ಬೆಳಗಾವಿ- ಗೋಕಾಕ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಆರೋಪ,ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಜೆಡಿಎಸ್ ಸಹಜವಾಗಿ ಕೈ ತೊಳೆದುಕೊಳ್ಳುತ್ತಿದೆ.
ಲಖನ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ವಾಕ್ ಸಮರ ಮುಂದುವರೆದಿದ್ದು ಲಖನ್ ಜಾರಕಿಹೊಳಿ ಇಂದು ಮತ್ತೆ ರಮೇಶ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ
ಮಂತ್ರಿಯಾಗಿದ್ದವರು ಡಿ ಸಿ ಎಂ ಆಗೋದಕ್ಕೆ ಈ ಉಪಚುನಾವಣೆ ಬಂದಿದೆ ಎಂದು ಲಖನ್ ರಮೇಶ್ ಗೆ ಟಾಂಗ್ ಕೊಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಮತ್ತು ಅವರ ಅಳಿಯಂದಿರನ್ನ ನಾವು ತಲೆಯಿಂದಲೂ ಮನಸಿನಿಂದಲೂ ತೆಗೆದು ಹಾಕಿದ್ದೆವೆ.
ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ,
ಜನರ ಆಶೀರ್ವಾದದಿಂದ ವಿಧಾಸೌಧ ಪ್ರವೇಶ ಮಾಡಿದರೆ ಗೋಕಾಕ ಜನರೇ ವಿಧಾನಸೌಧ ಪ್ರವೇಶ ಮಾಡಿದಂತೆ,
ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗ್ತಿದ್ದರು,
ನಾನು ಆರಿಸಿ ಬಂದ ಮೇಲೆ ಗೋಕಾಕ ಜನರೇ ವಿಧಾನಸೌಧ ಪ್ರವೇಶ ಮಾಡಿದ ಹಾಗೆ ಎಂದ ಲಖನ್ ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಎಂದರೆ ಗಲಾಟೆ ಎಫ ಐ ಆರ್ ಆಗಬೇಕಾ ಎಂದು ಪ್ರಶ್ನಿಸಿದ ಲಖನ್ ಜಾರಕಿಹೊಳಿ,
ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ ಅವರು ರಮೇಶ್ ಸಮರ್ಥನೆ ಮಾಡಿಕೊಳ್ತಾರೆ,
ನಾವು ಕಾಂಗ್ರೇಸ್ ನಲ್ಲಿದ್ದೆವೆ ರಮೇಶ್ ಜಾರಕಿಹೊಳಿಯವರ ಭ್ರಷ್ಟಾಚಾರ ಹೊರತೆಗಿತೀವಿ ಎಂದು ಲಖನ್
ಗೋಕಾಕನಲ್ಲಿ ಮಾಧ್ಯಮಗಳಿಗೆ ಹೇಳಿಕೆ,ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಸದ್ಯಕ್ಕೆ ಮಾದ್ಯಮಗಳಿಂದ ದೂರ ಉಳಿದಿದ್ದು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ