Breaking News

Breaking News

ಗಾಂಜಾ ಮಾಫಿಯಾ ವಿರುದ್ಧ ಬೆಳಗಾವಿ ಪೋಲೀಸರ ಸಮರ…

ಬೆಳಗಾವಿ- ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಬೆಳಗಾವಿ ಪೋಲೀಸರು ಸಮರ ಸಾರಿದ್ದಾರೆ. ಹಿರೇಬಾಗೇವಾಡಿ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ ಮಾಡಲಾಗಿದ್ದು 32580 ಮೌಲ್ಯದ ಗಾಂಜಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ನಗರದ ಹಿರೆಬಾಗೇವಾಡಿ ಪೊಲೀಸ್ ಠಾಣಾ ಹದ್ದಿಯ ಮುತ್ನಾಳ ಗ್ರಾಮದ ಹತ್ತಿರ ಗಾಂಜಾ ಮಾರಾಟ ಮಾಡಲು ಬಂದ ಇಬ್ಬರು ಆರೋಪಿತರ ಮೇಲೆ ಹಿರೇಬಾಗೇವಾಡಿ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ಇಸ್ಪೆಕ್ಟರ್ …

Read More »

SSLC ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವ್ಹಿ ಕ್ಯಾಮರಾ ಅಳವಡಿಕೆ….

ಬೆಳಗಾವಿ, – ಪರೀಕ್ಷಾ ಅಕ್ರಮಗಳು, ಅನಗತ್ಯ ಗೊಂದಲ, ಅನಾನುಕೂಲಗಳನ್ನು ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ, ಪರೀಕ್ಷಾ ನಿಯೋಜಿತ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಶಿಕ್ಷಣ ಇಲಾಖೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸೋಮವಾರ (ಮಾ.18) ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಮಾದರಿ ನೀತಿ ಸಂಹಿತೆ ಜಾರಿ: ರಾಜಕೀಯ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕಡ್ಡಾಯ

ಬೆಳಗಾವಿ, – ಬೆಳಗಾವಿ-02 ಲೋಕಸಭಾ ಚುನಾವಣೆ ಕ್ಷೇತ್ರ,ದ ವ್ಯಾಪ್ತಿಯಲ್ಲಿರುವ ಬೆಳಗಾವಿ ಉತ್ತರ-11 ಹಾಗೂ ಬೆಳಗಾವಿ ದಕ್ಷಿಣ-12 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದಲ್ಲಿ ಪೂರ್ವಾನುಮತಿಯನ್ನು ಪಡೆಯಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಮಾರ್ಚ್ 16, 2024 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಯಾವುದೇ ಕಾರ್ಯಕ್ರಮವನ್ನು ಆಯೋಜಿಸಬೇಕಾದಲ್ಲಿ “SUVIDHA” ವೆಬ್‌ಸೈಟಿನಲ್ಲಿ 48 ಗಂಟೆಯೊಳಗೆ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟಂತೆ …

Read More »

ಎಎಸ್ಐ ಸಾವು- ಪಿಎಸ್ಐ ಸಸ್ಪೆಂಡ್; ಬೆಳಗಾವಿ ಎಸ್ಪಿ ಕಳಕಳಿಗೆ ಸೆಲ್ಯೂಟ್!

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯರಗಟ್ಟಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಘಟನೆ ಬೆನ್ನಲ್ಲೇ ದೊಡವಾಡ ಠಾಣೆ ಪಿಎಸ್ಐ‌‌ ನಂದೀಶರನ್ನು ಅಮಾನತು ಮಾಡಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದೇ ಎಎಸ್ಐ ಸಾವಿಗೆ ಕಾರಣ ಎಂಬುದು ಸಾಬೀತಾಗಿದೆ. ಯರಗಟ್ಟಿ ಪಟ್ಟಣದ ವಿಜಯಕಾಂತ ಮಿಕಲಿ (51) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಎಎಸ್ಐ. ಇವರು ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್ಐ …

Read More »

ಸ್ಥಳೀಯ ನಾಯಕರ ಒಗ್ಗಟ್ಟು,ಶೆಟ್ಟರ್ ಗೆ ಬಿಕ್ಕಟ್ಟು,ಬಿಜೆಪಿಯಲ್ಲಿ ಯಡವಟ್ಟು….!!!

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರ್ರದ ಬಿಜೆಪಿ ಟಿಕೆಟ್ ಇನ್ನುವರೆಗೆ ಅಧಿಕೃತವಾಗಿ ಘೋಷಣೆ ಆಗಿಲ್ಲ ಆದ್ರೆ ಈ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಆಗೋದು ಖಚಿತವಾದ ಬಳಿಕ, ಬೇರೆ ಜಿಲ್ಲೆಯ ನಾಯಕರಿಗೆ ಬೆಳಗಾವಿಯಿಂದ ಟಿಕೆಟ್ ಬೇಡ,ಎನ್ನುವ ಅಪಸ್ವರ ಶುರುವಾಗಿದ್ದು ಚುನಾವಣೆಯ ಆರಂಭದಲ್ಲೇ ಬಿಜೆಪಿಯಲ್ಲಿ ಬಿಕ್ಕಟ್ಟು ಎದುರಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಿಂದ ಟಿಕೆಟ್ ಬೇಡ ಎಂದು ನೇರವಾಗಿ ಬೆಳಗಾವಿಯ ಯಾವ ಬಿಜೆಪಿ ನಾಯಕನೂ ಹೇಳಿಲ್ಲ,ಆದ್ರೆ ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ,ಶಾಸಕ …

Read More »

ದಿಢೀರ್‌ ಬೆಳಗಾವಿಗೆ ಜಗದೀಶ್ ಶೆಟ್ಟರ್ ಎಂಟ್ರಿ…!!

ಬೆಳಗಾವಿ- ಇಂದು ಮಧ್ಯಾಹ್ನ ಬಿಜೆಪಿ ಮುಖಂಡ ಪ್ರಭಾಕರ್ ಕೋರೆ ಅವರ ಮನೆಯಲ್ಲಿ ಬೆಳಗಾವಿ ಜಿಲ್ಲೆಯ ಅತೃಪ್ತ ಬಿಜೆಪಿ ನಾಯಕರ ಹೈ- ಪವರ್ ಮೀಟೀಂಗ್ ನಡೆದ ಬೆನ್ನಲ್ಲಿಯೇ ಸೂರ್ಯ ಮುಳುಗಿ ಕತ್ತಲು ಆವರಿಸುತ್ತಿದ್ದಂತೆಯೇ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ದಿಢೀರ್ ಬೆಳಗಾವಿಗೆ ಆಗಮಿಸಿದ್ದಾರೆ. ಇಂದು ಮಧ್ಯಾಹ್ನ ಬಿಜೆಪಿ ಹಿರಿಯ ಮುಖಂಡ ಪ್ರಭಾಕರ್ ಕೋರೆ ಅವರ ನಿವಾಸದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,ಶಾಸಕ ಅಭಯ ಪಾಟೀಲ, ಮಾಜಿ ಶಾಸಕ …

Read More »

ಬೆಳಗಾವಿ ಬುಡಾ ಅಧ್ಯಕ್ಷರಾಗಿ ಲಕ್ಷ್ಮಣರಾವ್ ಚಿಂಗಳೆ….!!

      ಬೆಳಗಾವಿ- ಬೆಳಗಾವಿಯ ಬುಡಾ ಅಧ್ಯಕ್ಷರನ್ನಾಗಿ ಹಾಲುಮತ ಸಮುದಾಯದ ಮುಖಂಡ ಲಕ್ಷ್ಮಣರಾವ್ ಚಿಂಗಳೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ,ಕುರುಬ ಸಮುದಾಯದ ಹಿರಿಯ ನಾಯಕ ಲಕ್ಷ್ಮಣರಾವ್ ಚಿಂಗಳೆ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಆದೇಶ ಪತ್ರಕ್ಕೆ ಮುಖ್ಯಮಂತ್ರಿ ಸಿದ್ರಾಮಯ್ಯ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದ್ದು ನಾಳೆ …

Read More »

ಹೆಬ್ಬಾಳಕರ್ ಫ್ಯಾಮಿಲಿ ಪಾಲಿಟೀಕ್ಸ್ ಬಿಜೆಪಿಯಿಂದ ಬ್ಯಾನರ್….!!

ಬೆಳಗಾವಿ – ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿಲ್ಲ ಆದ್ರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮರ ಘೋಷಣೆ ಆದಂತೆ ಕಾಣುತ್ತಿದೆ.ಯಾಕಂದ್ರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕುಟುಂಬ ರಾಜಕಾರಣ ಕುರಿತು ಟೀಕಿಸಿ ,ಬಿಜೆಪಿ ಮುಖಂಡ ಧನಂಜಯ ಜಾಧವ ಹಾಕಿರುವ ಬ್ಯಾನರ್ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ ಧನಂಜಯ ಜಾಧವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕುಟುಂಬ ರಾಜಕಾರಣ ಟೀಕಿಸಿ,ಬೆಳಗಾವಿ ನಗರ ಮತ್ತು ಗ್ರಾಮೀಣ …

Read More »

ಜಗದೀಶ್ ಶೆಟ್ಟರ್ ಗೆ, ಈಗ ಬೀಗರ ಕ್ಷೇತ್ರ ಬೆಳಗಾವಿಯೇ ಗತಿ…!!

ಬೆಳಗಾವಿ- ಬಿಜೆಪಿ ಮುಖಂಡ,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಅಥವಾ ಹಾವೇರಿಯಿಂದ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವ ಒಲವು ಇತ್ತು,ಆದ್ರೆ ಈ ಎರಡೂ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳು ಘೋಷಣೆಯಾಗಿದ್ದು ಜಗದೀಶ್ ಶೆಟ್ಟರ್ ಅವರಿಗೆ ಈಗ ಬೀಗರ ಕ್ಷೇತ್ರ ಬೆಳಗಾವಿಯೇ ಗತಿ ಎಂದು ಹೇಳಲಾಗುತ್ತಿದೆ. ಜಗದೀಶ್ ಶೆಟ್ಟರ್ ಅವರು ಲೋಕಸಭೆಗೆ ಸ್ಪರ್ದೆ ಮಾಡುವದು ಖಚಿತವಾದ್ರೆ ಅವರಿಗೆ ಬೆಳಗಾವಿ ಕ್ಷೇತ್ರವೇ ಉಳಿದಿರುವ ದಾರಿ, ಅವರು ನಿಲ್ತಾರೋ ಅಥವಾ ಅವರ ಸೊಸೆ ಸುರೇಶ್ ಅಂಗಡಿ …

Read More »

ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಫೈನಲ್…

ಬೆಳಗಾವಿ- ಕೊನೆಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಘೋಷಣೆಯಾಗಿದ್ದು ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಹೆಸರು ಘೋಷಣೆಯಾಗಿದೆ. ಬೆಳಗಾವಿ,ಹಾಗೂ ಕೆನರಾ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಎರಡನೆಯ ಪಟ್ಟಿಯಲ್ಲೂ ಘೋಷಣೆಯಾಗಿಲ್ಲ,ಈ ಎರಡೂ ಕ್ಷೇತ್ರಗಳು ಈವರೆಗೂ ಕಗ್ಗಂಟಾಗಿವೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅನೇಕ ಆಕಾಂಕ್ಷಿಗಳು ಇದ್ದಾರೆ ಬೆಳಗಾವಿ ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತದೆ ಎನ್ನುವ ವಿಚಾರ ತೀವ್ರ ಕುತೂಹಲ ಕೆರಳಿಸಿದೆ.

Read More »