Breaking News

LOCAL NEWS

ನೂರಕ್ಕೆ ನೂರು,100% ಅಂಕ ಗಳಿಸಿದ ಬೆಳಗಾವಿಯ 10 ವಿದ್ಯಾರ್ಥಿಗಳು ಯಾರು ಗೊತ್ತಾ..??

ಬೆಳಗಾವಿ ಜಿಲ್ಲೆಯ 10 ವಿಧ್ಯಾರ್ಥಿಗಳು ಟಾಪರ್… ಬೆಳಗಾವಿ- ಇವತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಸಂಪೂರ್ಣ ಅಂಕಗಳನ್ನು ಪಡೆದು ಟಾಪರ್ ಗಳಾಗಿದ್ದು ಈ 145 ಜನ ವಿಧ್ಯಾರ್ಥಿಗಳಲ್ಲಿ 10 ಜನ ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 6 ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಜನ ವಿಧ್ಯಾರ್ಥಿಗಳು ಟಾಪರ್ ಗಳಾಗಿದ್ದು, ಜಿಲ್ಲೆಯ ಒಟ್ಟು ಹತ್ತು ಜನ ವಿಧ್ಯಾರ್ಥಿಗಳು …

Read More »

ಬಸವರಾಜ್ ಜೊತೆ ಬಸವರಾಜ್ ದೋಸ್ತಿ…ಈಗ ಶುರುವಾಯಿತು ಇಲೆಕ್ಷನ್ ಕುಸ್ತಿ….!!!

ಬೆಂಗಳೂರು: ಇದು ಚುನಾವಣೆಯ ವರ್ಷ ಹೀಗಾಗಿ ಸಹಜವಾಗಿ, ಪಕ್ಷಾಂತರ ಪರ್ವವೂ ಶುರುವಾಗಿದ್ದು,ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡ ಮಾಜಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಯಾವುದೇ ಗದ್ದಲ,ಆಡಂಬರ ಇಲ್ಲದೇ,ಅತ್ಯಂತ ಸರಳವಾಗಿ ಬಸವರಾಜ್ ಹೊರಟ್ಟಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಈ ಕುರಿತು ಟ್ವಿಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಬೊಮ್ಮಾಯಿ, ‘ಮಾಜಿ ವಿಧಾನ ಪರಿಷತ್ ಸಭಾಪತಿ, ಜೆಡಿಎಸ್‌ …

Read More »

ಬೊಮ್ಮಾಯಿ ಸರ್ಕಾರ, ಭಾವಿ ಸಚಿವರ ಸಂಕಟ ವಿಸ್ತರಣೆ…!!!

ಬೆಳಗಾವಿ- ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಸಚಿವ ಸಂಪುಟ ವಿಸ್ತರಣೆ, ಅಥವಾ ಪುನಾರಚನೆ ಸರ್ಕಸ್ ನಡೆಯುತ್ತಲೇ ಇದೆ, ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಬಸವ ಜಯಂತಿ ಎಲ್ಲ ಮುಹೂರ್ತಗಳು ಕಳೆದರು ಸಚಿವ ಸಂಪುಟ ವಿಸ್ತರಣೆಯ ಮಹೂರ್ತ ಇನ್ನುವರೆಗೆ ನಿಗದಿ ಆಗದ ಹಿನ್ನಲೆಯಲ್ಲಿ, ಭಾವಿ ಸಚಿವರ ಸಂಕಟ ವಿಸ್ತರಣೆ, ಆಗುತ್ತಲೇ ಇದೆ. ಸಚಿವಾಕಾಂಕ್ಷಿಗಳಿಗೆ ನಾಳೆ ಬಾ ಎನ್ನುವ ರೀತಿ ಆಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಸುಪುತ್ರ ವಿಜಯೇಂದ್ರ, ಯೋಗೇಶ್ವರ್, ಲಕ್ಷ್ಮಣ ಸವದಿ, …

Read More »

ಬೆಳಗಾವಿಗೆ ಕೀರ್ತಿ ತಂದ,ಕರಾಟೆ ಚಾಂಪಿಯನ್ ಗಳು

ಬೆಳಗಾವಿ: ಇಲ್ಲಿನ ಶಾಹುನಗರದ ಯೂನಿವರ್ಸಲ್ ಶೋಟೋಕಾನ್ ಕರಾಟೆ ತಂಡದ ಪಟುಗಳು ದಾವಣಗೆರೆಯ ಜಿಲ್ಲಾ ಗುರುಭವನದಲ್ಲಿ ಜುಡೋ ಮಾರ್ಷಲ್‌ ಆರ್ಟ್ಸ್‌ ಸಂಘ–ಕರ್ನಾಟಕ ಹಾಗೂ ಶೋಟೊಕಾನ್‌ ಕರಾಟೆ ಅಂತರರಾಷ್ಟ್ರೀಯ ಸಂಸ್ಥೆ ವತಿಯಿಂದ ಈಚೆಗೆ ಆಯೋಜಿಸಿದ್ದ 2ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಹಲವು ಪದಕಗಳನ್ನು ಗೆದ್ದು ಮಿಂಚಿದ್ದಾರೆ. ಚಾಂಪಿಯನ್‌ಶಿಪ್‌ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಶ್ರದ್ಧಾ ಸೂರ್ಯವಂಶಿ, ಕಾವೇರಿ ಪಿ.ಸೂರ್ಯವಂಶಿ, ಕರೀಷ್ಮಾ ಬಿ., ಮಂಜಿರಿ ಮತ್ತು ಶಾಂಭವಿ ಸೊಗಲದ ಚಿನ್ನದ ಪದಕ ಗೆದ್ದಿದ್ದಾರೆ. ನವ್ಯಾ …

Read More »

ಇಲೆಕ್ಷನ್ ಡ್ಯುಟಿ ಮಾಡುವ ಅಧಿಕಾರಿಗಳಿಗೆ ಟ್ರೇನಿಂಗ್… ತರಬೇತಿ

ಚುನಾವಣೆ ಕರ್ತವ್ಯ ನಿಯೋಜಿತ ಅಧಿಕಾರಿಗಳ ತರಬೇತಿ ಬೆಳಗಾವಿ, ಮೇ.17 (ಕರ್ನಾಟಕ ವಾರ್ತೆ) : ನಿಯೋಜಿತ ಅಧಿಕಾರಿಗಳು ಯಾವುದೇ ಗೊಂದಲವಿಲ್ಲದೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಲಿದ್ದು ಅಭ್ಯರ್ಥಿಗಳ ಸಭೆ, ಸಮಾರಂಭಗಳ ಕುರಿತು ನಿರಂತರ ಪರಿಶೀಲನೆ ನಡೆಸಿ ನಿಗಾ ವಹಿಸಬೇಕು ಎಂದು ತರಬೇತುದಾರ ಎನ್. ವ್ಹಿ ಶಿರಗಾಂವಕರ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ (ಮೇ.17) ನಡೆದ ಕರ್ನಾಟಕ …

Read More »

ಸ್ಥಳದಲ್ಲೇ ಸಮಸ್ಯೆ‌ ಬಗೆಹರಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಚಿಕ್ಕೋಡಿ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ,): ತಾಲ್ಲೂಕುಮಟ್ಟದ ಅಧಿಕಾರಿಗಳು ಪ್ರತಿದಿನ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಡಬೇಕು. ತಮ್ಮ ವ್ಯಾಪ್ತಿಯ ಕಚೇರಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಜನರ ದೂರುಗಳನ್ನು ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ನೇ 17) ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಬಳಿಕ ನಡೆದ …

Read More »

ಬೆಳಗಾವಿ ಡಿಸಿಯಿಂದ, ಕ್ವಿಕ್ ರಿಸ್ಪಾನ್ಸ್.,ಮಕ್ಕಳ ಸಮಸ್ಯೆಗೆ ಸ್ಪಂದನೆ…

ಮಾಧ್ಯಮ ವರದಿಗಳ ಫಲಶ್ರುತಿ.. ಮುದನೂರ ಗ್ರಾಮದ ಶಾಲೆ ದುರಸ್ತಿ ಕಾಮಗಾರಿ ಇಂದಿನಿಂದಲೇ ಆರಂಭ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಮೇ 17(ಕರ್ನಾಟಕ ವಾರ್ತೆ): ರಾಮದುರ್ಗ ತಾಲ್ಲೂಕಿನ ಮುದನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗಾಗಿ 20 ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಡಿ ಯೋಜನೆಯನ್ನು ಅಳವಡಿಸಿಕೊಂಡು ದುರಸ್ತಿ ಕಾಮಗಾರಿ ಇಂದಿನಿಂದಲೇ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ 10 ಲಕ್ಷ …

Read More »

ಮೈ ಬೆಳಗಾವಿ” ಆ್ಯಪ್ ಮೂಲಕ ಏನೆಲ್ಲಾ ಮಾಡಬಹುದು ಗೊತ್ತಾ..??

“ಮೈ ಬೆಳಗಾವಿ” ಆ್ಯಪ್ ಬಳಕೆ ಮೂಲಕ ಆಂಬುಲೆನ್ಸ್ ಸೇವೆ, ಪ್ರವಾಸಿ ತಾಣಗಳ ಮಾಹಿತಿ, ಬಸ್ ಸಂಚಾರದ ಸಮಗ್ರ ಮಾಹಿತಿ, ಮನೆಯಲ್ಲೇ ಕುಳಿತು ನಗರ ಬಸ್ ಲೈವ್ ಲೊಕೇಶನ್ ಪತ್ತೆ ಮಾಡಬಹುದು. ಸರ್ಕಾರಿ ಜಿಲ್ಲಾ ಕಚೇರಿಗಳ ಮಾಹಿತಿ ಹಾಗೂ ಸಾರ್ವಜನಿಕರು ಈ ಆ್ಯಪ್ ಮೂಲಕ ನೇರವಾಗಿ ದೂರು ನೊಂದಣಿ ಮಾಡಬಹುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಬಾಗೇವಾಡಿ ಅವರು ತಿಳಿಸಿದರು. ವಿಶ್ವೇಶ್ವರಯ್ಯ ನಗರದ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ನಲ್ಲಿ …

Read More »

ಕುಂತಿನಾಥ ಕಲಮನಿ ಅವರಿಗೆ “ಪ್ರಭಾತಕಾರ ವಾ.ರಾ.ಕೋಠಾರಿ ಅದರ್ಶ ಪತ್ರಕಾರ ಪುರಸ್ಕಾರ” ಪ್ರದಾನ

: ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ ಸಾಂಗಲಿ ಪಟ್ಟಣದಲ್ಲಿ ” ಪ್ರಭಾತಕಾರ ವಾ.ರಾ.ಕೋಠಾರಿ ಅದರ್ಶ ಪತ್ರಕಾರ ಪುರಸ್ಕಾರ” ಪ್ರದಾನ ಮಾಡಲಾಯಿತು. ರಾವಸಾಹೇಬ ಪಾಟೀಲ ದಾದಾ, ಸಚಿವ ರಾಜೇಂದ್ರ ಶಾ.ಪಾಟೀಲ ಯಡ್ರಾವಕರ , ಡಾ.ಅಜೀತ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಬೆಳಗಾವಿ.ಮೇ.16: ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಹಳ್ಳಿಯ ಸಂದೇಶ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪುರಸ್ಕಾರವಾದ …

Read More »

ಮಾಲಿನ್ಯ ನಿಯಂತ್ರಣ ಮಾಡುವ ಅಧಿಕಾರಿಗಳು ಎಸಿಬಿ ಬಲೆಗೆ

ಬೆಳಗಾವಿ- ಪರಿಸರ ಮಾಲಿನ್ಯ ಕಂಟ್ರೋಲ್ ಮಾಡುವ ಅಧಿಕಾರಿಗಳು 30 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಫಿರ್ಯಾದಿ ಶ್ರೀರಾಜು ಲಕ್ಷ್ಮಣ ಪಾಶ್ಚಾಪೂರೆ ಸಾಃಉತ್ತಮ ಟಾಕೀಜ್ ಹಿಂದೆ ಹಳೆ ಚಂದೂರ ರಸ್ತೆ ಇಚಲಕರಂಜಿ ಜಿಃಕೊಲ್ಹಾಪೂರ ಇವರು ಎಸಿಬಿ ಪೊಲೀಸ್ ಠಾಣೆ ಬೆಳಗಾವಿಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಫಿರ್ಯಾದಿಯು ಈಗ ಒಂದು ವರ್ಷದಿಂದ ಚಿಕ್ಕೋಡಿ ತಾಲೂಕಿನ ಬೋರಗಾಂವದಲ್ಲಿ ಆರ್‍ಪಿ ಪ್ರೊಡಕ್ಷನ್ ಎಂಬ ಹೆಸರಿನಿಂದ ಪಾನ್ ಮಸಾಲಾ, ಸೆಂಟೆಂಡ್ ಸುಪಾರಿ ಮತ್ತು …

Read More »

ಗ್ರಾಮಸ್ಥರು ನಿರ್ಮಿಸಿದ, ಟೆಂಟ್ ನಲ್ಲಿ ಫಸ್ಟ್ ಡೇ…ಫಸ್ಟ ಶೋ….!!

ಬೆಳಗಾವಿ- ಸರ್ಕಾರ ಶಾಲೆಗಳ ಸುಧಾರಣೆಗೆ ಅದೆಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ,ಶಾಲೆ ಬೀಳುವ ಪರಿಸ್ಥಿತಿಯಲ್ಲಿದೆ ಎಂದು ಹೆದರಿ,ಗ್ರಾಮಸ್ಥರು,ಶೀಥಿಲಗೊಂಡಿರುವ ಶಾಲೆಯ ಎದುರು ಟೆಂಟ್ ಹಾಕಿ ಶಾಲೆಯಯ ಪ್ರಾರಂಭೋತ್ಸವ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ನಡೆದಿದೆ. ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿಶಾಲಾ ಮಕ್ಕಳು ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲಾ.ಶೀತಲವಸ್ಥೆಯಲ್ಲಿರುವ ಶಾಲೆಯ ಕೊಠಡಿಗಳು. ಶಾಲಾ ಆವರಣದಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಾಣ‌ ಮಾಡಿ ಪಾಠ ಹೇಳಿದ ಪ್ರಸಂಗ ಇಲ್ಲಿ ನಡೆದಿದೆ. …

Read More »

ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ…

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸ್ವಂತ ತಮ್ಮನನ್ನೇ ಚಾಕುವಿನಿಂದ ಇರಿದು ತಮ್ಮನ್ನು ಅಣ್ಣ ಕೊಲೆ ಮಾಡಿರುವ ಘಟನೆ ಗೋಕಾಕ ನಗರದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ನಿವಾಸಿ ಮುನಾಫ್ ದೇಸಾಯಿ(24) ದುರ್ದೈವಿ. ರಮಜಾನ್ ದೇಸಾಯಿ(26) ತಮ್ಮನನ್ನೆ ಕೊಲೆ ಮಾಡಿದ ಆರೋಪಿ ಅಣ್ಣ.ನಿನ್ನೆ ತಡರಾತ್ರಿ ಗೋಕಾಕನಲ್ಲಿ ತಮ್ಮ ನಿವಾಸದಲ್ಲಿ ಕೊಲೆಯಾದ ಮುನಾಫ್ ದೇಸಾಯಿ ತನ್ನ ತಂದೆ-ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದನಂತೆ.ಈ ವೇಳೆ ಮಧ್ಯಪ್ರವೇಶಿಸಿ ಆತನ ಸಹೋದರರ ‌ಕೊಲೆ …

Read More »

ಐತಿಹಾಸಿಕ ಗೋಕಾಕ ಚಳವಳಿಗೆ 40 ವರ್ಷ

ಐತಿಹಾಸಿಕ ಗೋಕಾಕ ಚಳವಳಿಗೆ 40 ವರ್ಷ!ಕನ್ನಡ ಪರ ಚಳವಳಿಗಳಿಗೆ ಸ್ಪೂರ್ತಿಯ ಸೆಲೆಯಾದ ಆಂದೋಲನ! ಕರ್ನಾಟಕದಲ್ಲಿ ನಾಡು,ನುಡಿ ಮತ್ತು ಗಡಿಯ ಪರವಾದ ಚಳವಳಿಗಳ ಚರ್ಚೆ ಬಂದಾಗಲೆಲ್ಲ ನಾವು ಗೋಕಾಕ ಚಳವಳಿಯನ್ನು ನೆನೆಪಿಸಿಕೊಳ್ಳುತ್ತೇವೆ. ರಾಜ್ಯದಾಧ್ಯಂತದ ಕನ್ನಡಿಗರನ್ನು ಬಡಿದೆಬ್ಬಿಸಿದ ಮತ್ತು ಕನ್ನಡಿಗರಲ್ಲಿ ಕನ್ನಡದ ಪ್ರಙ್ಞೆಯನ್ನು ಸಾವಿರಪಟ್ಟು ಹೆಚ್ಚಿಸಿದ ಈ ಚಳವಳಿಗೆ ಈಗ 40 ವರ್ಷ. 1982 ರ ಮೇ 16 ರಂದು ಕನ್ನಡದ ವರನಟ ಡಾ.ರಾಜಕುಮಾರ ಅವರು ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸುವ …

Read More »

ಬೆಳಗಾವಿಯಲ್ಲಿ, ತಂದೆ,ತಾಯಿಯ ಎದುರೇ ಮಗನ ಮರ್ಡರ್

ಬೆಳಗಾವಿಯಲ್ಲಿ, ತಂದೆ,ತಾಯಿಯ ಎದುರೇ ಮಗನ ಮರ್ಡರ್ ಬೆಳಗಾವಿ-ತಂದೆ,ತಾಯಿಯ ಎದುರೇ ಕೆಲವು ದುಷ್ಕರ್ಮಿಗಳು ಮಗನ ಮೇಲೆ,ಸೈಕಲ್ ಚೈನ್ ಮತ್ತು ಜಂಬಿಯಾದಿಂದ ಹಕ್ಲೆ ಮಾಡಿ,ಕೊಲೆ ಮಾಡಿದ ಘಟನೆ ಬೆಳಗಾವಿ ಮಹಾನಗರದಲ್ಲಿನಡೆದಿದೆ. ಬೆಳಗಾವಿಯ ಹಳೆ ಪಿಬಿ ರಸ್ತೆಯಲ್ಲಿರುವ ಧಾಕೋಜಿ ಹಾಸ್ಪಿಟಲ್ ಹತ್ತಿರ  ಈ ಘಟನೆ. ನಡೆದಿದ್ದು,ಮಹೇಶ್ ಜ್ಞಾನೇಶ್ವರ ಕಾಮನ್ನಾಚೆ,35 ವಿಜಯನಗರ ಹಲಗಾ ಎಂದು ಗುರುತಿಸಲಾಗಿದೆ. ಮಹೇಶ ಜ್ಞಾನೇಶ್ವರ ಕಾಮನ್ನಾಚೆ,ಬೆಳಗಾವಿಯ ಖಾಸಬಾಗ ಪ್ರದೇಶದಲ್ಲಿ ಮೇಕ್ಯಾನಿಕ್ ಗ್ಯಾರೇಜ್ ನಡೆಸುತ್ತಿದ್ದ,ನಿನ್ನೆ ರಾತ್ರಿ ಈತನ ಗ್ಯಾರೇಜ್ ನಲ್ಲಿ ಕಾರೊಂದು ರಿಪೇರಿ …

Read More »

ಬಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ,ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಸ್ಪೆಂಡ್

ಬೆಳಗಾವಿ-ಬಿಮ್ಸ್ ಮೆಡಿಕಲ್ ಕಾಲೇಜಿನಲ್ಲಿಬಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ. ನಡೆದಿದ್ದು ಓರ್ವ ವಿದ್ಯಾರ್ಥಿಯ ಮೂಗಿನ ಎಲುಬು ಮುರಿದ. ಘಟನೆ ತಡವಾಗಿ ಬೆಳಕಿಗೆ ಬಂದಿದೆ‌ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆಯ ಸಂಧರ್ಭದಲ್ಲಿ ಮಾರಾಮಾರಿ ನಡೆದಿದೆ. ಕಾಲೇಜು ಚುನಾವಣೆ ವಿಚಾರದಲ್ಲಿ ಹಾಸ್ಟೆಲ್ ನಲ್ಲಿ ಗಲಾಟೆ ಆಗಿದೆ.ಮೇ 4 ರಂದು ತಡರಾತ್ರಿ ನಡೆದ್ದ ಘಟನೆ ತಡವಾಗಿ ಬೆಳಕಿಗೆ‌ ಬಂದಿದೆ.ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಂದ ಹಲ್ಲೆ ಮಾಡಲಾಗಿದ್ದು ವಿದ್ಯಾರ್ಥಿ ಬುರಾರಾಮ್ ಗೋಧರೆ ಎಂಬಾತನ ಮೇಲೆ ತೀವ್ರವಾಗಿ …

Read More »