Breaking News
Home / ವಿಶೇಷ ವರದಿ / ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದೇ ಗಂಡು ಮೆಟ್ಟಿನ ನೆಲ ಬೆಳಗಾವಿಯಲ್ಲಿ

ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದೇ ಗಂಡು ಮೆಟ್ಟಿನ ನೆಲ ಬೆಳಗಾವಿಯಲ್ಲಿ

ಬೆಳಗಾವಿ-ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದು ಐತಿಹಾಸಿಕ ಬೆಳಗಾವಿಯ ನೆಲದಲ್ಲಿ ಎನ್ನುವ ಮಾಹಿತಿ ಲಭ್ಯವಾಗಿದೆ ಈ ಕುರಿತು ವೆಬ್ ದುನಿಯಾ ಕನ್ನಡ ವೆಬ್ ಮಿಡಿಯಾ ಸುದ್ದಿ ಮಾಡಿದೆ

ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದು ಕನ್ನಡ ನೆಲದಲ್ಲಿ. ಗಡಿಜಿಲ್ಲೆ ಬೆಳಗಾವಿಯ ಕಮಾಂಡೋ ಕ್ಯಾಂಪ್‌ನಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು.

18 ವರ್ಷದಿಂದ 20 ವರ್ಷದೊಳಗಿನ ಕಮಾಂಡೋಗಳಿಗೆ ಕಠಿಣ ತರಬೇತಿ ನೀಡಿ ದಾಳಿ ನಡೆಸಲು ಸಿದ್ಧಗೊಳಿಸಲಾಗಿತ್ತು.

ಶಬ್ಧ ಮಾಡದ 17 ಹೆಲಿಕಾಪ್ಟರ್ ಬಳಸಿ ಟ್ರೈನಿಂಗ್ ನೀಡಲಾಗಿತ್ತು.

ಮತ್ತೀಗ ಇದೇ ಮಾದರಿ ಹೆಲಿಕಾಪ್ಟರ್ ಬಳಸಿ ಪಾಕ್ ಮೇಲೆ ದಾಳಿ ಮಾಡಲಾಗಿದೆ.  ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ 40ಕ್ಕೂ ಹೆಚ್ಚು ಉಗ್ರರು ಮತ್ತು ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಅವರ ಜತೆಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಬಹಿರಂಗ ಪಡಿಸಿದ್ದು ಇದು ದೇಶಾದ್ಯಂತ ಹೊಸ ಸಂಚಲನವನ್ನು ಮೂಡಿಸಿದೆ. ತಾನು ಆಕ್ರಮಿಸಿಕೊಂಡಿರುವ ನೆಲೆಗೆ ನುಗ್ಗಿ ಭಾರತಕಾರ್ಯಾಚರಣೆಯನ್ನು ಕೈಗೊಂಡಿದ್ದು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಸಿದೆ

Check Also

ಬೆಳಗಾವಿಯ ಬೀದಿಗಿಳಿದ ಇಲೆಕ್ಟ್ರಿಕ್ ರಿಕ್ಷಾ…!

ಬೆಳಗಾವಿ ಬೆಳಗಾವಿ ನಗರ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿಯಾಗಿರುವ ಈ …

Leave a Reply

Your email address will not be published. Required fields are marked *