ಹಾಲಿನಲ್ಲಿ ವಿಷ..,ಹುಷಾರ್……..!!!!

ಬೆಳಗಾವಿ- ಹಾಲಿಗೆ ಪಾಮ್ ಆಯಿಲ್ ಮಾನವನ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿರುವ ರಾಸಾಯನ ಬೆರೆಸಿ ಹಾಲು ಮಾರುವ ದಂಧೆಗೆ ಅಥಣಿ ಪೋಲೀಸರು ಬ್ರೇಕ್ ಹಾಕಿದ್ದಾರೆ.

ಅಥಣಿಯಲ್ಲಿ ಸರಣಿ ಕಾರ್ಯಾಚರಣೆ ನಡೆಸಿರುವ ಪೋಲೀಸರು ಇಂದು ಅಥಣಿ ಠಾಣೆಯ ವ್ಯಾಪ್ತಿಯಲ್ಲಿರುವ ಅರಳಿಹಟ್ಟಿ ಗ್ರಾಮದ ಹದ್ದಿಯಲ್ಲಿರುವಜಾಧವ ತೋಟದ ಮೇಲೆ ದಾಳಿ ಮಾಡಿ ಹಾಲಿಗೆ ಮಿಕ್ಸ ಮಾಡಲು ತರಲಾಗಿದ್ದ ಪಾಮ್ ಆಯಿಲ್‌ ಡಬ್ಬಿಗಳನ್ನು ವಿಷಕಾರಿ ರಾಸಾಯನಗಳಾದ maybi,lactose,lactiz,ಪೌಡರಿನ ಚೀಲಗಳನ್ನು ,ಮೂರು ಮಿಕ್ಸರ್ ಗಳು ಸೇರಿದಂತೆ ಇತರ ಸಾಮುಗ್ರಿಗಳನ್ನು ವಶಪಡಿಸಿಕೊಂಡು ಕಲಬೆರಕೆ ಮಾಡುತ್ತಿದ್ದ ಡೈರಿ ಮಾಲೀಕನನ್ನು ಬಂಧಿಸಿ ಆಕ್ರಮ ವ್ಯೆವಹಾರಕ್ಕೆ ಪೋಲೀಸರು ತಿಲಾಂಜಲಿ ಇಟ್ಟಿದ್ದಾರೆ.

ಅಥಣಿ ತಾಲ್ಲೂಕಿನಲ್ಲಿಯೇ ಕಲಬೆರಕೆ ಹಾಲನ್ನು ತಯಾರಿಸುವ ಘಟಕಕಗಳು ಪತ್ತೆಯಾಗಿದ್ದು ಈ ರೀತಿಯ ಕಲಬೆರಕೆ ಹಾಲಿನ ಘಟಕಗಳು ಉಳಿದ ತಾಲ್ಲೂಕುಗಳಲ್ಲಿ ಇರುವದರ ಬಗ್ಗೆ ಶಂಕೆ ವ್ಯೆಕ್ತವಾಗಿದ್ದು ಪೋಲೀಸರು ವಿಶೇಷ ತಂಡ ರಚಿಸಿ ಇಂತಹ ಆಕ್ರಮ ವಿಷಪೂರಿತ ಹಾಲಿನ ಮಾರಾಟದ ಬಗ್ಗೆ ನಿಗಾ ವಹಿಸುವದು ಅತ್ಯಗತ್ಯವಾಗಿದೆ.

ಇಂದು ದಾಳಿ ಮಾಡಿರುವ ಪೋಲೀಸರು ಬಂಡಾ ಜಾಧವನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *