ಬೆಳಗಾವಿ- ಮಲಪ್ರಭಾ ನದಿಯಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಡಿಪಿಆರ್ ರೆಡಿಯಾಗುತ್ತಿದೆ ಈ ಯೋಜನೆಯ ಕುರಿತು ನಮ್ಮ ನಮ್ಮಲ್ಲಿಯೇ ಜಗಳಾಡುವದು ಸರಿಯಲ್ಲ ಕುಡಿಯುವ ನೀರು ಎಲ್ಲರಿಗೂ ಬೇಕು ಆತಂತರಿಕ ಕಚ್ಚಾಟ ಬೇಡ ಎಂದು ಬೃಹತ್ತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೋರಾಟಗಾರರಿಗೆ ಕಿವಿಮಾತು ಹೇಳಿದರು.
ಬೆಳಗಾವಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಲಪ್ರಭಾ ನದಿಯ ನೀರನ್ನು ಹುಬ್ಬಳ್ಳಿ .ಧಾರವಾಡ ,ರೋಣ ಸೇರಿದಂತೆ ಹಲವಾರು ನಗರಗಳ ಜನ ಕುಡಿಯುತ್ತಾರೆ ,ಈಗ ಇದೇ ನದಿಯಿಂದ ನೂರಾರು ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗುತ್ತಿದೆ, ಈ ಕುರಿತು ತಕರಾರು ಮಾಡುವದು ಸರಿಯಲ್ಲ ,ಈಗ ಮಹಾದಾಯಿ ಸಮಸ್ಯೆ ಇತ್ಯರ್ಥವಾಗಿದೆ .ಹಲವಾರು ಟಿಎಂಸಿ ನೀರು ಮಲಪ್ರಭೆಗೆ ಹರಿದು ಬರುತ್ತದೆ .ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕೇಂದ್ರ ಸರ್ಕಾರ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿದೆ ಮಹಾದಾಯಿ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ ,ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿದೆ ಎಂದು ಶೆಟ್ಟರ್ ವಿಶ್ವಾಸ ವ್ಯೆಕ್ತಪಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ