Home / Breaking News (page 54)

Breaking News

ಬಸವರಾಜ್ ಬೊಮ್ಮಾಯಿ ಬೆಳಗಾವಿಗೆ ಬಂದ್ದಿದ್ರು ಏನ್ ಹೇಳಿದ್ರು ಗೊತ್ತಾ..??

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಮಾದ್ಯಮಗಳ ಜೊತೆ ಮಾತನಾಡಿ,ಸಿದ್ರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿಯಿಂದ ಮನೆಗಳ ಹಾನಿ, ಜಾನುವಾರು ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ.ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ, ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ,ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಗಮನಿಸುತ್ತಿಲ್ಲ,ಮುಖ್ಯಮಂತ್ರಿಗಳು ವಿಡಿಯೋ ಸಂವಾದ ಮಾಡುವುದು ಬಿಟ್ಟರೆ ಯಾವುದೇ ಪರಿಹಾರ ಕಾರ್ಯ ನಡೆದಿಲ್ಲ …

Read More »

ತೋಟಗಾರಿಕೆ ಬೆಳೆಗಳಿಗೆ ವಿಮೆ ಪಾವತಿ: ಜು.31 ರಂದು ಕೊನೆಯ ದಿನ

ಬೆಳಗಾವಿ, – ಮುಂಗಾರು-2023ನೇ ಹಂಗಾಮಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿಮೆಣಸಿನಕಾಯಿ ಮತ್ತು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಆರಿಶಿಣ, ಆಲೂಗಡ್ಡೆ (ಮಳೆಯಾಶ್ರಿತ), ಟೊಮ್ಯಾಟೋ, ಈರುಳ್ಳಿ (ನೀರಾವರಿ) ಹಾಗೂ ಈರುಳ್ಳಿ (ಮಳೆಯಾಶ್ರಿತ) ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಪಾವತಿಸಲು ತಿಳಿಸಲಾಗಿದೆ. ದಿನಾಂಕ ವಿಸ್ತರಣೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ರೈತರು ಕೂಡಲೆ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ ಅಧಿಸೂಚಿತ …

Read More »

ಬೆಳಗಾವಿಯಲ್ಲಿ, ಬಡವರಿಂದ ಹಣ ವಸೂಲಿಗೆ ಲಕ್ಷ್ಮೀ ಬ್ರೇಕ್ ಎರಡು ಲಾಗೀನ್ ಲಾಕ್…!!

ಗೃಹಲಕ್ಷ್ಮೀ ನೋಂದಣಿಗೆ ಲಾಗಿನ್ ದುರ್ಬಳಕೆ-ಹಣ ವಸೂಲಿ ಪ್ರಕರಣ: ಇಬ್ಬರ ವಿರುದ್ಧ ದೂರು ದಾಖಲು ಬೆಳಗಾವಿ,  ಗೃಹಲಕ್ಷ್ಮೀ ಯೋನೆಯ ಫಲಾನುಭವಿಗಳ ನೋಂದಣಿಗಾಗಿ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ದರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬೆಳಗಾವಿ ನಗರದ ಚವಾಟಗಲ್ಲಿಯಲ್ಲಿ ಜನತಾ ಆನ್ ಲೈನ್ ಸೆಂಟರ್ ನಡೆಸುತ್ತಿರುವ ಅದೃಶ್ ಆರ್.ಟಿ. ಹಾಗೂ ಮುತಗಾ ಗ್ರಾಮ ಒನ್ ಕೇಂದ್ರದ ಕಿರಣ ಚೌಗಲಾ ಎಂಬುವರ ವಿರುದ್ಧ …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ವಿಶೇಷ ಕಾಳಜಿ…!!

ಬೆಳಗಾವಿ, – ಒಳಹರಿವು, ಮಳೆಯ ಪ್ರಮಾಣ, ಜಲಾಶಯ ಮಟ್ಟ ಮತ್ತು ಮಹಾರಾಷ್ಟದಿಂದ ಬಿಡುವ ನೀರಿನ ಪ್ರಮಾಣ ಇವುಗಳ ಮೇಲೆ ನಿಗಾವಹಿಸುವುದರಿಂದ ಅತ್ಯಂತ ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರವಾಹ ನಿರ್ವಹಣೆಯನ್ನು ಮಾಡಬಹುದು. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇವುಗಳ ಮೇಲೆ ನಿಗಾ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಅಂಜುಮ್ ಪರ್ವೇಜ್ ತಿಳಿಸಿದರು. ಗುರುವಾರ(ಜು.27) ಅತಿವೃಷ್ಟಿಯಿಂದ ಬಾಧಿತಗೊಂಡಿರುವ ಗ್ರಾಮಗಳು …

Read More »

ಇವರು ಪೋಲಿಸರಾ?ಅಥವಾ ರಾಕ್ಷಸರಾ….??

ಬೆಳಗಾವಿ-ಬೆಳಗಾವಿಯ ನಡು ರಸ್ತೆಯಲ್ಲಿ ವಿಕಲಾಂಗನ ಮೇಲೆ ಖಾಕಿ ಕ್ರೌರ್ಯ ತೋರಿಸಿದ್ದು,ವಿಕಲಾಂಗನಿಗೆ, ಬೂಟಿನಿಂದ ಒದ್ದು, ಲಾಠಿ ಮುರಿಯುವಂತೆ ಥಳಿಸಿರುವ ಪೋಲಿಸರು ಆ ವಿಕಲಾಂಗನನ್ನು ಮನಬಂದಂತೆ ಥಳಿಸಿ,ಆತನಿಗೆ ನಡು ರಸ್ತೆಯಲ್ಲೇ ಮಲಗಿಸಿ ಅಮಾನವೀಯವಾಗಿ ನಡೆದುಕೊಂಡ ವಿಡಿಯೋ ಈಗ ರಾಜ್ಯಾದ್ಯಂತ ವೈರಲ್ ಆಗಿದೆ. ಮಂಗಳವಾರ ರಾತ್ರಿ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನಗರದ ಖಾನಾಪೂರ ರಸ್ತೆಯ ಹೊಟೇಲ್ ವೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಉದ್ಯಮಭಾಗ ಠಾಣೆ ಪಿಎಸ್ ಐ ಸರ್ದಾರ ಮುತ್ತಟ್ಟಿ,ಪೇದೆಗಳಾದ …

Read More »

ಬೆಳಗಾವಿ ಜಿಲ್ಲೆಯ ಯಾವ ಡ್ಯಾಂ ನಲ್ಲಿ ಎಷ್ಟು ನೀರು ಸಂಗ್ರಹ ಆಗಿದೆ,ಎಷ್ಟು ಬಾಕಿ ಇದೆ ಗೊತ್ತಾ..??

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ನಿರೀಕ್ಷೆಗೆ ಮೀರಿ ಜಿಲ್ಲೆಯ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು ಬಹುತೇಕ ಎಲ್ಲ ಜಲಾಶಯಗಳು ತುಂಬುವ ಹಂತ ತಲುಪಿವೆ. ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ರಾಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳು ತುಂಬುವ ಹಂತ ತಲುಪಿವೆ,ಜೊತೆಗೆ ಕೃಷ್ಣಾ ನದಿಯ ಒಳ ಹರಿವು 1 ಲಕ್ಷ 40 ಸಾವಿರ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕಣ್ಣಿಗೆ ನೋವು ಬಂದಿದೆ ಹುಷಾರ್..!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕಣ್ಣಿನ ನಂಜು, ಮದ್ರಾಸ್ ಐಯ್, ಹಳ್ಳಿಯ ಭಾಷೆಯಲ್ಲಿ ಇದಕ್ಕೆ ಕಣ್ಣು ನೋವು ಅಂತಾನೆ ಕರೀತಾರೆ ಈ ಸಾಂಕ್ರಾಮಿಕ ವೈರಸ್ ಈಗ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವೈರಸ್ ನ ಲಕ್ಷಣಗಳು ಕಣ್ಣು ಕೆಂಪಾಗುವದು ಕಣ್ಣು ಚುಚ್ಚುವದು.ಕಣ್ಣಿನಿಂದ ನೀರು ಮತ್ತು ಪಿಚ್ಚು ಬರುವದು,ನಂತರ ಜ್ವರ ಬರುವದು ಈ ರೀತಿಯ ಲಕ್ಷಣ ಗಳಿದ್ದು …

Read More »

ಬೆಳಗಾವಿ : ಗೋಡೆ ಕುಸಿದು ಯುವಕನ ಸಾವು.

ಬೆಳಗಾವಿ-ಮಳೆಯಿಂದ ಮನೆಯ ಗೋಡೆ ಕುಸಿದು ಯುವಕ ಸಾವನ್ನೊಪ್ಪಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ದುರ್ಘಟನೆ ನಡೆದಿದೆ.ಕಾಶಿನಾಥ ಅಪ್ಪಾಸಾಬ ಸುತಾರ (23) ಮೃತ ದುರ್ದೈವಿಯಾಗಿದ್ದಾನೆ.ಸತತವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿತದಿಂದ ಸಾವು ಸಂಭವಿಸಿದೆ. ಯುವಕನ ಮೈ ಮೇಲೆ ಗೋಡೆ ಕುಸಿತದ ಕಲ್ಲು ಮಣ್ಣು ಬಿದ್ದು ಸ್ಥಳದಲ್ಲೇ ಮೃತನಾಗಿದ್ದು,ಸ್ಥಳಕ್ಕೆ ಅಥಣಿ ಪಿಎಸ್ಐ ಹಾಗೂ ಸಿಪಿಐ ಭೇಟಿ ಪರಿಶೀಲನೆ ಮಾಡಿದ್ದಾರೆ.ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ.ನಡೆದಿದೆ.

Read More »

ನಾಳೆ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ…!!

ಬೆಳಗಾವಿ, ): ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಗುರುವಾರ(ಜು.27) ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಹವಾಮಾನ ಇಲಾಖೆಯು ಗುರುವಾರದಂದು ಯಲ್ಲೋ ಅಲರ್ಟ್ ಘೋಷಿಸಿರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ‌ ನೀಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ***

Read More »

ಬೆಳಗಾವಿ ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ.

ಬೆಳಗಾವಿ, -ಬೆಳಗಾವಿ ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಕೆಳಹಂತದ ಸೇತುವೆಗಳು ಮುಳುಗಡೆಯಾಗುತ್ತವೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ಶಾಶ್ವತ ಪರ್ಯಾಯ ಮಾರ್ಗ ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸಿ ವರದಿ ಕಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದ ಹವಾಮಾನ ಮತ್ತು ಮಳೆ-ಬೆಳೆಗಳಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಬುಧವಾರ (ಜು.26) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಪ್ರತಿವರ್ಷ 30 ಕೆಳಹಂತದ ಸೇತುವೆಗಳು ಮುಳುಗಡೆಯಾಗುವುದರಿಂದ …

Read More »