Home / Breaking News / ಖಾನಾಪೂರದ ಕಾಡಿನಲ್ಲೂ ಅಭಿವೃದ್ದಿಯ ಕಮಾಲ್ ….!!

ಖಾನಾಪೂರದ ಕಾಡಿನಲ್ಲೂ ಅಭಿವೃದ್ದಿಯ ಕಮಾಲ್ ….!!

ಬೆಳಗಾವಿ-ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡುತ್ತಿದ್ದಾರೆ  .ಕ್ಷೇತ್ರದ ಕಾಡಿನಂಚಿನಲ್ಲಿರುವ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ

ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಅವರ ಅನುದಾನದಲ್ಲಿ (ಅಂದಾಜು ವೆಚ್ಚ 75 ಲಕ್ಷ ರೂಪಾಯಿ) ಖಾನಾಪುರ ತಾಲೂಕಿನ ತೋರಲಿ ಕ್ರಾಸ್ ನಿಂದ ಹಬ್ಬನಹಟ್ಟಿಯ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

ಪ್ರಚಾರದ ಹಂಗಿಲ್ಲದೇ ಕ್ಷೇತ್ರದಲ್ಲಿ ಅಬಿವೃದ್ಧಿಯ ಹೊಳೆ ಹರಿಸುತ್ತಿರುವ ಅಂಜಲಿ ನಿಂಬಾಳ್ಕರ್ ಕಾಡುವಾಸಿಗಳ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ಖಾನಾಪೂರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಇತ್ತೀಚಿಗೆ ಖಾನಾಪೂರ ಕ್ಷೇತ್ರದ ಅಭಿವೃದ್ಧಿ ಕುರಿತು ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆಯುವ ಜೊತೆಗೆ ಕಾಂಗ್ರೆಸ್ ನಾಯಕರ ಪ್ರಶಂಸೆಗೆ ಪಾತ್ರರಾಗಿದ್ದರು.

Check Also

ಬಸ್ ಕಾರು ಮುಖಾಮುಖಿ,ಬೆಳಗಾವಿಯ ನಾಲ್ಕು ಜನರ ಸಾವು…

ಬೆಳಗಾವಿ- ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಚಚಡಿ – ಗೋಂತಮಾರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ …

Leave a Reply

Your email address will not be published. Required fields are marked *