Breaking News

LOCAL NEWS

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು ಸುವರ್ಣಸೌಧದಲ್ಲಿ ಅನಾವರಣಗೊಳಿಸಿದ ಅನುಭವ ಮಂಟಪದ ಚಿತ್ರದ ಕುರಿತು ಸದನಕ್ಕೆ ಮಾಹಿತಿ ನೀಡುವಾಗ ಮದ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸರ್ಕಾರ ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುತ್ತಿದೆ. ಹೋರಾಟ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದಾಗ ಇದಕ್ಕೆ ಧ್ವನಿಗೂಡಿಸಿದ ಬಸನಗೌಡ ಪಾಟೀಲ ಯತ್ನಾಳ ಸರ್ಕಾರದ …

Read More »

ಬಸವರಾಜ ಹೊರಟ್ಟಿ ಅವರ ಪಟ್ಟಿಯಲ್ಲಿ ಎಂಈಎಸ್ ನಿಷೇಧದ ವಿಚಾರವೂ ಸೇರಲಿ- ಕರವೇ

ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡುವದಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಭರವಸೆ ನೀಡಿರುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸಿದೆ. ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಬಸವರಾಜ್ ಹೊರಟ್ಟಿ ಅವರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಇರುವ ಕಳಕಳಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸವರಾಜ್ ಹೊರಟ್ಟಿ ಅವರು …

Read More »

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು ಬರುವ ಹಿರಿಯ ನಾಗರಿಕರಿಗೆ ಶಾಲಾ ಮಕ್ಕಳಿಗೆ, ಮಹಿಳೆಯರು ಸೇರಿದಂತೆ ಪಾಸ್ ಹೊಂದಿರುವ ಎಲ್ಲ ಸಾರ್ವಜನಿಕರ ಅನಕೂಲಕ್ಕಾಗಿ ಪ್ರವೇಶ ದ್ವಾರದಿಂದ ಸುವರ್ಣಸೌಧದ ಉತ್ತರ ದಿಕ್ಕಿನ ಗೇಟ್ ವರೆಗೆ ಬಸ್ ವ್ಯವಸ್ಥೆ ಮಾಡಿದ್ದಾರೆ.ನಾಲ್ಕು ಬಸ್ ಗಳು ಮತ್ತು ಎರಡು ಇಲೆಕ್ಟ್ರಿಕ್ ವಾಹನಗಳು ನಿತರವಾಗಿ ಸಂಚರಿಸುತ್ತವೆ ಸುವರ್ಣಸೌಧಕ್ಕೆ ಶಾಸಕರಿಂದ ಮಂತ್ರಿಗಳಿಂದ ಪಾಸ್ ಪಡೆದ …

Read More »

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು ಐತಿಹಾಸಿಕ ಕ್ಷಣವು, ಬೆಳಗಾವಿಯ ಸುವರ್ಣ ಸೌಧದಲ್ಲಿ ದಾಖಲಾಗಲಿದೆ. ವಿಶ್ವಗುರು ಶ್ರೀ ಬಸವಣ್ಣನವರು ಸ್ಥಾಪಿಸಿದ, “ವಿಶ್ವದ ಮೊದಲ ಸಂಸತ್ತು” ಎಂಬ ಖ್ಯಾತಿಯ, “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣವು ಶ್ರೀ ಯು. ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ, ಚಳಿಗಾಲ ಅಧಿವೇಶನದ ಮೊದಲ ದಿನದಂದು, ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ …

Read More »

ಹುಚ್ಚು ಕೋತಿಯ ಅಟ್ಟಹಾಸಕ್ಕೆ ನಲುಗಿದ ನೀಲಜಿ ಗ್ರಾಮಸ್ಥರು

ಬೆಳಗಾವಿ-ಹುಚ್ಚು ಕೋತಿಯ ಅಟ್ಟಹಾಸಕ್ಕೆ ಬೆಳಗಾವಿ ಪಕ್ಕದ ನೀಲಜಿ ಗ್ರಾಮಸ್ಥರು ನಲುಗಿದ್ದಾರೆ.ಕಳೆದೊಂದು ವಾರದಲ್ಲಿ ಮೂವರು ಮೇಲೆ ಮೆಂಟಲ್ ಕೋತಿಯ ಡೆಡ್ಲಿ ಅಟ್ಯಾಕ್ ಮಾಡಿ ಹಲವಾರು ಜನರನ್ನು ಗಾಯಪಡಿಸಿದೆ. ಹುಚ್ಚು ಕೋತಿ‌ಯ ಡೆಡ್ಲಿ ಅಟ್ಯಾಕ್‌ಗೆ ನೀಲಜಿ ಗ್ರಾಮದ ಜನ ಕಂಗಾಲಾಗಿದ್ದಾರೆ.ಮನೆಯನ್ನೂ ಬಿಡ್ತಿಲ್ಲ, ಶಾಲೆಯನ್ನೂ ಬಿಡ್ತಿಲ್ಲ ಸಿಕ್ಕ ಸಿಕ್ಕವರ ಮೇಲೆ ಕೋತಿಯ ದಾಳಿ ಮಾಡುತ್ತಿದ್ದು ಕೋತಿ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಕೋತಿ ಕಾಟ ಮುಂದುವರೆದಿದೆ. ಕೋತಿ ದಾಳಿ …

Read More »

ಎಂಈಸ್ ಮರಾಠಿ ಮೇಳಾವ್ ಗೆ ಅನುಮತಿ ನೀಡುವದಿಲ್ಲ- ಡಿಸಿ

ಬೆಳಗಾವಿ-ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿ ಅವರಿಗೆ ಮರಾಠಿ ಮೇಳಾವ್ ಮಾಡಲು ಅನುಮತಿ ನೀಡುವದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಹೇಳಿದ್ದಾರೆ. ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ನಗರ ಪೋಲೀಸ್ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ನನ್ನ ಅಕ್ಕ ಪಕ್ಕದಲ್ಲಿ ಕುಳಿತಿದ್ದಾರೆ .ಅವರ ಸಮ್ಮುಖದಲ್ಲೇ ನಾನು ಹೇಳಿತ್ತಿದ್ದೇನೆ, ಎಂಇಎಸ್ ನವರಿಗೆ ಯಾವುದೇ ಕಾರಣಕ್ಕೂ ಮರಾಠಿ ಮೇಳಾವ್ …

Read More »

ಮಹಾಂತೇಶ್ ಕವಟಗಿಮಠ ಅವರಿಗೆ ಸೇವಾರತ್ನ ಪ್ರಶಸ್ತಿ

ಬೆಳಗಾವಿ, ಡಿ.6- ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಎಲ್‍ಇ ಸಂಸ್ಥೆಯ ನಿರ್ದೇಶಕರಾಗಿರುವ ಮಹಾಂತೇಶ ಕವಟಗಿಮಠ ಅವರಿಗೆ ನಾಗನೂರು ರುದ್ರಾಕ್ಷಿಮಠವು ಕಾಯಕಯೋಗಿ ಶತಾಯುಷಿ ಲಿಂಗೈಕ್ಯ ಪೂಜ್ಯ ಡಾ.ಶಿವಬಸವ ಮಹಾಸ್ವಾಮೀಜಿಯವರ 135ನೇ ಜಯಂತಿ ಉತ್ಸವದಲ್ಲಿ ‘ಸೇವಾರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಿದೆ. ಮಹಾಂತೇಶ ಕವಟಗಿಮಠ ಅವರು 25 ವರ್ಷಗಳಿಂದ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾಗಿ ಹಾಗೂ 27 ವರ್ಷಗಳ ಕಾಲ ಚಿಕ್ಕೋಡಿಯ ದೂದಗಂಗಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಅಲ್ಲದೇ 10 ವರ್ಷಗಳಕಾಲ …

Read More »

ಬೆಳಗಾವಿ ಜನರಲ್ಲಿ ಭೀತಿ ಹುಟ್ಟಿಸಿದ ನಾಗಪ್ಪ, ಡಬ್ಬಿಯಿಂದ ಮಾಯವಾದ….!!!

ಬೆಳಗಾವಿ-ಇದು ಪವಾಡವೋ? ಕಾಕತಾಳೀಯವೋ? ಗೊತ್ತಿಲ್ಲ ಆದ್ರೆ ಈ ರೀತಿಯ ಘಟನೆ ನಡೆದಿದ್ದು ಸತ್ಯ ಹಾವಿನ ದ್ವೇಷ 12 ವರ್ಷ ಎಂಬ ನಾಣ್ಣುಡಿಯೇ ಇದೆ.ಆದರೆ ಈ ಹಾವಿನದು ದ್ವೇಷವೋ? ಜನರ ಮೇಲಿನ ಪ್ರೀತಿಯೋ? ಗೊತ್ತಿಲ್ಲ, ಬೆಳಗಾವಿಯ ಜನರಿಗೆ ಈ ಹಾವು ಹಲವಾರು ವರ್ಷಗಳಿಂದ ಪ್ರತ್ಯಕ್ಷವಾಗಿ ಉರಗತಜ್ಞ ಆ ಹಾವನ್ನು ಹಿಡಿದ ಬಳಿಕ ಆತನ ಡಬ್ಬಿಯಿಂದಲೂ ಮಾಯವಾಗುತ್ತಿದೆ.ನಂತರ ಮತ್ತೆ ಪ್ರತ್ಯಕ್ಷ್ಯವಾಗುತ್ತಿದೆ. ಕುಂದಾನಗರಿ ಬೆಳಗಾವಿ ಜನರಲ್ಲಿ ಭೀತಿ ಹುಟ್ಟಿಸಿದ ನಾಗರಹಾವು,ಕಳೆದ 15 ದಿನಗಳಿಂದ ಬೇರೆ …

Read More »

ಪಾರಿವಾಳ ದುಡ್ಡಿಗಾಗಿ ಸೆಡ್ಡು,ಟಿವ್ಹಿ ಕಿಡಕಿ ಪೀಸ್ ಪೀಸ್….!!!

ಬೆಳಗಾವಿ-ಪಾರಿವಾಳದ ವಿಚಾರವಾಗಿ ಇಬ್ಬರು ಯುವಕರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ,ಪಾರಿವಾಳದ ಹಣ ಕೇಳಿದಕ್ಕೆ ಸ್ನೇಹಿತರ ಜೊತೆಗೂಡಿ ದರ್ಶನ್ ಎಂಬಾತನ ಮೇಲೆ ಅಪ್ರಾಪ್ತನು ಹಲ್ಲೆ ಮಾಡಿದ ಘಟನೆ ನಡೆದಿದೆಬೆಳಗಾವಿ ತಾಲೂಕಿನ ‌ಬಸ್ತವಾಡ ಗ್ರಾಮದಲ್ಲಿ ಪಾರಿವಾಳ ದುಡ್ಡಿಗಾಗಿ ‌ ಗಲಾಟೆಯಾಗಿದೆ. ಇದೇ ಸಿಟ್ಟಿಗೆ ಬಸವನಕುಡಚಿ ಗ್ರಾಮದ ದಲ್ಲಿರುವ ಅಪ್ರಾಪ್ತ ಮನೆ ದ್ವಂಸಕ್ಕೆ ಯತ್ನಿಸಲಾಗಿದೆ. 15 ಕ್ಕೂ ಅಧಿಕ ದರ್ಶನ ಸ್ನೇಹಿತರು ರಾತ್ರೋರಾತ್ರಿ ರಾಡ್, ಪೆಟ್ರೋಲ್, ಕಲ್ಲುಗಳ ಸಮೇತ ಆಗಮಿಸಿ ಮನೆ ದ್ವಂಸಕ್ಕೆ …

Read More »

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ವಿಶೇಷ ವಿಮಾನ

ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ಡಿಸೆಂಬರ್ 9 ರಿಂದ 19 ರ ವರೆಗೆ ವಿಶೇಷ ಏರ್ ಬಸ್ A320 ಹಾರಾಟವನ್ನು ಬೆಂಗಳೂರು – ಬೆಳಗಾವಿಯ ನಡುವೆ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ  ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ. ಈ ವಿಮಾನವು ಬೆಳಗ್ಗೆ 06:00 ಗಂಟೆಗೆ ಬೆಂಗಳೂರಿನಿಂದ ಹೊರಟು 07:00 ಗಂಟೆಗೆ ಬೆಳಗಾವಿಯನ್ನು ತಲುಪಿ, ಪುನಃ …

Read More »

ಸುವರ್ಣಸೌಧದಲ್ಲಿ ಸಿದ್ಧತೆಗಳನ್ನು ಪರಶೀಲಿಸಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್

ಎಲ್ಲ ಸಮಿತಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು: ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಬೆಳಗಾವಿ –: ಪ್ರಸಕ್ತ ಸಾಲಿನ ಚಳಿಗಾಲದ‌ ಅಧಿವೇಶನದಲ್ಲಿ ಯಾವುದೇ ಲೋಪಗಳು ಆಗದಂತೆ ಎಲ್ಲ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ‌‌‌ ಮೊಹಮ್ಮದ್ ರೋಷನ್ ಅವರು‌ ಸೂಚನೆ ನೀಡಿದರು. ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಗುರುವಾರ (ಡಿ.5) ಜರುಗಿದ ಚಳಿಗಾಲ ಅಧಿವೇಶನ-2024 ಸಿದ್ಧತೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ‌ ವಹಿಸಿ ಅವರು‌ ಮಾತನಾಡಿದರು. ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಎಲ್ಲ‌ …

Read More »

ಬೆಳಗಾವಿ ಕ್ಲಬ್ ರಸ್ತೆಗೆ ಬಿ.ಶಂಕರಾನಂದ ಹೆಸರು ಪಾಲಿಕೆ ನಿರ್ಣಯ

  ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ನಾಮಕರಣದ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಬೆಳಗಾವಿಯ ಕ್ಲಬ್ ರಸ್ತೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ಬಿ. ಶಂಕರಾನಂದ ಅವರ ಹೆಸರು ನಾಮಕರಣದ ವಿಚಾರವನ್ನು ಪ್ರಸ್ತಾಪಿಸಿ ಎಲ್ಲರ ಗಮನ ಸೆಳೆದರು. ಶಾಸಕ ಅಭಯ ಪಾಟೀಲ ಅವರು ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಶಂಕರಾನಂದ ಅವರ ಜನ್ಮ ಶತಮಾನೋತ್ಸವದ …

Read More »

ದೆಹಲಿಯಿಂದ ಬೆಳಗಾವಿಗೆ ಮರಳಿದ ರಮೇಶ್ ಜಾರಕಿಹೊಳಿ ಹೇಳಿದ್ದೇನು ಗೊತ್ತಾ..??

ಬೆಳಗಾವಿ: ವಿಜಯಪುರ ಶಾಸಕಬಸನಗೌಡ ಪಾಟೀಲ್ ಯತ್ನಾಳ್ ನೇತೃತದಲ್ಲಿ ವಕ್ಫ್ ಭೂಕಬಳಿಕೆ ವಿರುದ್ಧ ರೈತರ ಪರವಾಗಿ ಮೊದಲ ಹಂತದ ಹೋರಾಟ ನಡೆಸಿದ ತಂಡವು ದೆಹಲಿಗೆ ತೆರಳಿ ವರದಿಯನ್ನು ಜಗದಂಬಿಕಾ ಪಾಲ್ ನಾಯಕತ್ವದ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿ ಬೆಳಗಾವಿಗೆ ವಾಪಸ್ಸಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂಡದ ಹೋರಾಟವನ್ನು ಜೆಪಿಸಿ ಮುಕ್ತವಾಗಿ ಕೊಂಡಾಡಿದೆ. ಅದು ದೇಶದ …

Read More »

ಪ್ರೀಯತಮೆಗಾಗಿ ಡಬಲ್ ಮರ್ಡರ್ ಮಾಡಿದ ಕ್ರೂರಿ ಲವರ್

ಬೆಳಗಾವಿ- ನನ್ನ ಮಗಳ ಜೊತೆ ಮಾತಾಡಬೇಡ ಎಂದಿದ್ದಕ್ಕೆ ಕ್ರೂರಿ ಲವರ್ ನೊಬ್ಬ ಹುಡುಗಿಯ ತಾಯಿ ಮತ್ತು ಹುಡುಗಿಯ ತಮ್ಮ ಇಬ್ಬರನ್ನೂ ಮರ್ಡರ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌. ನಿಪ್ಪಾಣಿ ತಾಲ್ಲೂಕಿನ ಅಕ್ಟೋಳ ಗ್ರಾಮದ ಬಾಳೋಬಾ ಮಾಳ ಪ್ರದೇಶದಲ್ಲಿ ಇಬ್ಬರ ಕೊಲೆಯಾಗಿದೆ. ಮಂಗಲ್ ಸುಕಾಂತ ನಾಯಿಕ. ವಯಸ್ಸು: 50, ಹುಡುಗಿಯ ತಾಯಿ, ಪ್ರಜ್ವಲ್ ಸುಕಾಂತ ನಾಯಿಕ, ವಯಸ್ಸು: 18 ವರ್ಷ, ಸಾ: ಬಾಳೋಬಾ …

Read More »

ಸಂತೋಷ್ ಪದ್ಮಣ್ಣವರ್ ಮರ್ಡರ್ ಕೇಸ್ ನಲ್ಲಿ ಡಾಕ್ಟರ್ ಅರೆಸ್ಟ್

ಬೆಳಗಾವಿ- ಬೆಳಗಾವಿಯ ಬಡ್ಡಿ ದಂಧೆಯ ಉದ್ಯಮಿ ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಭಾಗಿಯಾದ BAMS ಡಾಕ್ಟರ್ ಪ್ರಶಾಂತ್ ಶಿವಾನಂದ ನನ್ನು ಬೆಳಗಾವಿಯ ಮಾಳ ಮಾರುತಿ ಠಾಣೆಯ ಪೋಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಸಂತೋಷ್ ಪದ್ಮಣ್ಣವರ್ ಪತ್ನಿ ಮತ್ತು ಆಕೆಯ ಗೆಳೆಯ ಸೇರಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಪೋಲೀಸರ ತನಿಖೆಯಲ್ಲಿ ಪದ್ಮಣ್ಣವರ್ ಕೊಲೆಯಲ್ಲಿ ಡಾಕ್ಟರ್ ಪಾತ್ರ ಕಂಡು ಬಂದಿರುವದರಿಂದ ಈಗ ಡಾಕ್ಟರ್ ಸಹಿತ ಜೈಲುಪಾಗಿದ್ದಾನೆ. …

Read More »