Breaking News

ಬೆಳಗಾವಿ ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆ ಇಬ್ಬರು ಆರೋಪಿಗಳ ಅರೆಸ್ಟ್…

ಬೆಳಗಾವಿ ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಪೋಲೀಸರು ಖೋಟಾ ನೋಟು ಬದಲಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿ ಖಾಕಿ ಖದರ್ ತೋರಿಸಿದ್ದಾರೆ.

ಬೋರಗಾವದಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೋಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾವ ಗ್ರಾಮದಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆ ಮಾಡಲಾಗುತ್ತಿತ್ತು

ಬಂಧಿತರಿಂದ 7 ಸಾವಿರ ನಕಲಿ ನೋಟು, ಪ್ರಿಂಟರ್, ಇತರ ಸಾಮಗ್ರಿ ಜಪ್ತಿ ಮಾಡಿರುವ ಮುರಗೋಡ ಹಾಗೂ ಸದಲಗಾ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಮುರಗೋಡದ ಬಾರ್‌ವೊಂದರಲ್ಲಿ ನಕಲಿ ನೋಟು ಚಲಾವಣೆಗೆ ಪ್ರಯತ್ನಿಸಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಮುರಗೋಡ‌‌ ಪೊಲೀಸರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಬಾರ್ ನಲ್ಲಿ ನಡೆಯುತ್ತಿದ್ದ ನಕಲಿ ಕಾರಬಾರಿಗೆ ಬ್ರೆಕ್ ಹಾಕಿದ್ದಾರೆ
.

ಯುವಕನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಬೋರಗಾವದಲ್ಲಿ ನಕಲಿ ನೋಟು ಪಡೆದ ಬಗ್ಗೆ ಮಾಹಿತಿ ನೀಡಿದ್ದಾನೆ ಬಳಿಕ ಬೋರಗಾವದಲ್ಲಿ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಪೋಲೀಸರು ಈ ವೇಳೆ ಮನೆಯಲ್ಲಿದ್ದ ಪ್ರಿಂಟರ್ ಸುಡಲು‌ ಆರೋಪಿಗಳು ಪ್ರಯತ್ನ ಮಾಡಿದ್ದರೆಂದು ಗೊತ್ತಾಗಿದೆ.

ಬೋರಗಾವ ಗ್ರಾಮದ ವಿಜಯ್ ಬೆಡಕಿಹಾಳ, ಅಕ್ಷಯ್ ವಡ್ಡರ್ ವಶಕ್ಕೆ ಪಡೆದಿರುವ ಪೋಲೀಸರು ಬಂಧಿತರಿಂದ 500 ರೂ ಮುಖಬೆಲೆಯ 14 ನಕಲಿ ನೋಟುಗಳು, ಪ್ರಿಂಟರ್ ಸೇರಿ ಇತರ ಸಾಮಗ್ರಿ ಜಪ್ತಿ ಮಾಡಿದ್ದಾರೆ.

*ಐದು ಸಾವಿರ ರೂಪಾಯಿ ಅಸಲಿ ನೋಟು ಪಡೆದು 10 ಸಾವಿರ ನಕಲಿ ನೋಟು ನೀಡುತ್ತಿದ್ದ ಆರೋಪಿಗಳು ಈಗ ಪೋಲೀಸರ ವಶದಲ್ಲಿದ್ದಾರೆ.

ಇದರ ಹಿಂದೆ ವ್ಯವಸ್ಥಿತ ಜಾಲ ಇರುವ ಶಂಕೆ ವ್ಯೆಕ್ತಪಡಿಸಿರುವ ಪೋಲೀಸರು ಪ್ರಮುಖ ಆರೋಪಿಗಾಗಿ ಶೋಧ ನಡೆಸಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *