ಬೆಳಗಾವಿ ಜಿಲ್ಲೆಗೆ ಬಿಗ್ ಶಾಕ್ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು. *ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ* ಬೆಳಗಾವಿ- ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ. ನಾಲ್ವರು ಬೆಳಗಾವಿ ಜಿಲ್ಲೆಯ ರಾಯಬಾಗ ಮೂಲದವರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದ್ದು ಇವರೆಲ್ಲರೂ ದೆಹಲಿಯ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು. ಪೇಷಂಟ್ ನಂಬರ್ 147 – 36 ವರ್ಷದ ಮಹಿಳೆ. ಪೇಷಂಟ್ ನಂಬರ್ 148 – 40 ವರ್ಷದ ಪುರುಷ ರಾಯಬಾಗ. …
Read More »ನೆಗೆಟೀವ್ ರಿಪೋರ್ಟ್ ಬಂದವರಿಗೂ ಮತ್ತೊಮ್ಮೆ ಪರೀಕ್ಷೆ ಮಾಡಿ- ರಮೇಶ್ ಜಾರಕಿಹೊಳಿ
ರಬೆಳಗಾವಿ,ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಲಾಕ್ ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾಗರಿಕರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಉಳಿದಂತೆ ಜನಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾನುವಾರ (ಏ.೫) ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಒಮ್ಮೆ …
Read More »ಎಲ್ಲರೂ ಸೋಶಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿ- ಸುರೇಶ ಅಂಗಡಿ
ಏ.14ರವರೆಗೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು: ಕೇಂದ್ರ ಸಚಿವ ಅಂಗಡಿ ಬೆಳಗಾವಿ ಇಡೀ ದೇಶ ಕರೋನೊ ವಿರುದ್ದ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏ.14ರ ವರೆಗೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು. ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ 29ನೇ ಸವಿಚಾರ ಚಿಂತನ ಬಳಗದಿಂದ ನಿರ್ಗತಿಕರು ಹಾಗೂ ಬಡವರಿಗೆ ದಿನಸಿ ಸಾಮಗ್ರಿಗಳನ್ನು …
Read More »ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ, ಹುಷಾರ್….!!
ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ,ಜಿಲ್ಲಾಧಿಕಾರಿಗಳ ಎಚ್ಚರಿಕೆ ಬೆಳಗಾವಿ- ಬೆಳಗಾವಿ ನಗರ ಹಾಗು ಜೆಲ್ಲೆಯ ವಿವಿಧ ಗ್ರಾಮಗಳಲ್ಲಿ ಕೆಲವರು ರಸ್ತೆಯನ್ನು ಅಗೆದು,ರಸ್ತೆಗೆ ಬೇಲಿ ಹಾಕಿ ರಸ್ತೆಗಳನ್ನು ಬಂದ್ ಮಾಡುತ್ತಿರುವದರಿಂದ ಪಡಿತರ ಧಾನ್ಯಗಳ ಸಾಗಾಣಿಕೆಗೆ ತೊಂದರೆಯಾಗುತ್ತಿದ್ದು ಈ ರೀತಿ ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆ,ಮತ್ತು ಪಡಿತರ ಧಾನ್ಯಗಳ ಪೂರೈಕೆಗೆ ತೊಂದರೆ ಮಾಡುವದು ಅಪರಾಧವಾಗಿದ್ದು ಕೂಡಲೇ ರಸ್ತೆಗಳಿಗೆ ಹಾಕಿರುವ ಬೇಲಿಯನ್ನು,ತೆರವು ಮಾಡಿ …
Read More »ವಿಡಿಯೋ,ಅಡಿಯೋ, ವೈರಲ್, ಕಿಡಗೇಡಿಗಳ ವಿರುದ್ಧ ಕ್ರಮಕ್ಕೆ ಡಿಸಿ ಸೂಚನೆ
ಬೆಳಗಾವಿ- ನಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇರುವವರ ಸಂಭಾಷಣೆ ವೈರಲ್ ಆಗಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು,ಕಿಡಗೇಡಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ನಗರ ಪೋಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ಸಕಿತರ ನಡುವಳಿಕೆ ಕುರಿತು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಅಡಿಯೋ ಕ್ಲಿಪ್ ಗಳು ವೈರಲ್ ಆಗಿದ್ದವು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೊಂಕಿತರ ವಿಡಿಯೋ ಮತ್ತು ಅಡಿಯೋ ಮಾಡಿದ …
Read More »ಸವದತ್ತಿ ಯಲ್ಲಮ್ಮ ದೇವಿಯ, ದವನದ ಹುಣ್ಣಿಮೆ ಜಾತ್ರೆ, ಇಲ್ಲ
ಬೆಳಗಾವಿ- ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ, ದೇವಸ್ಥಾನದಲ್ಲಿ ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ದವನದ ಹುಣ್ಣಿಮೆ ಜಾತ್ರೆಯನ್ನು ಈ ಬಾರಿ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲು ಅಲ್ಲಿಯ ಅರ್ಚಕರು,ಮತ್ತು ಆಡಳಿತ ಮಂಡಳಿ ನಿರ್ಧರಿಸಿದೆ. ಏಪ್ರಿಲ್ 7 ಮತ್ತು 8 ರಂದು ದವನದ ಹುಣ್ಣಿಮೆಯ ಜಾತ್ರೆ ನಡೆಯಬೇಕಿತ್ತು ಎರಡು ದಿನ ಲಕ್ಷಾಂತರ ಭಕ್ತರು ಅಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು.ಆದರೆ ಈ ವರ್ಷ ದೇಶಾದ್ಯಂತ್ಯ ಕೊರೋನಾ ಕರಿನೆರಳು …
Read More »ಹೊಂಡದಲ್ಲಿ ಬಿದ್ದ ಮೋಬೈಲ್ ತಗೆಯಲು ಹೋಗಿ ನೀರು ಪಾಲಾದ ನಾಲ್ಕು ಕಂದಮ್ಮಗಳು…
*ಗೋಕಾಕ್: ಕೃಷಿ ಹೊಂಡಕ್ಕೆ ಬಿದ್ದು ಒಡಹುಟ್ಟಿದ ನಾಲ್ಕು ಕಂದಮ್ಮಗಳ ದುರ್ಮರಣ ; ಸಚಿವ ರಮೇಶ್ ಜಾರಕಿಹೊಳಿ ಸಂತಾಪ* ಬೆಳಗಾವಿ: ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ ನಾಲ್ವರು ಕಂದಮ್ಮಗಳು ಮೃತಪಟ್ಟಿರುವ ಮನ ಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ನಡೆದಿದೆ. ಅಜ್ಜನಕಟ್ಟಿ ಗ್ರಾಮದ ಕರೆಪ್ಪ ಜಕ್ಕನ್ನವರ ಹಾಗೂ ಮಹಾದೇವಿ ದಂಪತಿಯ ನಾಲ್ವರು ಮಕ್ಕಳು ಮೃತ ದುರ್ದೈವಿಗಳು. ಭಾಗವ್ವ ಜಕ್ಕನ್ನವರ(6), ತಾಯಮ್ಮ ಜಕ್ಕನ್ನವರ (5), ಮಾಳಪ್ಪ ಜಕ್ಕನ್ನವರ (4) …
Read More »ಕ್ವಾರಂಟೈನ್ ಇರುವವರ ಮೇಲೆ ತೀವ್ರ ನಿಗಾ ವಹಿಸಲು ಸೂಚನೆ
ಬೆಳಗಾವಿ, ಕ್ವಾರಂಟೈನ್ ನಲ್ಲಿ ಇರುವವರು ಯಾರೂ ಸ್ಟ್ಯಾಂಪಿಂಗ್ ನಿಂದ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಗೃಹ ಸಂಪರ್ಕ ತಡೆ(ಹೋಮ್ ಕ್ವಾರಂಟೈನ್ )ಯಲ್ಲಿ ಇರುವವರ ಮೇಲೆ ತೀವ್ರ ನಿಗಾ ಇಡಬೇಕು. ಈ ಬಗ್ಗೆ ಕರ್ತವ್ಯ ಲೋಪ ಎಸಗುವವರು ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಜ್ವಲ್ ಕುಮಾರ್ ಘೋಷ್ ಅವರ ಅಧ್ಯಕ್ಷತೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ …
Read More »ಖಾಸಗಿ ಆಸ್ಪತ್ರೆಗಳು ತೆರೆಯಲಿ,ಅವರಿಗೂ ಪಾಸ್ ಕೊಡಿ- ಜಗದೀಶ್ ಶೆಟ್ಟರ್
ಬೆಳಗಾವಿ, ಏ.೪(ಕರ್ನಾಟಕ ವಾರ್ತೆ): ಲಾಕ್ ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಬಂದೋಸ್ತ್ ಮತ್ತಿತರ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಯಂತ್ರಿಸಬೇಕು. ಜನರಿಗೆ ದಿನಬಳಕೆ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅನಾನುಕೂಲ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶೆಟ್ಟರ್ ನಿರ್ದೇಶನ ನೀಡಿದರು. ಕೋವಿಡ್ ೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.೪) ನಡೆದ ಅಧಿಕಾರಿಗಳ …
Read More »ಶಿಘ್ರದಲ್ಲಿಯೇ ಬೆಳಗಾವಿಯಲ್ಲಿ ಕೊರೋನಾ ಪ್ರಯೋಗಾಲಯ-ಜಗದೀಶ್ ಶೆಟ್ಟರ್
ಬೆಳಗಾವಿ- ಬೆಳಗಾವಿಯಲ್ಲಿ ಮೂರು ಕೊರೋನಾ ಪಾಜಿಟೀವ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,ಬೆಳಗಾವಿಯಲ್ಲಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು. ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 30 ನೆಗೆಟಿವ್ ಆಗಿವೆ 19 ಮಾದರಿ ಕಳುಹಿಸಲಾಗಿದೆ ವರದಿ ನಿರೀಕ್ಷಿಸಿದ್ದೇವೆ. ನಿಗಾ ವಹಿಸಲಾಗಿದೆ ಲಾಕ್ ಡೌನ್ ಗೆ ಜನರು ಸಂಪೂರ್ಣ ಸಹಕಾರ ಕೊಡಬೇಕು. ಅನವಶ್ಯವಾಗಿ ಓಡಾಡಬಾರದು. ಬಂದೋಬಸ್ತ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಜನರು …
Read More »