಳಗಾವಿಯಲ್ಲಿ ಏಕಾಏಕಿ ಸಿಬಿಐ ದಾಳಿ….!!
ಬೆಳಗಾವಿ ದಂಡು ಮಂಡಳಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ವಾಸನೆ; ಸಿಬಿಐ ಅಧಿಕಾರಿಗಳ ಏಕಾಏಕಿ ದಾಳಿ..! ಬೆಳಗಾವಿ: ಬೆಳಗಾವಿ ದಂಡು ಮಂಡಳಿಯ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮದ ವಾಸನೆ ಆರೋಪ ಹಿನ್ನೆಲೆ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳ ಏಕಾಏಕಿ ದಾಳಿ ನಡೆಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ದಂಡು ಮಂಡಳಿ ಕಚೇರಿಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು ದಂಡು ಮಂಡಳಿ ಸಿಇಒ ಕೆ. ಆನಂದ ಸೇರಿ ಹಿರಿಯ ಅಧಿಕಾರಿಗಳ …
Read More »ಬೆಳಗಾವಿಯಲ್ಲಿ ಹಾಲಿನ ವಾಹನ ಪಲ್ಟಿ ಇಬ್ಬರಿಗೆ ಗಾಯ
ಬೆಳಗಾವಿ- ಕಾಂಗ್ರೆಸ್ ರಸ್ತೆ ಮಿಲಿಟರಿ ಮಹಾದೇವ ಎದುರಿಗೆ. ಹಾಲಿನ ವಾಹನ ತೀರ ಚಲಾವಣೆಯೇ ಅಪಘಾತಕ್ಕೆ ಕಾರಣ. ವಾಹನ ಖಾನಾಪೂರ ಮಾರ್ಗವಾಗಿ ತೆರಳುವಾಗ ಎದುರಿಗಿದ್ದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ವೇಗ ನಿಯಂತ್ರಣ ಸಾಧ್ಯವಾಗದೇ ರಸ್ತೆ ಮಧ್ಯ ಪಲ್ಟಿ ಆಗಿದೆ. ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಗೆ ಹಾಗು ಮಗುವಿಗೆ ತೀವ್ರಗಾಯಗಳಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿದ ಟ್ರಾಫಿಕ್ ಪೋಲಿಸ್ ರು ಸ್ಥಳಕ್ಕೆ ಆಗಮಿಸಿ ವಾಹನ ತೆರವುಗೊಳಿಸಿ ಸಂಚಾರಕ್ಕೆ …
Read More »