Home / Breaking News / ಬೆಳಗಾವಿಯಲ್ಲಿ ಶಾಸ್ತ್ರೀ ಕುಟುಂಬದವರಿಗೆ ಅಪರೂಪದ ಗೌರವ,ಸಮ್ಮಾನ…!!

ಬೆಳಗಾವಿಯಲ್ಲಿ ಶಾಸ್ತ್ರೀ ಕುಟುಂಬದವರಿಗೆ ಅಪರೂಪದ ಗೌರವ,ಸಮ್ಮಾನ…!!

ಇಂದಿನ ಯುವ ಪತ್ರಕರ್ತರಲ್ಲಿ ಅದ್ಯಯನದ ಹವ್ಯಾಸ ಬೆಳೆಯಲಿ- ಎಲ್.ಎಸ್ ಶಾಸ್ತೀ

ಬೆಳಗಾವಿ- ಕಾಲಕ್ಕೆ ತಕ್ಕಂತೆ ಪತ್ರಿಕೋದ್ಯಮದ ಶೈಲಿಯೂ ಬದಲಾಗಿದೆ.ಹೊಸ.ಹೊಸ ತಂತ್ರಜ್ಞಾನ ಕಾರ್ಯಕ್ಷೇತ್ರದ ಭಾರವನ್ನು ಇಳಿಸಿದ್ದು ಇಂದಿನ ಯುವ ಪತ್ರಕರ್ತರಲ್ಲಿ ಅದ್ಯಯನದ ಹವ್ಯಾಸ,ಹಲವಾರು ವಿಚಾರಗಳ ಬಗ್ಗೆ ವಿಷಯ ಸಂಗ್ರಹಣೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವದು ಅತ್ಯಗತ್ಯವಾಗಿದೆ.ಎಂದು ಹಿರಿಯ ಪತ್ರಕರ್ತ ಎಲ್.ಎಸ್ ಶಾಸ್ತೀ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹಾಗೂ ಅವರ ತಂಡ,ಇಂದು ಭಾನುವಾರದ ಬಾಂಧವ್ಯ ಕಾರ್ಯಕ್ರಮದ ಅಂಗವಾಗಿ ಹಿರಿಯ ಪತ್ರಕರ್ತ ಸಾಹಿತಿ, ಎಲ್.ಎಸ್ ಶಾಸ್ತ್ರೀ ಅವರ ಮನೆಗೆ ಭೇಟಿ ನೀಡಿ,ಅವರನ್ನು ಸತ್ಕರಿಸಿದ ಸಂಧರ್ಭದಲ್ಲಿ ಎಲ್ ಎಸ್ ಶಾಸ್ರೀ ಅವರು ಭಾನುವಾರದ ಬಾಂಧವ್ಯದ ಗೆಳೆಯರ ಜೊತೆ ಅರವತ್ತು ವರ್ಷಗಳ ಪತ್ರಿಕಾರಂಗದ ಸೇವೆಯನ್ನು ಮೆಲುಕುಹಾಕಿದರು.

ಪತ್ರಿಕಾರಂಗದಲ್ಲಿ 60 ವರ್ಷಗಳ ಸುದೀರ್ಘ ಸೇವೆ,ಅದರಲ್ಲಿ 43 ವರ್ಷಗಳ ಕಾಲ ಬೆಳಗಾವಿಯಲ್ಲೇ ಸೇವೆ ಮಾಡಿದ್ದಾಗಿ ತಿಳಿಸಿದ ಎಲ್ ಎಸ್ ಶಾಸ್ರೀ ಬೆಳಗಾವಿ ಜಿಲ್ಲೆಯ ಎಲ್ಲ ಪತ್ರಿಕೆಗಳ ಇತಿಹಾಸ ಮತ್ತು ಪತ್ರಿಕೆಗಳ ಸೇವೆಯ ಮಾಹಿತಿ ಸಂಗ್ರಹಿಸಿ ಕೃತಿ ರಚಿಸಿದ್ದೇನೆ,ಈ ಕೃತಿಯಲ್ಲಿ ಇನ್ನೂ ಇಪ್ಪತ್ತು ವರ್ಷಗಳ ಇತಿಹಾಸ ಸೇರ್ಪಡೆ ಆಗಬೇಕಿದ್ದು, ಪರಿಷ್ಕೃತ ಕೃತಿಯನ್ನು ರಚಿಸಲಾಗಿದ್ದು,ಸಾಧ್ಯವಾದಲ್ಲಿ ಈ ಕೃತಿಯನ್ನು ಮುದ್ರಿಸುವ ಜವಾಬ್ದಾರಿಯನ್ನು ಕಾರ್ಯನಿರತ ಪತ್ರಕರ್ತರ ಸಂಘ ವಹಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ,ಹಿರಿಯರ ಮಾರ್ಗದರ್ಶನ ಇಂದಿನ ಯುವ ಪತ್ರಿಕಾ ಸಮುದಾಯದ ಗೆಳೆಯರಿಗೆ ಅಗತ್ಯವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲ ಹಿರಿಯ ಪತ್ರಕರ್ತರ ಸಹಾಯದಿಂದ ಯುವ ಮತ್ತು ಗ್ರಾಮೀಣ ಪತ್ರಕರ್ತರ ಕಾರ್ಯಕ್ಷಮತೆ ಹೆಚ್ವಿಸಲು,ಅವರ ಉತ್ತೇಜನಕ್ಕಾಗಿ ತರಬೇತಿ ಶಿಬಿರಗಳನ್ನು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ಪತ್ರಕರ್ತ ಮೆಹಬೂಬ ಮಕಾನದಾರ ಮತ್ತು ಕುಂತಿನಾಥ ಕಲಮನಿ ಅವರು ಮಾತನಾಡಿ ಎಲ್ ಎಸ್ ಶಾಸ್ತ್ರಿ ಅವರ ಸೇವೆ ಅಮೋಘ ಅವರಿಗೆ ಸರ್ಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ಎಲ್.ಎಸ್ ಶಾಸ್ತ್ರಿ ಅವರ ನೂರಾರು ಶಿಷ್ಯರು ಮಾಡುತ್ತಾರೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಶ್ರೀಶೈಲ ಮಠದ, ನಾಗರಾಜ್ ತುಪ್ಪದ ಸೇರಿದಂತೆ ಇತರರು ಉಪಸ್ಥಿತರಿದ್ದರು‌.

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *