ಗೋಕಾಕಿನ ಲೆಕ್ಕಾಚಾರ ಅದಲ್ ಬದಲ್ ಕೈಂಚಿ ಕದಲ್…!!!

ಕಳೆದ ಬಾರಿಯ ಗೋಕಾಕ್ ಇಲೆಕ್ಷನ್ ದಲ್ಲಿ ಯಾರಿಗೆ ಎಷ್ಟು ಓಟು ಸಿಕ್ಕಿತ್ತು ಗೊತ್ರಾ..?

ಬೆಳಗಾವಿ – ಗೋಕಾಕ್ ಬೈ ಇಲೆಕ್ಷನ್ ರಂಗೇರಿದೆ ಈಗ ಯಾರಿಗೆ ಎಷ್ಟು ಓಟು ಎನ್ನುವ ಲೆಕ್ಕಾಚಾರ ಶುರುವಾಗಿದೆ ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಓಟುಗಳು ಬಂದಿದ್ದವು ಈಬಾರಿ ಏನಾಗುತ್ತೆ ಎನ್ನುವ ಚರ್ಚೆ ಗೋಕಾಕಿನಲ್ಲಿ ಸಾಮಾನ್ಯವಾಗಿದೆ.

ಕಳೆದ ಚುನಾವಣೆ ಅಂದ್ರೆ 2018 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ರಮೇಶ್ ಜಾರಕಿಹೊಳಿ 90249 ಮತಗಳನ್ನು ಪಡೆದು ವಿಜಯಶಾಲಿ ಆಗಿದ್ದರು ಅವರ ನೇರ ಪ್ರತಿಸ್ಪರ್ದಿಯಾಗಿದ್ದ ಅಶೋಕ ಪೂಜಾರಿ 75,969 ಮತಗಳನ್ನು ಪಡೆದು ಪರಾಭವಗೊಂಡಿದ್ದರು

ಈಗ ಉಪ ಚುನಾವಣೆ ಬಂದಿದೆ ರಮೇಶ್ ಜಾರಕಿಹಿಳಿ ಈಗ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ .ಈಗ ಅಭ್ಯರ್ಥಿಗಳು ಅದಲು ಬದಲಾದಲಾದಾಗ ಫಲಿತಾಂಶವೂ ಅದಲು ಬದಲಾಗಬಹುದು ಎನ್ನುವ ಲಕ್ಕಾಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಸ್ಪರ್ದೆ ಈ ಲೆಕ್ಕಾಚಾರಕ್ಕೆ ಬ್ರೇಕ್ ಹಾಕಿದೆ.

2008 ರಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿತ್ತು ಈ ಚುನಾವಣೆಯಲ್ಲಿ ರಮೇಶ್ ಕಾಂಗ್ರೆಸ್ ಅಭ್ಯರ್ಥಿ,ಭೀಮಶಿ ಜಾರಕಿಹೊಳಿ,ಬಿಜೆಪಿ ಅಭ್ಯರ್ಥಿ ,ಅಶೋಕ ಪೂಜಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದರು ಆದರೆ ಆಗಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮೇಶ್ ಜಾರಕಿಹೊಳಿ ಅವರು ಕೇವಲ ಮೂರುವರೆ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ಸರು ,

2008 ರಲ್ಲಿ ಕಾಂಗ್ರೆಸ್,ಬಿಜೆಪಿ ,ಜೆಡಿಎಸ್ ಮೂರೂ ಪಕ್ಷಗಳು ಸಮಬಲದ ಹೋರಾಟ ನಡೆಸಿದ್ದವು ಈ ಸಮ ಬಲದ ಹೋರಾಟದಲ್ಲಿ ರಮೇಶ್ ಜಾರಕಿಹೊಳಿ ಗೆಲುವು ಸಾಧಿಸಿದ್ದರು.

ಈಗ 2008 ರ ಮಾದರಿಯ ಪೈಪೋಟಿ ನಡೆಯುತ್ತಿದೆ ಈಗ ಭೀಮಶಿ ಜಾರಕಿಹೊಳಿ ಬದಲಗಾಗಿ ಲಖನ್ ಜಾರಕಿಹೊಳಿ ರಮೇಶ್ ಅವರ ಪ್ರತಿಸ್ಪರ್ದಿಯಾಗಿದ್ದಾರೆ. ಸಹೋದರನ ಜೊತೆಗೆ ಪಾರ್ಟಿಯೂ ಬದಲಾಗಿದೆ ಹೀಗಾಗಿ ಗೋಕಾಕ್ ಕ್ಷೇತ್ರದ ಚುನಾವಣೆ ಅದಲ್ ಬದಲ್ ಕೈಂಚಿ ಕದಲ್ ಎನ್ನುವಂತಾಗಿದೆ.

ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಜೋಳಿಗೆ ಹಾಕಿದ್ದಾರೆ, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ರಾತ್ರಿ ಹೊತ್ತು ಬೈಕ್ ಹತ್ತಿ ಪ್ರಚಾರ ಮಾಡುತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಚುಟುಕು,ಚೊಕ್ಕ ಭಾಷಣದ ಮೂಲಕ ಮತದಾರರನ್ನು ಆಕರ್ಷಿಸುತ್ತಿದ್ದಾರೆ.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.