ಗಾಯಗೊಂಡಿರುವ ಅಂಗನವಾಡಿ ಸಹಾಯಕಿ…. ಆರೋಪಿ …….. ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಅಂಗನವಾಡಿ ಮಕ್ಕಳು ಹೂವು ಕಿತ್ತಿದ್ದಾರೆ ಎಂದು ಅಂಗನವಾಡಿ,ಸಹಾಯಕಿ ಮೇಲೆ ರಾಕ್ಷಸಿ ವರ್ತನೆ ತೋರಿದ ದುಷ್ಟ ಆಕೆಯ ಮೂಗನ್ನೆ ಕತ್ತರಿಸಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಈ ನಡೆದ ಘಟನೆ.ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ(50) ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು …
Read More »ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿತ್ತು…..!!!
ಬೆಳಗಾವಿ- ಮದುವೆಗಾಗಿ ಬೀಗರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ರು ಮಂಟಪದಲ್ಲಿ ಮದುವೆಯ ಮುನ್ನ ಹಳದಿ ಕಾರ್ಯಕ್ರಮ ನಡೆದಿತ್ತು.ವರ ವರದಕ್ಷಣೆಗಾಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದಿದೆ. ವರದಕ್ಷಣೆಗೆ ಡಿಮ್ಯಾಂಡ್ ಮಾಡಿದ ವರ ಸರ್ಕಾರಿ ನೌಕರ, ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ ಸರ್ಕಾರಿ ನೌಕರ ಬೆಳಗಾವಿ ಡಿಸಿ ಕಚೇರಿಯಲ್ಲಿ SDA ಆಗಿ ಕೆಲಸ ಮಾಡುತ್ತಿದ್ದಾನೆ. ಕೇಳಿದಷ್ಟು ವರದಕ್ಷಣೆ ಕೊಡಲೇ …
Read More »ಕ್ರಾಂತಿವೀರನ ಉತ್ಸವಕ್ಕೆ ಕೋಟಿ ಕೊಡ್ತಾರೆ.ಸಿಎಂ ಬರ್ತಾರೆ…!!
ಜ.17, 18 ರಂದು ಸಂಗೊಳ್ಳಿ ಉತ್ಸವ: ಶಾಸಕ ಮಹಾಂತೇಶ ಕೌಜಲಗಿ ಬೆಳಗಾವಿ,-ಈ ಬಾರಿ ಸಂಗೊಳ್ಳಿ ಉತ್ಸವವನ್ನು ಜ.17 ಹಾಗೂ 18 ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು. ಸಂಗೊಳ್ಳಿ ರಾಯಣ್ಣ ಸ್ಮಾರಕ ಕಲ್ಯಾಣ ಮಂಟಪದಲ್ಲಿ ಮಂಗಳವಾರ(ಜ.2) ನಡೆದ ಸಂಗೊಳ್ಳಿ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಉತ್ಸವಕ್ಕೆ ಸರಕಾರ ಒಂದು ಕೋಟಿ ರೂಪಾಯಿ …
Read More »ಲವ್ ಕ್ರಾಸೀಂಗ್..ಬುದ್ದಿಮಾತು ಹೇಳಿದ ಪಂಚರಿಗೆ ಡ್ಯಾಶೀಂಗ್……!!!
ಬೆಳಗಾವಿ – ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ಲವ್ ಪ್ರಕರಣಕ್ಕೆ ಸಂಭದಿಸಿದಂತೆ ಗಲಾಟೆ ನಡೆದಿದೆ. ಲವ್ ವಿಚಾರಲ್ಲಿ ಬುದ್ದಿಮಾತು ಹೇಳಿದ ಪಂಚರನ್ನೇ ಟಾರ್ಗೆಟ್ ಮಾಡಿ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂ ಗೊಳಿಸಿದ ಘಟನೆ ನಡೆದಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಜನ ಯುವಕರು ಮುಸುಕು ಹಾಕಿ ತಲ್ವಾರ್ ತ್ತು ರಾಡ್ ಹಿಡಿದುಕೊಂಡು ನಾವಗೆ ಗ್ರಾಮದ ಪಂಚರ ಮನೆಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸ್ಥಳಕ್ಕೆ …
Read More »ಬೆಳಗಾವಿಯಲ್ಲಿ ಶುರುವಾಗಿದೆ, ಓಲ್ಡ್ ಮ್ಯಾನ್ ಮಾರ್ಕೆಟ್….!!
ಬೆಳಗಾವಿ- ಬೆಳಗಾವಿಯ ಕುಂದಾ,ಕರದಂಟು,ಫೇಮಸ್ ಇದೆ.ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಓಲ್ಡ್ ಮ್ಯಾನ್ ಕೂಡಾ ಫೇಮಸ್ ಆಗುತ್ತಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಓಲ್ಡ್ ಮ್ಯಾನ್ ಮಾರ್ಕೆಟ್ ಶುರುವಾಗಿದೆ. ವರ್ಷದ ಕೊನೆಯ ದಿನ ರಾತ್ರಿ ಹನ್ನೆರಡು ಗಂಟೆಗೆ ಮುಗಿದು ಹೋದ ವರ್ಷದ ಓಲ್ಡ್ ಮ್ಯಾನ್ ದಹನ ಮಾಡಿ ಹೊಸ ವರ್ಷವನ್ನು ಸ್ವಾಗತಿಸುವದು ಸಂಪ್ರದಾಯವೋ ಅಥವಾ ಪಕ್ಕದ ಗೋವಾ ರಾಜ್ಯದಿಂದ ನುಸುಳಿದ ಸಂಸ್ಕೃತಿಯೋ ಗೊತ್ತಿಲ್ಲ.ಆದ್ರೆ ಬೆಳಗಾವಿಯಲ್ಲಿ ಈ ಪದ್ದತಿಯನ್ನು ಅನುಸರಿಸುತ್ತಾರೆ. ಮಕ್ಕಳು ಯುವಕರು ಮದ್ಯರಾತ್ರಿ …
Read More »ಕಾಡಿನಲ್ಲಿ ವಿದ್ಯಾರ್ಥಿಗಳಿಂದ ಎಡವಟ್ಟು, ನಿನ್ನೆ ರಾತ್ರಿ ಕಣ್ಮರೆ, ಬೆಳಗ್ಗೆ ಪ್ರತ್ಯಕ್ಷ….!!!
ಬೆಳಗಾವಿ-ಚಾರಣಕ್ಕೆ ಹೋಗಿ ಕಾಡಿನಲ್ಲಿ ಕಣ್ಮರೆಯಾಗಿದ್ದ ಬೆಳಗಾವಿಯ ಜಿಎಸ್ಎಸ್ ಕಾಲೇಜಿನ ಒಂಬತ್ತು ಜನ ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಬೆಳಗಾವಿಯ ಜಿಎಸ್ಎಸ್ ಕಾಲೇಜಿನ 9 ವಿದ್ಯಾರ್ಥಿಗಳು ಚಾರಣಕ್ಕೆ ಹೋಗಿ ಶುಕ್ರವಾರ ರಾತ್ರಿ ಕಣ್ಮರೆಯಾಗಿದ್ದರು ಕಾಡಿ ನಲ್ಲಿ ಹಾದಿ ತಪ್ಪಿಸಿಕೊಂಡು ಕಾಡಿನಲ್ಲೇ ಸಿಲುಕಿದ್ದ ಒಂಬತ್ತು ಜನ ವಿಧ್ಯಾರ್ಥಿಗಳು ಶನಿವಾರ ಬೆಳಗ್ಗೆ ಸುರಕ್ಷಿತವಾಗಿ ಪ್ರತ್ಯಕ್ಷರಾಗಿದ್ದಾರೆ. ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಾವಾಣಿ ಫಾಲ್ಸ್ ನೋಡಲು ವಿದ್ಯಾರ್ಥಿಗಳು ಹೋಗಿದ್ದರು.ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ಜಾವಾಣಿ ಫಾಲ್ಸ್ …
Read More »ಫಲಕದಲ್ಲಿ ಕನ್ನಡದ ತಿಲಕ…ಕರವೇ ಹೋರಾಟಕ್ಕೆ ಕಡ್ಡಾಯದ ಸ್ಪಂದನೆ. ಸಿಎಂ ಗೆ ವಂದನೆ…!!
ನಾಮ ಫಲಕ ಜಾಹಿರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕರವೇ ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಈ ವಿಚಾರದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಿಎಂ ಸಿದ್ರಾಮಯ್ಯ ಗಡುವು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ರಾಮಯ್ಯ ಕನ್ನಡಿಗರ ಮೆಚ್ವುಗೆಗೆ ಪಾತ್ರರಾಗಿದ್ದಾರೆ. ಸಿದ್ರಾಮಯ್ಯ ಕನ್ನಡದ ಸಿಎಂ ಎನಿಸಿಕೊಂಡಿದ್ದಾರೆ. ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಶೇ. 60 …
Read More »ಯುವನಿಧಿ” ಫಲಾನುಭವಿಗಳ ನೋಂದಣಿ ಡಿ.26 ರಿಂದ ಆರಂಭ..
ಬೆಳಗಾವಿ, -ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು. ಯುವನಿಧಿ ಅನುಷ್ಠಾನ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು. ಬೆಳಗಾವಿ …
Read More »ಬೆಳಗಾವಿ “ಕೈ” ಟೆಕೆಟ್ ಗಾಗಿ ಪ್ರಬಲ ಪೈಪೋಟಿ…!!
ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು,ಕಾಂಗ್ರೆಸ್ ಟಿಕೆಟ್ ಗಾಗಿ ಹನ್ನೊಂದು ಜನ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ.ಹತ್ತು ಜನ ಆಕಾಂಕ್ಷಿಗಳು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಅರ್ಜಿ ಸಲ್ಲಿಸಿದ್ದು ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ್ ಅವರಿಗೆ ಟೆಕೆಟ್ ನೀಡುವಂತೆ ಅವರ ಬೆಂಬಲಿಗರು ಸಚಿವ ತಂಗಡಿಗೆ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸಹಿತ …
Read More »ಕೋವೀಡ್ ಸಿಎಂ ಸಿದ್ರಾಮಯ್ಯ ಹೇಳಿದ್ದೇನು ಗೊತ್ತಾ..?
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಇಂದು ಕೋವಿಡ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಕ್ರಿಸ್ಮಸ್ …
Read More »