ಮಹಾದಾಯಿ ವಿಚಾರದಲ್ಲಿ ಸದ್ಯಕ್ಕೆ ಸಂಬ್ರಮ ಬೇಡ- ರಮೇಶ್ ಜಾರಕಿಹೊಳಿ

ಬೆಳಗಾವಿ- ಕೇಂದ್ರ ಸರ್ಕಾರ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಜಲಸಂಪನ್ಮೂಲ ಸಚಿವರನ್ನು ಸ್ವಾಗತಿಸಲು ಬೆಳಗಾವಿಯ ರಾಣಿ ಚನ್ಬಮ್ಮ ಏರ್ಪೋರ್ಟಿನಲ್ಲಿ ನೂರಾರು ರೈತರು ಆಗಮಿಸಿದ್ದರು

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದ್ರು, ಬೆಳಗಾವಿ ಏರ್‌ಪೋರ್ಟ್ ಎದುರು ರಮೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ. ಕನ್ನಡಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರಿಂದ ಕ್ಷೀರಾಭಿಷೇಕ.ಆಡಲಾಯಿತು.

ವಿಮಾನ ನಿಲ್ದಾಣದಲ್ಲಿ ರೈತರಿಂದ ಸಚಿವರಿಗೆ
ಅಭಿನಂದನೆ ಸಲ್ಲಿಸಲಾಯಿತು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೂರಾರು ರೈತರಿಂದ ಅಭಿನಂದನೆ ಸಲ್ಲಿಸಲಾಯಿತು ಜೊತೆಗೆ ಶ್ರೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯ. ಮಾಡಲಾಯಿತು.

ರೈತರ ಸಂಕೇತವಾದ ಹಸಿರು ಟಬಲ್ ಹಾಕುವ ಮೂಲಕ ಸನ್ಮಾನ. ಸಚಿವ ರಮೇಶ ಜಾರಕಿಹೊಳಿಗೆ ಸನ್ಮಾನ ಮಾಡಲಾಯಿತು ಈ ಸಂಧರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಮಹದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟ ಹಿನ್ನೆಲೆ.
ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದೆ ಈಗ ಎನೂ ಮಾತನಾಡುವುದು ಬೇಡ ಸೋಮವಾರ ಕೋರ್ಟ್ ನಲ್ಲಿ ಕಾದುನೋಡಿ ಅಲ್ಲಿಯವರೆಗೆ ಸಂಬ್ರಮಾಚರಣೆ ಬೇಡ ಎಂದರು

ಮುಂದಿನ ವಿಚಾರ.
ನಾಳೆ ಮಹದಾಯಿ ಯೋಜನೆ ಕಾಮಗಾರಿ ನಡೆಯುವ ಕಣಕುಂಬಿಗೆ ಭೇಟಿ ನೀಡುತ್ತೇನೆ. ಅಲ್ಲಿ ಎನೂ ಮಾಡಬೇಕು ಎಂಬುದನ್ನ ನೋಡುತ್ತೇನೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ.
ಇದು ನಮ್ಮದು ಗೆಲವು ಅಲ್ಲಾ ರೈತರ ಗೆಲವು.
ಮಹಾರಾಷ್ಟ್ರ, ಗೋವಾ ರಾಜ್ಯ ರೈತರು ಎಲ್ಲಾ ಒಂದೇ ಎಲ್ಲರ ಗೆಲವು. ಸಿಎಂ ಯಡಿಯೂರಪ್ಪ ಮತ್ತು ನಾವು ದೈವ ಭಕ್ತರಿದ್ದೆ ಅದಕ್ಕೆ ಯಶಸ್ಸು ಸಿಕ್ಕಿದೆ.
ಇನ್ನೂ ಒಂದುವಾರದ ವರೆಗೂ ಎಲ್ಲಿಯೂ ಸಂಭ್ರಮಾಚರಣೆ ಮಾಡದಂತೆ ರೈತರಿಗೆ ಮನವಿ ಮಾಡಿಕೊಳ್ಳುತ್ತೇನೆ ನಮ್ಮ‌ ಸರ್ಕಾರ ರೈತರ ಪರವಾಗಿದೆ.
ಹಿಂದಿನಿಂದಲೂ ಹೋರಾಟ ಮಾಡಿದ ರೈತರಿಗೆ ಅಭಿನಂದಿಸಬೇಕು. ಇನ್ನೂ ಕೆಲವೊಂದಿಷ್ಟು ವಿಷಯಗಳಿವೆ ಅವೆಲ್ಲವನ್ನೂ ಬಹಿರಂಗ ಮಾತಾಡುವುದಿಲ್ಲ. ನಮ್ಮ‌ ರಾಜ್ಯಕ್ಕೆ ಸೀಮತವಾದ ನೀರನ್ನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಈ ಬಜೆಟ್ ನಲ್ಲಿ ಹೆಚ್ಚು ಅನುದಾನ ಮೀಸಿಡಲು ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.