Breaking News

Breaking News

ಬೆಳಗಾವಿ ಕರವೇ ಸಂಘಟನೆಯಲ್ಲಿ ಮೇಜರ್ ಸರ್ಜರಿ……!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ್ರ ಬಣ) ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಡು ಬಲಿಷ್ಠ ಗೊಳಿಸಲು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮೇಜರ್ ಸರ್ಜರಿ ಮಾಡಿದ್ದು ಹೊಸ ಪದಾಧಿಕಾರಿಗಳನ್ನು ನೇಮಿಸಿ ಸಂಘಟನೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವು ಕರವೇ ತಾಲ್ಲೂಕು ಅಧ್ಯಕ್ಷರನ್ನು ಬದಲಾಯಿಸಿ ನೂತನ ಅಧ್ಯಕ್ಷರನ್ನು ನೇಮಿಸಿದ್ದು,ತಾಲ್ಲೂಕುಗಳಲ್ಲಿ ಕ್ರಿಯಾಶೀಲ ರಾಗಿರುವ ಕೆಲವು ಜನ ಹೋರಾಟಗಾರರಿಗೆ ಬೆಳಗಾವಿ ಜಿಲ್ಲಾ ಸಮೀತಿಯಲ್ಲಿ ಸ್ಥಾನ ನೀಡುವ ಮೂಲಕ …

Read More »

ಗೋಕಾಕ್ ಲಕ್ಷ್ಮೀ ದೇವಿ ಜಾತ್ರೆಗೆ ಮುಹೂರ್ತ ಫಿಕ್ಸ್….

ಗೋಕಾಕ : ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಉಭಯ ಮಹಾಲಕ್ಷ್ಮೀ ದೇವಸ್ಥಾನಗಳನ್ನು ನವೀಕೃತಗೊಳಿಸಿ 2025 ರಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಡೀ ಜಿಲ್ಲೆಯೇ ಕಣ್ತುಂಬಿ ನೋಡುವಂತಹ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಮಹಾಲಕ್ಷ್ಮೀದೇವಿ ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಶನಿವಾರ ಸಂಜೆ ಇಲ್ಲಿಯ ಮಹಾಲಕ್ಷ್ಮೀ ಸಭಾ ಭವನದಲ್ಲಿ ಆಯೋಜನೆಗೊಂಡಿದ್ದ ಮಹಾಲಕ್ಷ್ಮೀ ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, …

Read More »

ಬೆಳಗಾವಿಯ ಹಿಂಡಲಗಾ ಜೈಲು ಸ್ಪೋಟಿಸುವ ಬೆದರಿಕೆ….!!

ಬೆಳಗಾವಿ- ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲಿಗೆ ಅನಾಮಧೇಯ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ, ಬೆಂಗಳೂರಿನ ಕಾರಾಗೃಹ ಹಿಂಡಲಗಾ ಕಾರಾಗೃಹ ಸ್ಪೋಟಿಸುವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಬಂದೀಖಾನೆ ಉತ್ತರ ವಲಯದ ಡಿಐಜಿಪಿ ಟಿ ಪಿ ಶೇಷ ಅವರಿಗೆ ಈ ಫೋನ್ ಕರೆ ಬಂದಿದ್ದು ಅವರು ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಬೆಂಗಳೂರು ಕಾರಾಗೃಹ, ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಸ್ಪೋಟಿಸುವ ಬೆದರಿಕೆ ಬಂದಿದೆ.ಬಂದಿಖಾನೆ ಇಲಾಖೆಯ ಉತ್ತರ …

Read More »

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯದ ಕೂಗಿಗೆ ಜಗದ್ಗುರುಗಳ ಸಮರ್ಥನೆ…

ಬೆಳಗಾವಿ- ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಶಾಮನೂರು ಆರೋಪದ ವಿಚಾರವನ್ಬು ಶ್ರೀಶೈಲ ಪೀಠದ ಜಗದ್ಗುರುಗಳು ಬೆಳಗಾವಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಶ್ರೀಶೈಲಪೀಠದ ಡಾ. ಚನ್ನಸಿದ್ದರಾಮ ಪಂಡಿರಾತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮಾದ್ಯಮಗಳ ಜೊತೆ ಮಾತನಾಡಿದ್ರು.ಶಾಮನೂರು ಶಿವಶಂಕರಪ್ಪನರು ಹೇಳಿರುವ ಹೇಳಿಕೆ ಸತ್ಯಕ್ಕೆ ದೂರವಾಗಿಲ್ಲ.ಯಾವ ಮಟ್ಟದಲ್ಲಿ ನಮ್ಮ ಸಮಾಜದ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನಗಳು ಸಿಗಬೇಕಿತ್ತು ಆ ಮಟ್ಟದಲ್ಲಿ ಸಿಗ್ತಿಲ್ಲ.ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ಶ್ರೀಗಳು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದ, ಸರ್ಕಾರ …

Read More »

ಬೆಳಗಾವಿಯಲ್ಲಿ ವೆದರ್ ರಾಡಾರ್ ಅಳವಡಿಸಿಲು ಕೇಂದ್ರಕ್ಕೆ ಲೆಟರ್..

ಬೆಳಗಾವಿ: ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿರುವ ಕರ್ನಾಟಕದಲ್ಲಿ ನಿಖರವಾದ ಹವಾಮಾನ ಮುನ್ಸೂಚನೆ ನೀಡುವ ಡಾಪ್ಲರ್ ವೆದರ್ ರಾಡಾರ್ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕಾಗಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರೀಜಿಜು ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ನೀಡಿ ಒತ್ತಾಯಿಸಿದರು. ನಮ್ಮ ರಾಜ್ಯದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿ, ನಮ್ಮದೇ ಆದ ಡಾಪ್ಲರ್ ವೆದರ್ ರಾಡಾರ್ ಕೇಂದ್ರ ಸ್ಥಾಪನೆ …

Read More »

ಬೆಳಗಾವಿ ಪಾಲಿಕೆಯಲ್ಲಿ ನಡೆದ 138 ಗೋಲ್ ಮಾಲ್ ತನಿಖೆಗೆ ಸಮೀತಿ…

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿರುವ 138 ಪೌರ ಕಾರ್ಮಿಕರ ಹೊರಗುತ್ತಿಗೆ ನೇಮಕಾತಿ ಗೋಲ್ ಮಾಲ್ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿತು. ಪಾಲಿಕೆ ಸಭೆಯಲ್ಲಿ ನಗರ ಸೇವಕ ರವಿ ಸಾಳುಂಕೆ ಅವರು 138 ಪೌರಕಾರ್ಮಿಕರ ನೇಮಕಾತಿ ಪ್ರಶ್ನಿಸಿ ಮಂಡಿಸಿದ ಗಮನಸೆಳೆಯುವ ಸೂಚನೆಯ ಮೇರೆಗೆ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಯಿತು. 138 ಪೌರ ಕಾರ್ಮಿಕರು ಗುತ್ತಿಗೆದಾರರ ಹತ್ತಿರ ಸ್ವಚ್ಛತಾ ಕಾಮಗಾರಿ ನಡೆಸಿದ್ದಾರೆ. ಇವರ ನೇಮಕಾತಿ …

Read More »

ತೂಕ ವಂಚನೆ ಕಂಡುಬಂದರೆ ಕಾನೂನು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ.

ಬೆಳಗಾವಿ, – ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ನವೆಂಬರ್ 1 ರ ಬಳಿಕವೇ ಆರಂಭಿಸಬೇಕು; ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ (ಎಫ್.ಆರ್.ಪಿ.) ದರಗಳನ್ನು ಆಯಾ ಕಾರ್ಖಾನೆಯ ನೋಟಿಸ್ ಬೋರ್ಡಿಗೆ ಕಡ್ಡಾಯವಾಗಿ ಅಳವಡಿಸಬೇಕು ಮತ್ತು ತೂಕದಲ್ಲಿ ಮೋಸ ಕಂಡುಬಂದರೆ ಕಾರ್ಖಾನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. 2023-24 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು …

Read More »

ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ..

ಬೆಳಗಾವಿ-ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ಮತ್ತು ಬಿಜೆಪಿ ನಾಯಕರುಗಳು ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ರಾವಣನಿಗೆ ಹೋಲಿಕೆ ಮಾಡಿ ಪೋಸ್ಟರ್ ಬಿಡುಗಡೆ ಮಾಡಿರುವದನ್ನು ಖಂಡಿಸಿ ಇಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆ ಮೇರೆಗೆ *ಬಿಜೆಪಿಯವರ ಈ ನಡೆಯನ್ನು ಖಂಡಿಸಿ ಇಂದು ಶನಿವಾರ ಮದ್ಯಾಹ್ನ 12-00 ಗಂಟೆಗೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ …

Read More »

ಕೇಂದ್ರ ತಂಡದ ಎದುರು ವಿಷದ ಬಾಟಲ ಹಿಡಿದು ಬಂದ ರೈತ…

ಬೆಳಗಾವಿ- ಕೇಂದ್ರದಿಂದ ಬೆಳಗಾವಿ ಜಿಲ್ಲೆಗೆ ಬರ ಅಧ್ಯಯನಕ್ಕೆ ಬಂದ ಅಧಿಕಾರಿಯಳ ಮುಂದೆ ವಿಷದ ಬಾಟಲ ಹಿಡಿದು ಬಂದ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರೈತ ಅಪ್ಪಾಸಾಹೇಬ್ ಲಕ್ಕುಂಡಿ ಎಂಬಾತ ಅಧಿಕಾರಿಗಳ ಎದುರು ವಿಷದ ಬಾಟಲ್ ಪ್ರದರ್ಶನ ಮಾಡಿ,ಅಧಿಕಾರಿಗಳ ಸಮ್ಮುಖದಲ್ಲಿಯೇ ವಿಷ ಸೇವನೆಗೆ ಮುಂದಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಕುಲಕುಪ್ಪಿ ಬಳಿ ಗದ್ದೆಗೆ ಬಿಷದ ಬಾಟಲ್ ಹಿಡಿದು ಬಂದ ರೈತ, ೪೦ ಎಕರೆ ಪ್ರದೇಶದಲ್ಲಿ ಬೆಳೆ ಬೆಳದು ಬೆಳೆ …

Read More »

ಇಂದಿರಾ ಕ್ಯಾಂಟೀನ್ ನಲ್ಲಿ ಸಚಿವರ ಊಟ..

ಬೆಳಗಾವಿ-ನಗರಾಭಿವೃದ್ಧಿ ಸಚಿವರಾದ ಬಿ‌.ಎಸ್.ಸುರೇಶ್ ಹಾಗೂ ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರು ಇಂದು ಶುಕ್ರವಾರ(ಅ.6) ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಜಿಪಂ ಹಳೆಯ ಕಚೇರಿ ಬಳಿಯ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 1.30 ರ ಸುಮಾರಿಗೆ ನಗರದ ಸಿವಿಲ್‌ ಆಸ್ಪತ್ರೆ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಚಿವರು ಊಟ ಮಾಡಲಿದ್ದಾರೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Read More »