Breaking News

Tag Archives: Abhay patil belagavi north

ಜನ ಸೇವೆಯೂ 24×7…..ಯೋಜನೆಗಳೂ 24×7…..!!!

ಬೆಳಗಾವಿ- ಬೆಳಗಾವಿ ನಗರ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದೆ,ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ,ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಅಭಯ ಪಾಟೀಲ ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ ಬೆಳಗಾವಿ ನಗರದ ಪ್ರತಿಯೊಂದು ಮನೆಗೂ 24%7 ನಿರಂತರವಾಗಿ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಬೆಳಗಾವಿಯ ಭಗೀರಥ ಎನಿಸಿಕೊಂಡಿದ್ದಾರೆ‌. ಮೂರು ವರ್ಷದ ಹಿಂದೆ ಈ ಯೋಜನೆ ರದ್ದಾಗಿತ್ತು,ಇದನ್ನು …

Read More »

ಬೆಳಗಾವಿ ಟಿಕೆಟ್ ಗಾಗಿ ಅಮೇರಿಕಾದಿಂದಲೂ ಆನ್ ಲೈನ್ ಅರ್ಜಿ…!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗಿಲ್ಲ ಆದರೂ,ಈ ಚುನಾವಣೆ ವಿಶ್ವವ್ಯಾಪಿ ಚರ್ಚೆ ಆಗುತ್ತಿರುವದು ಸತ್ಯ…. ಬೆಳಗಾವಿ ಎಂಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಈ ಪಟ್ಟಿಯಲ್ಲಿ ಅಮೇರಿಕಾದ ಹೆಸರೊಂದು ಸೇರ್ಪಡೆಯಾಗಿದೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹುಳ್ಳೂರ ಗ್ರಾಮದ ವ್ಯಕ್ತಿಯೊಬ್ಬ ಅಮೇರಿಕಾದಲ್ಲಿ ಸೆಟಲ್ ಆಗಿದ್ದು ಈತ ಎನ್ ಆರ್ ಐ ಅಂದ್ರೆ ವಿದೇಶಿ ಕೋಟಾದಲ್ಲಿ ಬಿಜೆಪಿ ಟಿಕೆಟ್ ಕೊಡುವಂತೆ ಆನ್ ಲೈನ್ ಅರ್ಜಿ ಹಾಕಿದ್ದಾನೆ.. …

Read More »

ವಿರೋಧ ಮಾಡುವದೇ ಧರ್ಮ ಅಲ್ಲ,,ಜೀವದ ಜತೆಗೆ ಚೆಲ್ಲಾಟ ಆಗಬಾರದು.

ಬೆಳಗಾವಿ – ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ವಿಚಾರದ ಕುರಿತು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಹಿನ್ನಲೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಇಂದಿನಿಂದ ರಾಜ್ಯದಲ್ಲಿ ಒಂಬತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಯಾಗಿದ್ದು ಬಸ್ ಸಂಚಾರಕ್ಕೆ ಯಾವುದೇ ತೊಂದರೆ, ವ್ಯತ್ಯಯ ಆಗುವುದಿಲ್ಲ ಎಂದು ಸಾರಿಗೆ ಸಚಿವ …

Read More »

ಅ.24ರಂದು ಸುವರ್ಣ ವಿಧಾನಸೌಧದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ

ಬೆಳಗಾವಿ ಅಖಿಲ ಭಾರತ ಪಂಚಮಸಾಲಿ ಹಕ್ಕೋತ್ತಾಯ ಸಮಿತಿ ರಚನೆ ಮಾಡಿಕೊಂಡು ನಮ್ಮ‌ ಹಕ್ಕೋತ್ತಾಯಕ್ಕಾಗಿ ಅ.24ರಂದು ಸುವರ್ಣ ವಿಧಾನಸೌಧದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಇದೆ. ನಮ್ಮ ಮೂಲ ಕಸಬೂ ಕೃಷಿ. ಕೇಂದ್ರ ಸರಕಾರ ಅನೇಕ ಸಮುದಾಯದಗಳಿಗೆ ಸೌಲಭ್ಯ ನೀಡುತ್ತಿದೆ. ಆದರೆ ಪಂಚಮಸಾಲಿ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ …

Read More »

ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!!

ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!! ಬೆಳಗಾವಿ- ನಾನು ಬರೆದ ತೆಲೆಬರಹ ಕೆಲವು ನಾಯಕರ ತೆಲೆ ಕೆಡಿಸಬಹುದು ಆದ್ರೆ ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ನೈಜ ಚಿತ್ರಣ,ನೈಜ ರಾಜಕೀಯ ಬೆಳವಣಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅದರಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣ ವಿಶೇಷ ,ವಿಭಿನ್ನ ಯಾಕಂದ್ರೆ ಈ ಕ್ಷೇತ್ರದ ರಾಜಕಾರಣ ಈಗಾಗಲೇ …

Read More »

ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ…..ವ್ಯಾಪಾರಿಗಳಿಗೆ ಶಾಸಕರ ಆಶಿರ್ವಾದ….!!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕ ಅಭಯ ಆಟೀಲ ಮುಂದಾಗಿದ್ದು ಇಂದು ಸಂಜೆ ಬೆಳಗಾವಿಯಲ್ಲಿ ವ್ಯಾಪಾರಿಗಳ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಂಜೆ 4- 30 ಘಂಟೆಗೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಅಂಭಾಬಾಯಿ ದೇವಸ್ಥಾನದಲ್ಲಿ ಶಾಸಕ ಅಭಯ ಪಾಟೀಲ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ,ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂವಾದದ ಮೂಲಕ ಆಲಿಸಿ,ದಕ್ಷಿಣ ಮತಕ್ಷೇತ್ರದ ವ್ಯಾಪಾರ ವೃದ್ಧಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲು …

Read More »

ಮುಂದಿನ ಬೆಳಗಾವಿ ಪಾಲಿಕೆ ಚುನಾವಣೆ ಪಕ್ಷದ ಸಿಂಬಾಲ್ ಮೇಲೆ, ನಳೀನ್ ಕುಮಾರ್ ಕಟೀಲ ಗ್ರೀನ್ ಸಿಗ್ನಲ್

ಬೆಳಗಾವಿ- ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪಕ್ಷದ ಚಿಹ್ನೆ ಆಧಾರಿತ ಚುನಾವಣೆ ಎದುರಿಸಲಿದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮೀಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು. ಬೆಳಗಾವಿಯ ಮರಾಠಾ ಮಂದಿರದಲ್ಲಿ ನಡೆದ ಬೆಳಗಾವಿ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂದಿನ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ …

Read More »

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯ ಕತ್ತು ಹಿಸುಕಿದ ಪಾಪಿ ಪತಿ

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯನ್ನು ಕೊಲೆ ಮಾಡಿದ ಪಾಪಿ ಪತಿ ಬೆಳಗಾವಿ: ಹೆಣ್ಣು ಹಡೆದರೆ ಪಾಪ,ಹಡೆದವಳಿಗೆ ಅದರ ಶಾಪ ಎನ್ನುವಂತೆ ಹೆಣ್ಣು ಹಡೆದ ಹೆಣ್ಣು ಅದೆಷ್ಟೋ ಕಷ್ಟ ಅನುಭವಿಸುತ್ತಾಳೆ,ಕೊನೆಗೆ ಈ ಪಾಪಿ ಸಮಾಜದಲ್ಲಿ ಯಾವ ರೀತಿ ತನ್ನ ಜೀವ ಕೊಡುತ್ತಾಳೆ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ.ಪ್ರೇಮಿಗಳ ದಿನದಂದೇ ಪಾಪಿ ಪತಿಯೊಬ್ಬ ತನ್ನ ಮಡದಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಹತ್ಯೆಗೈದಿರುವ …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ…!!

ಬೆಳಗಾವಿ- ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸರ್ಕಾರ ಬದಲಾಯಿಸಿದೆ.ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಬದಲಾಯಿಸಿ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇಂದು ಮದ್ಯಾಹ್ನದ ಹೊತ್ತಿಗೆ ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.

Read More »

ಬೆಳಗಾವಿಯ ಕೋಟೆ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಸುಸೈಡ್ ಸ್ಪಾಟ್ ಆಗುತ್ತಿದೆಯಾ,ಬೆಳಗಾವಿಯ ಕೋಟೆ ಕೆರೆ… ಬೆಳಗಾವಿ- ಬೆಳಗಾವಿಯ ಕೋಟೆ ಕೆರೆಯಲ್ಲಿ ಇಂದು ಅಪರಿಚಿತ ಶವ ದೊರೆತಿದ್ದು ಈ ಕೆರೆ ದಿನಕಳೆದಂತೆ ಸುಸೈಡ್ ಸ್ಪಾಟ್ ಆಗುತ್ತಿದೆ ಇಂದು ಕೋಟೆ ಕೆರೆಯಲ್ಲಿ ದೊರೆತಿರುವ ಅಪರಿಚಿತ ವ್ಯೆಕ್ತಿಯ ಶವ ,50 ರಿಂದ 55 ವರ್ಷದ ವ್ಯೆಕ್ತಿಯ ಶವವಾಗಿದೆ ಎಂದು ಪೋಲಿಸರು ಅಂದಾಜಿಸಿದ್ದು ನೀಲಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ವ್ಯೆಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಕೂಡಲೇ ಬೆಳಗಾವಿಯ ಮಾರ್ಕೆಟ್ ಠಾಣೆಗೆ …

Read More »