ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯನ್ನು ಕೊಲೆ ಮಾಡಿದ ಪಾಪಿ ಪತಿ
ಬೆಳಗಾವಿ: ಹೆಣ್ಣು ಹಡೆದರೆ ಪಾಪ,ಹಡೆದವಳಿಗೆ ಅದರ ಶಾಪ ಎನ್ನುವಂತೆ ಹೆಣ್ಣು ಹಡೆದ ಹೆಣ್ಣು ಅದೆಷ್ಟೋ ಕಷ್ಟ ಅನುಭವಿಸುತ್ತಾಳೆ,ಕೊನೆಗೆ ಈ ಪಾಪಿ ಸಮಾಜದಲ್ಲಿ ಯಾವ ರೀತಿ ತನ್ನ ಜೀವ ಕೊಡುತ್ತಾಳೆ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ.ಪ್ರೇಮಿಗಳ ದಿನದಂದೇ ಪಾಪಿ ಪತಿಯೊಬ್ಬ ತನ್ನ ಮಡದಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಹತ್ಯೆಗೈದಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ವಿಜಯನಗರದ ಸರಸ್ವತಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ನಡೆದಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಕವಿತಾ ಪೀಸೆ(30) ಅವರನ್ನು ಪತಿ ಪರುಶರಾಮ ಹತ್ಯೆಗೈದಿದ್ದಾನೆ. ಕಳೆದ ಎಂಟು ವರ್ಷಗಳ ಹಿಂದೆ ಕವಿತಾ, ಪರಶುರಾಮ ಮದುವೆಯಾಗಿತ್ತು. ಈ ದಂಪತಿಗೆ ಏಳು ವರ್ಷದ ಹಾಗೂ ಆರು ತಿಂಗಳ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಸೋಮವಾರ ಕಿರಿಯ ಪುತ್ರಿಯ ಜವಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಬ್ಬರ ನಡುವೆ ಉಂಟಾದ ಕೌಟುಂಬಿಕ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡಿದೆ.
ಖಾಸಗಿ ಬ್ಯಾಂಕ್‌ನಲ್ಲಿ ಪರುಶರಾಮ ಕ್ಲರ್ಕ್ ಆಗಿದ್ದಾನೆ. ಆರೋಪಿ ಪರಶುರಾಮನನ್ನು ಕ್ಯಾಂಪ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ