.ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ನೌಕರರ ಅಚ್ಚುಮೆಚ್ಚಿನ ನಾಯಕ ಅರ್ಜುನ್ ದೇಮಟ್ಟಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.ಅರ್ಜುನ್ ದೇಮಟ್ಟಿ ಅವರು ಪಾಲಿಕೆಯ ನೌಕರರ ಸಂಘದ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಮಾಡಿದ್ದರು.ಡಾ.ಬಾಬಾಸಾಹೇಬ ಅಂಬೇಡ್ಕರ್ ಉತ್ಸವ ಸಮೀತಿಯ ಅಧ್ಯಕ್ಷರಾಗಿ ಸೇವೆ ಮಾಡಿದ ಅವರು ಅಪಾರ ಜನಮೆಚ್ಚುಗೆ ಗಳಿಸಿದ್ದರು.
Read More »ಅನ್ಯತಾ ಭಾವಿಸಬೇಡಿ, ನೋವಾಗಿದ್ದರೆ ವಿಷಾಧಿಸುತ್ತೇನೆ…
ಸಕಾರಾತ್ಮಕ ದೃಷ್ಟಿಕೋನದಿಂದ ಮಾತನಾಡಿದ್ದೇನೆ, ಅನ್ಯಥಾ ಭಾವಿಸಬೇಡಿ – ಸಚಿವ ಲಕ್ಷ್ಮೀ ಹೆಬ್ಬಾಳಕರ್ ಮನವಿ ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನವೆಂಬರ್ 11ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ಆಡಿದ ಮಾತಿನಿಂದ ಬೆಳಗಾವಿಯ ಪತ್ರಕರ್ತ ಸಹೋದರರಿಗೆ ನೋವಾಗಿದ್ದರೆ ನಾನು ವಿಷಾಧಿಸುತ್ತೇನೆ. ಅಲ್ಲಿ ನಾನು ಸಕಾರಾತ್ಮಕ ದೃಷ್ಟಿಕೋನದಿಂದ ಮಾತನಾಡಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಈ ಕುರಿತು …
Read More »ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಎಐಸಿಸಿ,ಕೆಪಿಸಿಸಿ ಗೆ ದೂರು ನೀಡಲು,ಬೆಳಗಾವಿ ಪತ್ರಕರ್ತರ ನಿರ್ಧಾರ.
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಪತ್ರಕರ್ತರು ಅಪ್ರಭುದ್ಧರು ಎನ್ನುವ ಅರ್ಥದಲ್ಲಿ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಇವತ್ತು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರಿಂದ ಖಂಡನಾ ಸಭೆ ನಡೆಸಲಾಯಿತು. ಸಭೆಯಲ್ಲಿ 42 ಕ್ಕೂ ಅಧಿಕ ಹಿರಿಯ ಪತ್ರಕರ್ತರು ಭಾಗಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಲಾಯಿತು. ಸಚಿವೆ ಹೆಬ್ಬಾಳ್ಕರ ಅವರು ಇತ್ತೀಚೆಗೆ ಪತ್ರಕರ್ತರ ಜೊತೆ ನಡೆದುಕೊಳ್ಳುತ್ತಿರುವ ನಡುವಳಿಕೆ ಬಗ್ಗೆ ಹಿರಿಯ ಪತ್ರಕರ್ತರು …
Read More »ಹತ್ತು ದಿನ ಬೆಳಗಾವಿ ಮಹಾನಗರದಲ್ಲಿ ರಾಜ ಕಳೆ..!!
ಬೆಳಗಾವಿ-ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ.ಗಂಟು ಮೂಟೆ ಕಟ್ಟಿಕೊಂಡು ಸರ್ಕಾರ ಹತ್ತು ದಿನ ಬೆಳಗಾವಿಯಲ್ಲಿ ಠಿಖಾನಿ ಹೂಡಲಿದೆ. ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಈಗ ರಾಜಕಳೆ,ಯಾಕಂದ್ರೆ ಅಧಿವೇಶನಕ್ಕೆ ಭರ್ಜರಿ ತಯಾರಿ ನಡೆದಿದೆ.ಅಧಿವೇಶನಕ್ಕೆ ಬರುವ ಗಣ್ಯರಿಗೆ ಅಧಿಕಾರಿಗಳಿಗೆ,ಬೆಂಗಳೂರಿನಿಂದ ಬರುವ ಪತ್ರಕರ್ತರಿಗೆ ಊಟ,ವಸತಿ,ವಾಹನ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸುವ ಕಾರ್ಯ ಭರದಿಂದ ಸಾಗಿದೆ.ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರತಿದಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ …
Read More »ಜಮೀನು ಕಳೆದುಕೊಂಡ ರೈತರಿಗೆ ಲಕ್ಷ್ಮೀ ಕೃಪೆ….!!
ಬೆಳಗಾವಿ-ಬೆಳಗಾವಿಯ ಹಲಗಾ ಬಳಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಮೀನು ನೀಡಿರುವ ರೈತರಿಗೆ ಪರಿಹಾರ ಸಿಕ್ಕಿಲ್ಲ.ಹೆಚ್ಚಿನ ಪರಿಹಾರಕ್ಕೆ ಕಳೆದ ಆರು ವರ್ಷಗಳಿಂದ ರೈತರು ಅಲೆದಾಡುತ್ತಿದ್ದು ಅವರಿಗೆ ಪರಿಹಾರ ಕೊಡಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಂದು ಡಿಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು. ಹಲಗಾ ಗ್ರಾಮದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ(STP ಪ್ಲಾಂಟ್) ನಿರ್ಮಾಣಕ್ಕೆ 2019ರಲ್ಲಿ ಕಾಮಗಾರಿ ಆರಂಭಿಸಲಾಗಿದೆ.ಬೆಳಗಾವಿ ನಗರದ ಅಮೃತ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗೆ2019ರಲ್ಲಿ ಭೂ ಸ್ವಾಧೀನ ಆಗಿತ್ತು,ಎಕರೆ …
Read More »ಬೆಳಗಾವಿ ಮಂದಿಗೆ ದೀಪಾವಳಿ ಹಬ್ಬದ ಖುಷಾಲಿ. ಗುಡ್ ನ್ಯುಸ್……!!!
ಬೆಳಗಾವಿ: ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅತ್ಯಂತ ಕ್ರೀಯಾಶೀಲರಾಗಿದ್ದು ದೀಪಾವಳಿ ಹಬ್ಬದ ದಿನ ಬೆಳಗಾವಿ ಮಂದಿಗೆ ವಿಶೇಷ ಗೀಫ್ಟ್ ಕೊಟ್ಟಿದ್ದಾರೆ. ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರು- ಧಾರವಾಡದಿಂದ ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ …
Read More »ಉಡುಪಿಯಲ್ಲಿ ನಾಲ್ಕು ಮರ್ಡರ್ ಮಾಡಿದ ಪಾಪಿ, ಬೆಳಗಾವಿಯಲ್ಲಿ ಅರೆಸ್ಟ್..
ಬೆಳಗಾವಿ- ಉಡುಪಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ ಪರಾಯಾಗಿ,ಬೆಳಗಾವಿಯಲ್ಲಿ ಅಡಗಿದ್ದ ಆರೋಪಿಯನ್ನು ಉಡುಪಿ ಪೋಲೀಸರು ಬಂಧಿಸಿದ್ದಾರೆ. ಆರೋಪಿ ಪ್ರವೀಣ್ ಅರುಣ ಚೌಗಲೆ ಎಂಬಾತ ನವ್ಹೆಂಬರ್ 12 ರಂದು ಉಡುಪಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ,ಬೆಳಗಾವಿಯ ಬಸವನ ಕುಡಚಿಯಲ್ಲಿ ಆತನ ಮಾವನ ಮನೆಯಲ್ಲಿ ಅಡಗಿದ್ದ ಮೋಬೈಲ್ ನೆಟವರ್ಕ್ ಆಧರಿಸಿ ಉಡುಪಿ ಪೋಲೀಸರು ಬೆಳಗಾವಿಗೆ ಧಾವಿಸಿ ನಾಲ್ಕು ಜನರ ಕೊಲೆ ಮಾಡಿದ …
Read More »ಬಾಂಬ್ ಬೆದರಿಕೆ ಕರೆ ಮಾಡಿದ ಬೆಳಗಾವಿ ಯುವತಿಯ ಮನೆಗೆ ಬೆಂಗಳೂರು ಪೋಲೀಸರು…
ಬೆಳಗಾವಿ-ಬೆಂಗಳೂರಿನ ಖಾಸಗಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ ಬೆಳಗಾವಿಯ ಯುವತಿಯ ಮನೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಠಾಣೆಯ ಪೋಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬೆಳಗಾವಿಯ ಶಾಹು ನಗರದಲ್ಲಿರುವ ಶೃತಿ ಶೆಟ್ಟಿ ಎಂಬ ಯುವತಿಯು ತನ್ನ ತಾಯಿಯ ಮೋಬೈಲ್ ನಿಂದ ಬೆಂಗಳೂರಿನ ಟಿಸಿಎಸ್ ಕಂಪನಿಯ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ವಿಚಾರದಲ್ಲಿ ಬೆಂಗಳೂರಿನ ಪೋಲೀಸರ ತಂಡ ಬೆಳಗಾವಿಗೆ ಆಗಮಿಸಿ ಇಂದು ಸಂಜೆ ಯುವತಿ …
Read More »ತೆಲಂಗಾಣ ಇಲೆಕ್ಷನ್ ದಲ್ಲಿ ಕೈ ಮಂತ್ರ, ಚನ್ನರಾಜ ತಂತ್ರ…!!
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ವೀಕ್ಷಕರಾಗಿ ನೇಮಕವಾಗಿರುವ ಬೆಳಗಾವಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹೈದರಾಬಾದ್ ನಲ್ಲಿರುವ ಟಿಪಿಸಿಸಿ ಕಚೇರಿಗೆ ಭೇಟಿ ನೀಡಿ ಪೂರ್ವಭಾವಿ ಸಭೆ ನಡೆಸಿದರು. ವನಪರ್ತಿ ವಿಧಾನಸಭಾ ಕ್ಷೇತ್ರಕ್ಕೆ ಚನ್ನರಾಜ ಹಟ್ಟಿಹೊಳಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಕ್ಷೇತ್ರದ ಹಾಗೂ ಅಭ್ಯರ್ಥಿಯ ಮಾಹಿತಿ ಪಡೆದು, ಸ್ಥಳೀಯ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಅವರು, ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರಗಳ ಕುರಿತು ವಿವರಿಸಿದರು. ಕಾರ್ಯಕರ್ತರ …
Read More »ಬೆಳಗಾವಿಯಲ್ಲಿ ಶುರುವಾಯ್ತು ಊಸಾಬರಿ ಕಟ್ಟೆ….!!!
ಬೆಳಗಾವಿ- ಬೆಳಗಾವಿಯಲ್ಲಿ ತಿನಿಸು ಕಟ್ಟೆ ನಿರ್ಮಿಸಿ ರಾಜ್ಯದ ಗಮನ ಸೆಳೆದಿದ್ದ ಶಾಸಕ ಅಭಯ ಪಾಟೀಲ ಈಗ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಲವು ಕಡೆ ಊಸಾಬರಿ ಕಟ್ಟೆಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸಂಜೆಯಾದ್ರೆ ಸಾಕು,ಹಳ್ಳೆಯ ಜನ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯೋದನ್ನು ನೋಡಿದ್ದೇವೆ.ಸಿಟಿಯಲ್ಲಿ ಈ ರೀತಿಯ ಹರಟೆ ಹೊಡೆಯಲು ಜಾಗವೇ ಸಿಗೋದಿಲ್ಲ.ರಸ್ತೆ ಬದಿಯಲ್ಲಿ ನಿಂತ್ಕೊಂಡು ಹರಟೆ ಹೊಡೆದ್ರೆ ಪೋಲೀಸರು ಸೀಟಿ ಊದಿ ಓಡಿಸ್ತಾರೆ.ಊರ ಊಸಾಬರಿ ಮಾಡುವವರು ಒಂದು ಕಡೆ …
Read More »