Home / Breaking News / ವ್ಯಾಕ್ಸೀನ್ ವೆಲ್ ಕಮ್ ಮಾಡಲು ಬೆಳಗಾವಿಯಲ್ಲಿ ಸಕಲ ಸಿದ್ಧತೆ

ವ್ಯಾಕ್ಸೀನ್ ವೆಲ್ ಕಮ್ ಮಾಡಲು ಬೆಳಗಾವಿಯಲ್ಲಿ ಸಕಲ ಸಿದ್ಧತೆ

ಬೆಳಗಾವಿ- ಯಾವುದೇ ಕ್ಷಣದಲ್ಲಿ ಕುಂದಾನಗರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕೋವೀಡ್ ವ್ಯಾಕ್ಸೀನ್ ಲಸಿಕೆ ಬರುವ ಸಾಧ್ಯತೆ ಇದೆ.

ಬೆಳಗಾವಿಗೆ ಬರುವ ಕೋವೀಡ್ ವ್ಯಾಕ್ಸೀನ್ ಸ್ಟೋರ್ ಮಾಡಲು ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗಿದ್ದು,ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.ವ್ಯಾಕ್ಸೀನ್ ಯಾವಾಗ ಬರುತ್ತೇ ಅಂತಾ ದಾರಿ ಕಾಯುತ್ತಿದೆ.

ವಿಮಾನದ ಮೂಲಕ ಬೆಳಗಾವಿಗೆ ವ್ಯಾಕ್ಸೀನ್ ಬರುತ್ತೋ ಅಥವಾ ರಸ್ತೆಯ ಮೂಲಕ ಬರುತ್ತೋ ಅನ್ನೋದು ಗೊತ್ತಿಲ್ಲ ಆದ್ರೆ ಎಲ್ಲರೂ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವ್ಯಾಕ್ಸೀನ್ ಬರುತ್ತದೆ ಎಂದು ದಾರಿ ಕಾಯುತ್ತಿದ್ದಾರೆ.

ಮಧ್ಯಾಹ್ನ 12.30ಕ್ಕೆ ಬೆಳಗಾವಿ ಏರ್‌ಪೋರ್ಟ್‌ಗೆ ಕೊರೊನಾ‌ ಲಸಿಕೆ ಏರ್‌ಲಿಫ್ಟ್ ಸಾಧ್ಯತೆ ಇದೆ. ಆದ್ರೆ ಬೆಳಗಾವಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇನ್ನೂವರೆಗೆ ಅಲಾಟ್‌ಮೆಂಟ್ ಮೆಸೇಜ್ ಬಂದಿಲ್ಲ.

ಬೆಳಗಾವಿಯಲ್ಲಿ ಲಸಿಕೆ ಏರ್‌ಲಿಫ್ಟ್ ಆದ್ರೆ ಸಂಗ್ರಹ ಮತ್ತು ಸಾಗಾಟಕ್ಕೆ ಸಕಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಏರ್‌ಪೋರ್ಟ್‌ನಿಂದ ಇನ್ಸೂಲೇಟೆಡ್ ವ್ಯಾನ್‌ನಲ್ಲಿ ವ್ಯಾಕ್ಸಿನ್ ಡಿಪೋಗೆ ಶಿಫ್ಟ್ ಮಾಡಲಿರುವ ಸಿಬ್ಬಂದಿ ಈಗಾಗಲೇ ಈ ಕುರಿತು ಡ್ರೈರನ್ ಕೂಡಾ ಮಾಡಿದ್ದಾರೆ.

ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ವ್ಯಾಕ್ಸಿನ್ ಸ್ಟೋರೇಜ್‌ಗೆ ವ್ಯವಸ್ಥೆ ಮಾಡಲಾಗಿದೆ. ವ್ಯಾಕ್ಸಿನ್ ಡಿಪೋದಲ್ಲಿರುವ ವಾಕ್ ಇನ್ ಕೂಲರ್‌ನಲ್ಲಿ ವ್ಯಾಕ್ಸಿನ್‌ಗಳ ಸಂಗ್ರಹ. ಮಾಡಲಾಗುತ್ತದೆ. ಇಂದು ಸುಮಾರು ನಾಲ್ಕು ಲಕ್ಷ ಲಸಿಕೆಗಳು ಬೆಳಗಾವಿಗೆ ಸರಬರಾಜು ಆಗುವ ನಿರೀಕ್ಷೆ ಇದೆ.

ವ್ಯಾಕ್ಸಿನ್ ಡಿಪೋದಲ್ಲಿ ಸಂಗ್ರಹ ಮಾಡಿದ ಲಸಿಕೆಗಳು 8 ಜಿಲ್ಲೆಗಳಿಗೆ ರವಾನೆ ಆಗಲಿವೆ ಬೆಳಗಾವಿಯಿಂದಲೇ
ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಸೇರಿ 8 ಜಿಲ್ಲೆಗಳಿಗೆ ಲಸಿಕೆ ರವಾನೆ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ.ಲಸಿಕೆ ಯಾವಾಗ ಬರುತ್ತೇ..ಹೇಗೆ ಬರುತ್ತೇ..ಎಷ್ಟು ಬರುತ್ತೇ ಅನ್ನೋ ಮಸ್ಸೇಜ್ ಬರುವದಷ್ಟೇ ಬಾಕಿ ಇದೆ …

Check Also

ಮಳೆ ಜೋರ್…ಬೆಳಗಾವಿಗೆ ಬಂದ್ರು ಕಾರಜೋಳ್…!!!

ಬೆಳಗಾವಿ- ಪಕ್ಕದ ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ …

Leave a Reply

Your email address will not be published. Required fields are marked *