Breaking News

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ- ದೇವೇಗೌಡ

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ- ದೇವೇಗೌಡ

ಬೆಳಗಾವಿ- ಶಾಸಕ ಜಿಟಿ ದೇವೇಗೌಡ ಬಿಜೆಪಿ ಪರ ಓಟಿಂಗ್ ಮಾಡಿದ ವಿಚಾರವಾಗಿ ಬೆಳಗಾವಿಯಲ್ಲಿ ಮಾಜಿ ಪ್ರದಾನಿ ದೇವೇಗೌಡರು ಪ್ರತಿಕ್ರಿಯಿಸಿದ್ದು
ಸಮ್ಮಿಶ್ರ ಸರ್ಕಾರ ಪತನ ನಂತರ ಜಿಟಿಡಿ ಯಡಿಯೂರಪ್ಪ ಮನೆಗೆ ಹೋಗಿದ್ದಾರೆ.
ಕ್ಷೇತ್ರದ ಕೆಲಸ ಮಾಡಲು ಡಿಸಿಎಂ ನೆರವು ಬೇಕು ಎಂದು ಜಿಟಿಡಿ ಹೇಳಿದ್ದಾರೆ. ನಾನೇನು ವಿಪ್ ಕೊಟ್ಟಿಲ್ಲ.
ಜಿಟಿಡಿ ಕಾಂಗ್ರೆಸ್, ಬಿಜೆಪಿ ಹೋಗ್ತಾರೆ ಗೊತ್ತಿಲ್ಲ.
ನಾವು ವಿಪ್ ಮೂಲಕ ಯಾರನ್ನು ಕಟ್ಟಿಲ್ಲ.
ಜಿಟಿಡಿ ಬಿಟ್ಟರೇ ಬೇರೆ ಯಾರು ಪಕ್ಷ ಬಿಟ್ಟು ಹೋಗಲ್ಲ.
ಹಿಂದೆನೆ ಪಕ್ಷ ಬಿಟ್ಟು ಹೋಗಿದ್ರು. ರಾಜಕೀಯ ಉದ್ದೇಶಕ್ಕೆ ಏನ್ ತೀರ್ಮಾನ ಕೈಗೊಳ್ಳುತ್ತಾರೆ ಅವರಿಗೆ ಬಿಟ್ಟದು. ಎಂದರು

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ,ಸರ್ಕಾರವನ್ನು ಪತನಗೊಳಿಸುವ ಇಚ್ಛೆಯೂ ನಮಗಿಲ್ಲ,ರಾಜ್ಯದಲ್ಲಿ ಕೆಳಹಂತದಿಂದ ಜಿಡೆಎಸ್ ಪಕ್ಷವನ್ನು ಬಲಗೊಳಿಸುತ್ತೇವೆ ,ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಹೆಚ್ಚಿನ ಜವಾಬ್ದಾರಿ ಕೊಡುತ್ತೇವೆ.ಪ್ರದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ ಅದಕ್ಕೆ ಕೇರಳ,ತಮೀಳನಾಡು,ಆಂದ್ರ,ದೆಹಲಿ ಉದಾಹರಣೆ, ದೆಹಲಿ ಜನ ಪೂರ್ಣ ಬಹುಮತ ನೀಡಿದ ಹಾಗೆ ತೀರ್ಪು ನೀಡಿದರೆ ಅಭಿವೃದ್ಧಿ ಮಾಡಲು ಸಾದ್ಯವಾಗುತ್ತದೆ ಎಂದು ದೇವೇಗೌಡರು ಹೇಳಿದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *