ಬೆಳಗಾವಿ-
ಗೋಕಾಕ ಕ್ಷೇತ್ರದಲ್ಲಿರುವ ದುಷ್ಟಶಕ್ತಿ ಕಿತ್ತೆಸೆಯಬೇಕಿದೆ..
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ
ಗೋಕಾಕ ಕ್ಷೇತ್ರದ
ಖನಗಾಂವ್ ಗ್ರಾಮದ ಪ್ರಚಾರ ಸಭೆಯಲ್ಲಿ ಲಖನ್ ಜಾರಕಿಹೊಳಿ ಮಾತನಾಡಿದ್ದು
ಮತ ಸೆಳೆಯಲು ಕೆಲವರು ಆಮೀಷವೊಡ್ಡುತ್ತಾರೆ, ಅದಕ್ಕೆ ಯಾರೂ ಬಲಿಯಾಗಬಾರದು..
ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ನನ್ನನ್ನು ಗೆಲ್ಲಿಸಿಕೊಡಬೇಕು ಎಂದು ಲಖನ್ ಮನವಿ ಮಾಡಿಕೊಂಡರು
ಖನಗಾಂವ ಜಿಪಂ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆಧ್ಯತೆ ನೀಡುತ್ತೇನೆ..
ಗುದ್ದಲಿ ಪೂಜೆಗೆ ಬರುತ್ತಿದ್ದ ರಮೇಶ ಅವರ ಪ್ರೀತಿಯ ಅಳಿಯ ಈಗೆಲ್ಲಿ..ಅಂಬಿರಾವ್ ರನ್ನು ಪ್ರಚಾರಕ್ಕೆ ಕಳಿಸದಂತ ಸ್ಥಿತಿ ರಮೇಶಗೆ ಬಂದಿದೆ ಎಂದು ಲಖನ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಕ್ಷೇತ್ರದಲ್ಲೀಗ ಜನಬೆಂಬಲ ಸಿಗುತ್ತಿಲ್ಲ..ಮಾವ- ಅಳಿಯ ಈಗ ಜಂಟಿಯಾಗಿ ಕ್ಷೇತ್ರಕ್ಕೆ ಬರಲಿ, ಜನಬೆಂಬಲ ಎಷ್ಟಿದೆ ಎಂಬುದು ಗೊತ್ತಾಗುತ್ತೆ….
ಈ ಕಾರಣಕ್ಕೆ ಬಿಜೆಪಿಯ ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ..ಆದರೆ ನಮಗೆ ಕ್ಷೇತ್ರದ ಮತದಾರರೇ ರಾಜ್ಯ ನಾಯಕರಿದ್ದಹಾಗೆ..ಮಾವ ಅಳಿಯ ಈಗ ಒಬ್ಬಂಟಿಗರಾಗಿದ್ದಾರೆ..
ಲಖನ್ ಪರವಾಗಿ ಮತಚಲಾಯಿಸುವಂತೆ ಹೇಳುವ ಪರಿಸ್ಥಿತಿ ರಮೇಶ ಬರಲಿದೆ ಎಂದರು
ಭ್ರಷ್ಟಾಚಾರ ವಿರುದ್ಧ ಹೋರಾಡಲು ನಾನು ಕಣಕ್ಕೀಳಿದಿದ್ದೇನೆ..ಇಷ್ಟು ದಿನ ನೀವು ರಮೇಶಗೆ ಮತ ಹಾಕಿ ಗೆಲ್ಲಿಸಿದ್ರಿ..
ಆದರೆ ಅಂಬಿರಾವ್ ಮತ್ತು ಪಟಾಲಂ ಬಂದು ದರ್ಬಾರ್ ನಡೆಸುತ್ತಿತ್ತು..ಇಂಥ ಪರಿಸ್ಥಿತಿ ಇನ್ಮುಂದೆ ಕ್ಷೇತ್ರದಲ್ಲಿ ಬಂದ್ ಆಗಲಿದೆ..ಬಿಜೆಪಿ ಹೈಕಮಾಂಡ್ ಈಗಾಗಲೇ ರಮೇಶ ಬಾಯಿಗೆ ಬೀಗ ಹಾಕಿದೆ..ನನಗೆ ಕ್ಷೇತ್ರದಲ್ಲಿ ಜನಬೆಂಬಲ ಸಿಗುತ್ತಿದ್ದು, ಹೆಚ್ಚಿನ ಮತಗಳ ಅಂತರದ ಗೆಲುವು ನನ್ನದಾಗಲಿದೆ.ಗೆಲುವಿನ ಅಂತರ ೬ ನೇ ತಾರೀಖು ಹೇಳುತ್ತೇನೆ, ಈಗ ಹೇಳಿದ್ರೆ ಎದುರಾಳಿಗಳು ಅಲರ್ಟ್ ಆಗುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಹೇಳಿದ್ರು