ಇಂದು ಗೋಕಾಕಿನಲ್ಲಿ ಸದ್ದು ಮಾಡಲಿರುವ ಸಿಎಂ ಯಡಿಯೂರಪ್ಪ..
ಬೆಳಗಾವಿ- ಗೋಕಾಕ ಉಪ ಸಮರದಲ್ಲಿ ಇಂದು ಸಿ ಎಂ ಯಡೂರಪ್ಪ ರಂಗೇರಿಸಲಿದ್ದಾರೆ
ಇಂದು ಸಂಜೆ 4-00 ಘಂಟೆಗೆ ಗೋಕಾಕಿಗೆ ಆಗಮಿಸಲಿರುವ ಅವರು ವಾಲ್ಮೀಕಿ ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಎಂ ಯಡಿಯೂರಪ್ಪನವರ ಗೋಕಾಕ ಭೇಟಿಯನ್ನು ಇದೊಂದು ಟ್ವಿಸ್ಟ ನೀಡುವ ಭೇಟಿ ಎಂದು ವಾಖ್ಯಾನ ಮಾಡಲಾಗುತ್ತಿದೆ. ಗೋಕಾಕ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮತಗಳೇ ನಿರ್ಣಾಯಕ ಎಂದು ಎಲ್ಲ ಪಕ್ಷದ ಅಭ್ಯರ್ಥಿಗಳು ಲೆಕ್ಕ ಹಾಕುತ್ತಿದ್ದು ಅದಕ್ಕಾಗಿ ಗೋಕಾಕಿನಲ್ಲಿ ಬಸವ ನಾಮ ಜಪ ಜೋರಾಗಿಯೇ ನಡೆದಿದೆ
ಸಿಎಂ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಬಹುದು ಇವರ ಭೇಟಿಯ ಬಳಿಕ ಗೋಕಾಕ್ ಕ್ಷೇತ್ರದ ಚಿತ್ರಣ ಬದಲಿಯಾಗುತ್ತದೆ ಎನ್ನುವದು ಬಿಜೆಪಿ ನಾಯಕರ ವಿಶ್ಲೇಷಣೆಯಾಗಿದ್ದು ಅದಕ್ಕಾಗಿ ಯಡಿಯೂರಪ್ಪ ಅವರನ್ನು ಚುನಾವಣೆ ಮುಗಿಯುವವರೆಗೂ ಎರಡರಿಂದ ಮೂರು ಬಾರಿ ಯಡಿಯೂರಪ್ಪ ಅವರನ್ನು ಗೋಕಾಕಿಗೆ ಕರೆಯಿಸಲು ಬಿಜೆಪಿ ನಾಯಕರು ಪ್ಲ್ತಾನ್ ‘ಬಿ’ ರೆಡಿಮಾಡಿಕೊಂಡಿದ್ದಾರೆ
ಇನ್ನೊಂದು ಕಡೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರು ಲಿಂಗಾಯತ ಸಮಾಜಕ್ಕೆ ಸೇರಿದವರಾಗಿದ್ದು ಅವರು ಇಂದು ಅಥವಾ ನಾಳೆಯಿಂದ ಮತ ಭೀಕ್ಷೆಗಾಗಿ ಜೋಳಗಿ ಹಾಕಲು ನಿರ್ಧರಿಸಿದ್ದಾರೆ
ಲಿಂಗಾಯತ ಸಮಾಜದ ಮತಗಳ ಮೇಲೆ ಮೂರು ಪಕ್ಷಗಳು ಹದ್ದಿನ ಕಣ್ಣಿಟ್ಟಿದ್ದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಲಿಂಗಾಯತ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುಲು ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ .
ಒಟ್ಟಾರೆ ಯಡಿಯೂರಪ್ಪ ನವರ ಭೇಟಿ ಗೋಕಾಕ ಕ್ಷೇತ್ರದ ದಿಕ್ಸೂಚಿ ಬದಲಿಸಬಹುದು ,ಹೊಸ ಟ್ವಿಸ್ಟ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ