ರಾತ್ರಿಹೊತ್ತು ಚಾಕು ತೋರಿಸಿ ಮೋಬೈಲ್,ಹಣ, ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ಅರೆಸ್ಟ್ …

 

ಬೆಳಗಾವಿ- ರಾತ್ರಿ ಹೊತ್ತು,ಬೆಳಗಿನ ಜಾವ ಅಜ್ಞಾತ ಪ್ರದೇಶದಲ್ಲಿ ವಾಹನಗಳನ್ನು ತಡೆದು,ಚಾಕು ತೋರಿಸಿ ಮೋಬೈಲ್,ಹಣ ,ಆಭರಣ ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ನ್ನು ಪತ್ತೆ ಮಾಡಿ ಒಟ್ಟು ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಸವದತ್ತಿ ತಾಲ್ಲೂಕಿನ ಮುರಗೋಡ ಠಾಣೆಯ ಪೋಲೀಸರು ಸಕ್ಸೆಸ್ ಆಗಿದ್ದಾರೆ.

ಮುರಗೋಡ ಠಾಣೆಯ ವ್ಯಾಪ್ತಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ ರೈತನ ಬೈಕ್ ಅಡ್ಡಗಟ್ಟಿ ಆತನಿಗೆ ಚಾಕು ತೋರಿಸಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ಹತ್ತು ಸಾವಿರ ರೂ ಬೆಲೆಬಾಳುವ ಮೋಬೈಲ್ ಮತ್ತು ಸುಮಾರು 15 ಸಾವಿರ ಹಣ ದೋಚಿದ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುರಗೋಡ ಪೋಲೀಸರು ಕೊನೆಗೂ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಸವದತ್ತಿ ತಾಲ್ಲೂಕಿನ 19 ವರ್ಷದ ದೇವೇಂದ್ರ ಲಕ್ಕಪ್ಪ ಶಿನೋಬಿ,ನುಗ್ಗಾನಟ್ಟಿ ಗ್ರಾಮದ 19 ವರ್ಷದ ,ದೇವಿಂದ್ರ ವಿಠ್ಠಲ ಸಣ್ಣಮ್ಮನವರ,21 ವರ್ಷದ ನುಗ್ಗಾನಟ್ಟಿ ಗ್ರಾಮದ ಶ್ರೀಶೈಲ ವಿಷ್ಣು ಹೊಂಡಪ್ಪಣ್ಣವರ,21ವರ್ಷದ ಯಮನಪ್ಪ ಯಲ್ಲನಾಯ್ಕ ಕಡೆಮನಿ ಎಂಬ ಒಟ್ಟು ನಾಲ್ಕು ಜನ ಆರೋಪಿತರನ್ನು ಬಂಧಿಸಿದ್ದಾರೆ.

ಆರೋಪಿತರಿಂದ ,ಎರಡು ಬೈಕ್,7800 ನಗದು ಹಣ, ಮತ್ತು ಹತ್ತು ಮೋಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ

ಈ ಗ್ಯಾಂಗ್ ಮುರಗೋಡ ಠಾಣೆಯ ವ್ಯಾಪ್ತಿಯಲ್ಲಿ ಆತಂಕ ಸೃಷ್ಠಿಸಿತ್ತು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *