ಬೆಳಗಾವಿ-ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ,ಇಂದು ಬೆಳಗ್ಗೆ ಬೆಳಗಾವಿಗೆ ಆಗಮಿಸಿರುವ ಲಕ್ಷ್ಮಣ ಸವದಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟೊದ್ದಾರೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸವದಿ ಕುರಿತು ಪೀಡೆ ತೊಳಗಿತು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ,ಅವರ ದೃಷ್ಟಿಯಲ್ಲಿ ಪೀಡೆ ಅಂತಾ ಇರಬಹುದುಆ ಬೆಳವು ಹೊಕ್ಕ ಮನೆ ಅಳಿವಾಗುತ್ತಿದೆ(ಹಾಳಾಗುತ್ತಿದೆ),ಪಕ್ಷದಲ್ಲಿ ಬೆಳವು ಹೊಕ್ಕಿದೆ ಅಂತಾನೇ ನಾನು ಆ ಮನೆಯಿಂದ ಹೊರ ಬಂದಿದ್ದೇನೆ,ರಮೇಶ್ ಜಾರಕಿಹೊಳಿಗೆ ಬೆಳವು ಎಂದು ಸಂಬೋಧಿಸಿ ನೇರಾನೇರ ಟಕ್ಕರ್ …
Read More »ಬೆಳಗಾವಿ:ಸಾಂಬ್ರಾ ಏರ್ ಪೋರ್ಟಿನಲ್ಲಿ ಸಿದ್ದರಾಮಯ್ಯ ಲಕ್ಷ್ಮಣ ಸವದಿ ಮುಖಾಮುಖಿ
ಬೆಳಗಾವಿ-ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಲಕ್ಷ್ಮಣ ಸವದಿ ಮುಖಾಮುಖಿಯಾದ್ರು.ಕೆಲ ಹೊತ್ತು ಮಾತುಕತೆ ನಡೆಸಿದಮಾಜಿ ಸಿಎಂ ಸಿದ್ದರಾಮಯ್ಯ- ಲಕ್ಷ್ಮಣ ಸವದಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದು ವಿಶೇಷ. ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹಳಿಯಾಳಕ್ಕೆ ತೆರಳುತ್ತಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸೇರ್ಪಡೆ ಬಳಿಕ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಲಕ್ಷ್ಮಣ ಸವದಿ ಇಬ್ಬರೂ ಏರ್ ಪೋರ್ಟಿನಲ್ಲಿ ಭೇಟಿಯಾದ್ರು. ಈ ವೇಳೆ ಕೆಲಹೊತ್ತು ಉಭಯ ನಾಯಕರ ಮಧ್ಯೆ ಚುನಾವಣೆ ತಂತ್ರಗಳ …
Read More »ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಎಷ್ಟು ಕೋಟಿ ಹಣ ಸೀಜ್ ಆಗಿದೆ ಗೊತ್ತಾ??
ವಿಧಾನಸಭೆ ಚುನಾವಣಾ ವೆಚ್ಚ ವೀಕ್ಷಕರ ಸಭೆ ———————————————————- ಚುನಾವಣಾ ಅಕ್ರಮಗಳ ಮೇಲೆ ಹದ್ದಿನಕಣ್ಣು; “ನ್ಯಾಯಸಮ್ಮತ ಚುನಾವಣೆ-ನಮ್ಮ ಜವಾಬ್ದಾರಿ” ಬೆಳಗಾವಿ, ಏ.15(ಕರ್ನಾಟಕ ವಾರ್ತೆ): ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಗೆ ನಿಯೋಜಿತಗೊಂಡಿರುವ ಎಲ್ಲ 18 ಮತಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸುವರ್ಣ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶನಿವಾರ (ಏ.15) ಸಭೆ ನಡೆಯಿತು. ಬೆಳಗಾವಿ ಗ್ರಾಮೀಣ …
Read More »ಸಾಹುಕಾರ್ ಆಟ,ಇಂದಿನಿಂದ ಬಿಜೆಪಿಗೆ ಸವದಿ ಕಾಟ! ಮತದಾರರು ಯಾರಿಗೆ ಕಲೀಸ್ತಾರೆ ಪಾಠ!!
ಸವದಿ ಕಾಂಗ್ರೆಸ್ಸಿಗೆ ಹೋದ್ಮೇಲೆ, ಬಿಜೆಪಿಯಲ್ಲಿ ಹೆಚ್ಚಿದ ಸಾಹುಕಾರ್ ಜವಾಬ್ದಾರಿ!! ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಿರಿಯ ನಾಯಕರಾದ ಉಮೇಶ್ ಕತ್ತಿ,ಸುರೇಶ್ ಅಂಗಡಿ ಅವರು ಅಗಲಿದ ಬಳಿಕ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ ಮತ್ತು ಈರಣ್ಣಾ ಕಡಾಡಿ ಅವರು ಬೆಳಗಾವಿ ಜಿಲ್ಲೆಯ ಬಿಜೆಪಿಯ ಜವಾಬ್ದಾರಿ ನಿಭಾಯಿಸುತ್ತ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಲಕ್ಷ್ಮಣ ಸವದಿ ಕಾಂಗ್ರೆಸ್ ಗರಡಿ ಸೇರಿಕೊಂಡಿದ್ದಾರೆ.ಇವತ್ತು ಅಥಣಿ ಕ್ಷೇತ್ರದ ಕಾಂಗ್ರೆದ್ ಬಿ ಫಾರ್ಮ್ ಸಮೇತ ಅವರು ಬೆಂಗಳೂರಿನಿಂದ …
Read More »ಅಥಣಿಯಿಂದ ಲಕ್ಷ್ಮಣ. ಸವದಿಗೆ ಕಾಂಗ್ರೆಸ್ ಟಿಕೆಟ್- ಸಿದ್ರಾಮಯ್ಯ
ಬೆಳಗಾವಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಿರಿಯ ನಾಯಕರಾಗಿದ್ದು, ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸವದಿ ಅವರು ಯಾವುದೇ ಷರತ್ತಿಲ್ಲದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದ್ದಾರೆ. ಸವದಿ ಬಳಿ ನಾವು ಬೇರೆ ಯಾರ …
Read More »ಬೆಳಗಾವಿ: ಧೂಪದಾಳ ಜಲಾಶಯದಲ್ಲಿ ನಾಲ್ವರು ಯುವಕರ ಜಲಸಮಾಧಿ!
ಬೆಳಗಾವಿ ಪ್ರವಾಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಸಿರಿಗೇರೆ ಗ್ರಾಮದ ಯುವಕರು ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಒಬ್ಬನನ್ನು ರಕ್ಷಿಸಲು ಹೋಗಿ ಇನ್ನೊಬ್ಬ …
Read More »ಯಾರ ಹೆಗಲಿಗೆ ಯಾರು “ಕೈ” ಹಾಕಿದ್ರು ! ಇದು ಇವತ್ತಿನ ಪಾಲಿಟೀಕ್ಸ್ ಸೀನ್!!
ಬೆಳಗಾವಿ-ಸಮಾನತೆಯ ಸಂದೇಶ ಸಾರಿ, ವಿಶ್ವರತ್ನ ಎಂದೇ ಖ್ಯಾತಿ ಪಡೆದಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ದಿನ ಬೆಳಗಾವಿಯಲ್ಲಿ ಸಮಾನತೆಯ ಸಂದೇಶ ಸಾರುವ ಅಪರೂಪದ ಪ್ರಸಂಗ ನಡೆಯಿತು. ಬೆಳಗಾವಿಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಇವತ್ತು ಬೆಳಗ್ಗೆ ಯಿಂದ ಗಣ್ಯಾತಿ ಗಣ್ಯರು ಆಗಮಿಸಿ ಬಾಬಾಸಾಹೇಬರಿಗೆ ಗೌರವ ಸಮರ್ಪಿಸುವ ಕಾರ್ಯ ನಡೆದಿತ್ತು.ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರೂ ಸಹ ಇಲ್ಲಿಗೆ ಆಗಮಿಸಿದ್ದರು. ಅನೀಲ ಬೆನಕೆ ಬಾಬಾಸಾಹೇಬರಿಗೆ ಗೌರವ …
Read More »ಬೆಂಗಳೂರಿಗೆ ಹಾರುವ ಮೊದಲು ಲಕ್ಷ್ಮಣ ಸವದಿ ಹೇಳಿದ್ದೇನು ಗೊತ್ತಾ??
ಬೆಳಗಾವಿ-ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ ಪರಾಭವಗೊಂಡು ರಾತ್ರಿ ಗಾಢ ನಿದ್ರೆಯಲ್ಲಿರುವಾಗ ಮದ್ಯರಾತ್ರಿ ಅವರನ್ಬು ಎಬ್ಬಿಸಿ ಬೆಂಗಳೂರಿಗೆ ಕರೆಯಿಸಿಕೊಂಡು ಅವರನ್ನು ಡಿಸಿಎಂ ಮಾಡಿದ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಲು ಇದೇ ಲಕ್ಷ್ಮಣ ಸವದಿ ಅವರು ಇವತ್ತು ಬೆಳ್ಳಂ ಬೆಳಗ್ಗೆ,ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಕಳುಹಿಸಿದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಾರಿದ್ರು. ಬೆಂಗಳೂರಿಗೆ ಹಾರುವ ಮುನ್ನ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ …
Read More »ಸಂದಾನಕ್ಕೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ ನೇರ್ಲಿಯನ್ನು ಎಳೆದಾಡಿದ ಸವದಿ ಬೆಂಬಲಿಗರು!!
ಬೆಳಗಾವಿ- ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ನೇರ್ಲಿ ಹಾಗೂ ಕೆಲವು ಜನ ಆರ್ ಎಸ್ ಎಸ್ ಮುಖಂಡರು ಇಂದು ಬೆಳಗ್ಗೆ ಲಕ್ಷ್ಮಣ ಸವದಿ ಅವರ ಸಂಧಾನಕ್ಕೆ ಆಗಮಿಸಿದ್ದರು.ಬಿಜೆಪಿ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಳ್ಳಲು ಆಗಮಿಸಿದ ಬಿಜೆಪಿ ಸಂಧಾನಕಾರರನ್ನು ಸವದಿ ಬೆಂಬಲಿಗರು ತರಾಟೆಗೆ ತೆಗೆದುಕೊಂಡು ಎಳೆದಾಡಿದ ಘಟನೆ ಲಕ್ಷ್ಮಣ ಸವದಿ ಅವರ ಮನೆಯ ಅಂಗಳದಲ್ಲೇ ನಡೆದಿದೆ. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೇರ್ಲಿ,ಹಾಗೂ ಉಳಿದ ಸಂಧಾನಕಾರರನ್ನು ಲಕ್ಷ್ಮಣ ಸವದಿ …
Read More »ಗೋಕಾಕ್ ಕ್ಷೇತ್ರದಲ್ಲಿ ದಾಖಲೆ ಇಲ್ಲದ ಐದು ಕೋಟಿ ವಶ!!
ಬೆಳಗಾವಿ-ಗೋಕಾಕ ಮತಕ್ಷೇತ್ರದ ವ್ಯಾಪ್ತಿಯ ಯದ್ದಲಗುಡ್ಡ ಚೆಕ್ ಪೋಸ್ಟ್ ನಲ್ಲಿ ಐದು ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕಿನ ಸಿಬ್ಬಂದಿ ದಾಖಲೆ ಇಲ್ಲದ ಐದು ಕೋಟಿ ರೂ ಗಳನ್ನು ಬ್ಯಾಂಕಿನ ವಾಹನದಲ್ಲೇ ಸಾಗಾಣಿಕೆ ಮಾಡುವಾಗ ಯದ್ದಲಗುಡ್ಡ ಚೆಕ್ಕ್ ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡಿದಾದ ನೋಟಿನ ಬಂಡಲ್ ಗಳು ಪತ್ತೆಯಾಗಿದ್ದು ಈ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಪೋಲೀಸರು ಹಣವನ್ನು ವಶವಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
Read More »