Breaking News

Breaking News

ಬೆಳಗಾವಿಗೆ ನೀರು ಹರಿಸಿದ ಭಗೀರಥ

ಬೆಳಗಾವಿ- ಬೆಳಗಾವಿ ನಗರದ ಕೆಲವು ಬಡವಾಣೆಯ ಹಾಗು ಸುತ್ತಮುತ್ತಲಿನ ಗ್ರಾಮಗಳ ಜನ ಅಶುದ್ಧ ನೀರು ಕುಡಿಯುತ್ತಿರುವದನ್ನು ಗಮನಿಸಿದ ಸ್ಥಳೀಯ ಶಾಸಕ ಫಿರೋಜ್ ಸೇಠ ಬೆಳಗಾವಿ ಸಮೀಪದ ಬಸವನಕೊಳ್ಳ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಿ ಕೇವಲ ಒಂದುವರೆ ವರ್ಷದಲ್ಲಿ ಬೆಳಗಾವಿ ನಗರಕ್ಕೆ ಶುದ್ಧ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ ಮಂಗಳವಾರ ಬೆಳ್ಳಂ ಬೆಳಿಗ್ಗೆ ಬಸವನಕೊಳ್ಳ ಗ್ರಾಮದಲ್ಲಿ ಪಂಪ್ ಹೌಸ್ ಗೆ ಪೂಜೆ ನೆರವೇರಿಸಿ ಅಟೋ ನಗರದ ಓವರ್ ಹೆಡ್ ಟ್ಯಾಂಕ್ ಗೆ …

Read More »

ಇಬ್ಬರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನ

ಬೆಳಗಾವಿ: ಶಹಾಪುರದಲ್ಲಿ ನಡೆದ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಇಬ್ಬರು ಮುಖ್ಯ ಬೆಟ್ಟಿಂಗ್ ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕುಳಿತು ಬೆಳಗಾವಿಯ ಬೆಟ್ಟಿಂಗ್ ದಂಧೆಯನ್ನು ಮೆಂಟೈನ್ ಮಾಡುತ್ತಿದ್ದ ಹುಬ್ಬಳ್ಳಿಯ ಬುಕ್ಕಿಗಳಾದ ಕೇಶ್ವಾಪುರದ ಕೃಷ್ಣಾ ಸಾ, ರಘುನಾಥ್ ಸಾ ಕಬಾಡಿ(೨೭), ನೇಕಾರ ನಗರದ ದೇವೇಂದ್ರ ವಾಸುದೇವ ಜಡಿ(೨೧) ಇವರನ್ನು ಬಂಧಿಸಿರುವ ಪೊಲೀಸರು ೪೭,೨೬೦ ನಗದು ಹಣ, ೧೧ ಸಾವಿರ ಕಿಮ್ಮತ್ತಿನ ಮೊಬೈಲ್, ಟಿವಿ ಸೆಟಪ್ ಬಾಕ್ಸ್ ಸೇರಿದಂತೆ ಬೆಟ್ಟಿಂಗ್ ದಂಧೆಗೆ …

Read More »

ಪ್ರಯತ್ನ ಫಲಿಸಲಿಲ್ಲ…ಕಾವೇರಿ ಬದುಕಲಿಲ್ಲ….!

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹೊಲವೊಂದರಲ್ಲಿ ಕೊರೆಯಲಾದ ಕೊಳವೆಬಾವಿಯಲ್ಲಿ  ಬಿದ್ದ ಆರು ವರ್ಷದ ಹೆಣ್ಣು ಮಗುವಿನ  ಸಂರಕ್ಷಣೆಗಾಗಿ ಶನಿವಾರ ಸಂಜೆಯಿಂದ ನಿರಂತರ ಸುಮಾರು 50 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿದರೂ ಕೊಳವೆಬಾವಿಯಲ್ಲಿ ಸಿಲುಕಿದ ಕಾವೇರಿಯನ್ನು ಜೀವಂತವಾಗಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಸೋಮವಾರ ಸಂಜೆ 6- 30 ಘಂಟೆ ಸುಮಾರಿಗೆ ರಕ್ಷಣಾ ಸಿಬ್ಬಂಧಿ ಕೊಳವೆ ಬಾವಿಯಲ್ಲಿ ಸಿಲುಕಿರುವ ಕಾವೇರಿಯ ಶವದ ಶೇ 75 ರಷ್ಟು ಭಾಗ ಹೊರಬಂದಿದೆ ಉಳಿದ ಬಾಗವನ್ನು …

Read More »

ಬಂಗಾರದ ಮನುಷ್ಯ’ನ ಬಗ್ಗೆ ಒಂದಿಷ್ಟು

  ಡಾ. ಕೆ. ಎನ್. ದೊಡ್ಡಮನಿ ಕನ್ನಡಕ್ಕೊಬ್ಬನೆ ರಾಜಕುಮಾರ್ ರೇಷ್ಠ ಕಲಾವಿದ-ಒಂದು ಶಕ್ತಿಯಾಗಿ ಹೊಸ ತಲೆಮಾರಿನಲ್ಲೂ ಶಕ್ತಿ ಸಂಚಾರಗೊಳಿಸುವ ಮುತ್ತಿನಂತ ಮನುಷ್ಯ ಡಾ. ರಾಜಕುಮಾರ ಅವರು ಇನ್ನೊಂದು ಹುಟ್ಟು ಹಬ್ಬ ಬಂದಾಗ ಸಹಜವಾಗಿ ನಮ್ಮಂಥವರ ಅಂತರಂಗದಲ್ಲಿ ಒಂದು ರೀತಿಯ ಉಲ್ಲಾಸ-ಸಂಭ್ರಮ. ಉನ್ನತ ಅಧ್ಯಯನ ಆರಂಭವಾಗುತ್ತಿದ್ದಂತೆ ಅನೇಕ ತತ್ವಜ್ಞಾನಿಗಳು, ಚಿಂತಕರು, ಸಾಮಾಜಿಕ ಹೋರಾಟಗಾರರು  ಆದರ್ಶ ಮತ್ತು ಮಾದರಿಗಳಾಗುದಕ್ಕಿಂತ ಮುಂಚೆ, ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಮತ್ತು ನನ್ನಂಥ ಲಕ್ಷಾಂತರ ಯುವಕರಿಗೆ ‘ಬಂಗಾರದ ಮನುಷ್ಯ’ ಡಾ. ರಾಜಕುಮಾರ ಆರಾಧ್ಯ ದೈವ. …

Read More »

ಖಾನಾಪೂರ ಅಭಯಾರಣ್ಯದಲ್ಲಿ ಚಿರತೆ ಬೇಟೆ…!!!

ಬೆಳಗಾವಿ- ಖಾನಾಪುರ ತಾಲೂಕಿನ ಕಿರಾವಳಿ ಗ್ರಾಮದ ಬಳಿ ಚಿರತೆಯೊಂದನ್ನು ಬೇಟೆಯಾಡಿ ಅದರ ಪಂಜು ಮತ್ತು ಎಲುಬುಗಳನ್ನು ತೆಗೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲೋಂಡಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕಿರಾವಳಿ ಮಠದ ಬಳಿ ಚಿರತೆಯನ್ನು ಬೇಟೆಯಾಡಲಾಗಿದ್ದು, ಸ್ಥಳೀಯರ ಪ್ರಕಾರ ಹತ್ಯೆಯಾಗಿರುವ ಚಿರತೆಯ ಎಲುಬುಗಳು, ನಾಲ್ಕು ಕಾಲಿನ ಪಂಜುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಲಾಗಿದ್ದು, ಚಿರತೆಯ ದೇಹದ ಮೇಲೆ ಗುಂಡು ಹಾಕಿ ಕೊಂದಿರುವ ಗುರುತು ಇದೆ. ಈ ಭಾಗದಲ್ಲಿ ಉತ್ತರ ಭಾರತದಿಂದ …

Read More »

ಬಾರ್ ನಲ್ಲಿ ಫುಲ್ ಟೈಟ್…ಬೀದಿಯಲ್ಲಿ ಫುಲ್ ಫೈಟ್..

ಬೆಳಗಾವಿ- ಬೆಳಗಾವಿಯ ಟಿಳಕವಾಡಿ ಪ್ರದೇಶದ ಮೂರನೇಯ ಗೇಟ್ ಬಳಿಯ ಬಾರ್ ಒಂದರಲ್ಲಿ ಎರಡು ಯುವಕರ ಗುಂಪುಗಳ ನಡುವೆ ಘರ್ಷಣೆಯಾಗಿ ಮೂವರು ಜನ ಯುವಕರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಭಾನುವಾರ ಮದ್ಯಾಹ್ನ ಬಾರ್ ನಲ್ಲಿ ಯುವಕರ ನಡುವೆ ಯಾವುದೋ ಒಂದು ವಿಷಯಕ್ಕೆ ಸಮಂಧಿಸಿದಂತೆ ವಾಗ್ವಾದ ನಡೆದಿದೆ ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿದೆ ಒಂದು ಯುವಕರ ಗುಂಪು ಇನ್ನೊಂದು ಗುಂಪಿನ ಮೇಲೆ ಹಲ್ಲೆ ಮಾಡಿದೆ ಬಾರ್ ನಲ್ಲಿ ಆರಂಭವಾದ …

Read More »

ಕೊಳವೆ ಬಾವಿಯಲ್ಲಿ ಕಾವೇರಿಯ ಕೈ ಕಾಣಿಸಿತು

ಬೆಳಗಾವಿ -ಅಥಣಿ ತಾಲೂಕಿನ ಝುಂಜುರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕಿ ಕಾವೇರಿಯ ರಕ್ಷಣೆಗೆ NDRF ರಾಷ್ಟ್ರೀಯ ವಿಪತ್ತು ರಕ್ಷಣಾ ದಳದ ತಂಡ ಕಾರ್ಯಾಚರಣೆ ಆರಂಭಿಸಿದ್ದು 20 ಅಡಿ ಆಳದಲ್ಲಿ ಕಾವೇರಿಯ ಕೈ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಕೊಳವೆ ಬಾವಿಯ ಸುತ್ತಲು ಜೆಸಿಬಿ ಯಿಂದ ಕಾರ್ಯಾಚರಣೆ ಮುಂದುವರೆದಿದೆ ಸುಮಾರು ಹತ್ತು ಅಡಿ ಆಳ ಜೆಸಿಬಿಯಿಂದ ಮಣ್ಣು ತೆಗೆಯಲಾಗಿದೆ ಈಗ ಬಂಡೆಗಲ್ಲು ಹತ್ತಿರುವದರಿಂದ ಕಾರ್ಯಾಚರಣೆ ನಡೆಸಲು …

Read More »

ಕಾವೇರಿಯ ರಕ್ಚಣೆಗೆ ಧಾವಿಸಿದ ರಾಷ್ಟ್ರೀಯ ವಿಪತ್ತು ರಕ್ಷಣಾ ದಳ

ಬೆಳಗಾವಿ- ಅಪ್ಪ ಅಮ್ಮ ಅಟ್ಟಿಗೆ ಆರಿಸುತ್ತಿರುವಾಗ ಗದ್ದೆ ಯಲ್ಲಿ ಆಡುತ್ತ ಆಡುತ್ತ ತೆರೆದ ಕೊಳವೆ ಬಾವಿಗೆ ಜಾರಿದ ಕಂದಮ್ಮ ಕಾವೇರಿಯ ರಕ್ಷಣೆಗೆ ಅಥಣಿಯ ಝುಂಜುರವಾಡ ಗ್ರಾಮಕ್ಕೆ ಪೂನಾದಿಂದ ರಾಷ್ಟೀಯ ವಿಪತ್ತು ರಕ್ಷಣಾ ದಳದ ತಂಡ ಆಗಮಿಸಿದೆ ಜಿಲ್ಲಾಧಿಕಾರಿ ಎನ್ ಜಯರಾಂ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಝುಂಜುರವಾಡ ಗ್ರಾಮದಲ್ಲಿ ಠಿಖಾನಿ ಹೂಡಿದ್ದು ತೆರೆದ ಬಾವಿಯ ಇಪ್ಪತ್ತು ಅಡಿ ಆಳದಲ್ಲಿ ಕಾವೇರಿಯ ಬಟ್ಟೆ ಕಾಣಿಸಿಕೊಂಡಿದ್ದು ಕಾವೇರಿಯನ್ನು …

Read More »

ಬೆಳಗಾವಿ ಬಸ್ ನಿಲ್ದಾಣದಲ್ಲಿ ಹಗಲು ದರೋಡೆ ನಾಲ್ಕು ಲಕ್ಷ ಲೂಟಿ.

ಬೆಳಗಾವಿ-ನಿಂಬೆಹಣ್ಣು ಖರೀಧಿ ಮಾಡಲು ಗೋವಾದಿಂದ ಬೆಳಗಾವಿಗೆ ಬಂದ ವ್ಯಾಪಾರಿಯೊಬ್ಬನಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಬಂಗಾರದ ಆಭರಣ ನಗದು ಹಣ ಸೇರಿದಂತೆ ಸುಮಾರು ನಾಲ್ಕು ಲಕ್ಷ ರೂ ಲೂಟಿ ಮಾಡಿದ ಘಟನೆ ನಡೆದಿದೆ ಗೋವಾದಿಂದ ಬಸ್ ಮೂಲಕ   ನಿಂಬೆಹಣ್ಣು ಖರೀಧಿಸಲು ಬೆಳಗಾವಿಗೆ ಬಂದ ಸಂದೀಪ ಕಾಶಿನಾಥ ಧೋಡಣಕರ ಎಂಬ ವ್ಯೆಕ್ತಿಗೆ ಬೆಳಗಾವಿಯ ಹೊಸ ಸಿಬಿಟಿ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಆತನ ಬಳಿ …

Read More »

ಸತೀಶ ಜಾರಕಿಹೊಳಿಗೆ ಶಂಕರ ಮುನವಳ್ಳಿ ಸವಾಲ್…!

ಬೆಳಗಾವಿ- ಮೆಥೋಡಿಸ್ಟ್ ಚರ್ಚ್ ಬಳಿ ಇರುವ ಕುಲಕರ್ಣಿ ಜಾಗಕ್ಕೆ ಸಂಬಂಧಿಸಿದಂತೆ ತನ್ನ ಪರವಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ಉತ್ತೇಜಿತಗೊಂಡಿರುವ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ, ಧೈರ್ಯ ಇದ್ದರೆ ಜಿಲ್ಲಾಡಳಿತ ಮತ್ತು ತಂತ್ರಗಾರಿಕೆ ರೂಪಿಸುತ್ತಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ  ಕೆಎಟಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅಪೀಲು ಸಲ್ಲಿಸಿದರೂ ಕೂಡ ನನ್ನದೇ ಗೆಲುವು. ಬೇಕಿದ್ದರೆ ಜಿಲ್ಲಾಡಳಿತ ಈ ನನ್ನ ಸವಾಲು ಸ್ವೀಕರಿಸಿ ಮುಂದುವರಿಯಬಹುದು ಎಂದಿದ್ದಾರೆ.ಶನಿವಾರ …

Read More »