Home / Breaking News (page 57)

Breaking News

ಬ್ರೀಟೀಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಜೈಲಿಗೆ 100 ವರ್ಷ..!!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲು ನಿರ್ಮಿಸಿ ಈ ವರ್ಷಕ್ಕೆ ಬರೊಬ್ಬರಿ ನೂರು ವರ್ಷ ಆಗಿದೆ.ಈ ಜೈಲು ನೋಡಿದ್ರೆ ಸಾಕು,ಸ್ವಾತಂತ್ರ್ಯಪೂರ್ವದ ಇತಿಹಾಸವೇ ಕಣ್ಮುಂದೆ ಬಂದಂತೆ ಆಗುತ್ತದೆ.ನೂರು ವರ್ಷ ಕಂಡಿರುವ ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲು ಸಹಸ್ರಾರು ಸಿಹಿ, ಕಹಿಗಳನ್ನೂ ಕಂಡಿದೆ. ಮೂರು ನೇಣುಗಂಬಗಳನ್ನು ಒಳಗೊಂಡಿರುವ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಶುರುವಾಗಿ ಪ್ರಸಕ್ತ ಸಾಲಿಗೆ ನೂರು ವರ್ಷಗಳಾದವು. 1923ರಲ್ಲಿ ಬ್ರಿಟಿಷರಿಂದ ಆರಂಭವಾಗಿರುವ ಇದನ್ನು ಹಿಂಡಲಗಾ ಜೈಲು ಎಂದು ಕರೆಯುವುದು ವಾಡಿಕೆ. 1162 …

Read More »

ಮೊದಲ ಕೆಡಿಪಿ ಮೀಟೀಂಗ್, ಸೋಮವಾರ ಸುವರ್ಣಸೌಧದಲ್ಲಿ.

ಬೆಳಗಾವಿ, ): 2023-24 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳು ಸೇರಿದಂತೆ) ಜೂನ್ 2023 ಮಾಹೆಯ ಅಂತ್ಯದವರೆಗಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಸೋಮವಾರ(ಜು.24) ಬೆಳಿಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರು …

Read More »

ಖಾನಾಪುರ: ಶಾಲೆಗಳಿಗೆ ಶನಿವಾರ(ಜು.22) ರಜೆ ಘೋಷಣೆ

ಬೆಳಗಾವಿ, – ಖಾನಾಪುರ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂನಾದ್ಯಂತ ಇರುವ ಪ್ರಾಥಮಿಕ-ಪ್ರೌಢಶಾಲೆಗಳಿಗೆ ಶನಿವಾರ (ಜು‌.22) ಒಂದು ದಿನ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಖಾನಾಪುರ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿರುತ್ತದೆ. ಫಾಲ್ಸ್ ಭೇಟಿಗೆ ನಿರ್ಬಂಧ: ಖಾನಾಪುರ ತಾಲ್ಲೂಕಿನ ಚಿಕಲೆ, ಪಾರವಾಡ ಹಾಗೂ ಚಿಗುಲೆ ವಾಟರ್ ಫಾಲ್ಸ್ ಗಳನ್ನು ಹೊರತುಪಡಿಸಿ …

Read More »

ನಕಲಿ ಲೇಬಲ್ ಅಂಟಿಸಿ,ಕೆಮಿಕಲ್ಸ್ ಮಿಕ್ಸ್ ಮಾಡಿದವರು,ಜೈಲಿಗೆ ಫಿಕ್ಸ್…!!

ಬೆಳಗಾವಿ- ಬೆಳಗಾವಿಯ ಸಿಸಿಬಿ ಪೋಲೀಸರು ಇವತ್ತು ಭರ್ಜರಿ ಬೇಟೆಯಾಡಿದ್ದಾರೆ.ನಗರದ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿರುವ ಸಿಸಿಬಿ ಪೋಲೀಸರು ಅಪಾರ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಸದಾಶಿವ ನಗರದ ವೀರುಪಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನಲ್ಲಿ ನಕಲಿ ಮದ್ಯ ತಯಾರಿಸುತ್ತಿದ ಘಟಕದ ಮೇಲೆ ದಾಳಿ ಮಾಡಿರುವ ಸಿಸಿಬಿ ಪೋಲೀಸರು.ಇಬ್ಬರು ಆರೋಪಿಗಳನ್ನು ಬಂಧಿಸಿ,ಸಯಮಾರು ನಾಲ್ಕು ಲಕ್ಷ ರೂ ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಕಾನೂನು ಬಾಹಿರವಾಗಿ,ಆಕ್ರಮವಾಗಿ ಮದ್ಯತಯಾರಿಸುತ್ತಿದ್ದ ಬೆಳಗಾವಿ ಉಜ್ವಲ ನಗರದ,22ವರ್ಷದ ಹಸನ್ ಜಾವೇದ್ …

Read More »

ರಸ್ತೆ ಗುಂಡಿ ಮುಚ್ವುವಂತೆ ಪಟ್ಟಣ ಪಂಚಾಯ್ತಿಗೆ ಪತ್ರ ಬರೆದ ಪೋಲೀಸರು.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮಳೆ ಖಾನಾಪೂರ ತಾಲ್ಲೂಕಿನಲ್ಲಿ ಸುರೀತಾ ಇದೆ.ವಿಪರೀತ ಮಳೆಯಿಂದಾಗಿ ಖಾನಾಪೂರ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ.ಇಲ್ಲಿಯ ರಸ್ತೆಗಳಲ್ಲಿ ಈಗ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಖಾನಾಪೂರ ಪಟ್ಟಣದ ರುಮೇವಾಡಿ ಕ್ರಾಸ್ ಹತ್ತಿರದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ದಿನನಿತ್ಯ ರಸ್ತೆ ಅಪಘಾತಗಳು ಸಂಭವಿಸಿ ವಿಶೇಷವಾಗಿ ಬೈಕ್ ಸವಾರರು ತೊಂದರೆ ಅನುಭವಿಸುತ್ತಿರುವದನ್ನು ಗಮನಿಸಿದ ಖಾನಾಪೂರ ಪೋಲೀಸರು,ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ವುವಂತೆ ಖಾನಾಪೂರ ಪಟ್ಟಣ ಪಂಚಾಯ್ತಿಯ ಚೀಪ್ ಆಫೀಸರ್ …

Read More »

ಬೈಲಹೊಂಗಲದ ಸೊಗಲದಲ್ಲಿ ಪಕ್ಷಿಧಾಮ ಪರಿಶೀಲನೆ: ಈಶ್ವರ ಖಂಡ್ರೆ

ಬೆಂಗಳೂರು, ಜು. 21: ಬೆಳಗಾವಿ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದ ಬಳಿ ಇರುವ ಕಿರು ಪ್ರಾಣಿ ಸಂಗ್ರಹಾಲಯ ಜಿಂಕೆವನಕ್ಕೆ ಪುನಶ್ಚೇತನ ನೀಡುವ ಇಲ್ಲವೇ ಅದೇ ಜಾಗದಲ್ಲಿ ಪಕ್ಷಿಧಾಮ ನಿರ್ಮಿಸುವ ಕುರಿತಂತೆ ಪರಿಶೀಲಿಸುವ ಭರವಸೆಯನ್ನು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ. ಬೆಂಗಳೂರಿನ ತಮ್ಮ ಕಚೇರಿಯಲ್ಲಿಂದು ಭೇಟಿಯಾಗಿದ್ದ ಬೈಲಹೊಂಗಲ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ನೇತೃತ್ವದ ನಿಯೋಗದೊಂದಿಗೆ ಸಮಾಲೋಚಿಸಿದ ಸಚಿವರು, ಕೇಂದ್ರ ಮೃಗಾಲಯ …

Read More »

ಗ್ರಾಮಕ್ಕೆ ಅನಿಲ್ ಕುಂಬ್ಳೆ ಭೇಟಿ ನೀಡಿದ್ರೂ ಸಮಸ್ಯೆ ಬಗೆಹರಿದಿಲ್ಲ…!!

ಬೆಳಗಾವಿ-ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿತುತ್ತಿದೆ.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ,ಕಾಡಂಚಿನ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜೀವ ಭಯದಲ್ಲೇ ತೂಗು ಸೇತುವೆ ದಾಟಲು ಕಾಡಂಚಿನ ಜನರ ಹರಸಾಹಸ ಮಾಡುತ್ತಿರುವ ದೃಶ್ಯಗಳನ್ನು ನೋಡಿದ್ರೆ ಮೈ ಝುಮ್ ಅನ್ನುತ್ತೆ.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನೇರಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ನದಿಯ ಮೇಲೆ ನಿರ್ಮಿಸುವ ಕಟ್ಟಿಗೆಯ ಸೇತುವೆ ಮೇಲೆ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ.ನಿತ್ಯ ಜೀವ ಕೈಯಲ್ಲಿಯೇ ಹಿಡಿದು ಸೇತುವೆ …

Read More »

ನಿರಂತರ ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿ ಏನಾಯಿತು ಗೊತ್ತಾ…!!

ಮಳೆ ಸುರೀತಾ ಇದೆ… ನದಿ ಹರೀತಾ ಇದೆ.. ಜಲಾಶಯ ತುಂಬುತ್ತಿದೆ. ನೀರಿನ ಸಮಸ್ಯೆ ಬಗೆಹರೀತಾ ಇದೆ….   ಬೆಳಗಾವಿ -ಸಹ್ಯಾದ್ರಿ ಬೆಟ್ಟದ ಶ್ರೇಣಿ,ಹಾಗೂ ಪಶ್ಚಿಮ ಘಟ್ಟದ ಮಡಿಲಲ್ಲಿ ಇರುವ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ‌.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿದಿದ್ದು ರಾಮದುರ್ಗ ತಾಲ್ಲೂಕಿನಲ್ಲಿ ಅತೀ ಕಡಿಮೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಖಾನಾಪೂರ ತಾಲ್ಲೂಕಿನಲ್ಲಿ 41.2 mm ಜಿಲ್ಲೆಯಲ್ಲೇ ಅತೀ …

Read More »

ಅಲ್ಲೂ ವಿರೋಧ ಪಕ್ಷದ ನಾಯಕ ಇಲ್ಲ.ಇಲ್ಲೂ ವಿರೋಧ ಪಕ್ಷದ ನಾಯಕ ಇಲ್ಲ…..!!!

ಬೆಳಗಾವಿ-ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಿ,ಪಾಲಿಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಹುಮತದ ಅಧಿಕಾರ ಪಡೆದಿರುವ ಬಿಜೆಪಿಯ ಆಡಳಿತದ ಪ್ರಪ್ರಥಮ ಸಾಮಾನ್ಯ ಸಭೆ,ನಾಳೆ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯಲಿದೆ. ವಿಧಾನಸಭೆಯ ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೇ ನಡೆಯುತ್ತಿದೆ.ಅಲ್ಲಿ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ಕಗ್ಗಂಟಾಗಿದ್ದು,ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ವಿರೋಧ ಪಕ್ಷದ ನಾಯಕನ ವಿಚಾರ ಕಾಂಗ್ರೆಸ್ಸಿಗೆ ಕಗ್ಗಂಟಾಗಿದೆ.ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಾಲಿಕೆಯಲ್ಲಿ ತಿಕ್ಕಾಟ ಮುಂದುವರೆದಿದ್ದು,ಈ …

Read More »

ಮಕ್ಕಳ ಕಲ್ಯಾಣದ ಕುರಿತು,ಅಧಿಕಾರಿಗಳ ನೀರೀಳಿಸಿದ ಬೆಳಗಾವಿ ಡಿಸಿ.

ಪೋಕ್ಸೋ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ಆಗಬಾರದು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, : ಪೋಕ್ಸೋ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಕ್ರಮ ವಹಿಸಬೇಕು. ಇದಲ್ಲದೇ ಜಿಲ್ಲೆಯಲ್ಲಿ ಭಿಕ್ಷುಕ, ನಿರ್ಗತಿಕ, ಅನಾಥ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ(ಜು.19) ನಡೆದ …

Read More »