ಅಲ್ಲಿ ಬಿಜೆಪಿಗೆ ಲೀಡ್ ಬಂದಿದ್ದು ಖುಷಿಯ ವಿಚಾರ- ಸಾಹುಕಾರ್

ಅಥಣಿಯಲ್ಲಿ ಬಿಜೆಪಿ ಲೀಡ್ ಬಂದಿದ್ದು ಖುಷಿಯ ವಿಚಾರ;ರಮೇಶ ಜಾರಕಿಹೊಳಿ

ಅಥಣಿ : ಲೋಕಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್ ಬಂದಿದ್ದು ನಮಗೆ ಖುಷಿಯ ವಿಚಾರ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಕರ್ತರ ಭೇಟಿ ನಿಮಿತ್ಯ ಅಥಣಿ ಪಟ್ಟಣಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ” ಲೋಕ ಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್ ಬಂದ್ ವಿಚಾರವಾಗಿ ” ಮಾತನಾಡಿದ ಅವರು ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಲೀಡ್ ಕಳೆದುಕೊಂಡಿಟ್ಟು ಸುಮಾರು 72 ಸಾವಿರ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಗೆ ಜನ ಬೇಸತ್ತು ಇವತ್ತು ನಮ್ಮ ಪಕ್ಷದ ಮೇಲೆ ಒಲವು ತೋರಿ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಟ್ಟಿದ್ದಾರೆ ಅದು ಖುಷಿಯ ವಿಚಾರ ಎಂದು ಹೇಳಿದರು.

ವಾಲ್ಮೀಕಿ ನಿಗಮ ಹಗರಣ ಸಿಬಿಐ ಗೆ ಒಪ್ಪಿಸಿ

ರಾಜ್ಯದಲ್ಲಿ ವಾಲ್ಮೀಕಿ ನಿಘಮದ ಹಗರಣ ವಿಚಾರ ಎಸ್ ಐ ಟಿ ಬದಲು ಸಿಬಿಐ ಗೆ ಒಪ್ಪಿಸಬೇಕು ಎಂದು ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅಥಣಿ ಪಟ್ಟಣದಲ್ಲಿ ವಾಲ್ಮೀಕಿ ನಿಘಮದ ಹಣ ಅಕ್ರಮ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದೆ. ಎಸ್ ಟಿ ಮೀಸಲಾತಿಯ ಸಾವಿರಾರು ಕೋಟಿ ರೂ  ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದ್ದೂ ದಲಿತರನ್ನ ಹತ್ತಿಕ್ಕುವ ಕೆಲಸಕ್ಕೆ ಕೈಗಣ್ಣಡಿಯಾಗಿದೆ.

ಅಷ್ಟೇ ಅಲ್ಲದೆ ರಾಜ್ಯದಲ್ಲಿ ವಾಲ್ಮೀಕಿ ನಿಘಮದ ಅವ್ಯವಹಾರ ಎಸ್ ಐ ಟಿ ಯಿಂದ ತನಿಖೆ ನ್ಯಾಯ ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಸರ್ಕಾರ ಸಿಬಿಐ ಗೆ ಒಪ್ಪಿಸುವಂತೆ ಒತ್ತಾಯಿಸಿದರು.

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *