ಸರ್ವ ಜನಾಂಗದ ಶ್ರೇಯೋಭಿವೃದ್ಧಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಕುಲಗೋಡದಲ್ಲಿ ಭಜಂತ್ರಿ ಮತ್ತು ವಡ್ಡರ ಸಮಾಜಗಳ ಸಭಾ ಭವನಗಳನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ *ಕುಲಗೋಡ,* ತಾ:ಮೂಡಲಗಿ : ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪ್ರಸಿದ್ಧ ಬಲಭೀಮ ದೇವಸ್ಥಾನದ ದರ್ಶನ ಪಡೆದು ಮಾತನಾಡಿದ ಅವರು, ಎಲ್ಲ ಧರ್ಮ ಮತ್ತು ಜಾತಿಗಳನ್ನು …
Read More »ಈ ಅಧಿಕಾರಿಯ ಮಾನವೀಯ ಕಾರ್ಯವನ್ನು ಮೆಚ್ಚಲೇ ಬೇಕು…!!
ಬೈಕ್ ಅಪಘಾತ: ಗಾಯಾಳುವಿನ ಪ್ರಾಣರಕ್ಷಣೆಗೆ ಧಾವಿಸಿದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಬೆಳಗಾವಿ)-ಯಕ್ಸಂಬಾ-ರಾಯಬಾಗ ರಸ್ತೆ ಮಧ್ಯೆ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸೇರಿಸಿ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಕಬ್ಬು ಕಟಾವು ಕಾರ್ಮಿಕರಾಗಿದ್ದ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಮೂಲದ ದತ್ತಾ ಎಂಬುವರು ಬೈಕ್ ನಲ್ಲಿ ತೆರಳುವಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ತೀವ್ರ …
Read More »ಬಸ್ಸಿಗೆ ಬೆಂಕಿ, ಚಾಲಕನ ಸಮಯಪ್ರಜ್ಞೆ ತಪ್ಪಿದ ಅನಾಹುತ…!!
ಬೆಳಗಾವಿ – ಸಂಕೇಶ್ವರ ಹತ್ತಿರದ ಟೋಲ್ ಬಳಿ ಬಸ್ಸಿಗೆ ಬೆಂಕಿ ತಗಲಿ ಬಸ್ಸು ಬೆಂಕಿಗಾಹುತಿಯಾದರೂ ಸಹ ಚಾಲಕ ಮತ್ತು ನಿರ್ವಾಕನ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಇಂದು ಸಮಾರು ನಾಲ್ಕು ಗಂಟೆಗೆ ಸಾತಾರಾದಿಂದ ಬೆಳಗಾವಿಗೆ ಬರುತ್ತಿದ್ದ ಬಸ್ಸಿಗೆ ಹತ್ತರಕಿ ಟೋಲ್ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿದೆ,ಇದನ್ನು ಗಮನಿಸಿದ ಬಸ್ ಚಾಲಕ ತಕ್ಷಣ ಬಸ್ಸು ನಿಲ್ಲಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಭಾರೀ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬಸ್ ಚಾಲಕ ಮತ್ತು ನಿರ್ವಾಹಕ …
Read More »ಶಿಕಾರಿಪೂರದ ರಾಜನ ಕೇಳಿ ಆಟ ಆಡಿದ್ರೆ ಶಿಕಾರಿಪುರ ರಾಜನೂ ಹೋಗ್ತಾನೆ,ನೀವು ಹೋಗ್ತೀರಾ- ಯತ್ನಾಳ ಗರಂ..
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 24 ತಾಸಿನೊಳಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಎಲ್ಲ ಸ್ಥಾನಮಾನಗಳನ್ನು ನೀಡಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಗಡುವು ನೀಡಿದರು. ನಗರದಲ್ಲಿ ಗಾಂಧಿ ಭವನದಲ್ಲಿ ಗುರುವಾರ ನಡೆದ ಪಂಚಮಸಾಲಿ ಸಮಾಜಕ್ಕೆ 2ಡಿ ಪಂಚಮಸಾಲಿಗಳ ಸಿಕ್ಕ ನ್ಯಾಯವೋ ಅನ್ಯಾಯವೋ? ಎಂಬ ಕುರಿತ ರಾಜ್ಯ ಕಾರ್ಯಕಾರಿಣಿ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 24 ಗಂಟೆಯೊಳಗೆ ಮೀಸಲಾತಿ ಕಲ್ಪಿಸದಿದ್ದರೆ ಮುಖ್ಯಮಂತ್ರಿ ಗಳು …
Read More »ನಾಳೆ ಬೆಳಗಾವಿಗೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್…
.ಬೆಳಗಾವಿ-ಹ್ಯಾಟ್ರೀಕ್ ಹಿರೋ ಶಿವಕುಮಾರ್ ನಾಳೆ ಶುಕ್ರವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ.ಅವರು ಅಭಿನಯಿಸಿದ ವೇದ ಚಿತ್ರದ ಪ್ರಮೋಶನ್ ಗಾಗಿ ಬೆಳಗಾವಿಗೆ ಬರ್ತಾ ಇದ್ದಾರೆ. ಹುಬ್ಬಳ್ಳಿಯಿಂದ ರಸ್ತೆಯ ಮೂಲಕ ಮಧ್ಯಾಹ್ನ 1-30 ಗಂಟೆಗೆ ಬೆಳಗಾವಿಗೆ ಆಗಮಿಸುವ ಅವರು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಮೂಲಕ ಚಿತ್ರಾ ಟಾಕೀಸ್ ಗೆ ತೆರಳಿ ವೇದ ಚಿತ್ರದ ಪ್ರಮೋಶನ್ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೋಡ್ ಶೋ ಯಶಸ್ವಿ …
Read More »ಬಸನಗೌಡ ಯತ್ನಾಳ ಧಿಡೀರ್ ಬೆಳಗಾವಿಗೆ ಬಂದಿದ್ದು ಯಾಕೆ ಗೊತ್ತಾ..??
ಇಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ನಾಯಕರ ಮಹತ್ವದ ಸಭೆ.. ಬೆಳಗಾವಿ-2 ಎ ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮಾಜ ನಿರಂತರವಾಗಿ ಹೋರಾಟ ನಡೆಸಿದ್ದು ಸರ್ಕಾರ ಬೆಳಗಾವಿಯ ಅಧಿವೇಶನದಲ್ಲಿ ಪ್ರಕಟಿಸಿದ ಮೀಸಲಾತಿ ಕುರಿತು ಚರ್ಚಿಸಲು ಪಂಚಮಸಾಲಿ ಸಮಾಜದ ನಾಯಕರು ಇಂದು ಬೆಳಗಾವಿಯಲ್ಲಿ ಮಹತ್ವ ಸಭೆ ನಡೆಸಲಿದ್ದಾರೆ. ಬೆಳಗಾವಿಯ ಗಾಂಧೀ ಭವನದಲ್ಲಿ, ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಆರಂಭವಾಗಲಿರುವ ಸಭೆಯಲ್ಲಿ,ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ರಾಜ್ಯಸಭೆ ಸದಸ್ಯ …
Read More »ಬೆಳಗಾವಿ:,ಮದ್ಯರಾತ್ರಿ ಖತರ್ನಾಕ್ ಆ್ಯಕ್ಸಿಡೆಂಟ್ 6 ಜನರ ಸಾವು..
ಬೆಳಗಾವಿ ಹೊಸ ವರ್ಷದ ಆರಂಭದ ವಾರದಲ್ಲಿಯೇ ಬುಧವಾರ ತಡರಾತ್ರಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುತ್ತಿದ್ದ ವಾಹನದ ರಾಮದುರ್ಗ ತಾಲೂಕಿನ ಚಿಂಚನೂರು ವಿಠ್ಠಲ್ ದೇವಸ್ಥಾನದ ಬಳಿ ಭೀಕರ ಅಪಘಾತದಲ್ಲಿ ಆರು ಜನ ಮೃತಪಟ್ಟ ಘಟನೆ ನಡೆದಿದೆ. ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೊರಟ್ಟಿದ್ದ ಭಕ್ತರು ಮಹೇಂದ್ರ ಗೂಡ್ಸ್ ವಾಹನದಲ್ಲಿ ಹೊರಟ್ಟಿದ್ದ ಭಕ್ತರು ಆಲದ ಮರಕ್ಕೆ ರಭಸಕ್ಕೆ ಗುದ್ದಿದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಮೃತಪಟ್ಟವರು ರಾಮದುರ್ಗ …
Read More »ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲೇ ಹಗಲು ಹೊತ್ತಿನಲ್ಲೇ ಕಳ್ಳತನ.. .
ಬೆಳಗಾವಿ-ಬೆಳಗಾವಿ ಮಹಾನಗರದ ಜನದಟ್ಟಣೆಯ ಪ್ರದೇಶವಾದ ಪಾಂಗುಳಗಲ್ಲಿಗೆ ಹೊಂದಿಕೊಂಡಿರುವ ಆಝಾದ್ ಗಲ್ಲಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಯ ಕೀಲಿ ಮುರಿದು ಲಕ್ಷಾಂತರ ರೂ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬೆಳಗಾವಿಯ ಆಝಾದ್ ಗಲ್ಲಿಯ ನಿವಾಸಿ ಹರೀಶ್ ಪ್ರಜಾಪತ ಎಂಬಾತನ ಮನೆ ಕಳ್ಳತನವಾಗಿದ್ದು ಕಳ್ಳರು ಇಂದು ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಕೀಲಿ ಮುರಿದು ಎರಡು ಲಕ್ಷ ರೂ ನಗದು ಸುಮಾರು ಐವತ್ತು …
Read More »ರೋಗ ಬಂದಿದೆ,ನಾಳೆಯಿಂದ ಇಂಜೆಕ್ಷನ್ ಮಾಡ್ತಾರೆ….!!
ಜಿಲ್ಲೆಯ ಜಾನುವಾರುಗಳಿಗೆ 3 ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಜ.5 ರಿಂದ 31 ರವರೆಗೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಗತ್ಯ ಕ್ರಮ: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಬೆಳಗಾವಿ, -ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ ಜಿಲ್ಲೆಯಾದ್ಯಂತ ದಿನಾಂಕ: 05-01-2023 ರಿಂದ 31-01-2023ರವರೆಗೆ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಪಲ್ಸ್ ಪೋಲಿಯೋ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ …
Read More »ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ, ಅನುದಾನ ಕೊಡದೇ ಅವಮಾನಿಸಿದ ಸರ್ಕಾರ…!!
ಬೆಳಗಾವಿ-ಜನೇವರಿ 12 ಮತ್ತು 13 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ ದಿನಾಂಕ ನಿಗದಿಯಾಗಿದೆ.ಮಹಾಪುರುಷನ ಉತ್ಸವಕ್ಕೆ ಕೇವಲ ಹತ್ತು ದಿನ ಬಾಕಿ ಉಳಿದರೂ ಸರ್ಕಾರ ಈವರೆಗೆ ಉತ್ಸವ ಆಚರಣೆಗೆ ನಯಾಪೈಸೆಯನ್ನೂ ಬಿಡುಗಡೆ ಮಾಡದೇ ಇರುವದು ದುರ್ದೈವದ ಸಂಗತಿಯಾಗಿದೆ. ಸರ್ಕಾರ ಉತ್ತರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯ ಮಾಡುತ್ತಿದೆ ಅನ್ನೋದಕ್ಕೆ ಇದೊಂದೇ ಸಾಕ್ಷಿ ಸಾಕು,ಬ್ರಿಟಿಷ್ ರ ವಿರುದ್ಧ ಹೋರಾಡಿ ಬ್ರಿಟೀಷರ ಕಚೇರಿಗಳ ಮೇಲೆ ದಾಳಿ ಮಾಡಿ ಬ್ರಿಟೀಷ್ ಅಧಿಕಾರಿಗಳ ನಿದ್ದೆಗೆಡಸಿದ್ದ ಕ್ರಾಂತಿವೀರ …
Read More »